Udayavni Special

ಕೋವಿಡ್ ಆಘಾತ; ಬಸ್‌ ಬಂದ್‌-ಪರದಾಟ

Team Udayavani, Mar 17, 2021, 3:58 PM IST

ಕೋವಿಡ್ ಆಘಾತ; ಬಸ್‌ ಬಂದ್‌-ಪರದಾಟ

ಕಾಗವಾಡ: ಕರ್ನಾಟಕ ಹಾಗೂ ಮಹಾರಾಷ್ಟ್ರಗಡಿ ವಿವಾದದ ಬೆನ್ನಲ್ಲೇ ಮಂಗಳವಾರದಿಂದಜಿಲ್ಲಾಡಳಿತ ಕೋವಿಡ್‌ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಬಸ್‌ ಸಂಚಾರ ಸ್ಥಗಿತಗೊಳಿಸಿದೆ. ಅಲ್ಲಿಂದಲೂ ಬಸ್‌ಗಳು ಬರುತ್ತಿಲ್ಲ. ಕಾಗವಾಡ ಆರ್‌ಟಿಒ ಚೆಕ್‌ಪೋಸ್ಟ್‌ ಹತ್ತಿರ ಕೋವಿಡ್‌ ತಪಾಸಣೆ ಕೇಂದ್ರ ಪ್ರಾರಂಭಿಸಲಾಗಿದೆ. ಇದರಿಂದಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಸಂಚರಿಸುವ 500 ಬಸ್‌ಗಳ ಸೇವೆ ಸ್ಥಗಿತಗೊಂಡಿದೆ.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಂಗಳವಾರ ಮಧ್ಯಾಹ್ನದಿಂದ ಚೆಕ್‌ಪೋಸ್ಟ್‌ಪ್ರಾರಂಭಿಸಲಾಗಿದ್ದು, ಕೋವಿಡ್ ನೆಗೆಟಿವ್‌ ಪ್ರಮಾಣಪತ್ರ ಇದ್ದವರನ್ನು ಮಾತ್ರ ರಾಜ್ಯದ ಒಳಕ್ಕೆಬಿಡಲಾಗುತ್ತಿದೆ. ಕಾಗವಾಡದಲ್ಲಿ ಮಹಾರಾಷ್ಟ್ರದ ಬಸ್‌ಗಳನ್ನುತಡೆಯಲಾಗುತ್ತಿದೆ ಎಂಬ ಸುದ್ದಿ ಮಿರಜ ಹಾಗೂ ಸಾಂಗಲಿ ಪಟ್ಟಣದಲ್ಲಿ ಹರಡಿದ ನಂತರ ಎಲ್ಲ ಬಸ್‌ ಸಂಚಾರ ಸೇವೆ ಸ್ಥಗಿತಗೊಂಡಿತು. ಪ್ರಯಾಣಿಕರನ್ನು ಕಾಗವಾಡ ಬಸ್‌ ನಿಲ್ದಾಣದಲ್ಲಿ ಬಿಟ್ಟು ಬಸ್‌ಗಳು ಮರಳಿ ಡಿಪೊಗಳಿಗೆ ಹೋಗಲುಪ್ರಾರಂಭಿಸಿದವು. ಇದ್ದರಿಂದ ಪ್ರಯಾಣಿಕರು ಗೊಂದಲಕ್ಕೀಡಾಗಿ ಯಾವುದೇ ಮಾಹಿತಿ ತಿಳಿಯದೇ ಪರದಾಡುವಂತಾಯಿತು.

ಖಾಸಗಿ ವಾಹನಗಳ ಮೊರೆ: ಕೆಲವರು ಸುಮಾರು 2 ಕಿಮೀ ನಡೆದು ಕಾಲ್ನಡಿಗೆಯಲ್ಲಿ ಚೆಕ್‌ಪೋಸ್ಟ್‌ ದಾಟಿ ಖಾಸಗಿ ವಾಹನದಲ್ಲಿ ಮಹಾರಾಷ್ಟ್ರದಲ್ಲಿನ ತಮ್ಮ ಸ್ಥಾನಗಳಿಗೆ ತೆರಳಿದರು. ಅಲ್ಲಿಂದ ಬರುವ ಜನ ಕೂಡ ಕಾಲ್ನಡಿಗೆಯಲ್ಲಿ ಗಡಿ ಪ್ರವೇಶಿಸಿ ಖಾಸಗಿ ವಾಹನದಲ್ಲಿ ಪ್ರಯಾಣ ಬೆಳೆಸಿದರು. ಕಾಲ್ನಡಿಗೆಯಲ್ಲಿ ಬರುವವರ ಕೋವಿಡ್‌ ಪರೀಕ್ಷೆಪ್ರಮಾಣಪತ್ರವನ್ನು ಯಾರೂ ಕೇಳಲಿಲ್ಲ! ಖಾಸಗಿ ವಾಹನಗಳವರು ಮನ ಬಂದಂತೆ ಪ್ರಯಾಣಿಕರಿಂದ ಹಣ ವಸೂಲು ಮಾಡಿದರು.

ರೋಗಿಗಳಿಗೆ ತೊಂದರೆ: ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಜನ ಸಾಂಗ್ಲಿ, ಮೀರಜ್‌ಗಳಿಗೆ ಹೋಗುತ್ತಿದ್ದು, ನಡೆಯಲಾಗದ ವೃದ್ಧುರು, ರೋಗಿಗಳು ಬಸ್‌ನಿಲ್ದಾಣದಲ್ಲಿಯೇ ಕುಳಿತು ಪರದಾಡಿದರು. ನೊಂದ ಪ್ರಯಾಣಿಕ ಸುರಪುರದ ಕುಮಾರ ಮಾತನಾಡಿ, ಕರ್ನಾಟಕದಲ್ಲಿ ಉಪಚಾರ ದೊರೆಯದೆ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದೇವೆ. ಇದರಲ್ಲಿ ನಮ್ಮದೇನು ತಪ್ಪು? ಈಗ ಆಕಸ್ಮಿಕವಾಗಿ ಬಸ್‌ ತಡೆದು ನಮಗೆ ತೊಂದರೆ ನೀಡುತ್ತಿದ್ದೀರಿ. ಈಗ ನಾವು ರೋಗಿಗಳನ್ನು ತೆಗೆದುಕೊಂಡು ಎಲ್ಲಿಗೆ ಹೋಗಬೇಕು? ಇವರ ಜೀವಕ್ಕೆ ಅಪಾಯವಾದರೆ, ಇದರ ಹೋಣೆಗಾರರು ಯಾರು? ಎಂದು ಪ್ರಶ್ನಿಸಿ ತಮ್ಮ ಆಕ್ರೋಶ ಹೊರಹಾಕಿದರು.

ಕೆಎಸ್‌ಆರ್‌ಟಿಸಿ ಕಾಗವಾಡ ವಿಭಾಗದನಿಯಂತ್ರಕ ಚಂದ್ರಶೇಖರ ಬೇನಾಳ ಮಾಹಿತಿನೀಡಿ, ಮಧ್ಯಾಹ್ನ ನಮ್ಮ ಕೆಎಸ್‌ಆರ್‌ಟಿಸಿ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಮಹಾರಾಷ್ಟ್ರಕ್ಕೆಸಂಚರಿಸುವ ಎಲ್ಲ ಬಸ್‌ ಸ್ಥಗಿತಗೊಳಿಸಿದ್ದೇವೆ.ದಿನನಿತ್ಯ 550 ಬಸ್‌ಗಳು ಸಂಚರಿಸುತ್ತವೆ. ಈ ಎಲ್ಲಬಸ್‌ಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದರು.

ಟಾಪ್ ನ್ಯೂಸ್

ಮುಂಬೈಗೆ ಸೋಲಿನ ಪಂಚ್‌ ಕೊಟ್ಟ ಪಂಜಾಬ್‌

IPL 2021: ಮುಂಬೈಗೆ ಸೋಲಿನ ಪಂಚ್‌ ಕೊಟ್ಟ ಪಂಜಾಬ್‌

ಟಿ20: ಪಾಕ್‌ ತಂಡವನ್ನು 19 ರನ್ನುಗಳಿಂದ ಮಣಿಸಿ ಹೊಸ ಇತಿಹಾಸ ಬರೆದ ಜಿಂಬಾಬ್ವೆ

ಟಿ20: ಪಾಕ್‌ ತಂಡವನ್ನು 19 ರನ್ನುಗಳಿಂದ ಮಣಿಸಿ ಹೊಸ ಇತಿಹಾಸ ಬರೆದ ಜಿಂಬಾಬ್ವೆ

ಕೊಹ್ಲಿಯಿಂದಾಗಿ ಬ್ಯಾಟಿಂಗ್‌ ಸುಲಭವಾಯಿತು: ಪಡಿಕ್ಕಲ್‌

ಕೊಹ್ಲಿಯಿಂದಾಗಿ ಬ್ಯಾಟಿಂಗ್‌ ಸುಲಭವಾಯಿತು: ಪಡಿಕ್ಕಲ್‌

‘ಬಂದಿಷ್‌ ಬ್ಯಾಂಡಿಟ್ಸ್’ ವೆಬ್‌ ಸೀರಿಸ್ ನ ನಟ ಅಮಿತ್‌ ಮಿಸ್ತ್ರಿ ಹೃದಯಾಘಾತದಿಂದ ನಿಧನ

‘ಬಂದಿಷ್‌ ಬ್ಯಾಂಡಿಟ್ಸ್’ ವೆಬ್‌ ಸೀರಿಸ್ ನ ನಟ ಅಮಿತ್‌ ಮಿಸ್ತ್ರಿ ಹೃದಯಾಘಾತದಿಂದ ನಿಧನ

ಎ.28ರಿಂದ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ : ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಎ.28ರಿಂದ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ : ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

‘ವ್ಯಾಕ್ಸಿನ್ಸ್‌ ಫಾರ್‌ ಆಲ್’ ಲಸಿಕೆ ಅಭಿಯಾನಕ್ಕೆ ಕೈ ಜೋಡಿಸಿದ ವಾಟ್ಸ್‌ಆ್ಯಪ್‌

‘ವ್ಯಾಕ್ಸಿನ್ಸ್‌ ಫಾರ್‌ ಆಲ್’ ಲಸಿಕೆ ಅಭಿಯಾನಕ್ಕೆ ಕೈ ಜೋಡಿಸಿದ ವಾಟ್ಸ್‌ಆ್ಯಪ್‌

ಆಲಿಕಲ್ಲು ಮಳೆಯಿಂದ ಬೆಳೆ ನಾಶ : ಸೂಕ್ತ ಪರಿಹಾರ ನೀಡಲು ಅಧಿಕಾರಿಗಳಿಗೆ ರೈತರ ಮನವಿ

ಆಲಿಕಲ್ಲು ಮಳೆಯಿಂದ ಬೆಳೆ ನಾಶ : ಸೂಕ್ತ ಪರಿಹಾರ ನೀಡಲು ಅಧಿಕಾರಿಗಳಲ್ಲಿ ರೈತರ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ: ಸಿಡಿಲು ಬಡಿದು ಇಬ್ಬರು ಕೂಲಿ ಕಾರ್ಮಿಕರು ಸಾವು

ಬೆಳಗಾವಿ: ಸಿಡಿಲು ಬಡಿದು ಇಬ್ಬರು ಕೂಲಿ ಕಾರ್ಮಿಕರು ಸಾವು

ಜಹಗ್ಗ್ಗ್ಗ್ಗ

ಕೆವಿಜಿ ಅಧಿಕಾರಿ ವರ್ಗಾವಣೆ ರದ್ದತಿಗೆ ಮನವಿ

ಕಜಹಗರ

ಸರ್ಕಾರಿ ನೌಕರರಿಗೆ ಮಾಸ್ಕ್ ಕಡ್ಡಾಯ : ಡಿಸಿ

frdtyr

ಕರ್ಫ್ಯೂ ವೇಳೆ ಬಾಲ ಬಿಚ್ಚಿದರೆ ಹುಷಾರ್‌ !

gdfrt

3000 ಎಕರೆ ಜಮೀನು ನೀರಾವರಿ! ಬೂದಿಹಾಳ ಬಾಂದಾರದಿಂದ ರೈತರಿಗೆ ಅನುಕೂಲ­

MUST WATCH

udayavani youtube

ವರವಾಗಿದ್ದ Mask ಶಾಪವಾಯಿತೇ!?

udayavani youtube

ಕೋವಿಡ್ ಸಂಕಷ್ಟ: 2 ತಿಂಗಳು 5ಕೆಜಿ ಉಚಿತ ಪಡಿತರ ವಿತರಣೆ

udayavani youtube

ಮುಂದಿನ 15 ದಿನಗಳವರೆಗೆ ಎಲ್ಲವನ್ನೂ ಸಮರ್ಪಕವಾಗಿ ಎದುರಿಸಲು ದ.ಕ ಜಿಲ್ಲಾಡಳಿತ ಸಿದ್ಧ: DC

udayavani youtube

ಬೈಕ್ ಗೆ ನಾಯಿ ಕಟ್ಟಿ ರಾಕ್ಷಸೀಯ ಕೃತ್ಯ ಮೆರೆದಿದ್ದ ಆರೋಪಿ ಬಂಧನ

udayavani youtube

ಸಾಲಿಗ್ರಾಮ ಪಟ್ಟಣ ಪಂಚಾಯತ್ ಡಂಪಿಂಗ್‌ಯಾರ್ಡ್ ವಿರೋಧಿಸಿ ಸ್ಥಳೀಯರಿಂದ ಪ್ರತಿಭಟನೆ

ಹೊಸ ಸೇರ್ಪಡೆ

ಮುಂಬೈಗೆ ಸೋಲಿನ ಪಂಚ್‌ ಕೊಟ್ಟ ಪಂಜಾಬ್‌

IPL 2021: ಮುಂಬೈಗೆ ಸೋಲಿನ ಪಂಚ್‌ ಕೊಟ್ಟ ಪಂಜಾಬ್‌

PAGE 4-LEAD 8

ಎತ್ತಿನ ಭುಜದ ತಪ್ಪಲಿನಲ್ಲಿ ನೆಲೆನಿಂತ

ಟಿ20: ಪಾಕ್‌ ತಂಡವನ್ನು 19 ರನ್ನುಗಳಿಂದ ಮಣಿಸಿ ಹೊಸ ಇತಿಹಾಸ ಬರೆದ ಜಿಂಬಾಬ್ವೆ

ಟಿ20: ಪಾಕ್‌ ತಂಡವನ್ನು 19 ರನ್ನುಗಳಿಂದ ಮಣಿಸಿ ಹೊಸ ಇತಿಹಾಸ ಬರೆದ ಜಿಂಬಾಬ್ವೆ

ಕೊಹ್ಲಿಯಿಂದಾಗಿ ಬ್ಯಾಟಿಂಗ್‌ ಸುಲಭವಾಯಿತು: ಪಡಿಕ್ಕಲ್‌

ಕೊಹ್ಲಿಯಿಂದಾಗಿ ಬ್ಯಾಟಿಂಗ್‌ ಸುಲಭವಾಯಿತು: ಪಡಿಕ್ಕಲ್‌

‘ಬಂದಿಷ್‌ ಬ್ಯಾಂಡಿಟ್ಸ್’ ವೆಬ್‌ ಸೀರಿಸ್ ನ ನಟ ಅಮಿತ್‌ ಮಿಸ್ತ್ರಿ ಹೃದಯಾಘಾತದಿಂದ ನಿಧನ

‘ಬಂದಿಷ್‌ ಬ್ಯಾಂಡಿಟ್ಸ್’ ವೆಬ್‌ ಸೀರಿಸ್ ನ ನಟ ಅಮಿತ್‌ ಮಿಸ್ತ್ರಿ ಹೃದಯಾಘಾತದಿಂದ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.