ಬೆಳಗಾವಿ : ಗಣೇಶ ಮೂರ್ತಿ ಪಕ್ಕ ಇಟ್ಟಿದ್ದ ಅಪ್ಪು ಭಾವಚಿತ್ರ 10 ಸಾವಿರಕ್ಕೆ ಹರಾಜು
Team Udayavani, Sep 6, 2022, 7:23 AM IST
ಬೆಳಗಾವಿ: ಬೈಲಹೊಂಗಲ ತಾಲೂಕಿನ ಹೊಗರ್ತಿ ಗ್ರಾಮದಲ್ಲಿ ಸಾರ್ವಜನಿಕ ಶ್ರೀ ಗಜಾನನ ಯುವಕ ಮಂಡಳ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ಎದುರು ಇಟ್ಟಿದ್ದ ಪವರ್ ಸ್ಟಾರ್ ದಿ. ಪುನೀತ ರಾಜಕುಮಾರ ಅವರ ಭಾವಚಿತ್ರ 10,001 ರೂ.ಗೆ ಹರಾಜು ಆಗಿದೆ.
ಪ್ರತಿ ವರ್ಷ ಗಣೇಶ ಮೂರ್ತಿಯನ್ನು ಹೊಗರ್ತಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಅದರಂತೆ ಈ ಬಾರಿಯೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಜತೆಗೆ ಮೂರ್ತಿ ಪಕ್ಕದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಭಾವಚಿತ್ರ ಇಡಲಾಗಿತ್ತು.
ಐದು ದಿನದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಸವಾಲು ಕಾರ್ಯಕ್ರಮ ನಡೆಯಿತು. ಆಗ ಪುನೀತ್ ರಾಜಕುಮಾರ ಫೋಟೊ ಹರಾಜಿಗೆ ಹಾಕಲಾಯಿತು. ಈ ವೇಳೆ ಗ್ರಾಮದ ಬಸವರಾಜ ಕಲ್ಲಪ್ಪ ಹುಬ್ಬಳ್ಳಿ ಎಂಬವರು 10,001 ರೂ.ಗೆ ಅಪ್ಪು ಭಾವಚಿತ್ರ ಹರಾಜಿನಲ್ಲಿ ಪಡೆಯುವ ಮೂಲಕ ಪುನೀತರ ಬಗೆಗಿನ ಅಭಿಮಾನ ತೋರಿಸಿದರು.
ಸುತಗಟ್ಟಿ ಗ್ರಾಪಂ ಸದಸ್ಯ ಭೀಮಶಿ ಕಲ್ಲನಾಯ್ಕರ ಹಾಗೂ ಬಸವರಾಜ ಬಾಗಡಿ ಸವಾಲು ಕಾರ್ಯಕ್ರಮ ನಡೆಸಿಕೊಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ