ಇನ್ನು ಎಸ್ಸಿ-ಎಸ್ಟಿ ನೌಕರರಿಗೆ ಹಿಂಬಡ್ತಿ ಭಯವಿಲ್ಲ


Team Udayavani, Jun 24, 2018, 6:00 AM IST

govt-st.jpg

ಬೆಂಗಳೂರು: ಕರ್ನಾಟಕ ಮೀಸಲು ಆಧಾರದ ಮೇಲೆ ಬಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೆಷ್ಠತೆಯನ್ನು ವಿಸ್ತರಿಸುವ ವಿಧೇಯಕ-2017ಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕುರಿತು ಶನಿವಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ಹೀಗಾಗಿ, ಕಾಯ್ದೆ ರೂಪದಲ್ಲಿ ಅದು ಜಾರಿಯಾದಂತಾಗಿದೆ. 

ಇದರೊಂದಿಗೆ ಮೀಸಲು ಬಡ್ತಿ ಕಾಯ್ದೆ ರದ್ದತಿಯಿಂದ ಹಿಂಬಡ್ತಿ ಭೀತಿಗೊಳಗಾಗಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರು ಸೂಪರ್‌ ನ್ಯೂಮರರಿ ಕೋಟಾ ಮೂಲಕ ಹಿಂದಿನ ಹುದ್ದೆಯಲ್ಲೇ ಮುಂದುವರಿಯಲು ಅವಕಾಶವಾದಂತಾಗಿದೆ. ಇನ್ನೊಂದೆಡೆ ಅರ್ಹತೆ ಆಧಾರದ ಮೇಲೆ ಬಡ್ತಿ ಹೊಂದಲು ಕಾತುರರಾಗಿದ್ದ ಸಾವಿರಾರು ಮಂದಿ ಸಾಮಾನ್ಯ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರಿಗೂ ನ್ಯಾಯ ಒದಗಿಸಿದಂತಾಗಿದೆ. ಅರ್ಹತೆ ಆಧಾರದ ಮೇಲೆ ಅವರಿಗೂ ಬಡ್ತಿ ಅವಕಾಶ ಸಿಗಲಿದೆ.

ಬಡ್ತಿ ಮೀಸಲಾತಿ ಕಾಯ್ದೆ ರದ್ದುಗೊಳಿಸಿ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿದ್ದರಿಂದ ಹಿಂಬಡ್ತಿಯ ಆತಂಕ ಹೊಂದಿದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಹಿತ ಕಾಪಾಡಲು ಮತ್ತು ಅವರನ್ನು ಆ ಹುದ್ದೆಯಲ್ಲೇ ಮುಂದುವರಿಸಲು ರಾಜ್ಯ ಸರ್ಕಾರ ವಿಧಾನಮಂಡಲದಲ್ಲಿ ಒಪ್ಪಿಗೆ ಪಡೆದಿತ್ತು. ಇದರನ್ವಯ ಕರ್ನಾಟಕ ಮೀಸಲು ಆಧಾರದ ಮೇಲೆ ಬಡ್ತಿ ಹೊಂದಿರುವ ಸರಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೆಷ್ಠತೆಯನ್ನು ವಿಸ್ತರಿಸುವ ಕಾಯ್ದೆ ಜಾರಿಗೆ ಬಂದಿದೆ.

ನೂತನ ಕಾಯ್ದೆಯಂತೆ ಮೀಸಲು ಬಡ್ತಿ ಆಧಾರದ ಮೇಲೆ ಬಡ್ತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರು ತಾವು ಬಡ್ತಿ ಪಡೆದ ಹುದ್ದೆಯಲ್ಲೇ ಸೂಪರ್‌ ನ್ಯೂಮರರಿ ಕೋಟಾದಲ್ಲಿ ನಿವೃತ್ತರಾಗುವವರೆಗೆ ಮುಂದುವರಿಯಲಿದ್ದಾರೆ. ಅವರ ನಿವೃತ್ತಿ ನಂತರ ಆ ಹುದ್ದೆಗಳು ರದ್ದಾಗುತ್ತವೆ. ಮತ್ತೂಂದೆಡೆ ಮೀಸಲು ಬಡ್ತಿ ಕಾಯ್ದೆ ರದ್ದಾಗಿದ್ದರಿಂದ ಬಡ್ತಿಯ ಅನುಕೂಲ ಪಡೆದ ಮೀಸಲು ಸೌಲಭ್ಯ ರಹಿತ ನೌಕರರು (ಸಾಮಾನ್ಯ, ಹಿಂದುಳಿದ ಮತ್ತು ಅಲ್ಪಸಂಖ್ಯಾತ) ತಮ್ಮ ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿಗೆ ಅರ್ಹರಾದಂತಾಗಿದೆ.

ಮತ್ತೆ ಮೀಸಲು ಬಡ್ತಿಗೆ ಹೊಸ ಕಾಯ್ದೆ ಬರಬೇಕು: 
ಈ ಕಾಯ್ದೆ ಪ್ರಸ್ತುತ ಮೀಸಲು ಬಡ್ತಿ ಪಡೆದವರನ್ನು ಉಳಿಸಿಕೊಳ್ಳಲು ಮಾತ್ರ ಸೀಮಿತವಾಗಿದೆ. ಮತ್ತೆ ಮೀಸಲು ಬಡ್ತಿ ನೀಡಲು ಅವಕಾಶವಿಲ್ಲ. ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸಲು ಇತ್ತೀಚೆಗೆ ತಾನೇ ಕೇಂದ್ರ ಸರ್ಕಾರ ಹೊಸ ಕಾಯ್ದೆ ರೂಪಿಸಿದ್ದು, ಅದನ್ನು ಆಧರಿಸಿ ರಾಜ್ಯದಲ್ಲೂ ಹೊಸ ಕಾಯ್ದೆ ಜಾರಿಗೊಳಿಸಬೇಕಾಗುತ್ತದೆ.

ಟಾಪ್ ನ್ಯೂಸ್

hgjuthygfd

ಗ್ಯಾಂಗ್‌ ಸ್ಟರ್ ಗೆಟಪ್‌ನಲ್ಲಿ ಶಾನ್ವಿ…

rwytju11111111111

ಗುರುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

ಬಟ್ಟೆ  , ಉಡುಪು, ಪಾದರಕ್ಷೆ ಬೆಲೆಯೇರಿಕೆ?

ಬಟ್ಟೆ  , ಉಡುಪು, ಪಾದರಕ್ಷೆ ಬೆಲೆಯೇರಿಕೆ?

ರಜನಿ ಸೇವೆಗೆ ಹ್ಯಾಟ್ಸ್‌ ಆಫ್: ಕ್ರಿಕೆಟಿಗ ಲಕ್ಷ್ಮಣ್‌

ರಜನಿ ಸೇವೆಗೆ ಹ್ಯಾಟ್ಸ್‌ ಆಫ್: ಕ್ರಿಕೆಟಿಗ ಲಕ್ಷ್ಮಣ್‌

ಬಿಸಿಯೂಟ ದತ್ತಾಂಶಕಾರರ 20 ತಿಂಗಳ ಹಸಿವಿಗಿಲ್ಲ ಪರಿಹಾರ!

ಬಿಸಿಯೂಟ ದತ್ತಾಂಶಕಾರರ 20 ತಿಂಗಳ ಹಸಿವಿಗಿಲ್ಲ ಪರಿಹಾರ!

ಸುಲಭವಲ್ಲ ತಿಮ್ಮಪ್ಪನ ದರ್ಶನ ಭಾಗ್ಯ

ಸುಲಭವಲ್ಲ ತಿಮ್ಮಪ್ಪನ ದರ್ಶನ ಭಾಗ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಧಾನಪರಿಷತ್‌ ಚುನಾವಣೆ: ಗೆಲುವಿನ ಹೊಣೆ ಉಸ್ತುವಾರಿಗಳಿಗೆ

ವಿಧಾನಪರಿಷತ್‌ ಚುನಾವಣೆ: ಗೆಲುವಿನ ಹೊಣೆ ಉಸ್ತುವಾರಿಗಳಿಗೆ

ಬೂಸ್ಟರ್‌ ಡೋಸ್‌ ಲಸಿಕೆ: ಕೇಂದ್ರಕ್ಕೆ ಬೇಡಿಕೆ

ಬೂಸ್ಟರ್‌ ಡೋಸ್‌ ಲಸಿಕೆ: ಕೇಂದ್ರಕ್ಕೆ ಬೇಡಿಕೆ

ಬಿಜೆಪಿ ಜತೆ ಮೈತ್ರಿಗೆ ಎಚ್‌ಡಿಕೆ ಇಂಗಿತ

ಬಿಜೆಪಿ ಜತೆ ಮೈತ್ರಿಗೆ ಎಚ್‌ಡಿಕೆ ಇಂಗಿತ

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

ಜಾನುವಾರುಗಳಿಗೆ ಕಾಡಿಸುತ್ತಿರುವ ಕಾಲುಬಾಯಿ ರೋಗ; ಲಸಿಕೆ 2 ತಿಂಗಳು ವಿಳಂಬ

ಜಾನುವಾರುಗಳಿಗೆ ಕಾಡುತ್ತಿರುವ ಕಾಲುಬಾಯಿ ರೋಗ; ಲಸಿಕೆ 2 ತಿಂಗಳು ವಿಳಂಬ

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

hgjuthygfd

ಗ್ಯಾಂಗ್‌ ಸ್ಟರ್ ಗೆಟಪ್‌ನಲ್ಲಿ ಶಾನ್ವಿ…

rwytju11111111111

ಗುರುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

ಸಮ್ಮಾನಕ್ಕೆ ಇದ್ದ ಉತ್ಸಾಹ ಗೌರವಧನ ನೀಡುವಲ್ಲಿಲ್ಲ !

ಸಮ್ಮಾನಕ್ಕೆ ಇದ್ದ ಉತ್ಸಾಹ ಗೌರವಧನ ನೀಡುವಲ್ಲಿಲ್ಲ !

ಗೋ ಹಂತಕರ ವಿರುದ್ಧ ಕಠಿನ ಕ್ರಮ: ಈಶ್ವರಪ್ಪ

ಗೋ ಹಂತಕರ ವಿರುದ್ಧ ಕಠಿನ ಕ್ರಮ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.