ಸವದತ್ತಿ ಯಲ್ಲಮ್ಮ ದೇವಸ್ಥಾನ:100ಕ್ಕೂ ಅಧಿಕ ಅನಧಿಕೃತ ಅಂಗಡಿ ತೆರವು

ಗೋಳಾಡಿದ ವ್ಯಾಪಾಸ್ಥರು, ಪಟ್ಟು ಬಿಡದ ಅಧಿಕಾರಿಗಳು

Team Udayavani, Nov 3, 2022, 9:27 PM IST

1-adasdasd

ಸವದತ್ತಿ : ತಾಲೂಕಿನ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿರುವ 100 ಮೀ ಸುತ್ತಲಿನ ಅನಧಿಕೃತ ಬೀದಿ ಬದಿಯ ಸುಮಾರು ನೂರಕ್ಕೂ ಅಧಿಕ ಅಂಗಡಿಗಳ ತೆರವು ಕಾರ್ಯಾಚರಣೆ ನಡೆದಿದೆ.

ತೆರವು ಕಾರ್ಯಾಚರಣೆಯಿಂದ ವ್ಯಾಪಾರಿಗಳು ಮುಂದುವರೆಸದಂತೆ ಬುಧವಾರ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿ ಪ್ರಯೋಜನವಾಗದಿದ್ದಾಗ ಕೆಲ ಮುಖಂಡರುಗಳ ಮೊರೆ ಹೋದರೂ ಫಲಕಾರಿಯಾಗಲಿಲ್ಲ. ಗುರುವಾರ ಮುಂಜಾನೆಯಿಂದಲೇ ಕಾರ್ಯಚರಣೆ ಮುಂದುವರೆಸಲೆತ್ನಿಸಿದರು. ಅಧಿಕಾರಿಗಳ ಜೊತೆ ವ್ಯಾಪಾಸ್ಥರು ಕೆಲ ಸುತ್ತಿನ ಮಾತುಕತೆ ನಡೆದರೂ ಪ್ರಯೋಜನವಾಗಲಿಲ್ಲ.

ಕಾರ್ಯಾಚರಣೆ ನಿಲ್ಲಿಸಲು ವ್ಯಾಪಾರಿಗಳು ಎಲ್ಲಿಲ್ಲದ ಪ್ರಯತ್ನದೊಂದಿಗೆ ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಗುಂಪುಗೂಡಿದ ಜನರನ್ನು ಮತ್ತು ಅಂಗಡಿಕಾರರನ್ನು ನಿಯಂತ್ರಿಸಲು ಪೊಲೀಸ ಇಲಾಖೆಯ ಸಹಾಯ ಪಡೆಯಲಾಯಿತು. ಅಧಿಕಾರಿಗಳು ಎಷ್ಟೇ ಮುಂದುವರೆದರೂ ಅಂಗಡಿಕಾರರು ಜಾಗ ಬಿಟ್ಟು ಕದಲಲಿಲ್ಲ. ಈ ವೇಳೆ ವ್ಯಾಪಾರಿಯೋರ್ವ ವಿಷ ಸೇವಿಸಲು ಮುಂದಾದ ಘಟನೆಯೂ ನಡೆಯಿತು.

ಕಾರ್ಯಾಚರಣೆ ಮುಂದುವರೆಸಲು ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜೀರಗಾಳ ಧ್ವನಿವರ್ಧಕ ಮೂಲಕ, ಸ್ವಯಂ ಪ್ರೇರಿತರಾಗಿ ಅನಧಿಕೃತವಾದವುಗಳನ್ನು ತೆರವುಗೊಳಿಸಿ. ಇಲ್ಲವಾದರೆ ಜೆಸಿಬಿಯಿಂದ ಬಲವಂತವಾಗಿ ತೆರವುಗೊಳಿಸಲಾಗುವದೆಂದು ಎಚ್ಚರಿಸಿದರು.ಇಷ್ಟಾದರೂ ವ್ಯಾಪಾರಿಗಳು ಸರಿದಾಡದೇ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು.

ಪಟ್ಟು ಬಿಡದ ಅಧಿಕಾರಿ ಜೀರಗಾಳ, ಜಿಲ್ಲಾಧಿಕಾರಿ ಸೂಚಿಸಿದರೆ ಮಾತ್ರ ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವದೆಂದು ಮತ್ತೆ ತೆರುವಿಗೆ ಮುಂದಾದರು. ಆಗ ವ್ಯಾಪಾರಸ್ಥರನ್ನು ಉದ್ದೇಶಿಸಿ ಮಾತನಾಡಿ, ವ್ಯಾಪಾಸ್ಥರನ್ನು ಬೀದಿಗೆ ತಳ್ಳುವ ಪ್ರಮೇಯವೆ ನಮಗಿಲ್ಲ. ಅನಧಿಕೃತ ಅಂಗಡಿಗಳ  ತೆರವು ಅನಿವಾರ್ಯ. ಪರ್ಯಾಯವಾಗಿ ವಾಹನ ನಿಲುಗಡೆಯಲ್ಲಿ ಅಂಗಡಿ ಹಾಕಲು ವ್ಯವಸ್ಥೆ ಕಲ್ಪಿಸಿಕೊಡಲಾಗುವದು. ಸಧ್ಯ ಈ ಸ್ಥಳದಲ್ಲಿ ಕ್ಯೂಲೈನ್ ವ್ಯವಸ್ಥೆ ಮಾಡಲಾಗುವುದು. ಮುಖ್ಯ ದ್ವಾರದತ್ತಿರ ಲಗ್ಗೇಜ ವ್ಯವಸ್ಥೆ ನೀಡಲಾಗುವದು. ವ್ಯಾಪಾರ ಮಾತ್ರ ಆಚೆ ನಡೆಯಲಿ. ಭಕ್ತರು ಸಮಸ್ಯೆ ಎದುರಿಸದೆ ದೇವಿಯ ದರ್ಶನ ಪqಯುವಂತಾಗಲಿ. ಅಭಿವೃದ್ಧಿಗೆ ಸಹಕರಿಸಿರೆಂದರು.

ಜನವರಿ, ಫೆಬ್ರುವರಿ ತಿಂಗಳಲ್ಲಿ ಬನದ ಮತ್ತು ಭರತ ಹುಣ್ಣಿಮೆಗಳಿವೆ. ವರ್ಷಪೂರ್ತಿಯ ವ್ಯಾಪಾರ ಇವುಗಳಲ್ಲಿ ಮಾತ್ರ ನಡೆಯುತ್ತದೆ. ತುತ್ತಿನ ಚೀಲ ತುಂಬಿಸಿಕೊಳ್ಳಲುವ ಅನುವು ಮಾಡಿಕೊಡಿ. ಜಾತ್ರೆ ಮುಗಿದ ನಂತರ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ತೆರವು ಮಾಡಿಕೊಳ್ಳುತ್ತೇವೆಂದು ಅಧಿಕಾರಿಗಳಿಗೆ ಪರಿಪರಿಯಾಗಿ ಕೇಳಿಕೊಂಡರು. ಎರಡು ದಿನಗಳ ಮಟ್ಟಿಗಾದರೂ ತೆರವು ಸ್ಥಗಿತಗೊಳಿಸಿರಿ. ಜಿಲ್ಲಾಧಿಕಾರಿಗೆ ಮನವೊಲಿಸಲು ಪ್ರಯತ್ನಿಸುತ್ತೇವೆ ಎಂದರು.

ಕೊನೆಯಲ್ಲಿ ಒಲ್ಲದ ಮನಸ್ಸಿನಿಂದ ಅಂಗಡಿ ತೆರವಿಗೆ ಮುಂದಾದರು. ಅಲ್ಲಿನ ವಸ್ತಗಳನ್ನು ಟ್ರ್ಯಾಕ್ಟರ್ ಮೂಲಕ ಪಾರ್ಕಿಂಗ್ ಸ್ಥಳಕ್ಕೆ ಸಾಗಿಸಲಾಯಿತು. ಡಿವೈಎಸ್ಪಿ ರಾಮನಗೌಡ ಹಟ್ಟಿ, ಪಿಐ ಕರುಣೇಶಗೌಡ ಜೆ. ಪಿಎಸೈ ಪ್ರವೀಣ ಗಂಗೊಳ್ಳಿ ಭದ್ರತೆಯಿರಿಸಿದ್ದರು.

ಯಲ್ಲಮ್ಮ ಒಳ್ಳೆಯದು ಮಾಡುವದಿಲ್ಲರೀ ಸರ್
‘ಅಂಗಡಿಗಳನ್ನು ಕಿತ್ತು ಹೊಟ್ಟೆ ಮೇಲೆ ಹೊಡಿಬ್ಯಾಡ್ರಿ ಸರ್. ಇದರಲ್ಲೇ ಬದುಕು ನಡೆದಿದೆ. ಹುಣ್ಣಿಮೆ ಜಾತ್ರೆ ನಂತರ ನಾವೇ ಹೊರಹೋಗುತ್ತೇವೆ. ಅವಕಾಶ ನೀಡಿ. ಹೊಟ್ಟೆ ಮೇಲೆ ಹೊಡೆದರೆ ತಾಯಿ ಯಲ್ಲಮ್ಮ ಒಳ್ಳೆಯದು ಮಾಡುವದಿಲ್ಲರೀ ಸರ್ ಎಂದು ತೆರವಿನ ವೇಳೆ ವ್ಯಾಪಾರಿಯೋರ್ವಳು ಗೋಗರೆದಳು.

ವ್ಯಾಪಾಸ್ಥರನ್ನು ಬೀದಿಗೆ ತಳ್ಳುವ ಪ್ರಮೇಯವೆ ನಮಗಿಲ್ಲ. ಅನಧಿಕೃತವಾದವುಗಳ ತೆರವು ಅನಿವಾರ್ಯ. ಪರ್ಯಾಯವಾಗಿ ವಾಹನ ನಿಲುಗಡೆಯಲ್ಲಿ ವ್ಯವಸ್ಥೆ ಕಲ್ಪಿಸಿಕೊಡಲಾಗುವದು. ಅಭಿವೃದ್ಧಿಗೆ ಕೈಜೋಡಿಸಿ ಸಹಕರಿಸಿರೆಂದು ಯಲ್ಲಮ್ಮ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಬಸವರಾಜ ಜೀರಗಾಳ ಹೇಳಿದರು.

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.