Udayavni Special

ಗುಂಡಿ ಬಿದ್ದ ದೇವನಹಳ್ಳಿ-ಚಿಕ್ಕಬಳ್ಳಾಪುರ ರಸ್ತೆ : ಸಂಕಷ್ಟ

ಮಳೆ ಬಂದರಂತೂ ಸವಾರರ ಪಾಡು ಹೇಳತೀರದು

Team Udayavani, Sep 22, 2020, 1:12 PM IST

ಗುಂಡಿ ಬಿದ್ದ ದೇವನಹಳ್ಳಿ-ಚಿಕ್ಕಬಳ್ಳಾಪುರ ರಸ್ತೆ : ಸಂಕಷ್ಟ

ದೇವನಹಳ್ಳಿ: ಕಳೆದ ಒಂದು ವಾರದಿಂದ ಮಳೆ ಆಗುತ್ತಿರುವುದರಿಂದ ತಾಲೂಕಿನಲ್ಲಿ ರಸ್ತೆಗಳೆಲ್ಲಾ ಕೆಸರುಮಯವಾಗಿರುವಂತೆಯೇ ರಾಷ್ಟ್ರೀಯ ಹೆದ್ದಾರಿ 207ರ ರಸ್ತೆ ಮಧ್ಯೆ ದೊಡ್ಡ ಗಾತ್ರದ ಗುಂಡಿಗಳುಬಿದ್ದಿರುವುದರಿಂದ ವಾಹನ ಸವಾರರು ಎದ್ದು ಬಿದ್ದು ಹೋಗುವ ಪರಿಸ್ಥಿತಿ ಎದುರಾಗಿದೆ.

ನಿತ್ಯ ಸಂಕಷ್ಟ: ದೇವನಹಳ್ಳಿ ನಗರದ ಗಿರಿಯಮ್ಮ ವೃತ್ತದಿಂದ ಹಿಡಿದು, ರಾಣಿ ಸರ್ಕಲ್‌ವರೆಗೆ ರಸ್ತೆಗಳು ಗುಂಡಿ ಬಿದ್ದಿವೆ. ನಗರದ ಹಳೇ ಆರ್‌ಟಿಒ ಕಚೇರಿಯಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ, ಬೃಹತ್‌ ಗಾತ್ರದ ಗುಂಡಿ ಬಿದ್ದಿದ್ದು ವಾಹನ ಸವಾರರು ಸಂಚರಿಸಲು ಸಂಕಷ್ಟ ಪಡುವಂತಾಗಿದೆ.

ಚಿಕ್ಕಬಳ್ಳಾಪುರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಬಸ್‌, ಲಾರಿ, ಕಾರು, ಬೈಕ್‌ಗಳು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುತ್ತವೆ.ರಸ್ತೆಯಲ್ಲಿರುವ ಗುಂಡಿಯ ಪಕ್ಕದಲ್ಲಿಯೇ ವಾಹನ ಸವಾರರು ಗುಂಡಿ ತಪ್ಪಿಸಿ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ಯಾಮಾರಿದರೆ ಸಾವು ಕಟ್ಟಿಟ್ಟ ಬುತ್ತಿ.

ಕೆಸರುಗದ್ದೆ: ಎನ್‌ಎಚ್‌ ವ್ಯಾಲಿ ನೀರು ಹರಿಸಲು ಪೈಪ್‌ಲೈನ್‌ ಅಳವಡಿಸಲೆಂದು ರಾಷ್ಟ್ರೀಯ ಹೆದ್ದಾರಿ ಅಗೆದು 1 ವರ್ಷ ಕಳೆದರೂ ರಸ್ತೆಗೆ ಡಾಂಬರೀಕರಣ ಮಾಡದೇ ಹಾಗೆಯೇ ಬಿಟ್ಟಿದ್ದಾರೆ. ಕಾಮಗಾರಿ ವರ್ಷ ಮುಗಿದು ವರ್ಷ ಕಳೆದರೂ ರಸ್ತೆಯಲ್ಲಿ ಅಗೆದಿರುವ ಜಾಗದಲ್ಲಿ ಜಲ್ಲಿ ಕಲ್ಲುಹಾಕಿ ಬಿಡಲಾಗಿದೆ. ಮಳೆ ಬಂತೆಂದರೆ, ರಸ್ತೆ ಇಕ್ಕಲೆಗಳಲ್ಲೆಲ್ಲಾ ಕೆಸರುಗದ್ದೆಯಾಗಲಿದೆ. ರಸ್ತೆ ಗುಂಡಿಗೆ ಮಣ್ಣು ಹಾಕಿರುವುದರಿಂದ ಮಳೆ ಬಂದಿರುವುದರಿಂದ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ.

ವಾಹನ ಸವಾರರು ಒಂದು ಗುಂಡಿ ತಪ್ಪಿಸಲು ಹೋಗಿ ಮತ್ತೂಂದು ಗುಂಡಿಯಲ್ಲಿ ಚಕ್ರವನ್ನು ಇಳಿಸುವ ದುಸ್ಥಿತಿಗೆ ಮುಕ್ತಿ ಇಲ್ಲದಂತಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಖ್ಯಾತಿ ಹೊಂದಿರುವ ದೇವನಹಳ್ಳಿ ರಸ್ತೆಗಳ ಸ್ಥಿತಿಯನ್ನು ಕೇಳ್ಳೋರಿಲ್ಲದಂತಾಗಿದೆ.

ಅರ್ಧಕ್ಕೆ ನಿಂತ ಕಾಮಗಾರಿ: ದೇವನಹಳ್ಳಿ – ದೊಡ್ಡಬಳ್ಳಾಪುರ ಮಾರ್ಗದ ರಸ್ತೆಗಳಲ್ಲಿಯೂ ಗುಂಡಿಗಳದ್ದೇ ಕಾರುಬಾರು. ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಭಯ ಹೆಚ್ಚು ಮಾಡಿದೆ. ಡಾಬಸ್‌ಪೇಟೆಯಿಂದ ಹೊಸೂರು ಮುಖ್ಯರಸ್ತೆಗೆ ಸೇರಲು ರಿಂಗ್‌ರೋಡ್‌ ರಸ್ತೆಯನ್ನು 2010ರಲ್ಲಿ ಕೈಗೊಳ್ಳಲಾಗಿತ್ತು. ಆದರೆ, ಇದುವರೆಗೂ ಕಾಮಗಾರಿ ಅರ್ಧಕ್ಕೆ ನಿಂತುಹೋಗಿದೆ. ದಿನೇ ದಿನೆ ದೇವನಹಳ್ಳಿ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿರುವ ಮಧ್ಯೆ ರಸ್ತೆಗಳ ಸಂಚಾರ ಬಲು ಕಷ್ಟಕರವಾಗಿದೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಸವಾರರು, ಚಾಲಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ದೇವನಹಳ್ಳಿ ನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಖ್ಯಾತಿ ಹೊಂದಿದೆ. ಆದರೆ, ರಸ್ತೆಗಳಲ್ಲಿ ಗುಂಡಿ ಗಳನ್ನು ನೋಡಿದರೆ, ಭಯವಾಗುತ್ತದೆ. ಲೋಕೋಪಯೋಗಿ ಇಲಾಖೆಯನ್ನು ಕೇಳಿದರೆ, ರಾಷ್ಟ್ರೀಯ ಹೆದ್ದಾರಿಗೆ ಬರುತ್ತದೆ ಎಂದು ಹೇಳುತ್ತಾರೆ. ಪುರಸಭೆಯನ್ನು ಕೇಳಿದರೆ ಪಿಡಬ್ಲ್ಯುಡಿಗೆ ಬರುತ್ತದೆ ಎಂದು ಹಾರಿಕೆ ಉತ್ತರ ನೀಡಿ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. -ಎಚ್‌.ಕೆ.ವೆಂಕಟೇಶಪ್ಪ, ಡಿಎಸ್‌ಎಸ್‌ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ

ಮಳೆಗಾಲ ಪ್ರಾರಂಭವಾಗಿರುವುದರಿಂದಕೂಡಲೇ ಪಿಡಬ್ಲ್ಯುಡಿ ಇಲಾಖೆ ಅಧಿಕಾರಿಗಳು ರಸ್ತೆ ಗುಂಡಿ ಮುಚ್ಚಿಸುವ ಕಾರ್ಯ ಮಾಡಬೇಕು. ರಸ್ತೆಕಾಮಗಾರಿಗೆ ಕ್ರಿಯಾಯೋಜನೆ ರೂಪಿಸಬೇಕು. ಅಧಿಕಾರಿಗಳು ಎಲ್ಲಿ ರಸ್ತೆ ಗುಂಡಿ ಬಿದ್ದಿದೆಯೋ ಅದನ್ನು ಕೂಡಲೇ ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಎಲ್‌.ಎನ್‌.ನಾರಾಯಣಸ್ವಾಮಿ, ಶಾಸಕ

ಡಾಂಬರೀಕರಣ ಮಾಡುವಂತೆ ನಾವು ಈಗಾಗಲೇ 2ಬಾರಿರಾಷ್ಟ್ರೀಯಹೆದ್ದಾರಿ ಪ್ರಾಧಿಕಾರಕ್ಕೆ ನೋಟಿಸ್‌ ನೀಡಿದ್ದೇವೆ. ಇದುವರೆಗೆಕೆಲಸ ಮಾಡಿಲ್ಲ. ಹಾಗಾಗಿ ಶಾಸಕರ ಗಮನಕ್ಕೆ ತರಲಾಗಿದೆ. ಶಾಸಕರು ಆದಷ್ಟು ಬೇಗ ಸಭೆಕರೆದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದೊಂದಿಗೆ ಮಾತನಾಡಿ ಡಾಂಬರೀಕರಣಕ್ಕೆ ಸೂಚನೆ ನೀಡಲಿದ್ದಾರೆ. ಕೃಷ್ಣಪ್ಪ, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ

 

ಎಸ್‌.ಮಹೇಶ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

pralhad joshi

ಪ್ರಜಾಪ್ರಭುತ್ವದಲ್ಲಿ ವಿಶ್ವಾಸವೇ ಇಲ್ಲದ ಕಾಂಗ್ರೆಸ್ ಅವಸಾನದತ್ತ: ಪ್ರಹ್ಲಾದ ಜೋಶಿ

ದೇವಸ್ಥಾನಗಳ ರಕ್ಷಣೆಗೆ ಸರಕಾರ ಬದ್ಧ: ಕೋಟ ಶ್ರೀನಿವಾಸ ಪೂಜಾರಿ

ದೇವಸ್ಥಾನಗಳ ರಕ್ಷಣೆಗೆ ಸರಕಾರ ಬದ್ಧ: ಕೋಟ ಶ್ರೀನಿವಾಸ ಪೂಜಾರಿ

chennai super kings out of playoff race 2020

ರಾಜಸ್ಥಾನದ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಕೂಟದಿಂದಲೇ ಔಟ್

Watch Live: ದಸರಾ ಮಹೋತ್ಸವ-ಚಿನ್ನದ ಅಂಬಾರಿಯ ಜಂಬೂ ಸವಾರಿಗೆ ಕ್ಷಣಗಣನೆ

Watch Live: ದಸರಾ ಮಹೋತ್ಸವ-ಚಿನ್ನದ ಅಂಬಾರಿಯ ಜಂಬೂ ಸವಾರಿಗೆ ಕ್ಷಣಗಣನೆ

ಮೈಸೂರು ಜಂಬೂ ಸವಾರಿ 2020: ನಂದಿ ಧ್ವಜ ಪೂಜೆಗೆ ಸಿದ್ಧತೆ

ಮೈಸೂರು ಜಂಬೂ ಸವಾರಿ 2020: ನಂದಿ ಧ್ವಜ ಪೂಜೆಗೆ ಸಿದ್ಧತೆ

ಡಿಸಿಎಂ ಕಾರಜೋಳ ಕುಟುಂಬದ ಸಂಕಷ್ಟ ಪರಿಹಾರಕ್ಕಾಗಿ ವಿಶೇಷ ಪೂಜೆ

ಡಿಸಿಎಂ ಕಾರಜೋಳ ಕುಟುಂಬದ ಸಂಕಷ್ಟ ಪರಿಹಾರಕ್ಕಾಗಿ ವಿಶೇಷ ಪೂಜೆ

ಸರ್ಕಾರದ ಪ್ರತಿನಿಧಿಗಳು ಜನರ ಬಳಿ ಹೋಗ್ತಿಲ್ಲ, ಜನರ ಪಾಲಿಗೆ ಸರ್ಕಾರ ಸತ್ತಿದೆ: ಸಿದ್ದರಾಮಯ್ಯ

ಸರ್ಕಾರದ ಪ್ರತಿನಿಧಿಗಳು ಜನರ ಬಳಿ ಹೋಗ್ತಿಲ್ಲ, ಜನರ ಪಾಲಿಗೆ ಸರ್ಕಾರ ಸತ್ತಿದೆ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

br-tdy-1

ಕೃಷಿಯಲ್ಲಿ ತಂತ್ರಜ್ಞಾನದ ಅರಿವು ಅಗತ್ಯ

br-tdy-1

ಬೆಲೆ ಏರಿಕೆಗೆ ಗ್ರಾಹಕರು ಕಂಗಾಲು

ದಾಸ್ತಾನು ಖಾಲಿ: ಪಡಿತರಕ್ಕೆ ತಪ್ಪದ ಅಲೆದಾಟ

ದಾಸ್ತಾನು ಖಾಲಿ: ಪಡಿತರಕ್ಕೆ ತಪ್ಪದ ಅಲೆದಾಟ

br-tdy-1

ನಿರಂತರ ಮಳೆಗೆ ನೆಲಕಚ್ಚಿದ ರಾಗಿ ಬೆಳೆ

br–tdy-2

ಈರುಳ್ಳಿ ಬೆಲೆ ಗ್ರಾಹಕರಿಗೆ ಬರೆ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

pralhad joshi

ಪ್ರಜಾಪ್ರಭುತ್ವದಲ್ಲಿ ವಿಶ್ವಾಸವೇ ಇಲ್ಲದ ಕಾಂಗ್ರೆಸ್ ಅವಸಾನದತ್ತ: ಪ್ರಹ್ಲಾದ ಜೋಶಿ

ದೇವಸ್ಥಾನಗಳ ರಕ್ಷಣೆಗೆ ಸರಕಾರ ಬದ್ಧ: ಕೋಟ ಶ್ರೀನಿವಾಸ ಪೂಜಾರಿ

ದೇವಸ್ಥಾನಗಳ ರಕ್ಷಣೆಗೆ ಸರಕಾರ ಬದ್ಧ: ಕೋಟ ಶ್ರೀನಿವಾಸ ಪೂಜಾರಿ

chennai super kings out of playoff race 2020

ರಾಜಸ್ಥಾನದ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಕೂಟದಿಂದಲೇ ಔಟ್

ಆಗ್ನೇಯ ಪದವೀಧರ ಕ್ಷೇತ್ರವನ್ನು ವೈ.ಎ. ನಾರಾಯಣಸ್ವಾಮಿ ಅಪವಿತ್ರಗೊಳಿಸಿದ್ದಾರೆ: ಡಾ.ಹಾಲನೂರ್

ಆಗ್ನೇಯ ಪದವೀಧರ ಕ್ಷೇತ್ರವನ್ನು ವೈ.ಎ. ನಾರಾಯಣಸ್ವಾಮಿ ಅಪವಿತ್ರಗೊಳಿಸಿದ್ದಾರೆ: ಡಾ.ಹಾಲನೂರ್

ಕುಂಭಾಸಿ ಶ್ರೀಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನ : ಸಂಭ್ರಮದ ವಿಜಯ ದಶಮಿ

ಕುಂಭಾಸಿ ಶ್ರೀಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನ : ಸಂಭ್ರಮದ ವಿಜಯ ದಶಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.