ಗ್ರಾಮಸ್ಥರಿಗೆ ಬಯಲು ಶೌಚವೇ ಗತಿ!

Team Udayavani, Jun 2, 2020, 7:14 AM IST

showchala

ನೆಲಮಂಗಲ: ಬಯಲು ಶೌಚ ಮುಕ್ತ ಉದ್ದೇಶಕ್ಕೆ ನಿರ್ಮಾಣವಾದ ಶೌಚಾಲಯಗಳು ನೀರಿಲ್ಲದೆ ಪಾಳುಬಿದ್ದಿವೆ. ಮೂಲಸೌಕರ್ಯಗಳ ಅಭಿವೃದ್ಧಿಯಾಗಿಲ್ಲ. ಸಾಕಷ್ಟು ಬಾರಿ ಗ್ರಾಪಂ ಅಧಿಕಾರಿ ಗಳಿಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ  ಹಾಗೂ ಅತ್ಯಂತ ಬೇಜವಾಬ್ದಾರಿತನ ದಿಂದ ವರ್ತಿಸಿದ್ದಾರೆ. ಇನ್ನಾದರೂ ಸಂಬಂಧಿಸಿದವರು ಕ್ರಮಕೈ  ಗೊಳ್ಳ ಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಅರೆಬೊಮ್ಮನಹಳ್ಳಿ ಗ್ರಾಪಂನ ತಿಮ್ಮಸಂದ್ರದ ಸಮುದಾಯದ ಜನರ 40ಕ್ಕೂ ಹೆಚ್ಚು ಮನೆಗಳಿಗೆ ಶೌಚಾಲಯ ನಿರ್ಮಾಣಕ್ಕೆ ಬಂಡೆ ಸಮಸ್ಯೆ ಎಂದು ಸರಕಾರ 20ಕ್ಕೂ ಹೆಚ್ಚು ಶೌಚಾಲಯಗಳನ್ನು ಒಂದೆಡೆ ನಿರ್ಮಿಸಿದೆ. ಆದರೆ   ವರ್ಷಗಳಾದರೂ ನೀರಿನ ಸರಬರಾಜು ವ್ಯವಸ್ಥೆ ಮಾಡಿಲ್ಲೆ ಎಂಬುದು ಗ್ರಾಮಸ್ಥರು ದೂರಿದ್ದಾರೆ.

ಪಾಳು ಬಿದ್ದಿರುವ ಶೌಚಾಲಯಗಳು: ಬಯಲು ಶೌಚ ಮುಕ್ತ ಗ್ರಾಮದ ಪಟ್ಟಿಗೆ ಸೇರ ಬೇಕಾದ ಗ್ರಾಮದಲ್ಲಿ ಸರಕಾರ ನಿರ್ಮಿಸಿರುವ ಶೌಚಾಲಯಗಳ ಹಸ್ತಾಂತರ ಹಾಗೂ ನೀರು ಸರಬರಾಜು ಮಾಡಿಲ್ಲ. ಹೀಗಾಗಿ ಪಾಳು ಬಿದ್ದಿರುವ  ಶೌಚಾಲಯಗಳ ಬಾಗಿಲು ಮುರಿದಿವೆ. ಸುತ್ತಲೂ ಬೇಲಿ ಬೆಳೆದಿದೆ. ಆದರೆ ಸರಕಾರದ ದಾಖಲೆಯಲ್ಲಿ ಬಯಲು ಶೌಚ ಮುಕ್ತ ಗ್ರಾಪಂ ಎಂದು ಘೋಷಣೆ ಮಾಡಿದ್ದಾರೆ. ಗ್ರಾಮದ ಜನರ ಬಯಲು ಶೌಚ ಮಾತ್ರ ನಿಂತಿಲ್ಲ ಎಂದು ಗ್ರಾಮದ ಯುವಕರು ಆರೋಪಿಸಿದ್ದಾರೆ.

ಮೂಲಸೌಕರ್ಯ ವಂಚಿತ ಜನರು: ತಿಮ್ಮಸಂದ್ರ ಗ್ರಾಮದಲ್ಲಿ 40ಕ್ಕೂ ಹೆಚ್ಚು ಮನೆಗಳಿಗೆ ಉತ್ತಮ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ, ಬೀದಿ ದೀಪಗಳು ಸೇರಿ ದಂತೆ ಮೂಲ ಸೌಕರ್ಯ ನೀಡಲು ಗ್ರಾಪಂ ಅಧಿಕಾರಿಗಳು ಮುಂದಾಗಿಲ್ಲ.  ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

ಕೊಳಕು ನೀರು ಸರಬರಾಜು: ಗ್ರಾಮದ ಕೊಳವೆ ಬಾವಿಯಿಂದ ವಾಟರ್‌ ಟ್ಯಾಂಕ್‌ಗೆ ನೀರು ಸರಬರಾಜು ಮಾಡಲು ಹಾಕಿರುವ ಪೈಪುಗಳು ಹೊಡೆದುಹೋಗಿ ಕೊಳಕು ನೀರು ಟ್ಯಾಂಕ್‌ಗೆ ಸೇರುತ್ತಿದೆ. ಆದರೆ ಸರಿಪಡಿಸುವ ಕೆಲಸವಾಗಿಲ್ಲ.  ಕೇಳಿದರೆ ಮಾಡೋಣ ಬಿಡಿ ಎಂದು ಸುಮ್ಮನಾಗುತ್ತಾರೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಪಿಡಿಒ ಕೆಲಸ ಏನು?: ಪಂಚಾಯಿತಿ ಅಭಿವೃದ್ಧಿ ಮಾಡಬೇಕಾದ ಅಧಿಕಾರಿ, ಗ್ರಾಮಗಳಿಗೆ ಬಂದು ಜನರ ಸಮಸ್ಯೆ ಕೇಳಿ ಪರಿಹರಿಸುವ ಬದಲು ಪ್ರಭಾವಿಗಳ ಮಾತಿಗೆ ತಲೆಬಾಗುತ್ತಿದ್ದಾರೆ. ಹತ್ತಾರು ಬಾರಿ ಸಮಸ್ಯೆ ಬಗೆಹರಿಸುವಂತೆ ಮನವಿ  ಪತ್ರ ಸಲ್ಲಿಸಿದರೂ ಸಮಸ್ಯೆ ಹೆಚ್ಚಾಗಿದೆ ವಿನಾ ಬಗೆಹರಿಸಲು ಮಾತ್ರ ಬಂದಿಲ್ಲ. ಪಿಡಿಒ ಕೆಲಸ ಮರೆತು ಅಧಿಕಾರದ ಅಮಲಿನಲ್ಲಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ತಿಮ್ಮಸಂದ್ರ ಗ್ರಾಮದ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಶೌಚಾಲಯ ಬಳಕೆ ಹಾಗೂ ನೀರಿನ ಸರಬರಾಜಿಗೆ ತಿಳಿಸಲಾಗಿದೆ. 
-ನಾಗರಾಜು, ಜಿಪಂ ಇಒ

* ಕೊಟ್ರೇಶ್‌ ಆರ್.

ಟಾಪ್ ನ್ಯೂಸ್

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

ಕೇಂದ್ರ ಸಚಿವ ಎಚ್‌ಡಿಕೆ ಬಳಿ ಅಭಿವೃದ್ಧಿ ಯೋಜನೆಗಳ ಪಟ್ಟಿ ಇಟ್ಟ ಸ್ಪೀಕರ್‌ ಖಾದರ್‌

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

Basavaraj Bommai ಅಂತಾರಾಜ್ಯ ಜಲ ವಿವಾದ ಪರಿಹಾರಕ್ಕೆ ಯತ್ನ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಆಯಾ ರಾಜ್ಯಗಳೇ “ನೀಟ್‌’ ಪರೀಕ್ಷೆ ನಡೆಸಲು ಕೇಂದ್ರಕ್ಕೆ ಮನವಿ: ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

Wheeling: ಬೆಂಗಳೂರು ಹುಡುಗರಿಗೆ ವ್ಹೀಲಿಂಗ್‌ ಅಡ್ಡೆಯಾದ ಹೆದ್ದಾರಿ!

12

Jackfruit: ಹಲಸಿನ ಹಣ್ಣಿನ ಬೆಲೆ ದುಬಾರಿ, ರೈತರ ಸಂತಸ

Flyover ಮಧ್ಯೆ ಸಿಲುಕಿ ನೇತಾಡಿದ ಕೆಎಸ್ಸಾರ್ಟಿಸಿ ಬಸ್‌

Flyover ಮಧ್ಯೆ ಸಿಲುಕಿ ನೇತಾಡಿದ ಕೆಎಸ್ಸಾರ್ಟಿಸಿ ಬಸ್‌

5-

Doddaballapura: ಹೇಮಂತ್ ಗೌಡ ಹತ್ಯೆ ಪ್ರಕರಣ: ಗುಂಡು ಹಾರಿಸಿ ಆರೋಪಿಯ ಬಂಧನ

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ಶ್ರುತಿ ಬಿ.ಆರ್‌., ಕೃಷ್ಣಮೂರ್ತಿ ಬಿಳಿಗೆರೆಗೆ ಕೇಂದ್ರ ಸಾಹಿತ್ಯ ಯುವ, ಬಾಲ ಪುರಸ್ಕಾರ

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

ನಾಯಕರ ಬೆನ್ನು ಬಿಡಿ, ಕ್ಷೇತ್ರ ಸುತ್ತಾಡಿ: ಪದಾಧಿಕಾರಿಗಳಿಗೆ ಡಿಕೆಶಿ ತಾಕೀತು

1-ssdad

ಅನುಚಿತ ವರ್ತನೆ‌ ; ಜೆಸ್ಕಾಂ ಗುತ್ತಿಗೆದಾರನಿಗೆ‌ ಚಪ್ಪಲಿಯಿಂದ ಹೊಡೆದ ಮಹಿಳೆ

hdಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಚನ್ನಪಟ್ಟಣದ ಮೇಲೆ ಅಣ್ಣ ತಮ್ಮಂದಿರ ವಕ್ರದೃಷ್ಟಿ: ಎಚ್‌ಡಿಕೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

ಬೊಮ್ಮಾಯಿ, ಕುಮಾರಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.