ಅಪ್ರಾಪ್ತೆ ಮೇಲೆ ವೃದ್ದನಿಂದ ಲೈಂಗಿಕ ಕಿರುಕುಳ


Team Udayavani, Jun 26, 2017, 11:24 AM IST

_sexual-harassment.jpg

ಬೆಂಗಳೂರು: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ನಿವೃತ್ತ ಸರ್ಕಾರಿ ನೌಕರನೊಬ್ಬರನ್ನು ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದಲ್ಲಿ ಸಂಭವಿಸಿದೆ. ಚಂದ್ರ ಲೇಔಟ್‌ನ ಇಂದಿರಾ ಕಾಲೋನಿಯಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಪೊಕ್ಸೊ ಕಾಯ್ದೆಯಡಿ ನಿವೃತ್ತ ಸರ್ಕಾರಿ ನೌಕರ ಚಿನ್ನಮಾರಯ್ಯ (62) ಎಂಬಾತನನ್ನು ಬಂಧಿಸಿದ್ದಾರೆ.

ಚಿನ್ನಮಾರಯ್ಯ ಚಂದ್ರಾಲೇಔಟ್‌ನ ಇಂದಿರಾ ಕಾಲೋನಿಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳ ಜತೆ ನೆಲೆಸಿದ್ದು, ಈ ಮನೆಯ ಪಕ್ಕದಲ್ಲೇ ಸಂತ್ರಸ್ತ ಬಾಲಕಿಯ ಮನೆಯೂ ಇದೆ. ಬಾಲಕಿಯ ಪೋಷಕರು ಚಿನ್ನಮಾರಯ್ಯನಿಗೆ ಪರಿಚಿತರಾಗಿದ್ದು, ಅವರ ಮನೆಗೂ ಹೋಗುತ್ತಿದ್ದ ಎನ್ನಲಾಗಿದೆ.

ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಾಲಕಿಯ ತಾಯಿ ಮಾರುಕಟ್ಟೆಗೆ ಹೋಗಿದ್ದು, ಇದನ್ನು ಗಮನಿಸಿದ ಚಿನ್ನಮಾರಯ್ಯ ಏಕಾಏಕಿ ಆ ಮನೆಗೆ ನುಗ್ಗಿ ಒಳಗಿನಿಂದ ಬಾಗಿಲು ಹಾಕಿಕೊಂಡು ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಎನ್ನಲಾಗಿದೆ. ಇದರಿಂದ ಆತಂಕಗೊಂಡ ಬಾಲಕಿ ಜೋರಾಗಿ ಕಿರುಚಿಕೊಂಡಿದ್ದಳು. ಈ ಕಿರುಚಾಟ ಕೇಳಿದ ಸ್ಥಳೀಯರು ಮನೆಗೆ ಬಂದು ನೋಡಿದಾಗ ಚಿನ್ನಮಾರಯ್ಯನ ಕೃತ್ಯ ಬೆಳಕಿಗೆ ಬಂದಿದೆ.

ಕೂಡಲೇ ಬಾಗಿಲು ಒಡೆದು ಒಳನುಗ್ಗಿದ ಸ್ಥಳೀಯರು ಬಾಲಕಿಯನ್ನು ಚಿನ್ನಮಾರಯ್ಯನಿಂದ ಪಾರು ಮಾಡಿದರಲ್ಲದೆ, ಆತನಿಗೆ ಮನಬಂದಂತೆ ಥಳಿಸಿ ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಗೆ ಕರೆದೊಯ್ದರು. ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಯ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಟಾಪ್ ನ್ಯೂಸ್

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಅಫ್ಗಾನಿಸ್ತಾನ ತಂಡಕ್ಕೆ ರಶೀದ್ ಖಾನ್ ನಾಯಕ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ

T20 World Cup; ಪಾಕಿಸ್ಥಾನ ತಂಡದ ಆಯ್ಕೆ ವಿಳಂಬ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

Bengaluru water crisis: ನೀರು ಯಾವಾಗ ಬರುತ್ತೆ?: ಮೊಬೈಲಲ್ಲೇ ಮಾಹಿತಿ

10

Bengaluru: ಫ್ಲೈಓವರ್‌ಗಳಲ್ಲೂ ಕಸ ಸುರಿಯುವ ವಾಹನ ಸವಾರರು 

7

Bengaluru: ಸೈಕಲ್‌ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಬಂಧನ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Amit Shah ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷೆ ಇಲ್ಲ

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Udupi ಢಿಕ್ಕಿ: ಮೂರು ಕಾರುಗಳು ಜಖಂ; ಪ್ರಕರಣ ದಾಖಲು

Siddapura ಬಸ್‌ನಲ್ಲಿ ಹೃದಯಾಘಾತ ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Siddapura ಬಸ್‌ನಲ್ಲಿ ಹೃದಯಾಘಾತ; ಉದ್ಯಮಿ ಪ್ರಶಾಂತ ಶೆಟ್ಟಿ ನೂಜಿನಬೈಲು ನಿಧನ

Kundapura; ಹಲ್ಲೆ , ಬೆದರಿಕೆ, ಚಿನ್ನದ ಸರ ಲೂಟಿ: ದೂರು

Kundapura; ಹಲ್ಲೆ,ಬೆದರಿಕೆ, ಚಿನ್ನದ ಸರ ಲೂಟಿ: ದೂರು

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Mangaluru: 9 ಲಕ್ಷ ರೂ. ಮೌಲ್ಯದ ಎಂಡಿಎಂಎ ಸಹಿತ ಇಬ್ಬರು ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.