ವಿದ್ಯುತ್‌ ಉಳಿತಾಯಕ್ಕೆ ಬಂತು ಸಾಫ್ಟ್ವೇರ್‌


Team Udayavani, Dec 2, 2018, 11:55 AM IST

vidyut.jpg

ಬೆಂಗಳೂರು: ಬೃಹತ್‌ ಕಂಪೆನಿಗಳಲ್ಲಿ ಅನಗತ್ಯವಾಗಿ ವಿದ್ಯುತ್‌ ವ್ಯರ್ಥವಾಗುವುದು, ಶಾರ್ಟ್‌ ಸರ್ಕ್ನೂಟ್‌ನಂತಹ ಅವಘಡಗಳು ಹಾಗೂ ಡೇಟಾ ಸಂರಕ್ಷಣೆಯನ್ನು ಕೈಗೊಳ್ಳಲು ವಿಗ್ಯಾನ್‌ಲಾಬ್ಸ್, ಎಪಿಎಂ ಪ್ಲಸ್‌ ಎಂಬ ಸಾಫ್ಟ್ವೇರ್‌ ಅಭಿವೃದ್ಧಿಪಡಿಸಿದೆ. 

ನೂರಕ್ಕೂ ಹೆಚ್ಚಿನ ಕಂಪ್ಯೂಟರ್‌ಗಳಿರುವ ಕಂಪೆನಿಯಲ್ಲಿ ಹೆಚ್ಚಿನ ಸಮಯ ಕಂಪ್ಯೂಟರ್‌ಗಳು ಬಳಕೆಯಲ್ಲಿರುತ್ತವೆ. ಜತೆಗೆ ಸಿಬ್ಬಂದಿಗಳು ಊಟ-ತಿಂಡಿ, ಕಾಫಿ-ಟೀ ಹೀಗೆ ವಿರಾಮ ಪಡೆದಾಗಲೂ ಕಂಪ್ಯೂಟರ್‌ಗಳಿಗೆ ವಿದ್ಯುತ್‌ ಪೂರೈಕೆಯಾಗುತ್ತಿರುತ್ತದೆ. ಇದರಿಂದಾಗಿ ಕಂಪೆನಿಗಳಿಗೆ ಹೆಚ್ಚಿನ ವಿದ್ಯುತ್‌ ಬಿಲ್‌ ಬರುತ್ತದೆ. ಆ ಹಿನ್ನೆಲೆಯಲ್ಲಿ ಅನಗತ್ಯವಾಗಿ ವಿದ್ಯುತ್‌ ಬಳಕೆಯಾಗುವುದನ್ನು ಈ ಸಾಫ್ಟ್ವೇರ್‌ ತಡೆಯಲಿದೆ. 

ನೂರಾಕ್ಕೂ ಹೆಚ್ಚಿನ ಕಂಪ್ಯೂಟರ್‌ಗಳಿರುವ ಕಂಪೆನಿಯಲ್ಲಿ ಮೊದಲಿಗೆ ಪ್ರಾಯೋಗಿಕವಾಗಿ ಸಾಫ್ಟ್ವೇರ್‌ನ್ನು ಅಳವಡಿಕೆ ಮಾಡಲಾಗುತ್ತದೆ. ಈ ವೇಳೆ ಪ್ರತಿಯೊಂದು ಕಂಪ್ಯೂಟರ್‌ ಎಷ್ಟು ವಿದ್ಯುತ್‌ ಬಳಕೆ ಮಾಡುತ್ತಿದೆ ಎಂಬುದು ತಿಳಿಯಲಿದೆ. ನಂತರದಲ್ಲಿ ಪ್ರತಿಯೊಂದು ಕಂಪ್ಯೂಟರ್‌ನ ಐಪಿ ವಿಳಾಸದ ಆಧಾರದ ಮೇಲೆ ಯುನಿಕ್‌ ಸಂಖ್ಯೆಯನ್ನು ನೀಡಿ, ತಮ್ಮ ಸಾಫ್ಟ್ವೇರ್‌ ಅಳವಡಿಕೆ ಮಾಡಲಾಗುತ್ತದೆ. 

ಸಾಫ್ಟ್ವೇರ್‌ನಲ್ಲಿ ಕೆಲವೊಂದು ವಿಶೇಷ ಅಂಶಗಳನ್ನು ಅಳವಡಿಸಿರುವುದರಿಂದಾಗಿ ಇಂತಿಷ್ಟು ನಿಮಿಷಗಳು ಕಂಪ್ಯೂಟರ್‌ ಬಳಕೆಯಾಗದಂತಹ ಸಂದರ್ಭದಲ್ಲಿ ಕಂಪ್ಯೂಟರ್‌ಗೆ ರವಾನೆಯಾಗುತ್ತಿರುವ ವಿದ್ಯುತ್‌ ಸ್ಥಗಿತಗೊಳಿಸುತ್ತದೆ. ಸಿಬ್ಬಂದಿ ಬಂದ ಕುಳಿತು ಮೌಸ್‌ ಅಥವಾ ಕೀ ಬೋರ್ಡ್‌ ಕೀ ಒತ್ತಿದ ಕೆಲವೇ ಸೆಕೆಂಡುಗಳಲ್ಲಿ ಸಹಜ ಸ್ಥಿತಿಗೆ ಬರಲಿದೆ ಎಂದು ವಿಗ್ಯಾನ್‌ಲಾಬ್ಸ್ ಸಂಸ್ಥೆಯ ಮಾರುಕಟ್ಟೆ ಕಾರ್ಯನಿರ್ವಾಹಕ ಗೌರವ್‌ ಆರ್‌. ಕಪೂರ್‌ ಮಾಹಿತಿ ನೀಡಿದರು. 

ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ವಿದೇಶ ಹಾಗೂ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಈ ಸಾಫ್ಟ್ವೇರ್‌ ಅಳವಡಿಸಿದೆ. ಅದರಂತೆ ವಿಶ್ವದಾದ್ಯಂತ ಸಾಫ್ಟ್ವೇರ್‌ ಅಳವಡಿಸಿರುವ 52 ಲಕ್ಷ ಕಂಪ್ಯೂಟರ್‌ಗಳಿಂದಾಗಿ 1049.82 ಗಿಗಾ ವ್ಯಾಟ್‌ ವಿದ್ಯುತ್‌ ಉಳಿತಾಯ ಮಾಡಲಾಗಿದ್ದು, ಇಷ್ಟು ಪ್ರಮಾಣದ ವಿದ್ಯುತ್‌ನ್ನು ಇಡೀ ಮೈಸೂರಿಗೆ ಒಂದು ವರ್ಷ ಪೂರೈಕೆ ಮಾಡಬಹುದಾಗಿತ್ತು ಎಂದು ಹೇಳಿದರು. 

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bangalore news

ಎನ್ ಪಿ ಎಸ್ ನೌಕರರ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯಾಧ್ಯಕ್ಷ ಷಡಕ್ಷರಿ ವಿಫಲ: ಒಕ್ಕೂಟ ಆರೋಪ

ಭಾಗ್ಯವಂತರು ಮರು ಬಿಡುಗಡೆ

ಭಾಗ್ಯವಂತರು ಮರು ಬಿಡುಗಡೆ

The city police commissioner Kamalpant received the public’s plea

ಅಕ್ರಮ ಚಟುವಟಿಕೆಗಳಿಗೆ ಕಡಿವಾಣ

building

ಮಾಲೀಕರ ಅತಿ ಆಸೆ ಭವಿಷ್ಯದ ಆತಂಕಕೆ ಮೂಲ!

ಆರ್‌.ಕೆ.ಲಕ್ಷ್ಮಣ್‌ರ ವ್ಯಂಗ್ಯಚಿತ್ರಗಳ ಅನಾವರಣ

ಆರ್‌.ಕೆ.ಲಕ್ಷ್ಮಣ್‌ರ ವ್ಯಂಗ್ಯಚಿತ್ರಗಳ ಅನಾವರಣ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.