Tulu Koota Bengaluru: ತುಳುಕೂಟ ಬೆಂಗಳೂರು ಸಂಘಕ್ಕೆ ಬಂಗಾರ್ದ ಪರ್ಬ


Team Udayavani, Nov 24, 2023, 2:12 PM IST

Tulu Koota Bengaluru: ತುಳುಕೂಟ ಬೆಂಗಳೂರು ಸಂಘಕ್ಕೆ ಬಂಗಾರ್ದ ಪರ್ಬ

ಬೆಂಗಳೂರು: ವಿಶ್ವದ ಯಾವುದೇ ಮೂಲೆಗೆ ಹೋದರೂ ಸಿಗುವ ಏಕೈಕ ಸಂಘವೆಂದರೆ ಅದು ತುಳು ಸಂಘಗಳು. ತುಳುನಾಡಿನ ಭಾಷೆ, ನೆಲ, ಜಲಕ್ಕಾಗಿ ಸುದೀರ್ಘ‌ವಾಗಿ ಹೋರಾಟ ಮಾಡಿಕೊಂಡು ಬಂದಿದ್ದ “ತುಳುಕೂಟ, ಬೆಂಗಳೂರು’ ಸಂಘಕ್ಕೆ 50 ವರ್ಷ ತುಂಬಿದ್ದು, ಸುವರ್ಣ ಮಹೋತ್ಸವ (ಬಂಗಾರ್ದ ಪರ್ಬ)ಕ್ಕೆ ಕಾಲಿಟ್ಟಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನರು ಹಿಂದೆ ಹೊಟ್ಟೆಪಾಡಿಗಾಗಿ ವಿವಿಧ ರಾಜ್ಯಕ್ಕೆ ಉದ್ಯೋಗ ಅರಸಿಕೊಂಡು ಹೋಗಿ ಅಲ್ಲಿ ಹಲವು ತುಳು ಸಂಘಗಳನ್ನು ಕಟ್ಟಿ ಬೆಳೆಸಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲಿ 1972ರಲ್ಲಿ ಪ್ರಾರಂಭವಾದ “ತುಳುಕೂಟ, ಬೆಂಗಳೂರು’ ಸಂಘವು ಸಮಾಜ ಮುಖೀ ಕಾರ್ಯ ಮಾಡುತ್ತಾ ಜನರ ಮನ್ನಣೆಗೆ ಪಾತ್ರವಾಗಿದೆ.

ವಿ.ಟಿ.ರಾಜಶೇಖರ್‌ ಈ ಸಂಘದ ಮೊದಲ ಅಧ್ಯಕ್ಷರಾಗಿದ್ದು, ನಂತರ ಈ ಸಂಘಟನೆಯಲ್ಲಿ 17 ಮಂದಿ ಅಧ್ಯಕ್ಷರಾಗಿದ್ದಾರೆ. ಪ್ರಸ್ತುತ ಸುಂದರ್‌ ರಾಜ್‌ ರೈ ಅವರು 18ನೇ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 13 ಜನರಿಂದ ಹುಟ್ಟಿಕೊಂಡ “ತುಳುಕೂಟ, ಬೆಂಗಳೂರು’ ಸಂಘದಲ್ಲಿ ಪ್ರಸ್ತುತ 12,500 ಸದಸ್ಯರಿದ್ದಾರೆ.

“ತುಳುಕೂಟ, ಬೆಂಗಳೂರು’ ಕೊಡುಗೆ ಏನು?: 800 ವರ್ಷಗಳ ಇತಿಹಾಸ ಇರುವ ಉಡುಪಿ ಮಠದ ದ್ವಾರದಲ್ಲಿ ತುಳು ಶಬ್ದಗಳಲ್ಲಿ ಅಕ್ಷರಗಳಿವೆ ಎಂಬುದನ್ನು ಮನದಟ್ಟು ಮಾಡಿ ತುಳು ಭಾಷೆಗೆ ಲಿಪಿ ಎಂಬುದನ್ನು ಸಾಕ್ಷ್ಯ ಸಮೇತ ತೋರಿಸಿಕೊಟ್ಟ ಕೀರ್ತಿ “ತುಳುಕೂಟ, ಬೆಂಗಳೂರು’ಗೆ ಸಲ್ಲುತ್ತದೆ. ಇವರ ಹೋರಾಟದ ಫ‌ಲವಾಗಿಯೇ ಮಹಾಲಕ್ಷ್ಮೀಲೇ ಔಟ್‌ನಲ್ಲಿರುವ ರಾಣಿ ಅಬ್ಬಕ್ಕನ ಪ್ರತಿಮೆ ತಲೆ ಎತ್ತಿದೆ. ಮಹಾಲಕ್ಷ್ಮೀಲೇಔಟ್‌ನಲ್ಲಿ ರಾಣಿ ಅಬ್ಬಕ್ಕ ಮೈದಾನವೂ ನಿರ್ಮಾಣವಾಗಿದೆ.

ಇನ್ನು ಪಠ್ಯಪುಸ್ತಕದಲ್ಲಿ ಐಚ್ಛಿಕ ಭಾಷೆಯಾಗಿ ತುಳು ತಂದಿರುವುದು, ತುಳು ಸಾಹಿತ್ಯ ಅಕಾಡೆಮಿ, ತುಳು ಅಧ್ಯಯನ ಪೀಠ ಸ್ಥಾಪನೆ ಸೇರಿದಂತೆ ತುಳುನಾಡಿನ ಭಾಷೆ, ನೆಲ, ಜಲಕ್ಕೆ ಸಂಬಂಧಿಸಿದ ಹಲವು ಕಾರ್ಯಗಳು ಅನುಷ್ಠಾನಕ್ಕೆ ತರುವಲ್ಲಿ ಈ ಸಂಘಟನೆಯ ಕಾರ್ಯ ಬಹಳಷ್ಟಿದೆ.

ಇಂದು ಸುವರ್ಣ ಮಹೋತ್ಸವ: ತುಳುಕೂಟ ಬೆಂಗಳೂರು 50 ವರ್ಷ ತುಂಬಿದ ಈ ಶುಭ ಸಂದರ್ಭದಲ್ಲಿ ಸುವರ್ಣ ಮಹೋತ್ಸವ (ಬಂಗಾರª ಪರ್ಬ) ಇಂದು (ನ.24) ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯ ವರೆಗೆ ಅರಮನೆ ಮೈದಾನದಲ್ಲಿ ಆಚರಿಸಲಾಗುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕಾರ್ಯ ಕ್ರಮ ಉದ್ಘಾಟಿಸಲಿದ್ದಾರೆ.

ವಿಶ್ವ ತುಳುಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಮತ್ತು ಜಾನಪದ ನೃತ್ಯ, ಕಲೆ, ಸಂಗೀತ, ಯಕ್ಷಗಾನ, ತುಳು ವಿದ್ವಾಂಸರಿಂದ ವಿಚಾರ ಗೋಷ್ಠಿ, ನಗೆಹಬ್ಬ (ಖ್ಯಾತ ಕಲಾವಿದರಿಂದ) ‘ಸ್ಮರಣ ಸಂಚಿಕೆ’ ಬಿಡುಗಡೆ ಹಮ್ಮಿಕೊಳ್ಳಲಾಗಿದೆ. ತುಳು ಭಾಷೆಗೆ ದೇಶ ವಿದೇಶಗಳಲ್ಲಿ ಸೇವೆ ಸಲ್ಲಿಸಿರುವ /ಸಾಧನೆ ಮಾಡಿರುವ ಗಣ್ಯರಿಗೆ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತಿದೆ.

ತುಳುನಾಡಿನ ಆಚರಣೆಗಳು: ಪ್ರತಿ ವರ್ಷ ತುಳುನಾಡಿನ ಐದಾರು ಆಚರಣೆಗಳನ್ನು ಬೆಂಗಳೂರಿನಲ್ಲಿ ನಡೆಸುವ ಮೂಲಕ ಕರಾವಳಿ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರತಿ ವರ್ಷ ಹೊಸ ಅಕ್ಕಿ ಊಟ (ಪುದ್ದಾರ್‌) ಎಂಬ ಕಾರ್ಯಕ್ರಮ ನಡೆಸುತ್ತಿದೆ. ಇನ್ನು ಆಟಿ ತಿಂಗಳಲ್ಲಿ ಊರಿನಿಂದ ಕೆಲ ಉತ್ಪನ್ನ ತರಿಸಿಕೊಂಡು ಕೆತ್ತೆ ಕಷಾಯ ಮಾಡಲಾಗುತ್ತಿದೆ. ಆಟಿ ತಿಂಗಳಲ್ಲಿ ಈ ಕಷಾಯ ಕುಡಿದರೆ ಆರೋಗ್ಯಕ್ಕೆ ಬಹಳ ಉತ್ತಮ ಎಂಬ ಪ್ರತೀತಿ ಇದೆ. ಜತೆಗೆ ಭೂಮಿ ಪೂಜೆ (ಕೆದ್ದಸ ) ಯಂತಹ ದಕ್ಷಿಣ ಕನ್ನಡ ಭಾಗದ ಹಲವಾರು ಧಾರ್ಮಿಕ ಆಚರಣೆಗಳನ್ನು ಈ ಸಂಘಟನೆ ನಡೆಸುತ್ತಿದೆ. ಪ್ರತಿ ವರ್ಷ ತುಳುನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ವಿದ್ಯಾಭ್ಯಾಸಕ್ಕೆ ನೆರವಾಗಲು 10 ಸಾವಿರ ರೂ. ಸ್ಕಾಲರ್‌ಶಿಪ್‌ ಕೊಡಲಾಗುತ್ತಿದೆ.

“ತುಳುಕೂಟ, ಬೆಂಗಳೂರು’ಗೆ ಇನ್ನೂ ಸಿಕ್ಕಿಲ್ಲ ಜಾಗ: “ತುಳೂಕೂಟ, ಬೆಂಗಳೂರು’ ಸಂಘಟನೆಗೆ 50 ವರ್ಷವಾದರೂ ಸೂಕ್ತ ಜಾಗವಿಲ್ಲ. ರಾಜ್ಯದ ಹಲವಾರು ಹಳೇ ಸಂಘಟನೆಗಳಿಗೆ ಸರ್ಕಾರವು ಜಾಗ ನೀಡಿ ಅದರ ಏಳಿಗೆಗೆ ಸಹಕರಿಸಿದೆ. ಆದರೆ, ನಮಗೆ ಕನಿಷ್ಠ 5 ಸೆಂಟ್ಸ್‌ ಜಾಗ ಕೊಟ್ಟಿಲ್ಲ ಎಂಬ ಬೇಸರ ಇದೆ. ಬಿಡಿಎನಲ್ಲಿ ಜಾಗಕ್ಕೆ ಅರ್ಜಿ ಸಲ್ಲಿಸಿದ್ದರೂ 12 ವರ್ಷಗಳಿಂದ ಬಾಕಿ ಉಳಿದಿದೆ. ಕಂಬಳ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ಕೊಟ್ಟಾಗ ಅವರಿಗೆ ನಮ್ಮ ಸಮಸ್ಯೆಗಳನ್ನು ವಿವರಿಸಿ ಸಂಘಕ್ಕೆ ಜಾಗ ಕೊಡಿಸುವಂತೆ ಮನವಿ ಮಾಡುತ್ತೇವೆ. ಬೆಂಗಳೂರಿನ ಯಾವುದೇ ಭಾಗದಲ್ಲೂ ಜಾಗ ಕೊಟ್ಟರೆ ಸಾಕು ಎಂದು ಸಂಘದ ಅಧ್ಯಕ್ಷ ಸುಂದರ್‌ ರಾಜ್‌ ರೈ ಉದಯವಾಣಿಗೆ ತಿಳಿಸಿದ್ದಾರೆ.

1972ರಲ್ಲಿ “ತುಳೂಕೂಟ, ಬೆಂಗಳೂರು’ ಸಂಘಟನೆ ಪ್ರಾರಂಭವಾದಗ ಶಿವಾನಂದ ವೃತ್ತದ ಬಳಿ ಇದರ ಬಾಡಿಗೆ ಕಚೇರಿಯಿತ್ತು. ಈಗಲೂ ಅಲ್ಲೇ ಇದ್ದೇವೆ. ಸಂಘವು ಯಶಸ್ವಿಯಾಗಿ 50 ವರ್ಷ ಪೂರೈಸಿರುವುದು ಸಂತಸ ಉಂಟಾಗಿದೆ. -ಸುಂದರ್‌ ರಾಜ್‌ ರೈ, ಅಧ್ಯಕ್ಷರು, “ತುಳುಕೂಟ, ಬೆಂಗಳೂರು’

-ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ: ಬೇಳೂರು

Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Bengaluru: ಬೆದರಿಸಲು ನೇಣಿಗೆ ಕೊರಳೊಡ್ಡಿದ ಪತಿ ದಿಢೀರ್‌ ಕುಣಿಕೆ ಬಿಗಿದು ಸಾವು

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Fraud: ಗೃಹ ಸಚಿವರ ಆಪ್ತ ಎಂದು ನಂಬಿಸಿ ಹಲವರಿಗೆ ವಂಚನೆ

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌ !

Beans Price: ರಾಂಚಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೀನ್ಸ್‌!

Crime: ಕೈ, ಕತ್ತು ಕೊಯ್ದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ

Crime: ಕೈ, ಕತ್ತು ಕೊಯ್ದ ಸ್ಥಿತಿಯಲ್ಲಿ ಯುವತಿ ಶವ ಪತ್ತೆ

8-bng

17 ಕೋಟಿ ರೂ. ವಿದ್ಯುತ್‌ ಬಿಲ್‌ ಕಂಡು ಮನೆ ಮಾಲೀಕನಿಗೆ ಶಾಕ್‌!

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-wrerwer

Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

1-wqewqwqe

Bhatkal;ವೆಂಕಟಾಪುರ ನದಿಯಲ್ಲಿ ಮುಳುಗಿ ಇಬ್ಬರು ಮೃತ್ಯು

1-xdx

Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.