ಸೋಲು-ಗೆಲುವು ಸಮನಾಗಿ ಸ್ವೀಕರಿಸಿ

Team Udayavani, May 13, 2019, 2:16 PM IST

bel-2

ಚಿಕ್ಕೋಡಿ: ಸೋಲು-ಗೆಲುವು ಒಂದೆ ನಾಣ್ಯದ ಎರಡು ಮುಖಗಳಿದ್ದಂತೆ, ಎರಡನ್ನೂ ಸಮಾನಾಗಿ ಸ್ವೀಕರಿಸಬೇಕು ಎಂದು ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಪಿ.ವಿ. ಕಡಗಡಕಾಯಿ ಹೇಳಿದರು.

ನಿಪ್ಪಾಣಿ ವಿ.ಎಸ್‌.ಎಂ. ಸೋಮಶೇಖರ ಆರ್‌. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜರುಗಿದ ರೆಸ್ಟ್‌ ಆಫ್‌ ಬೆಂಗಳೂರು ವಿ.ಟಿ.ಯು. ಮಹಿಳೆಯರ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿ, ಮಹಿಳಾ ಸಬಲೀಕರಣದಲ್ಲಿ ಮಹಿಳಾ ಕಬಡ್ಡಿ ಆಟವೂ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ಪ್ರಾಚಾರ್ಯ ಡಾ| ಪ್ರಕಾಶ ಹುಬ್ಬಳ್ಳಿ ಮಾತನಾಡಿ, ಆರೋಗ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸುವುದು ಸೂಕ್ತ. ವಿದ್ಯಾರ್ಥಿಗಳು ಪಠ್ಯದೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸಿದಲ್ಲಿ ಮಾನಸಿಕ ಹಾಗೂ ದೈಹಿಕ ಸದೃಢತೆ ಹೊಂದುತ್ತಾರೆ ಎಂದರು.

ಸಂಸ್ಥೆಯ ಉಪಕಾರ್ಯಾಧ್ಯಕ್ಷ ಪಪ್ಪುಅಣ್ಣಾ ಪಾಟೀಲ ಮಾತನಾಡಿ, ಹಳ್ಳಿಯ ಸೊಗಡನ್ನು ಸೂಚಿಸುವ ಕಬಡ್ಡಿ ಆಟ ಮಾನಸಿಕ ಮತ್ತು ದೈಹಿಕವಾಗಿ ಸದೃಢವಾಗಿರಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳು ಪಠ್ಯೇತರದೊಂದಿಗೆ ಕ್ರೀಡೆಗಳಲ್ಲೂ ಹಿತಾಸಕಿ ತೋರಿಸಬೇಕು ಎಂದರು.

ಸಂಚಾಲಕ ಸಂಜಯ ಮೊಳವಾಡೆ, ಎಸ್‌.ಜಿ. ಕಲ್ಯಾಣಶೆಟ್ಟಿ, ವಿನಾಯಕ ಢೋಲೆ, ದೈಹಿಕ ಶಿಕ್ಷಣ ನಿರ್ದೇಶಕ ಶಶಿರಾಜ ತೇಲಿ ವೇದಿಕೆಯಲ್ಲಿದ್ದರು. ದೈಹಿಕ ನಿರ್ದೇಶಕಿ ಸಂಗೀತಾ ಕರಾಳೆ, ಪ್ರೊ| ಸಂಪತ್‌ ಬಿಜಲೆ, ಪ್ರೊ| ಸಂದೇಶ ಮನೋಚಾರ್ಯ, ಪ್ರೊ| ಅನುಪ ಪಾಟೀಲ, ಪ್ರೊ| ಮಲ್ಲಿಕಾರ್ಜುನ ಸರ್ಸಾಂಬಾ, ಪ್ರೊ| ಸಚಿನ ಮೆಹತಾ ಇತರರು ಇದ್ದರು. ಚಿನ್ನಮ್ಮ ಹಪ್ಪಳ್ಳಿ ಸ್ವಾಗತಿಸಿದರು. ಕಾವೇರಿ ಜಾಲಿಸತ್ತಿಗೆ ಮತ್ತು ಸ್ನೇಹಲ್ ಭೋಲೆ ನಿರೂಪಿಸಿದರು.

ಆಳ್ವಾಸ್‌ ಐ.ಟಿ. ತಂಡಕ್ಕೆ ಜಯ

ಸ್ಪರ್ಧೆಯಲ್ಲಿ ಸ್ಥಳೀಯ ವಿ.ಎಸ್‌.ಎಂ.ಎಸ್‌.ಆರ್‌.ಕೆ.ಐ.ಟಿ., ಮೈಸೂರಿನ ಜಿ.ಎಸ್‌.ಎಸ್‌.ಎಸ್‌.ಐ.ಇ.ಟಿ.ಡಬ್ಲ್ತ್ರ್ಯೂ., ಸುಳ್ಳೆಯ ಕೆ.ವಿ.ಜಿ.ಸಿ.ಇ., ಉಜಿರೆಯ ಎಸ್‌.ಡಿ.ಎಂ.ಸಿ., ಮೂಡಬಿದಿರೆಯ ವೈ.ಐ.ಟಿ. ಮತ್ತು ಆಳ್ವಾಸ್‌ ಐ.ಟಿ. ಕಾಲೇಜುಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಆಳ್ವಾಸ್‌ ಐ.ಟಿ. ತಂಡವು ವೈ.ಐ.ಟಿ. ತಂಡಕ್ಕೆ 38-25 ಅಂಕಗಳಿಂದ ಸೋಲಿಸಿ ರೆಸ್ಟ್‌ ಆಫ್‌ ಬೆಂಗಳೂರು ವಿ.ಟಿ.ಯು. ಮಹಿಳೆಯರ ಕಬಡ್ಡಿ ಟೂರ್ನಿ ಪ್ರಶಸ್ತಿಯನ್ನು ಬಾಚಿಕೊಂಡಿತು. ಬಿ.ಸಿ. ಹರ್ಲಾಪುರ, ಬಿ.ಜಿ. ಬಾಣೆ, ಎಸ್‌.ಎಲ್. ಪ್ರಭಾತ, ಶರಣು ಹತ್ತಿ, ಅಭಿಷೇಕ ಚುನಮುರೆ, ಶಿವಾನಂದ ತೇಲಿ ನಿರ್ಣಾಯಕತಾಗಿ ಕಾರ್ಯನಿರ್ವಹಿಸಿದರು.

ಟಾಪ್ ನ್ಯೂಸ್

Crickter-johonsan

Bengaluru: ಕಟ್ಟಡದಿಂದ ಜಿಗಿದು ಮಾಜಿ ಕ್ರಿಕೆಟಿಗ ಡೇವಿಡ್‌ ಜಾನ್ಸನ್‌ ಆತ್ಮಹತ್ಯೆ

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

1-gg

CM ವಿರುದ್ಧ ಜನಾರ್ದನ ರೆಡ್ಡಿ ಆಕ್ಷೇಪಾರ್ಹ ಟೀಕೆ: ಕಾಂಗ್ರೆಸ್‌ ಬಣಗಳ ಪ್ರತಿಭಟನೆ

1

Renuka Swamy Case: ದರ್ಶನ್‌ ಮತ್ತೆ ಕಸ್ಟಡಿಗೆ, ಪವಿತ್ರಾ ಸೇರಿ 10 ಮಂದಿ ನ್ಯಾಯಾಂಗ ಬಂಧನ

1-vj

MLC Ticket; ಕಾಂಗ್ರೆಸ್ ವರಿಷ್ಠರು ಭರವಸೆ ಈಡೇರಿಸುವ ವಿಶ್ವಾಸವಿದೆ:ಗಣಿಹಾರ

1-v-dsadsa-d

Hooch tragedy ಆಡಳಿತ, ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯಕ್ಕೆ ಸ್ಪಷ್ಟ ಸಾಕ್ಷಿ: ಅಣ್ಣಾಮಲೈ

ಹಾಸನ: ಬೆಳಿಗ್ಗೆ ಒಟ್ಟಿಗೆ ಉಪಹಾರ ಸೇವಿಸಿದ್ದ ಸ್ನೇಹಿತರು, ಮಧ್ಯಾಹ್ನ ಗುಂಡು ಹಾರಿಸಿದ್ದೇಕೆ?

ಹಾಸನ: ಬೆಳಿಗ್ಗೆ ಒಟ್ಟಿಗೆ ಉಪಹಾರ ಸೇವಿಸಿದ್ದ ಸ್ನೇಹಿತರು, ಮಧ್ಯಾಹ್ನ ಗುಂಡು ಹಾರಿಸಿದ್ದೇಕೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭರವಸೆ ಈಡೇರಿಸಲು ಪ್ರಾಮಾಣಿಕ ಯತ್ನ: ಜಗದೀಶ ಶೆಟ್ಟರ

ಭರವಸೆ ಈಡೇರಿಸಲು ಪ್ರಾಮಾಣಿಕ ಯತ್ನ: ಜಗದೀಶ ಶೆಟ್ಟರ

Chikkodi: 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

Chikkodi: 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

kaMaharashtra ಕನ್ನಡ ಶಿಕ್ಷಕರ ನೇಮಕವೇ ಆಗಿಲ್ಲ !ಚಕಾರ ಎತ್ತದ ಕರ್ನಾಟಕ ಗಡಿಯ ಶಾಸಕರುMaharashtra ಕನ್ನಡ ಶಿಕ್ಷಕರ ನೇಮಕವೇ ಆಗಿಲ್ಲ !ಚಕಾರ ಎತ್ತದ ಕರ್ನಾಟಕ ಗಡಿಯ ಶಾಸಕರುMaharashtra ಕನ್ನಡ ಶಿಕ್ಷಕರ ನೇಮಕವೇ ಆಗಿಲ್ಲ !ಚಕಾರ ಎತ್ತದ ಕರ್ನಾಟಕ ಗಡಿಯ ಶಾಸಕರು

Maharashtra ಕನ್ನಡ ಶಿಕ್ಷಕರ ನೇಮಕವೇ ಆಗಿಲ್ಲ !ಚಕಾರ ಎತ್ತದ ಕರ್ನಾಟಕ ಗಡಿಯ ಶಾಸಕರು

ಮೇವು ಹಗರಣ ನಡೆದಿದ್ದರೆ ಸಮಗ್ರ ತನಿಖೆ: ಸಚಿವ ಸತೀಶ ಜಾರಕಿಹೊಳಿ

ಮೇವು ಹಗರಣ ನಡೆದಿದ್ದರೆ ಸಮಗ್ರ ತನಿಖೆ: ಸಚಿವ ಸತೀಶ ಜಾರಕಿಹೊಳಿ

MLA Abhay Patil; ‘ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ಮೇವು ಹಗರಣ’

MLA Abhay Patil; ‘ಬಿಹಾರ ಮಾದರಿಯಲ್ಲಿ ರಾಜ್ಯದಲ್ಲೂ ಮೇವು ಹಗರಣ’

MUST WATCH

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

udayavani youtube

ಕಲಬುರಗಿ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗಳಿಗೆ ಆರ್.ಅಶೋಕ ಭೇಟಿ

udayavani youtube

ರಿವರ್ಸ್‌ ಅವಾಂತರ-ಗೆಳೆಯನ ಕಣ್ಣೆದುರೇ ಕಾರು ಕಂದಕಕ್ಕೆ ಬಿದ್ದು ಗೆಳತಿ ಸಾವು

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

ಹೊಸ ಸೇರ್ಪಡೆ

Crickter-johonsan

Bengaluru: ಕಟ್ಟಡದಿಂದ ಜಿಗಿದು ಮಾಜಿ ಕ್ರಿಕೆಟಿಗ ಡೇವಿಡ್‌ ಜಾನ್ಸನ್‌ ಆತ್ಮಹತ್ಯೆ

Mang-Airport

Mangaluru ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

Hajj:ಮೆಕ್ಕಾದಲ್ಲಿ ಬಿಸಿಲ ತಾಪಕ್ಕೆ ಸಾವನ್ನಪ್ಪಿದ ಹಜ್‌ ಯಾತ್ರಿಗಳ ಸಂಖ್ಯೆ 1,000ಕ್ಕೆ ಏರಿಕೆ

1-gg

CM ವಿರುದ್ಧ ಜನಾರ್ದನ ರೆಡ್ಡಿ ಆಕ್ಷೇಪಾರ್ಹ ಟೀಕೆ: ಕಾಂಗ್ರೆಸ್‌ ಬಣಗಳ ಪ್ರತಿಭಟನೆ

1-ml

Ullal; ಯುವಮೋರ್ಚ ಮಂಡಲ ಅಧ್ಯಕ್ಷನ ಎಳೆದಾಡಿದ ಠಾಣಾಧಿಕಾರಿ: ಕಾರ್ಯಕರ್ತರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.