ಈರುಳ್ಳಿ ದರ ಕುಸಿತಕ್ಕೆ ರೈತ ಕಂಗಾಲು

ಮಾರುಕಟ್ಟೆಯಲ್ಲಿಲ್ಲ ಹೊಸ ಈರುಳ್ಳಿಗೆ ದರ | ವಹಿವಾಟು ನಡೆಯದೇ ಹೊಲದಲ್ಲಿ ಕೊಳೆತ ಬೆಳೆ

Team Udayavani, Sep 20, 2021, 9:24 PM IST

vcydtyry

ವರದಿ: ಕೇಶವ ಆದಿ

ಬೆಳಗಾವಿ: ಸತತ ಪ್ರವಾಹ, ಪ್ರಕೃತಿ ವಿಕೋಪ ನಂತರ ಕೊರೊನಾ ಮಹಾಮಾರಿ ಅಟ್ಟಹಾಸದಿಂದ ನಲುಗಿ ಹೋಗಿರುವ ರೈತ ಸಮುದಾಯ ಈಗ ಈರುಳ್ಳಿ ಬೆಳೆ ಕುಸಿತದಿಂದ ಕಂಗೆಟ್ಟಿದ್ದಾರೆ. ಮಾರುಕಟ್ಟೆಗೆ ಬರುತ್ತಿರುವ ಹೊಸ ಈರುಳ್ಳಿ ಹೊಸ ಸಮಸ್ಯೆ ತಂದಿಟ್ಟಿದೆ. ಕೈತುಂಬಾ ಈರುಳ್ಳಿ ಕಂಡರೂ ನೆಮ್ಮದಿ ಇಲ್ಲ. ದರ ಕುಸಿತ ರೈತರನ್ನು ಕುಸಿಯುವಂತೆ ಮಾಡಿದೆ.

ಕಳೆದ ವರ್ಷ ಕೊರೊನಾ ಹಾವಳಿ ಮತ್ತು ಲಾಕ್‌ಡೌನ್‌ ಕಾಡಿತ್ತು. ಈಗ ಕೊರೊನಾ ಜತೆಗೆ ಸುತ್ತುರೋಗ ರೈತರ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ. ಹೊಲದಲ್ಲಿ ಸಮೃದ್ಧ ಬೆಳೆ ಇದ್ದರೂ ಅದರಿಂದ ಸಂತೃಪ್ತಿ ಇಲ್ಲ. ರೋಗದಿಂದ ಈರುಳ್ಳಿ ಗಡ್ಡಿಗಳು ಸುತ್ತು ಹೊಡೆದು ಬೀಳುತ್ತಿವೆ. ಹೀಗಾಗಿ ಅದರ ಬಾಳಿಕೆ ಕಡಿಮೆ. ಈ ಕಡೆ ಮಾರುಕಟ್ಟೆಯಲ್ಲಿ ಹೊಸ ಈರುಳ್ಳಿಗೆ ದರ ಇಲ್ಲ. ಪರಿಣಾಮ ಎಷ್ಟೋ ರೈತರು ತಮ್ಮ ಉತ್ಪನ್ನವನ್ನು ಮಾರುಕಟ್ಟೆಗೆ ತರದೇ ಹೊಲದಲ್ಲೇ ಕೊಳೆಯಲು ಬಿಟ್ಟಿದ್ದಾರೆ. ಇದು ಬೆಳಗಾವಿ ಜಿಲ್ಲೆಯ ಒಂದು ತಾಲೂಕಿನಲ್ಲಿ ಕಂಡು ಬರುವ ಚಿತ್ರ ಅಲ್ಲ ಬಹುತೇಕ ಕಡೆ ಇದೇ ಸ್ಥಿತಿ ಇದೆ.

ಒಳ್ಳೆಯ ದರ ಸಿಗಬಹುದು. ಒಂದಿಷ್ಟು ದುಡ್ಡು ಮಾಡಿಕೊಳ್ಳಬಹುದೆಂದು ಸಾವಿರಾರು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದ ರೈತರು ಈಗ ದರ ಇಲ್ಲದೇ ಕಣ್ಣೀರು ಹಾಕುತ್ತಿದ್ದಾರೆ. ಸಾಮಾನ್ಯವಾಗಿ ಈ ವೇಳೆಗೆ ಮಾರುಕಟ್ಟೆಗೆ ಭರಪೂರ ಈರುಳ್ಳಿ ಬರಲಾರಂಭಿಸುತ್ತದೆ. ಮಾರುಕಟ್ಟೆ ದಿನಗಳಂದು ಕಡಿಮೆ ಎಂದರೂ ಸುಮಾರು 100 ಗಾಡಿಗಳಷ್ಟು ಈರುಳ್ಳಿ ಆವಕ ಇರುತ್ತದೆ. ಆದರೆ ಕಳೆದೆರಡು ವರ್ಷದಿಂದ ಕೊರೊನಾ ಕಾರಣದಿಂದ ರೈತರು ಈರುಳ್ಳಿಯನ್ನು ಮಾರುಕಟ್ಟೆಗೆ ತರಲಾರದೆ ಅಪಾರ ನಷ್ಟ ಅನುಭವಿಸಿದ್ದಾರೆ. ಈ ವರ್ಷ ಲಾಕ್‌ಡೌನ್‌ ಇಲ್ಲ. ಕೊರೊನಾ ಆತಂಕವೂ ಕಡಿಮೆಯಾಗಿದೆ. ಆದರೆ ಈರುಳ್ಳಿಗೆ ಅಂಟಿಕೊಂಡಿರುವ ರೋಗ ಮತ್ತು ದರ ಕುಸಿತ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಮಹಾರಾಷ್ಟ್ರ ಭಾಗದಲ್ಲಿ ಹಳೆಯ ಈರುಳ್ಳಿಯನ್ನು ಸಂಗ್ರಹ ಮಾಡಿಕೊಂಡಿದ್ದು ಈಗ ರೈತರು ಅದನ್ನು ಮಾರುಕಟ್ಟೆಗೆ ತರಲಾರಂಭಿಸಿದ್ದಾರೆ. ಅದರ ಪೂರೈಕೆಯ ಪ್ರಮಾಣವೂ ಹೆಚ್ಚಿದೆ. ಹಳೆಯ ಈರುಳ್ಳಿಗೆ ಪ್ರತಿ ಕ್ವಿಂಟಲ್‌ಗೆ 1800 ರಿಂದ 2200 ರೂ.ವರೆಗೆ ದರ ಸಿಗುತ್ತಿದೆ. ಅದೇ ಹೊಸ ಈರುಳ್ಳಿಗೆ ಪ್ರತಿ ಕ್ವಿಂಟಲ್‌ಗೆ 500 ರೂ. ದಿಂದ 800 ರೂ. ಮಾತ್ರ ಸಿಗುತ್ತಿರುವುದು ರೈತರಲ್ಲಿ ಚಿಂತೆ ಹುಟ್ಟಿಸಿದೆ. ಇದಕ್ಕೆ ನಿಖರವಾದ ಕಾರಣ ತಿಳಿಯುತ್ತಿಲ್ಲ ಎಂಬುದು ರೈತರ ಆರೋಪ. ಕಳೆದ ವರ್ಷ ಕೊರೊನಾದಿಂದ ವಹಿವಾಟು ನಡೆಯಲಿಲ್ಲ. ಇದರಿಂದ ಬಹುತೇಕ ರೈತರ ಬೆಳೆ ಹೊಲದಲ್ಲೇ ಕೊಳೆತವು. ಈ ಬಾರಿಯೂ ಅದೇ ಸ್ಥಿತಿ.

ಒಳ್ಳೆಯ ದರ ಸಿಕ್ಕರೆ ಎರಡು ಎಕರೆ ಈರುಳ್ಳಿಗೆ ಸುಮಾರು ಮೂರು ಲಕ್ಷ ರೂ ಬರಬೇಕು. ಪ್ರತಿ ಎಕರೆಗೆ 25ರಿಂದ 30 ಸಾವಿರ ರೂ. ಖರ್ಚು ಮಾಡಲಾಗಿದೆ. ಆದರೆ ಮಾರುಕಟ್ಟೆಯಲ್ಲಿ ದರವೇ ಇಲ್ಲ. ಕ್ವಿಂಟಲ್‌ಗೆ 500 ರೂ. ದರ ಇದೆ. ಹೊಲದಿಂದ ಈರುಳ್ಳಿ ಕೀಳಲು ಕೂಲಿಗಳು ಒಂದು ಚೀಲಕ್ಕೆ 120 ರೂ. ಕೇಳುತ್ತಾರೆ. ಅವರಿಗೆ ಇಷ್ಟು ಹಣ ಕೊಟ್ಟು ಮಾರುಕಟ್ಟೆಗೆ ತಂದರೆ ನಮಗೆ ನಷ್ಟವೇ ಗತಿ. ಹೀಗಾಗಿ ಈರುಳ್ಳಿಯನ್ನು ಹೊಲದಲ್ಲೇ ಬಿಟ್ಟಿದ್ದೇವೆಂಬುದು ರೈತರ ನೋವಿನ ಮಾತು. ಹೊಸ ಈರುಳ್ಳಿ ದರ ಕುಸಿಯಲು ಕಾರಣ ಏನೆಂಬುದನ್ನು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಮುಖ್ಯವಾಗಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಈರುಳ್ಳಿಗೆ ರೋಗ ಅಂಟಿಕೊಂಡಿದೆ. ಕೆಲವು ಕಡೆ ರೈತರು ಹೆಚ್ಚಿನ ಪ್ರಮಾಣದಲ್ಲಿ ಕ್ರಿಮಿನಾಶಕ, ಔಷಧ ಬಳಸಿದ್ದಾರೆ. ಇದರಿಂದ ಬೆಳೆಯ ಕಸುವು ಹೋಗಿದೆ ಎಂಬ ಮಾತುಗಳು ಸಹ ಕೇಳಿ ಬಂದಿವೆ. ಈ ಎಲ್ಲ ಅಂಶಗಳ ಕುರಿತು ಸಮೀಕ್ಷೆ ನಡೆಸಿ ನೆರವಿಗೆ ಬರಬೇಕು. ಆಗಿರುವ ಹಾನಿಗೆ ಸಹಾಯ ನೀಡಬೇಕೆಂಬುದು ರೈತರ ಅಳಲು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.