Udayavni Special

ಗ್ರಂಥಾಲಯ ಸೇವೆ ಆರಂಭ


Team Udayavani, Sep 13, 2020, 1:05 PM IST

ಗ್ರಂಥಾಲಯ ಸೇವೆ ಆರಂಭ

ದೇವನಹಳ್ಳಿ: ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಸರ್ಕಾರದ ಆದೇಶದಂತೆ ಬಾಗಿಲು ಹಾಕಿದ್ದ ಗ್ರಂಥಾಲಯಗಳು ಶನಿವಾರ ಕಾರ್ಯನಿರ್ವಹಿಸಿದವು. ನಗರದ ಕೋಟೆ ರಸ್ತೆಯ ಸಾರ್ವಜನಿಕ ಗ್ರಂಥಾಲಯದಲ್ಲಿ ದಿನಪತ್ರಿಕೆ, ಪುಸ್ತಕ ಓದಿದರು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಓದುಗರಿಗೆ ಮಾಸ್ಕ್, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದೆ.

ಗ್ರಂಥಾಲಯಕ್ಕೆ ಆಗಮಿಸುವ ಓದುಗರಿಗೆ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಲಾಯಿತು. ಗ್ರಂಥಾಲಯದ ಸಹಾಯಕ ಮಂಜುನಾಥ್‌ ಮಾತನಾಡಿ, ಲಾಕ್‌ಡೌನ್‌ ಸಮಯದಲ್ಲಿ ಸಾರ್ವಜನಿಕ ಗ್ರಂಥಾಲಯ ಮುಚ್ಚಲಾಗಿತ್ತು. ಗ್ರಂಥಾಲಯದ ಉಪನಿರ್ದೇಶಕಿ ಸರೋಜಮ್ಮ ಮಾರ್ಗದರ್ಶನದಲ್ಲಿ ಮುಚ್ಚಿದ್ದ ಗ್ರಂಥಾಲಯದ ಬಾಗಿಲು ತೆರೆಯಲಾಗಿದೆ ಎಂದು ಹೇಳಿದರು.

ಡಿಜಿಟಲ್‌ ಗ್ರಂಥಾಲಯಕ್ಕೆ 2 ಕಂಪ್ಯೂಟರ್‌ ಗಳನ್ನು ನೀಡಲಾಗಿತ್ತು. ಗ್ರಂಥಾಲಯವನ್ನೇ ಓದುಗರ ಮನೆ ಬಾಗಿಲಿಗೆ ತರಲು, ಡಿಜಿಟಲ್‌ ಲೈಬ್ರರಿ ಮತ್ತು ಆ್ಯಪ್‌ ವಿನ್ಯಾಸ ಮಾಡಿ, ಮೊಬೈಲ್‌ನಲ್ಲಿಯೇ ಎಲ್ಲಿ ಬೇಕಾದರೂ ಓದುವ ವಿನೂತನ ಕಾರ್ಯ ಆರಂಭಿಸಲಾಗಿತ್ತು ಎಂದು ತಿಳಿಸಿದರು.

ಸಾರ್ವಜನಿಕ ಗ್ರಂಥಾಲಯಗಳಲ್ಲಿ ಲಭ್ಯ ವಿರುವ 4 ಲಕ್ಷಕ್ಕೂ ಹೆಚ್ಚು ಪುಸ್ತಕ, ನೂರಾರು ನಿಯತಕಾಲಿಕೆಗಳನ್ನು ಎಲ್ಲೆಂದರಲ್ಲೇ ಓದುವ ಅವಕಾಶ ಸಾರ್ವಜನಿಕ ಗ್ರಂಥಾಲಯ ಕಲ್ಪಿಸಿದೆ. ಇನ್ನು ಡಿಜಿಟಲ್‌ ಗ್ರಂಥಾಲಯಕ್ಕೆ ನೋಂದಣಿ ಮಾಡಿಕೊಳ್ಳುವಂತೆ ಕಾಲೇಜು ಗಳಲ್ಲಿ ಅಭಿಯಾನ ಹಮ್ಮಿಕೊಂಡಿರುವುದರ ಫಲವಾಗಿ ಇದುವರೆಗೆ 5978 ಮಂದಿ ನೋಂದಣಿ ಮಾಡಿಕೊಂಡಿದ್ದಾರೆಂದರು.

………………………………………………………………………………………………………………………………………………………

ಹಾಲು ನೀಡದ ಡೇರಿ: ಪರಿಶೀಲನೆ : ದೇವನಹಳ್ಳಿ: ತಾಲೂಕಿನ ಸಾವಕನಹಳ್ಳಿ ಡೇರಿಯಿಂದ ಹಾಲು ನೀಡುತ್ತಿಲ್ಲ. ಡೇರಿ ಜಾಗದಲ್ಲಿ ಓಡಾಡಲು ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿ ಗ್ರಾಮದ 5 ಕುಟುಂಬ ಬೆಂಗಳೂರು ಕೇಂದ್ರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಆರಕ್ಷಕ ಉಪನಿರೀಕ್ಷಕ ಶ್ರೀನಿವಾಸ್‌ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಯಿತು.

ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಠಾಣಾ ವ್ಯಾಪ್ತಿಯ ಸಾವಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಪಿಎಸ್‌ಐ ಶ್ರೀನಿವಾಸ್‌ ಮಾತನಾಡಿ, ಈ ಗ್ರಾಮದ ಮುನಿಆಂಜಿನಪ್ಪ ಎಂಬವರು ನೀಡಿದ ದೂರಿನ ಅನ್ವಯಗ್ರಾಮದಲ್ಲಿ ನೈಜ ಘಟನೆ ವರದಿ ಮಾಡಲಾಗಿದ್ದು ಮೇಲಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ಆರೋಪ ಸಾಬೀತಾಗಿ ಪ್ರಕರಣ ದಾಖಲಾದರೆ, 3-6ತಿಂಗಳವರೆಗೆ ಜಾಮೀನು ಸಿಗದ ಕಠಿಣ ಶಿಕ್ಷೆ ಇದೆ. 7ವರ್ಷಕ್ಕಿಂತ ಹೆಚ್ಚು ಕಾಲ ಕಠಿಣ ಶಿಕ್ಷೆ ಇದೆ ಎಂದು ಹೇಳಿದರು.

ಗ್ರಾಮಸ್ಥೆ ಲಕ್ಷ್ಮಮ್ಮ ಮಾತನಾಡಿ, ನಮಗೆ 2 ತಿಂಗಳಿನಿಂದ ಡೇರಿಯಿಂದ ಹಾಲು ನೀಡುತ್ತಿಲ್ಲ. ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದರೆ ದೂರು ಸ್ವೀಕರಿಸುತ್ತಿಲ್ಲ. ಮಗುವಿಗೂ ಹಾಲು ನೀಡುತ್ತಿಲ್ಲ. ಬೇರೆಯವರನ್ನು ಕಳುಹಿಸಿದರೂ ಅವರಿಗೆ ಹಾಕಬೇಡಿ ಎಂದು ವಾಪಸ್‌ ಕಳುಹಿಸುತ್ತಾರೆಂದರು.ಎಂಪಿಸಿಎಸ್‌ ಅಧ್ಯಕ್ಷ ಎಸ್‌. ಪಿ.ಮುನಿರಾಜು, ಈ ಹಿಂದೆ ಡೇರಿ ಮೇಲೆ ಮೊದಲ ಅಂತಸ್ತು ಕಟ್ಟಲಾಗುತ್ತಿದೆ. ಅರ್ಜಿದಾರರು ಕರಾರು ತೆಗೆದಿದ್ದರು ಎಂದು ದೂರಿದ್ದಾರೆ. ಡೇರಿ ಸಂಬಂಧ ಯಾವುದೇ ಒಬ್ಬ ಅರ್ಜಿ ಹಾಕಿಕೊಂಡಿದ್ದರೆ, ಹಾಲು ಕೊಡಲು ಬರುವುದಿಲ್ಲ ಎಂಬುದು ಬೈಲಾದಲ್ಲಿದೆ. ಮುಂದಿನ ಹಂತದಲ್ಲಿ ಡೇರಿ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.

ಟಾಪ್ ನ್ಯೂಸ್

fghrt5et5

ವೇಷ ಹಾಕಿ ಸಂಗ್ರಹಿಸಿದ 7 ಲಕ್ಷ ರೂ. ಬಡ ಮಕ್ಕಳ ಚಿಕಿತ್ಸೆಗೆ ದಾನ ಮಾಡಿದ ರವಿ ಕಟಪಾಡಿ 

hgdtyry6t

ಚಾರ್ಮಾಡಿ ಘಾಟ್ ಕಂದಕಕ್ಕೆ ಉರುಳಿದ ಕಾರು

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವ ಕುರಿತು ಚರ್ಚಿಸಲು ಶೀಘ್ರ ಸಭೆ

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವ ಕುರಿತು ಚರ್ಚಿಸಲು ಶೀಘ್ರ ಸಭೆ

gdtrt5y

ಅಧಿವೇಶನದ ಬಳಿಕ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ

ghyut6

ಮೆಕ್ಕಂಜೆ ಸೇತುವೆ ಸಂಪೂರ್ಣ ಶಿಥಿಲ

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

fgsrt5r

ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣಕ್ಕೆ ಕ್ರಮ: ಶಶಿಕಲಾ ಜೊಲ್ಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲಮಂಗಲ: ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಬಂದ ರಾಜ್ಯಪಾಲರು

ನೆಲಮಂಗಲ: ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಬಂದ ರಾಜ್ಯಪಾಲರು

ಗಡಿಗ್ರಾಮಗಳಲ್ಲಿ ನರೇಗಾ ಕಾಮಗಾರಿ ಕಳಪೆ!

ಗಡಿಗ್ರಾಮಗಳಲ್ಲಿ ನರೇಗಾ ಕಾಮಗಾರಿ ಕಳಪೆ!

ಪಾಂಡುರಂಗಪುರ ಗ್ರಾಮದಲ್ಲಿ ಸೌಕರ್ಯ ಮರೀಚಿಕೆ

ಪಾಂಡುರಂಗಪುರ ಗ್ರಾಮದಲ್ಲಿ ಸೌಕರ್ಯ ಮರೀಚಿಕೆ

ನ್ಯಾಯಕ್ಕಾಗಿ ವೃದ್ಧನ ಧರಣಿ

ನ್ಯಾಯಕ್ಕಾಗಿ ವೃದ್ಧನ ಧರಣಿ

ಹೊಸಬಸ್‌ ನಿಲ್ದಾಣದಲ್ಲಿ ಸೌಕರ್ಯದ ಕೊರತೆ

ಹೊಸಬಸ್‌ ನಿಲ್ದಾಣದಲ್ಲಿ ಸೌಕರ್ಯದ ಕೊರತೆ

MUST WATCH

udayavani youtube

LIVE : 16/09/21 ವಿಧಾನಮಂಡಲ ಅಧಿವೇಶನ 2021 |

udayavani youtube

ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು : ಎಸ್.ಟಿ. ಸೋಮಶೇಖರ್

udayavani youtube

ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ

udayavani youtube

ಮೋದಿಗೆ ನಿದ್ದೆ ಇಲ್ಲದ ರಾತ್ರಿ ಕಳೆಯುವಂತೆ ಮಾಡ್ತೇವೆ: ಖಲಿಸ್ತಾನ್|

udayavani youtube

ಮೂಡಿಗೆರೆ: ಬಿಜೆಪಿ ಸಂಸದರಿಗೆ ಹಿಂದೂಪರ ಕಾರ್ಯಕರ್ತರಿಂದ ಮುತ್ತಿಗೆ ಯತ್ನ|

ಹೊಸ ಸೇರ್ಪಡೆ

fghrt5et5

ವೇಷ ಹಾಕಿ ಸಂಗ್ರಹಿಸಿದ 7 ಲಕ್ಷ ರೂ. ಬಡ ಮಕ್ಕಳ ಚಿಕಿತ್ಸೆಗೆ ದಾನ ಮಾಡಿದ ರವಿ ಕಟಪಾಡಿ 

hgdtyry6t

ಚಾರ್ಮಾಡಿ ಘಾಟ್ ಕಂದಕಕ್ಕೆ ಉರುಳಿದ ಕಾರು

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವ ಕುರಿತು ಚರ್ಚಿಸಲು ಶೀಘ್ರ ಸಭೆ

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವ ಕುರಿತು ಚರ್ಚಿಸಲು ಶೀಘ್ರ ಸಭೆ

gdtrt5y

ಅಧಿವೇಶನದ ಬಳಿಕ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ

ghyut6

ಮೆಕ್ಕಂಜೆ ಸೇತುವೆ ಸಂಪೂರ್ಣ ಶಿಥಿಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.