Udayavni Special

ಜಿಲ್ಲೆಯಾದ್ಯಂತ ಮುಂದುವರಿದ ವರ್ಷಧಾರೆ

ಮಹಾರಾಷ್ಟ್ರದ ಕರಾವಳಿಯಲ್ಲಿ ಮಳೆ ನಿಲ್ಲದಿದ್ದರೆ ಪ್ರವಾಹ ಪರಿಸ್ಥಿತಿ

Team Udayavani, Jun 4, 2020, 6:54 AM IST

ಜಿಲ್ಲೆಯಾದ್ಯಂತ ಮುಂದುವರಿದ ವರ್ಷಧಾರೆ

ಚಿಕ್ಕೋಡಿ: ಕಲ್ಲೋಳ ಹತ್ತಿರ ಕೃಷ್ಣಾ ನದಿ

ಬೆಳಗಾವಿ: ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿ ಬೀಸುತ್ತಿರುವ ನಿಸರ್ಗ ಚಂಡಮಾರುತದ ಪರಿಣಾಮ ವಾಯುಭಾರ ಕುಸಿತವಾಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎಡೆಬಿಡದೇ ಮಳೆ ಆಗುತ್ತಿದೆ. ಬುಧವಾರವೂ ಧಾರಾಕಾರ ಮಳೆ ಹಾಗೂ ಭಾರೀ ಗಾಳಿ ಮುಂದುವರಿಯಿತು. ಬೆಳಗಾವಿಗೆ ಹೊಂದಿಕೊಂಡಿರುವ ನೆರೆಯ ಮಹಾರಾಷ್ಟ ದ ಸಿಂಧದುರ್ಗಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಹೆ„ ಅಲರ್ಟ್‌ ಘೋಷಿಸಲಾಗಿದ್ದು, ಈ ಭಾಗದಲ್ಲಿ ನಿಸರ್ಗ ಚಂಡಮಾರುತ ಬಾರದಿದ್ದರೂ ಭಾರೀ ಗಾಳಿ-ಮಳೆ ಬೀಸುತ್ತಿದೆ. ಇದರ ಪರಿಣಾಮ ಬೆಳಗಾವಿ ಜಿಲ್ಲೆಯಾದ್ಯಂತ ಮಳೆ ಆಗುತ್ತಿದೆ. ರವಿವಾರ ಮಧ್ಯಾಹ್ನದಿಂದಲೂ ಪ್ರಾರಂಭವಾಗಿರುವ ಗಾಳಿ-ಮಳೆ ಇನ್ನೂ ಮುಂದುವರಿದಿದೆ.

ಖಾನಾಪುರ, ಹುಕ್ಕೇರಿ, ಬೆಳಗಾವಿ, ಚಿಕ್ಕೋಡಿ, ಗೋಕಾಕ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆ ಸುರಿಯುತ್ತಿದೆ. ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆ ಆಗುತ್ತಿರುವುದರಿಂದ ಜನರು ಪರದಾಡುವಂತಾಯಿತು. ಇತ್ತ ಜೋರಾಗಿ ಮಳೆ ಆಗುತ್ತಿರುವುದರಿಂದ ರೈತರು ಸಂತಸಗೊಂಡಿದ್ದು, ಮುಂಗಾರು ಪೂರ್ವವೇ ಜಿಟಿಜಿಟಿ ವರ್ಷಧಾರೆಯಿಂದ ಸಂತಸಗೊಂಡಿದ್ದಾರೆ. ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಇಲ್ಲಿ ಎಲ್ಲ ಕಡೆಗಳಲ್ಲೂ ಹೆ„ ಅಲರ್ಟ್‌ ಘೋಷಿಸಿ ಸಂಪೂರ್ಣ ಬಂದ್‌ ಮಾಡಲಾಗಿದೆ. ಎಲ್ಲ ಬಸ್‌, ಖಾಸಗಿ ವಾಹನ ಸಂಚಾರ ನಿಷೇಧಗೊಳಿಸಲಾಗಿದೆ. ಸರ್ಕಾರಿ ರಜೆ ನೀಡಲಾಗಿದ್ದು, ಜನರು ಹೊರಗೆ ಬಾರದಂತೆ ಸೂಚಿಸಲಾಗಿದೆ.

ಕೃಷ್ಣೆಮಟ್ಟ ಮೂರುಅಡಿ ಹೆಚ್ಚಳ
ಚಿಕ್ಕೋಡಿ: ನಿಸರ್ಗ ಚಂಡಮಾರುತ ಪರಿಣಾಮ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದ್ದು, ಕೃಷ್ಣಾ ನದಿ ಮಟ್ಟದಲ್ಲಿ ಮೂರು ಅಡಿಯಷ್ಟು ಹೆಚ್ಚಳವಾಗಿದೆ. ದೂಧಗಂಗಾ ಮತ್ತು ವೇಧಗಂಗಾ ನದಿಗಳ ಮಟ್ಟ ಕೂಡ ಏರುತ್ತಿದೆ. ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ ಹತ್ತಿರ ಬುಧವಾರ ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಮೂರು ಅಡಿಯಷ್ಟು ನೀರು ಹೆಚ್ಚಳವಾಗಿದೆ. ಹೀಗಾಗಿ ಬ್ಯಾರೇಜದ ಎಲ್ಲ ಗೇಟ್‌ಗಳನ್ನು ಮಹಾರಾಷ್ಟ್ರದ ನೀರಾವರಿ ಇಲಾಖೆ ತೆರೆದಿದೆ. ಇದರಿಂದ ಅಪಾರ ಪ್ರಮಾಣದ ನೀರು ರಾಜ್ಯಕ್ಕೆ ಹರಿದು ಬರುವ ಸಾಧ್ಯತೆ ಇದೆ. ಇದೇ ರೀತಿ ಮಳೆ ಮುಂದುವರೆದರೆ ಮಹಾರಾಷ್ಟ್ರದ ಕೋಯ್ನಾ, ಕಾಳಮ್ಮವಾಡಿ, ಧೂಮ್‌ ಮುಂತಾದ ಜಲಾಶಯಗಳಿಂದ ನೀರು ಹೊರಬಿಡುವ
ಸಾಧ್ಯತೆ ದಟ್ಟವಾಗಿದೆ. ವಿಪತ್ತು ನಿರ್ವಹಣಾ ತಂಡ ಯಡೂರು ಗ್ರಾಮ ತಲುಪಿದೆ. ಕಳೆದ ವರ್ಷ ಭಾರಿ ಮಳೆಯಿಂದ ಭೀಕರ ಪ್ರವಾಹ ಎದುರಾಗಿ ನದಿ ತೀರದ ಜನರನ್ನು ಸಂಕಷ್ಟಕ್ಕೆ ಈಡು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಟಾಪ್ ನ್ಯೂಸ್

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್!

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್!

ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

ghfght

ಶಾರುಖ್ ಸಿನಿಮಾ ಟ್ರೈಲರ್ ನೋಡಿ ಮೋಸಹೋದ ಪ್ರೇಕ್ಷಕಳಿಗೆ ಸುಪ್ರೀಂ ಕೋರ್ಟ್ ನಲ್ಲಿ ಜಯ

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

ಹಿಂದೂವಿರೋಧಿ ಬೊಮ್ಮಾಯಿಯವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ: ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ

ಹಿಂದೂವಿರೋಧಿ ಬೊಮ್ಮಾಯಿಯವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ: ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ

ದಟ್ಟ ಮಂಜು ಕವಿದ ವಾತಾವರಣ; ಉಧಾಂಪುರ್ ನಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಪೈಲಟ್ ಪಾರು

ದಟ್ಟ ಮಂಜು ಕವಿದ ವಾತಾವರಣ; ಉಧಾಂಪುರ್ ನಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಪೈಲಟ್ ಪಾರು

dfdsf

ಹುಬ್ಬಳ್ಳಿ: ಚಿರತೆ ಕಣ್ಣಾಮುಚ್ಚಾಲೆಗೆ ಹೆಚ್ಚಾಯ್ತು ಚಿಂತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vcydtyry

ಈರುಳ್ಳಿ ದರ ಕುಸಿತಕ್ಕೆ ರೈತ ಕಂಗಾಲು

hugara

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಲಾಖೆ ಬೆಳಗಾವಿ ವಲಯದ ಜಂಟಿ ನಿರ್ದೇಶಕರಿಂದ ಅಧಿಕಾರ ಸ್ವೀಕಾರ

Untitled-1

ಕುಂದಾನಗರಿಯಲ್ಲಿ ಗಣೇಶ ವಿಸರ್ಜನೆ ವೇಳೆ ಲಾಠಿ ಚಾರ್ಜ್

frty5y56

ಕೋವಿಡ್ ಹೊಡೆತ | ಸದ್ದು ಮಾಡದ ಕೊಂಬು ಕಹಳೆ ವಾದ್ಯ

rajapura news

ರಾಜಾಪೂರ: ಮಾನಸಿಕ ಖಿನ್ನತೆಗೆ ಒಳಗಾಗಿ ವ್ಯಕ್ತಿಯೋರ್ವ ನೇಣಿಗೆ ಶರಣು..!

MUST WATCH

udayavani youtube

‘ತಾಸೆದ ಪೆಟ್ಟ್ ಗ್’ ತುಳು ಹಾಡು ಹಾಡಿದ ಮಂಗಳೂರು ಪೊಲೀಸ್ ಆಯುಕ್ತ

udayavani youtube

ರಷ್ಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

ಹೊಸ ಸೇರ್ಪಡೆ

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್!

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್!

ಮಕ್ಕಳ ಪ್ರತಿಭೆಗೆ ವೇದಿಕೆ ನಮ್ಮ ಕರ್ತವ್ಯ: ಚಂದ್ರಹಾಸ್‌ ಕೆ. ಶೆಟ್ಟಿ

ಮಕ್ಕಳ ಪ್ರತಿಭೆಗೆ ವೇದಿಕೆ ನಮ್ಮ ಕರ್ತವ್ಯ: ಚಂದ್ರಹಾಸ್‌ ಕೆ. ಶೆಟ್ಟಿ

ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

ಮುಂಬಯಿ ಕನ್ನಡಿಗರು ಸಾಮರಸ್ಯಕ್ಕೆ ಹೆಸರಾದವರು: ಸಂಸದ ರಾಹುಲ್‌ ಶೆವ್ಹಾಲೆ

ಮುಂಬಯಿ ಕನ್ನಡಿಗರು ಸಾಮರಸ್ಯಕ್ಕೆ ಹೆಸರಾದವರು: ಸಂಸದ ರಾಹುಲ್‌ ಶೆವ್ಹಾಲೆ

ghfght

ಶಾರುಖ್ ಸಿನಿಮಾ ಟ್ರೈಲರ್ ನೋಡಿ ಮೋಸಹೋದ ಪ್ರೇಕ್ಷಕಳಿಗೆ ಸುಪ್ರೀಂ ಕೋರ್ಟ್ ನಲ್ಲಿ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.