heavy rain

 • ಕಾದ ಕರಾವಳಿಗೆ ತಂಪೆರೆದ ಮಳೆರಾಯ: ಅಕಾಲಿಕ ಮಳೆಗೆ ಜನರ ಪರದಾಟ

  ಮಣಿಪಾಲ: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ತಡರಾತ್ರಿ ಆರಂಭವಾದ ಮಳೆ ಸೋಮವಾರ ಬೆಳಿಗ್ಗೆಯೂ ಮುಂದುವರಿದಿದ್ದು, ಅಚ್ಚರಿಯ ಅಕಾಲಿಕ ಮಳೆಯಿಂದಾಗಿ ಸಂತಸಗೊಂಡರೂ ಜನರು ಪರದಾಡುವಂತಾಗಿದೆ. ಉಡುಪಿ, ಕಾರ್ಕಳ, ಕುಂದಾಪುರ, ಮಂಗಳೂರು, ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ಉತ್ತಮ ಮಳೆಯಾಗಿದೆ….

 • ದುಬಾೖಯಲ್ಲಿ ಮಳೆ: ಜನಜೀವನ ಅಸ್ತವ್ಯಸ್ತ

  ದುಬಾೖ: ಈ ವಾರಾಂತ್ಯಕ್ಕೆ ಸುರಿಯಲಾರಂಭಿಸಿರುವ ಭಾರೀ ಮಳೆಯಿಂದಾಗಿ ದುಬಾೖಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಶನಿವಾರ ಬೆಳಗ್ಗೆಯಿಂದಲೇ ಸುರಿದ ಮಳೆಯಿಂದ ನಗರದ ರಸ್ತೆಗಳು, ತಗ್ಗುಪ್ರದೇಶಗಳು ಜಲಾವೃತಗೊಂಡವು. ಶನಿವಾರದಂದು ಸುಮಾರು 151 ಮಿ.ಮೀ. ಮಳೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ,…

 • ಕಡಲೆಗೆ ಸಂಕಷ್ಟ ತಂದಿಟ್ಟ ಮಳೆ

  „ತಿಪ್ಪೇಸ್ವಾಮಿ ನಾಕೀಕೆರೆ ಚಿತ್ರದುರ್ಗ: ಬರದ ಬವಣೆಯಲ್ಲಿದ್ದ ಜಿಲ್ಲೆಯ ಜನರ ಬದುಕಿಗೆ ತಂಪೆರೆಯಲು ಸುರಿದ ಮಳೆರಾಯ ಕಡಲೆ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾನೆ. ಇದ್ದಕ್ಕಿದ್ದಂತೆ ಅತಿಯಾಗಿ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆ ಹಾಳಾಗಿತ್ತು. ಈಗ ಹಿಂಗಾರು ಬೆಳೆ ಕಡಲೆಗೂ ಮಳೆರಾಯನ ಹೊಡೆತ…

 • ಭರಪೂರ ಮಳೆಗೆ ಕೆರೆಗಳೆಲ್ಲ ಭರ್ತಿ

  „ಎಸ್‌. ವೇದಮೂರ್ತಿ ಹೊಳಲ್ಕೆರೆ: ‘ಕೆರೆ ನಾಡು’ ಎಂದು ಖ್ಯಾತಿ ಪಡೆದಿರುವ ಹೊಳಲ್ಕೆರೆ ಪಟ್ಟಣದ ಸುತ್ತಮುತ್ತಲಿನ ಕೆರೆಗಳು ಧುಮ್ಮಿಕ್ಕಿ ಹರಿಯುತ್ತಿವೆ. ಹಿರೇಕೆರೆ, ಸಣ್ಣಕೆರೆ, ಹೊನ್ನೆಕೆರೆಗೆ ಮಳೆ ಜೀವಕಳೆಯನ್ನುಂಟು ಮಾಡಿದೆ. ದಾವಣಗೆರೆ ರಸ್ತೆಯ ಹಿರೇಕೆರೆ ಸುಮಾರು 380 ಎಕರೆ ಪ್ರದೇಶದಲ್ಲಿ ಜಲರಾಶಿಯನ್ನು…

 • ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ

  ಶಿವಮೊಗ್ಗ: ಗಂಟೆಗೂ ಹೆಚ್ಚು ಕಾಲ ಮದ್ಯರಾತ್ರಿಯಲ್ಲಿ ಸುರಿದ ನಡುರಾತ್ರಿಯಲ್ಲಿ ಸುರಿದ ಭಾರೀ ಮಳೆಗೆ ಮತ್ತೆ ತಗ್ಗಿನ ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಪದೇ ಪದೇ ಸುರಿಯುವ ಮಳೆಗೆ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ್ರಮುಖವಾಗಿ ನಗರದ ಟ್ಯಾಂಕ್‌…

 • ಬಿಸಿಲನಾಡಿನ ಕೆರೆಗಳೆಲ್ಲ ಈ ಬಾರಿ ಭರ್ತಿ!

  „ವೆಂಕೋಬಿ ಸಂಗನಕಲ್ಲು ಬಳ್ಳಾರಿ: ಮುಂಗಾರಿನ ಅವಕೃಪೆಯಿಂದ ಕಂಗೆಟ್ಟಿದ್ದ ರೈತರಿಗೆ ಹಿಂಗಾರಿನಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಗಣಿ ಜಿಲ್ಲೆಯಲ್ಲಿನ ಬಹುತೇಕ ಕೆರೆಗಳು ಭರ್ತಿಯಾಗಿ ರೈತರ ಆತಂಕವನ್ನು ದೂರ ಮಾಡಿದೆ. ಹೌದು…! ಪ್ರಸಕ್ತ ವರ್ಷ ಮಾನ್‌ ಸೂನ್‌ ಪೂರ್ವ (ಮುಂಗಾರು) ಮಳೆ…

 • ಬರದೂರು ಕಡೂರು; ಹಸಿರು ಚಿಗುರು

  ಕಡೂರು: ಈ ಬಾರಿ ವಾಡಿಕೆ ಮಳೆಗಿಂತ ಅಧಿಕ ಮಳೆ ಬಂದಿದ್ದಕ್ಕೆ ಬರ ಪೀಡಿತ ತಾಲೂಕು ಪಟ್ಟಿಯಿಂದ ಕಡೂರು ತಾಲೂಕನ್ನು ಸರಕಾರ ಕೈಬಿಟ್ಟಿದೆ. ತಾಲೂಕಿನ ಎಲ್ಲಾ ಭಾಗಗಳಲ್ಲಿ ಉತ್ತಮ ಬೆಳೆ ಬಂದು ದಾಖಲೆ ನಿರ್ಮಿಸಿ ಕಳೆದ 10-15 ವರ್ಷಗಳಿಂದ ತುಂಬದ…

 • ಪ್ರಬಲಗೊಂಡ “ಮಹಾ’ ಚಂಡಮಾರುತ

  ಮಂಗಳೂರು/ ಉಡುಪಿ: “ಮಹಾ’ ಚಂಡಮಾರುತವು ಮುಂದಿನ 24 ತಾಸುಗಳಲ್ಲಿ ಬಲಗೊಂಡು ವಾಯವ್ಯ ದಿಕ್ಕಿನತ್ತ ಸಾಗಲಿದೆ. ಇದರಿಂದಾಗಿ ಮುಂದಿನ ಎರಡು ದಿನಗಳ ಕಾಲ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗಂಟೆಗೆ ಸುಮಾರು…

 • ಗಾಳಿ-ಮಳೆ ಪ್ರತಾಪ; ಜನರ ಪರಿತಾಪ

  „ಎಸ್‌. ಕೆ.ಲಕ್ಷ್ಮೀ ಪ್ರಸಾದ್‌ ಚಿಕ್ಕಮಗಳೂರು: ಈ ವರ್ಷದ ಮುಂಗಾರು, ಹಿಂಗಾರು ಹಾಗೂ ಚಂಡಮಾರುತದ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಆಗಸ್ಟ್‌ ತಿಂಗಳಿನಿಂದ ಆರಂಭವಾದ ನೈರುತ್ಯ ಮುಂಗಾರು ಬಿಟ್ಟೂ ಬಿಡದೆ ಸುರಿಯಿತು. ಆನಂತರ ಅದನ್ನು ಹಿಂಬಾಲಿಸಿದ ಈಶಾನ್ಯ ಮಾರುತದ ಹಿಂಗಾರು ಮಳೆ…

 • ಉತ್ತಮ ಫಸಲು ನಿರೀಕ್ಷೆಯಲ್ಲಿದ್ಧ ರೈತರಿಗೆ ಭಾರೀ ನಿರಾಸೆ!

  ಸಂಡೂರು: ತಾಲೂಕಿನಾದ್ಯಂತ ರೋಹಿಣಿ ಮಳೆಗೆ ಬಿತ್ತಿದ ಜೋಳ ಅಲ್ಪ ಸ್ವಲ್ಪ ಬೆಳೆದಿದ್ದು, ಅವುಗಳನ್ನು ಹೊಲಗಳಲ್ಲಿಯೇ ಗೂಡು ಹಾಕಿ ರಕ್ಷಿಸಿಕೊಳ್ಳುವ ಪ್ರಯತ್ನ ರೈತರು ನಡೆಸಿದರೂ ಸಹ ಅದು ಫಲಕಾರಿಯಾಗಿಲ್ಲ. ಹೌದು, ನಿರಂತರ ಮಳೆಯಿಂದ ಗೂಡು ಹಾಕಿದ ಜೋಳದ ಬೆಳೆಯ ಗೂಡುಗಳು…

 • ಕರಾವಳಿಯಲ್ಲಿ ಉತ್ತಮ ಮಳೆ ನಿರೀಕ್ಷೆ

  ಮಂಗಳೂರು: ಅರಬಿ ಸಮುದ್ರ, ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯ ಕರಾವಳಿಯಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 40ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ….

 • ಕಬ್ಬು ಕಟಾವಿಗೆ ಕೊಡಲಿ ಏಟು ಕೊಟ್ಟ ಮಳೆ

  ಧಾರವಾಡ: ಧೋ ಎಂದು ಸುರಿಯುವ ಮಳೆ.. ಸೋ ಎಂದು ಬೀಸುವ ಬಿರುಗಾಳಿ.. ಸದ್ಯಕ್ಕೆ ಇವರಿಗೆ ತಾಡಪತ್ರಿಗಳೇ ಮನೆಗಳು.. ದುಡಿಯಲು ಗುಳೇ ಬಂದರೂ ತಪ್ಪುತ್ತಿಲ್ಲ ಇವರ ಬಾಳಿನ ಗೋಳು.. ಒಟ್ಟಿನಲ್ಲಿ ಮಳೆರಾಯನಿಗೆ ಹಿಡಿಶಾಪ..ಇವರ ಬದುಕು ಅಯ್ಯೋ ಪಾಪ. ಹೌದು, ತುತ್ತಿನ…

 • ಮಂಗಳೂರು ವಿ.ವಿ. ಪದವಿ ಪರೀಕ್ಷೆ ದಿನಾಂಕ ಮರು ನಿಗದಿ

  ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ಅ. 26ರಂದು ಉಡುಪಿ ಜಿಲ್ಲೆಯ ಪದವಿ ಕಾಲೇಜುಗಳಿಗೆ ರಜೆ ನೀಡಿದ್ದು, ಅಂದು ನಡೆಯ ಬೇಕಿದ್ದ ಮಂಗಳೂರು ವಿ.ವಿ. ವ್ಯಾಪ್ತಿಯ ಎಲ್ಲ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ನ. 12ರಂದು ಮಂಗಳೂರು ಮನಪಾ ಚುನಾವಣೆ ನಡೆಯಲಿರುವುದರಿಂದ…

 • ಸತತ ಮಳೆಗೆ ತತ್ತರಿಸಿದ ಬಳ್ಳಾರಿ ಜನತೆ

  ಬಳ್ಳಾರಿ: ದೀಪಾವಳಿ ಹಬ್ಬದ ಅಮವಾಸ್ಯೆ ದಿನವಾದ ಸೋಮವಾರ ಬೆಳಗಿನಜಾವ ಸತತವಾಗಿ ಸುರಿದ ‌ಮಹಾಮಳೆಗೆ ಗಣಿನಾಡು ಬಳ್ಳಾರಿ ಜಿಲ್ಲೆ ತತ್ತರಿಸಿದೆ. ಬಳ್ಲಾರಿ ತಾಲೂಕಿನ‌ ಸಂಜೀವರಾಯನಕೊಪಟೆ, ಇಬ್ರಾಹಿಂಪುರ ಬಹುತೇಕ ಗ್ರಾಮಗಳು ಮಳೆ ನೀರಿನಿಂದ ಜಲಾವೃತಗೊಂಡಿವೆ. ಸಂಜೀವರಾಯನಕೊಪಟೆ ಗ್ರಾಮದಿಂದ‌ ಸಮೀಪದ ಚರಕುಂಟೆ ಗ್ರಾಮಕ್ಕೆ…

 • ನಿಲ್ಲದ ಗಾಳಿ-ಮಳೆ: ತೀರದ ಆತಂಕ

  ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಶನಿವಾರ ಬೆಳಗಿನಿಂದಲೂ ಮೂಡಿಗೆರೆ ತಾಲೂಕಿನ ಕಳಸ, ಕೊಟ್ಟಿಗೆಹಾರ ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ಉಳಿದೆಡೆ ಮಳೆ ಸ್ವಲ್ಪ ಕಡಿಮೆಯಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಮಳೆಯೊಂದಿಗೆ ಭಾರೀ ಗಾಳಿಯೂ ಬೀಸಿದ್ದರಿಂದಾಗಿ…

 • ದೀಪಾವಳಿ ಸಂಭ್ರಮ ಕಸಿದ ಮಳೆ!

  ದಾವಣಗೆರೆ: ಗುಡುಗು.. ಸಿಡಿಲಿನ ಆರ್ಭಟದೊಂದಿಗೆ ಆಗಾಗ ಧೋ.. ಎಂದು ಸುರಿಯುವ ಮಳೆ… ಅನಿರೀಕ್ಷಿತ ಬಿರುಸಿನ ಮಳೆಗೆ ಸಿಲುಕಿ ನಲುಗಿ ಹೋಗಿರುವ ಫಸಲು… ಮಳೆಯ ಹೊಡೆತಕ್ಕೆ ಸಿಲುಕಿ ಬಿದ್ದು ಹೋಗಿರುವ ಮನೆ.. ಕಿತ್ತು ಹೋಗಿರುವ ರಸ್ತೆ… ಕಡಿದು ಹೋಗಿದ್ದ ಸಂಪರ್ಕ……

 • ವಾಡಿಕೆ ಮೀರುತ್ತಿದೆ ಹಿಂಗಾರು ಮಳೆ

  ಮಂಗಳೂರು: ಕರಾವಳಿಯಲ್ಲಿ ಮುಂದಿನ ಮೂರು ತಿಂಗಳಲ್ಲಿ ಸುರಿಯಬೇಕಾದ ಹಿಂಗಾರು ಮಳೆ ಕೇವಲ ಮೂರು ವಾರದಲ್ಲಿ ಸುರಿದು, ವಾಡಿಕೆಯ ಗುರಿ ತಲುಪಿದೆ. ಹಿಂಗಾರು ಮಾರುತ ಅಪ್ಪಳಿಸುವ ಮೊದಲು ಕರಾವಳಿ ಭಾಗದಲ್ಲಿ ಬಿಸಿಲು, ಮೋಡ ಮತ್ತು ಸೆಕೆಯಿಂದ ಕೂಡಿದ ವಾತಾವರಣವಿತ್ತು. ಮಳೆಯೂ…

 • ಇಂದಿನಿಂದ “ಕ್ಯಾರ್‌’ ಅಬ್ಬರ ಇಳಿಮುಖ?

  ಮಂಗಳೂರು/ ಉಡುಪಿ: ಅರಬಿ ಸಮುದ್ರದಲ್ಲಿ ಉಂಟಾದ ಕ್ಯಾರ್‌ ಚಂಡಮಾರುತದ ಪರಿಣಾಮ ಕರಾವಳಿ ಭಾಗದಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಬೆಳಗ್ಗೆಯಿಂದಲೇ ಮಳೆ ಸುರಿದಿತ್ತು, ಭಾರೀ ಗಾಳಿ ಮಳೆಯಿಂದಾಗಿ ಮೂಡುಶೆಡ್ಡೆ ಸೀತಾಲಕ್ಷ್ಮೀ ಅವರ ಮನೆಗೆ ಮರ ಬಿದ್ದು, ಮನೆ ಸಂಪೂರ್ಣ…

 • ಕರಾವಳಿಯಲ್ಲಿ ಮಳೆ-ಅಲೆಯ ಅಬ್ಬರ

  ಮಂಗಳೂರು/ಉಡುಪಿ: ಅರಬಿ ಸಮುದ್ರದಲ್ಲಿ ಸೃಷ್ಟಿಯಾದ “ಕ್ಯಾರ್‌’ ಚಂಡಮಾರುತದ ಪ್ರಭಾವದಿಂದ ಕರಾವಳಿ ಭಾಗಗಳಲ್ಲಿ ಶುಕ್ರವಾರವೂ ಉತ್ತಮ ಮಳೆಯಾಗಿದೆ. ಹಲವೆಡೆ ಹಾನಿ ಸಂಭವಿಸಿದೆ. ಕುಕ್ಕೆಹಳ್ಳಿಯಲ್ಲಿ ಮರ ಉರುಳಿ ವ್ಯಕ್ತಿಯೋ ರ್ವರು ಮೃತಪಟ್ಟಿದ್ದಾರೆ. ಸಮುದ್ರದ ಅಲೆಗಳ ಅಬ್ಬರವೂ ತೀವ್ರಗೊಂಡಿದೆ. ಭಾರೀ ಮಳೆಯ ಕಾರಣ…

 • ಹವಾಮಾನ ವೈಪರೀತ್ಯ; ಮೀನುಗಾರಿಕೆಗೆ ಅಡ್ಡಿ; ಹೊರ ರಾಜ್ಯದ ಕಾರ್ಮಿಕರು ವಾಪಾಸ್‌

  ಮಹಾನಗರ: ಅರಬಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮೀನುಗಾರರನ್ನು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದೆ. ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರಿಕಾ ಕ್ಷೇತ್ರ ತತ್ತರಿಸಿದೆ. ಮೀನುಗಾರಿಕೆಯ ರಜೆಯ ಅವಧಿ ಮುಗಿದು ಋತು ಆರಂಭವಾದಗಿನಿಂದಲೂ ಚಂಡಮಾರುತ, ಮೀನಿನ…

ಹೊಸ ಸೇರ್ಪಡೆ