Udayavni Special

ಹದಗೆಟ್ಟ ರಾಷ್ಟ್ರೀಯ ಹೆದ್ದಾರಿ

ಅಂಬೇಡ್ಕರ್‌ ವೃತ್ತದಿಂದ 20 ಮೀಟರ್‌ ಉದ್ದದ ರಸ್ತೆ ಸಂಪೂರ್ಣ ಹಾಳು

Team Udayavani, Oct 11, 2020, 7:35 PM IST

ballary-tdy-1

ಸಿರುಗುಪ್ಪ: ನಗರದಲ್ಲಿ ಹಾದುಹೋಗುವ 150 ಎ ಚಾಮರಾಜನಗರ-ಬೀದರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ನಗರದ ಅಂಬೇಡ್ಕರ್‌ ವೃತ್ತದಿಂದ 20ಮೀಟರ್‌ ಉದ್ದದ ರಸ್ತೆಯು ತೀವ್ರವಾಗಿಹದಗೆಟ್ಟು ಹೋಗಿದ್ದು, ಇಲ್ಲಿ ವಾಹನಗಳು ಸಂಚರಿಸಲು ತೀವ್ರ ತೊಂದರೆ ಯಾಗಿದ್ದು, ತಗ್ಗುದಿನ್ನೆಗಳಿಂದ ಕೂಡಿದ ರಸ್ತೆಯಲ್ಲಿ ನರ್ತಿಸುತ್ತ ಹೋಗುವುದು ಸಾಮಾನ್ಯವಾಗಿದೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಈ ವೃತ್ತದ ಸುತ್ತಮುತ್ತ ರಸ್ತೆಯಲ್ಲಿ ತಗ್ಗುದಿನ್ನೆಗಳು ಬೀಳುವುದು ಸಾಮಾನ್ಯವಾಗಿದೆ. ಇದರಿಂದಾಗಿ ಮಳೆಗಾಲದಲ್ಲಿತಗ್ಗುದಿನ್ನೆಗಳಲ್ಲಿ ವಾಹನ ಸವಾರರು, ಸರ್ಕಸ್‌ಮಾಡುತ್ತ ವಾಹನ ಚಲಾಯಿಸುತ್ತಾರೆ, ಸ್ವಲ್ಪ ಆಯತಪ್ಪಿದರೂ ನೆಲಕ್ಕೆ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿದೆ. ಅಲ್ಲದೆ ಈ ರಸ್ತೆಯ ಅಕ್ಕಪಕ್ಕದಲ್ಲಿರುವ ಅಂಗಡಿಗಳಿಗೂಧೂಳು ನಿರಂತರವಾಗಿ ಆವರಿಸುತ್ತಿದ್ದು, ಅಂಗಡಿ ಮಾಲೀಕರು ಅಸ್ತಮಾ, ಕೆಮ್ಮು ಮುಂತಾದ ಕಾಯಿಲೆಗಳಿಂದ ನರಳುತ್ತಿದ್ದಾರೆ.

ಹೇಳಿಕೇಳಿ ಇದು ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ 5 ಸಾವಿರಕ್ಕೂ ಹೆಚ್ಚು ಭಾರಿ ಸರಕು ಸಾಗಿಸುವ ಲಾರಿಗಳು, ಬಸ್‌ಗಳು, ಲಘುವಾಹನಗಳು, ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದು, ರಸ್ತೆಯು ಮತ್ತಷ್ಟು, ಇನ್ನಷ್ಟು ಹದಗೆಡಲು ಕಾರಣವಾಗಿದೆ. ಆದರೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಇಲ್ಲಿ ಕೇವಲ ಗುಂಡಿ ಮುಚ್ಚುವ ಕೆಲಸ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಭಾರಿವಾಹನಗಳ ಓಡಾಟದಿಂದ ಮತ್ತೆ ಮತ್ತೆ ಗುಂಡಿಗಳು ಬೀಳುವುದು ಮಾಮೂಲಾಗಿದೆ. ರಸ್ತೆಗೆ ಹಾಕಿದ್ದ ಸಂಪೂರ್ಣಡಾಂಬರ್‌ ಕಿತ್ತುಹೋಗಿದ್ದು, ಜಲ್ಲಿಕಲ್ಲುಗಳು ಕಾಣಿಸಿಕೊಂಡಿದ್ದು, ಭಾರಿ ವಾಹನಗಳು ಸಂಚರಿಸುವಾಗಟೈರ್‌ ಅಡಿಯಿಂದ ಜಲ್ಲಿಕಲ್ಲುಗಳು ದ್ವಿಚಕ್ರವಾಹನ ಸವಾರರಿಗೆ ಸಿಡಿದು ಅನೇಕರು ಗಾಯಗೊಂಡ ಘಟನೆಗಳು ನಡೆದಿವೆ.

ಸಿಸಿ ರಸ್ತೆ ನಿರ್ಮಾಣಕ್ಕೆ ಒತ್ತಾಯ: ಈ ವೃತ್ತದಲ್ಲಿ ಪದೇ ಪದೇ ಡಾಂಬರ್‌ ಕಿತ್ತುಹೋಗುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ಅನಾನೂಕೂಲವಾಗುತ್ತಿದೆ. ಆದ್ದರಿಂದ ಇಲ್ಲಿ ಸಿ.ಸಿ.ರಸ್ತೆಯನ್ನು ನಿರ್ಮಾಣ ಮಾಡಿದರೆಅನುಕೂಲವಾಗುತ್ತದೆ ಎಂಬುದು ಈಭಾಗದ ಜನರ ಅಭಿಪ್ರಾಯವಾಗಿದೆ.

ಅಂಬೇಡ್ಕರ್‌ ವೃತ್ತದ ಭಾಗದಲ್ಲಿ ವರ್ಷದ 9 ತಿಂಗಳು ರಸ್ತೆಯು ಹದಗೆಟ್ಟು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಇಲ್ಲಿ ಉತ್ತಮವಾದ ಸಿ.ಸಿ.ರಸ್ತೆಯನ್ನು ನಿರ್ಮಾಣ ಮಾಡಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಕಾರಿಗಳು ಕ್ರಮ ಕೈಗೊಳ್ಳಬೇಕು. -ಗಂಗಾಧರ, ಮಲ್ಲಯ್ಯ, ನಿವಾಸಿಗಳು

ನಗರದಲ್ಲಿ ಹದಗೆಟ್ಟಿರುವ ಹೆದ್ದಾರಿಯನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. -ರಾಘವೇಂದ್ರ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಎಇಇ

 

-ಆರ್‌. ಬಸವರೆಡ್ಡಿ ಕರೂರು

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಲಿಕೆಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ

ಕಲಿಕೆಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ

ಸ್ವಾತಿ ಮಳೆ ನೀರಿನ ಬಗೆಬಗೆ ಪ್ರಯೋಜನ

ಸ್ವಾತಿ ಮಳೆ ನೀರಿನ ಬಗೆಬಗೆ ಪ್ರಯೋಜನ

ಪುಲ್ವಾಮಾ ಈಗ ಪೆನ್ಸಿಲ್‌ ಸ್ಲೇಟ್‌ ತಯಾರಿಕೆ ತಾಣ

ಪುಲ್ವಾಮಾ ಈಗ ಪೆನ್ಸಿಲ್‌ ಸ್ಲೇಟ್‌ ತಯಾರಿಕೆ ತಾಣ

ಮುಂದಿನ ಸಿಎಂ ಹೊಸ ಲೆಕ್ಕಾಚಾರ; ಕಾಂಗ್ರೆಸ್‌ನಲ್ಲಿ ಅಚ್ಚರಿಯ ಪ್ರಸ್ತಾವನೆ

ಮುಂದಿನ ಸಿಎಂ ಹೊಸ ಲೆಕ್ಕಾಚಾರ; ಕಾಂಗ್ರೆಸ್‌ನಲ್ಲಿ ಅಚ್ಚರಿಯ ಪ್ರಸ್ತಾವನೆ

ಬಲವಾದ ಗಾಳಿ ಭದ್ರವಾಗಿ ಬೇರೂರಲು ಸಿಕ್ಕಿದ ಅವಕಾಶ!

ಬಲವಾದ ಗಾಳಿ ಭದ್ರವಾಗಿ ಬೇರೂರಲು ಸಿಕ್ಕಿದ ಅವಕಾಶ!

BSY

ಪದವಿಗೆ ಆನ್‌ಲೈನ್‌ ಕಲಿಕೆ ವೇದಿಕೆ; ನ. 17ರಂದು ಮುಖ್ಯಮಂತ್ರಿ ಬಿಎಸ್‌ವೈ ಚಾಲನೆ

ದೇಶದಲ್ಲೇ ಮೊದಲ ಬಾರಿಗೆ ಜಾರಿಯ ಹೆಗ್ಗಳಿಕೆ

ದೇಶದಲ್ಲೇ ಮೊದಲ ಬಾರಿಗೆ ಜಾರಿಯ ಹೆಗ್ಗಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ballary-tdy-1

ಮಸಣ ಕಾರ್ಮಿಕರನ್ನು ನೌಕರರೆಂದು ಪರಿಗಣಿಸಿ

Ballary-tdy-1

ಪ್ರಸ್ತುತ ದೇಶದ ರಾಜಕಾರಣ ಅಸ್ತವ್ಯಸ್ತ

Ballary-tdy-1

ಕುಡಿಯುವ ನೀರು ಪೂರೈಸಲು ಆಗ್ರಹ

Ballary-tdy-2

ಪೊಲೀಸರ ಕಾಯಕ ನಿಷ್ಠೆ ಶ್ಲಾಘನೀಯ

BALLARY-TDY-1

9-10ನೇ ತರಗತಿವರೆಗೂ ಆರ್‌ಟಿಇ ಕಾಯ್ದೆ ವಿಸ್ತರಿಸಿ

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ಕಲಿಕೆಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ

ಕಲಿಕೆಗಾಗಿ ಸ್ವಾಭಿಮಾನಿ ವಿದ್ಯಾರ್ಥಿಯ ಕೂಲಿ

ಸ್ವಾತಿ ಮಳೆ ನೀರಿನ ಬಗೆಬಗೆ ಪ್ರಯೋಜನ

ಸ್ವಾತಿ ಮಳೆ ನೀರಿನ ಬಗೆಬಗೆ ಪ್ರಯೋಜನ

ಪುಲ್ವಾಮಾ ಈಗ ಪೆನ್ಸಿಲ್‌ ಸ್ಲೇಟ್‌ ತಯಾರಿಕೆ ತಾಣ

ಪುಲ್ವಾಮಾ ಈಗ ಪೆನ್ಸಿಲ್‌ ಸ್ಲೇಟ್‌ ತಯಾರಿಕೆ ತಾಣ

ಮುಂದಿನ ಸಿಎಂ ಹೊಸ ಲೆಕ್ಕಾಚಾರ; ಕಾಂಗ್ರೆಸ್‌ನಲ್ಲಿ ಅಚ್ಚರಿಯ ಪ್ರಸ್ತಾವನೆ

ಮುಂದಿನ ಸಿಎಂ ಹೊಸ ಲೆಕ್ಕಾಚಾರ; ಕಾಂಗ್ರೆಸ್‌ನಲ್ಲಿ ಅಚ್ಚರಿಯ ಪ್ರಸ್ತಾವನೆ

ಬಲವಾದ ಗಾಳಿ ಭದ್ರವಾಗಿ ಬೇರೂರಲು ಸಿಕ್ಕಿದ ಅವಕಾಶ!

ಬಲವಾದ ಗಾಳಿ ಭದ್ರವಾಗಿ ಬೇರೂರಲು ಸಿಕ್ಕಿದ ಅವಕಾಶ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.