ತಂತ್ರಜ್ಞಾನದ‌ಲ್ಲಿ ತಾಂತ್ರಿಕ ಪದವೀಧರರಿಗೆ ವಿಪುಲ ಅವಕಾಶ


Team Udayavani, May 13, 2019, 2:09 PM IST

bel-1

ಬೆಳಗಾವಿ: ಸತ್ಯ, ಸೇವೆ, ಪಾರದರ್ಶಕತೆ ಹಾಗೂ ದೂರದರ್ಶಿತ್ವ ದ್ಯೇಯಗಳೊಂದಿಗೆ ಮನ್ನಡೆದಲ್ಲಿ ಇಂದಿನ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನದ ಜಗತ್ತಿನಲ್ಲಿ ತಾಂತ್ರಿಕ ಪದವೀಧರರಿಗೆ ಉದ್ಯೋಗ ಪಡೆಯಲು ಹೆಚ್ಚಿನ ಅವಕಾಶಗಳಿವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ| ಕರಿಸಿದ್ದಪ್ಪ ಹೇಳಿದರು.

ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ 7ನೇ ವಾರ್ಷಿಕೋತ್ಸವ ಹಾಗೂ ವ್ಯಾಸಂಗ ಪದವಿ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಪದವಿ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಗಳು ತಾಂತ್ರಿಕ ಕೌಶಲ, ಸಾಮರ್ಥ್ಯ ಹೆಚ್ಚಿಸಿಕೊಂಡು ದೌರ್ಬಲ್ಯ, ಕೀಳರಿಮೆ ತೊರೆದು ಸ್ವ-ಸಾಮರ್ಥ್ಯದಿಂದ ಮುಂದೆ ಬರಬೇಕು ಎಂದರು.

ಇಂದಿನ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ತಾಂತ್ರಿಕ ಕೌಶಲ ಹಾಗೂ ಗುಣಮಟ್ಟದ ತಂತ್ರಜ್ಞಾನ ಅಭಿವೃದ್ಧಿಗೊಳಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಭಾರತ ದೇಶವು ಜಗತ್ತನ್ನು ಬದಲಾಯಿಸುವಂತ ಅಗಾಧವಾದ ಸಾಮರ್ಥ್ಯ ಹಾಗೂ ಕುಶಾಗ್ರತೆಯುಳ್ಳ ಎಂಜಿನಿಯರಿಂಗ್‌ ಹಾಗೂ ವ್ಯವಸ್ಥಾಪನಾ ವಿದ್ಯಾರ್ಥಿಗಳನ್ನು ಹೊಂದಿದೆ. ತಾಂತ್ರಿಕ ಪದವೀಧರರು ತಮ್ಮ ಪರಿಶ್ರಮ, ಛಲ, ಆಂತರಿಕ ಸ್ಫೂರ್ತಿಯಿಂದ ತಾಂತ್ರಿಕ ಕ್ಷೇತ್ರದಲ್ಲಿ ಸಿಗುವ ಅಗಾಧ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಕೈ ಜೋಡಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರಮನ್‌ ಸುರೇಶ ಅಂಗಡಿ ಮಾತನಾಡಿ, ಭಾರತವು ಇಂದಿನ ದಿನದಲ್ಲಿ ಬುಲೆಟ್ ಟ್ರೇನ್‌ ಓಡಿಸುವ, ಸ್ವಚ್ಛತಾ ಅಭಿಯಾನ, ಕೃಷಿಕ್ಷೇತ್ರ, ವೈಮಾನಿಕ ಹಾಗೂ ಅಂತರಿಕ್ಷದ ಕ್ಷೇತ್ರಗಳಲ್ಲಿ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿದ್ದು, ತಾಂತ್ರಿಕ ವಿದ್ಯಾರ್ಥಿಗಳು ವಿದ್ಯೆಯ ಜೊತೆ ವಿನಯತೆ, ತಾವು ಕಲಿಸಿದ ಗುರುಗಳ ಬಗ್ಗೆ ವಿಧೇಯತೆ ಹಾಗೂ ತಾಂತ್ರಿಕ ಕೌಶಲ ಕಲೆಗಳನ್ನು ಗಳಿಸಿಕೊಂಡು ಪದವಿ ಗಳಿಸಿ ದೇಶವನ್ನು ಮುನ್ನಡೆಸಬೇಕು ಎಂದರು.

ಡಾ| ರಾಜೇಂದ್ರ ಇನಾಮದಾರ, ಡಾ| ಅಶೋಕ ಹುಲಗಬಾಳಿ, ಪ್ರೊ| ಅನಿಲಕುಮಾರ ಕೋರಿಶೆಟ್ಟಿ, ಪ್ರೊ| ಅಮರ ಬ್ಯಾಕೋಡಿ, ಪ್ರೊ| ಸಾಗರ ಬಿರ್ಜೆ, ಪ್ರೊ| ಕಿರಣ ಪೋತದಾರ, ಪ್ರೊ| ವಸಂತಕುಮಾರ ಉಪಾಧ್ಯೆ ಉಪಸ್ಥಿತರಿದ್ದರು. ಡಾ| ಸಂಜಯ ಪೂಜಾರಿ ಸ್ವಾಗತಿಸಿದರು. ಪ್ರೊ| ವಿಜಯ ಕುಂಬಾರ ಪರಿಚಯಿಸಿದರು. ಪ್ರೊ| ಪ್ರಿಯಾಂಕಾ ಪೂಜಾರಿ ಹಾಗೂ ಪ್ರೊ| ವರ್ಷಾ ದೇಶಪಾಂಡೆ ನಿರೂಪಿಸಿದರು. ಪ್ರೊ| ಸಚಿನ ಕುಲಕರ್ಣಿ ವಂದಿಸಿದರು.

ವ್ಯಾಸಂಗ ಪ್ರಮಾಣ ಪತ್ರ

ವಿವಿಧ ವಿಭಾಗಗಳ 400ಕ್ಕೂ ಹೆಚ್ಚು ಎಂಜಿನಿಯರಿಂಗ್‌, ಎಂ.ಬಿ.ಎ. ಹಾಗೂ ಎಂ.ಟೆಕ್‌ ವಿದ್ಯಾರ್ಥಿಗಳಿಗೆ ವ್ಯಾಸಂಗ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಪದವಿಗಳಿಸಿದ ರಕ್ಷಿತಾ, ಸತೀಶ ಭಗತ್‌, ಅಮೃತೇಶಕುಮಾರ ಸಿಂಗ್‌, ಆಶ್ರಿತಾ, ಅರ್ಪಣಾ, ಪೂಜಾ ತಮ್ಮ ವ್ಯಾಸಂಗ ಹಾಗೂ ಪದವಿಯ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.

ಟಾಪ್ ನ್ಯೂಸ್

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

Nirmala 2 a

Union Budget ಜುಲೈ 22ಕ್ಕೆ ಮಂಡನೆ ಸಾಧ್ಯತೆ: ಸಿದ್ಧತೆ ಆರಂಭ

Supreme Court

NEET ಪರೀಕ್ಷೆ ವಿವಾದ: ಕೇಂದ್ರ ಸರಕಾರ‌, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

1-ct

T20 WC; ಕೆನಡಾ ಎದುರಾಳಿ, ಮಳೆ ಭೀತಿ: ಭಾರತಕ್ಕೆ ಪ್ರಾಯೋಗಿಕ ಪಂದ್ಯ

putin (2)

Ukraine ನ್ಯಾಟೊ ಜತೆ ಸೇರದಿದ್ದರೆ ಕದನ ವಿರಾಮ ಘೋಷಣೆ: ಪುತಿನ್‌

1-sddas-dsad

Andhra Pradesh ಪವನ್‌ ಕಲ್ಯಾಣ್‌ ಡಿಸಿಎಂ: ಅಧಿಕೃತ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಲಿ: ಶ್ರೀ

ಬೆಳಗಾವಿ ಕರ್ನಾಟಕದ ಎರಡನೇ ರಾಜಧಾನಿಯಾಗಲಿ: ಶ್ರೀ

ಶೆಟ್ಟರ್

Belagavi; ದ್ವೇಷದ ರಾಜಕಾರಣಕ್ಕೆ ಬೆಲೆ ತೆರಬೇಕಾಗುತ್ತದೆ..: ಜಗದೀಶ್ ಶೆಟ್ಟರ್

Jagadish Shettar: ಅಗತ್ಯವಿದ್ದರೆ ಗೋವಾ ಸಿಎಂ ಜತೆ “ಕಳಸಾ ಬಂಡೂರಿ’ ಚರ್ಚೆ: ಶೆಟ್ಟರ್‌

Jagadish Shettar: ಅಗತ್ಯವಿದ್ದರೆ ಗೋವಾ ಸಿಎಂ ಜತೆ “ಕಳಸಾ ಬಂಡೂರಿ’ ಚರ್ಚೆ: ಶೆಟ್ಟರ್‌

Hostel

Hirebagewadi ಅನೈತಿಕ ಚಟುವಟಿಕೆಗಳಿಗೆ ತಾಣವಾದ ಪಾಳು ಬಿದ್ದ ವಿದ್ಯಾರ್ಥಿ ವಸತಿ ನಿಲಯ!

1-wewwqe

Belagavi; ಜಿಲ್ಲಾ ನ್ಯಾಯಾಲಯದಲ್ಲೇ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ

MUST WATCH

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

ಹೊಸ ಸೇರ್ಪಡೆ

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

ಸೂಕ್ಷ್ಮ ಪ್ರಕರಣ ನಿರ್ವಹಣೆಗೆ ಕಾಂಗ್ರೆಸ್‌ನಿಂದ ಸಲಹಾ ಸಮಿತಿ

Nirmala 2 a

Union Budget ಜುಲೈ 22ಕ್ಕೆ ಮಂಡನೆ ಸಾಧ್ಯತೆ: ಸಿದ್ಧತೆ ಆರಂಭ

Supreme Court

NEET ಪರೀಕ್ಷೆ ವಿವಾದ: ಕೇಂದ್ರ ಸರಕಾರ‌, ಎನ್‌ಟಿಎಗೆ ಸುಪ್ರೀಂ ಕೋರ್ಟ್‌ ನೋಟಿಸ್‌

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

ಆರ್ಥಿಕ ಸಂಕಷ್ಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ

1-ct

T20 WC; ಕೆನಡಾ ಎದುರಾಳಿ, ಮಳೆ ಭೀತಿ: ಭಾರತಕ್ಕೆ ಪ್ರಾಯೋಗಿಕ ಪಂದ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.