ಜೋಳದ ಬೆಳೆಗೆ ಫಾಲ್‌ ಸೈನಿಕ ಹುಳು ಕಾಟ!

Team Udayavani, Jun 3, 2020, 6:37 AM IST

sain kaata

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಜೋಳದ ಬೆಳೆಗೆ ಫಾಲ್‌ ಸೈನಿಕ ಹುಳು ಕಾಟದ ಬಾಧೆ ತಗುಲಿದ್ದು, ರೈತರು ಜೋಳದ ಬೆಳೆ ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ. ಬೀಜೋಪಚಾರದಿಂದಲೇ ತಜ್ಞರ ಸಲಹೆ ಪಾಲಿಸಿದರೆ, ಕೀಟ  ನಿಯಂತ್ರದಲ್ಲಿಡ ಬಹುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎ.ಪಿ. ಮಲ್ಲಿಕಾರ್ಜುನಗೌಡ, ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ಬಿ. ಮಂಜುನಾಥ್‌ ಸಲಹೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿ, ಫಾಲ್‌ಸೈನಿಕ ಹುಳು,  ಅಮೆರಿಕ ದಿಂದ ಆಫ್ರಿಕಾ ಮೂಲಕ ಭಾರತಕ್ಕೆ ಬಂದಿದೆ. ಈ ಲದ್ದಿಹುಳು ಆಹಾರ ಖಾಲಿಯಾದ ತಕ್ಷಣ ಅನ್ವೇಷನೆ ಆರಂಭಿಸುತ್ತದೆ. ಒಂದು ಬಹುಬೆಳೆ ಭಕ್ಷಕ ಕೀಟವಾಗಿದ್ದು, ಆಕ್ರಮಣಕಾರಿ ಪ್ರವೃತ್ತಿ ಹೊಂದಿದೆ. ಸುಮಾರು 80ಕ್ಕಿಂತ  ಹೆಚ್ಚು ಆಸರೆ ಸಸ್ಯ ಹೊಂದಿದ್ದು, ಮುಖ್ಯವಾಗಿ ಹುಲ್ಲುಗಾವಲು, ಹುರಳಿ, ಹತ್ತಿ, ಗೋವಿನಜೋಳ, ರಾಗಿ, ಓಟ್ಸ್‌, ಕಡಲೆ, ಭತ್ತ, ಜೋಳ, ಸಕ್ಕರೆ,  ಬಿಟ್‌ರೂಟ್‌, ಸೋಯಾಬಿನ್‌, ಕಬ್ಬು, ತಂಬಾಕು, ಗೋಧಿ, ಕಿರು ಧಾನ್ಯ ಮತ್ತು ಮೇವಿನ ಬೆಳೆ  ಗಳು ಕೀಟದ ಬಾಧೆಗೆ ತುತ್ತಾ ಗುತ್ತವೆ. ತರಕಾರಿ ಬೆಳೆಗಳು ಮತ್ತು ಹಣ್ಣಿನ ಬೆಳೆಗಳ ಮೇಲೆ ಕೆಲವೊಮ್ಮೆ ಮಾತ್ರ ದಾಳಿ ನಡೆಸುತ್ತವೆ ಎಂದರು.

ಹಾನಿಯ ಲಕ್ಷಣಗಳು: ಕೀಟಗಳು ಪ್ರಮುಖ ವಾಗಿ ಎಲೆ ಸೇವಿಸುತ್ತವೆ. ಕೀಟದ ಬಾಧೆ ತೀವ್ರ ವಾದಲ್ಲಿ ಸುಳಿ ತಿಂದು ಅಧಿಕ ಪ್ರಮಾಣ ದಲ್ಲಿ ಹಿಕ್ಕೆ ಹಾಕುತ್ತವೆ. ತೆನೆ ತುದಿಯಲ್ಲಿ ಮೊದಲು ತುಪ್ಪಳ ಆಹಾರ ಸೇವಿಸಿ, ಬಳಿ ಸಿಪ್ಪೆ ಯೊ ಳಗೆ  ಪ್ರವೇಶಿಸಿ ಕಾಳು ತಿಂದು ನಾಶಪಡಿ ಸುತ್ತವೆ. ಈ ಕೀಟ ಹೆಚ್ಚಾಗಿ 40ರಿಂದ 50 ದಿ® ‌ದೊಳಗಿನ ಬೆಳೆ ನಾಶಮಾಡುತ್ತವೆ. ಈ ಕೀಟಗಳು ಆಹಾರ ಅನ್ವೇಷಣೆಯಲ್ಲಿ ಒಂದು ಹೊಲದಿಂದ ಮತ್ತೂಂದು ಹೊಲಕ್ಕೆ ಸೈನಿಕ ರೋಪಾದಿಯಲ್ಲಿ  ಪಸರಿಸುವ ಶಕ್ತಿ ಹೊಂದಿವೆ ಎಂದರು.

ನಿರ್ವಹಣೆ ಕ್ರಮಗಳು: ಸಾಮಾನ್ಯವಾಗಿ ರೈತರು ಸೂಕ್ತ ವಿಧಾನ ಅನುಸರಿಸದೇ ರಾಸಾ ಯನಿಕ ಅಂಗಡಿಗಳಿಂದ ತಂದ ಕೀಟನಾಶಕ ಬಳಸುತ್ತಾರೆ. 10 ದಿನಗಳ ನಂತರ ಮತ್ತೆ ಕೀಟ  ಗಳು ಆರಂಭಗೊಳ್ಳುತ್ತದೆ. ಈ ನಿಟ್ಟಿನಲ್ಲಿ ರೈತರು ಸೂಕ್ತ  ಕೀಟ ನಾಶಕ ಬಳಸಬೇಕು. ಅಡ ಗಿ ರುವ ಹುಳುಗಳು ಸಂಜೆ ಹೊತ್ತು ಹೆಚ್ಚಾಗಿ ಹೊರಬರುವುದರಿಂದ ಸಂಜೆ ಹೊತ್ತು ಮಾತ್ರ ಕೀಟ ನಾಶಕ ಸಿಂಪಡಿಸಬೇಕು ಎಂದರು.

ಮುಸುಕಿನ ಜೋಳದಲ್ಲಿ ಸೈನಿಕ ಹುಳುವಿನ ಹತೋಟಿಗೆ ಸೈಯಂತ್ರನಿಲಿಪೊಲ್‌, ಥಯೋ ಮೆಥಕ್ಸಾಮ್‌- 6 ಮಿ.ಲೀ.  ಜತೆಗೆ 4 ಮಿ.ಲೀ. ನೀರು ಪ್ರತಿ ಕಿಲೋಗ್ರಾಂ ಬೀಜಕ್ಕೆ ಬೀಜೋಪ ಚಾರ ಮಾಡಿ ಬಿತ್ತನೆ ಮಾಡುವುದು ಸೂಕ್ತ. ಬೇವಿನ ಬೀಜದ ಕಷಾಯವನ್ನು  ಶೇ.5ರಂತೆ ಅಥವಾ ಬೇವಿನ  ಮೂಲದ ಕೀಟ ನಾಶಕ ಅಜಾಡಿರೆಕ್ಟಿನ್‌ 10,000 ಪಿಪಿಎಂ 2 ಮೀ.ಲೀ ಒಂದು  ಲೀ. ನೀರಿಗೆ ಮಿಶ್ರಣ ಮಾಡಿ, ಸುಳಿಯಲ್ಲಿ ಸಿಂಪರಣೆ ಮಾಡು ವುದರಿಂದ ಮೊಟ್ಟೆ ಮತ್ತು ಮರಿಹುಳು ನಾಶಪಡಿಸ ಬಹುದು.

ಸ್ಟ್ರೈನೊಟರಮ್‌ 11.7 ಎಸ್‌ಸಿ, 0.5  ಮಿ.ಲೀ/ಲೀ., ನೀರಿಗೆ ಅಥವಾ ಕ್ಲೊರಾಂ ಟ್ರಿನೀಲಿ ಪೋಲ್‌ 18.5 ಎಸ್‌ಸಿ 0.4 ಮಿ.ಲೀ. ಅಥವಾ 0.4 ಗ್ರಾಂ. ಎಮಾಮೆಕ್ಟಿನ್‌ ಬೆಂಜೋಯೇಟ್‌ 5 ಎಸ್‌.ಜಿ. ಯನ್ನು ಒಂದು ಲೀಟರ್‌ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಎಂದು  ತಿಳಿಸಿದರು.

ಟಾಪ್ ನ್ಯೂಸ್

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

10

Electricity problem: ಬೇಸಿಗೆ ಬೆನ್ನಲ್ಲೇ ಕಾಡುತ್ತಿದೆ ವಿದ್ಯುತ್‌ ಸಮಸ್ಯೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.