ರಭಸದ ಮಳೆಗೆ ಬಂತು ಮಲಪ್ರಭೆಗೆ ಕಳೆ

Team Udayavani, Jun 30, 2019, 10:57 AM IST

bg-tdy-3..

ಖಾನಾಪುರ: ಬರಿದಾಗಿದ್ದ ಖಾನಾಪುರ ಪಟ್ಟಣದ ಹಳೆ ಸೇತುವೆ ಬಳಿ ಮಲಪ್ರಭಾ ನದಿ ಮತ್ತೆ ಒಡಲು ತುಂಬಿಕೊಂಡಿದೆ.

ಖಾನಾಪುರ: ತಾಲೂಕಿನಲ್ಲಿ ಶುಕ್ರವಾರ ಮಳೆ ಆರಂಭವಾಗಿದ್ದು ಶನಿವಾರ ಕೂಡ ಮಳೆ ಬಿಡದೇ ಸುರಿಯುತ್ತಿದೆ.

ಇದರಿಂದ ತಾಲೂಕಿನ ರೈತರು ಗದ್ದೆಗಳಲ್ಲಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಜೂನ್‌ ತಿಂಗಳಲ್ಲಿ ಮುಂಗಾರು ಮಳೆ ಕೈಕೊಟ್ಟಿದ್ದು ರೈತರನ್ನು ಇನ್ನಷ್ಟು ಆತಂಕದಲ್ಲಿ ದೂಡಿತ್ತು. ಇದ್ದಕ್ಕಿದ್ದಂತೆ ವರುಣ ಕೃಪೆ ತೋರಿದ್ದು ರೈತರ ಆತಂಕ ತಕ್ಕ ಮಟ್ಟಿಗೆ ಶಮನವಾಗಿದೆ. ಪಟ್ಟಣದ ಮಲಪ್ರಭಾ ನದಿಗೆ ಕಣಕುಂಬಿ ಕಡೆಯಿಂದ ಶುಕ್ರವಾರ ರಾತ್ರಿ ನೀರು ಹರಿದು ಬಂದಿದ್ದು ಬರಿದಾಗಿದ್ದ ಮಲಪ್ರಭಾ ನದಿ ಮತ್ತೆ ಒಡಲು ತುಂಬಿಕೊಳ್ಳುತ್ತಿದೆ. ಮಳೆ ಇಲ್ಲದೇ ಪಟ್ಟಣದ ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದು ನೀರು ಬಂದು ಪರದಾಡುವುದು ತಪ್ಪಿತು ಎನ್ನುವ ಸಮಾಧಾನವಾಗಿದೆ.

ಮಳೆ ಇಲ್ಲದೇ ಪರಿಸ್ಥಿತಿ ಹೀಗೇ ಮುಂದುವರೆದರೆ ಕುಡಿಯುವ ನೀರಿಗೂ ಪರದಾಡ ಬೇಕಿತ್ತು. ಹಳ್ಳಿಗಳಲ್ಲಿ ದನಕರುಗಳಿಗೆ ನೀರು ಮೇವಿಲ್ಲದೇ ಆಗಲೇ ಬಿಸಿ ತಟ್ಟಿತ್ತು. ಇನ್ನೇನು ಪೂರ್ತಿ ಬರಗಾಲ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದುಕೊಳ್ಳುತ್ತಿರುವಾಗಲೇ ಮಳೆರಾಯ ಕೃಪೆ ತೋರಿ ಜನರ ಆತಂಕ ದೂರ ಮಾಡಿದ್ದಾನೆ. ಜೂನ ಕೊನೆಯಲ್ಲಿ ಮಳೆ ಆರಂಭವಾಗಿದ್ದು ಸಂಭ್ರಮಕ್ಕೆ ಕಾರಣವಾಗಿದೆ.

ಎರಡು ದಿನಗಳ ಮಳೆಯಿಂದ ಜನ ಮತ್ತೆ ಮಳೆರಾಯನ ಅರ್ಭಟಕ್ಕೆ ಖುಷಿಯಾಗಿದ್ದಾರೆ. ರೈತರು ಬೆಳೆಗಳು ಬದುಕಿದವು ಎನ್ನುವ ಸಮಾಧಾನದ ಉಸಿರು ಬಿಟ್ಟಿದ್ದಾರೆ. ತಾಲೂಕಿನ ಕಣಕುಂಬಿ ಮತ್ತು ಜಾಮಗಾಂವ ಅರಣ್ಯ ಪ್ರದೇಶದಲ್ಲಿ ಮಳೆ ಸತತವಾಗಿ ಬಿಳುತ್ತಿದ್ದು ಜನರಿಗೆ ದೈನಂದಿನ ಕೆಲಸಗಳಿಗೆ ಅಡಚಣೆಯಾಗಿದೆ. ಶುಕ್ರವಾರ ಖಾನಾಪುರ ಪಟ್ಟಣದಲ್ಲಿ 20.8 ಮಿಮೀ ಮಳೆಯಾದರೆ ಕಣಕುಂಬಿಯಲ್ಲಿ 103.4 ಮಿಮೀ ಮಳೆಯಾಗಿದೆ. ನಾಗರಗಾಳಿ 22.2, ಬೀಡಿ 11.8, ಕಕ್ಕೇರಿ 9.6, ಅಸೋಗಾ 27.0, ಲೋಂಡಾ ರೇಲ್ವೆ ಸ್ಟೇಶನ್‌ 28.0, ಲೋಂಡಾ ಪಿಡ್ಲೂಡಿ 35.0, ಜಾಂಬೋಟಿ 46.0 ಮಿಮೀ ಮಳೆಯಾದ ವರದಿ ಇದೆ. ಶನಿವಾರ ಮಳೆ ಸತತವಾಗಿ ಹಿಡಿದಿದ್ದು ಶಾಲಾ ಮಕ್ಕಳಿಗೆ ನಿತ್ಯ ಓಡಾಡುವ ಪ್ರವಾಸಿಗರಿಗೆ ತೊಂದರೆಯಾಯಿತು.

ಮಳೆಯ ಅಭಾವದಿಂದ ಕೊಳವೆ ಬಾವಿ ಮತ್ತು ಬಾವಿಗಳಲ್ಲಿ ನೀರಿನ ಅಭಾವ ಎದ್ದು ಕಾಣಿಸುತ್ತಿತ್ತು. ಜಾಂಬೋಟಿ ಲೋಂಡಾ ನಾಗರಗಾಳಿಯಲ್ಲಿ ಮಳೆ ಗದ್ದೆ ಕೆಲಸಗಳಿಗೆ ಅಡ್ಡಿಯಾಗಿದೆ. ಅರಣ್ಯ ಪ್ರದೇಶದಲ್ಲಿ ಜನರು ಮಳೆಯಿಂದ ಹೊರಗೆ ಓಡಾಡುವದು ಕಷ್ಟವಾಗಿದೆ. ಮಳೆರಾಯನ ಅರ್ಭಟ ಜನರ ಮೊಗದಲ್ಲಿ ಸಂತಸ ಮೂಡಿಸಿದ್ದು ಮಳೆ ಹೀಗೆ ಮುಂದುರೆಯಲಿ ಎನ್ನುವುದು ಜನರ ಪ್ರಾರ್ಥನೆಯಾಗಿದೆ.

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.