ಪಪಂ ಆಯವ್ಯಯದ ಪೂರ್ವಭಾವಿ ಸಭೆ


Team Udayavani, Mar 18, 2020, 6:07 PM IST

18-March-30

ಕೂಡ್ಲಿಗಿ: ಕೂಡ್ಲಿಗಿ ಪಪಂಯ 2020-21ನೇ ಸಾಲಿನ ಆಯವ್ಯಯ ಪೂರ್ವಸಿದ್ಧತೆ ಸಭೆ ತಹಶೀಲ್ದಾರ್‌ ಮಹಾಬಲೇಶ್ವರ ಅವರ ನೇತೃತ್ವದಲ್ಲಿ ನಡೆಯಿತು.

ಎಸ್‌ಎಫ್‌ಸಿ ಅನುದಾನ 69 ಲಕ್ಷ ಹಣವನ್ನು ಆಯವ್ಯಯದಲ್ಲಿ ಯಾವ ರೀತಿ ಅನುದಾನವನ್ನು ಮೀಸಲಿಡಬೇಕೆಂದು ಸಭೆಯಲ್ಲಿ ಚರ್ಚಿಸಲಾಯಿತು. 15ನೇ ಹಣಕಾಸು ಯೋಜನೆಯ 3.16 ಕೋಟಿ ಹಣವನ್ನು ಮೀಸಲಿರಿಸಲು ನಿರ್ಧರಿಸಿದ್ದು, ವಿವಿಧ ಯೋಜನೆಗಳ ಬಗ್ಗೆ ಸಭೆಯಲ್ಲಿ ಹಣ ಮೀಸಲಿರಿಸಲು ಚರ್ಚಿಸಲಾಯಿತು.

ಆಯವ್ಯಯ ಪೂರ್ವಭಾವಿ ಸಭೆಯಲ್ಲಿ ನೂತನ ಪಟ್ಟಣ ಪಂಚಾಯ್ತಿ ಸದಸ್ಯರು ಪಟ್ಟಣದ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಕುಡಿಯುವ ನೀರಿನ ಸಮಸ್ಯೆ ಬಹುದೇಕ ಎಲ್ಲಾ ವಾರ್ಡ್‌ಗಳಲ್ಲಿದ್ದು 2 ದಿನ ಅಥವಾ 3 ದಿನಗಳಿಗೊಮ್ಮೆ ನೀರು ಬರುತ್ತಿರುವುದ್ದರಿಂದ ಜನತೆಗೆ ಈಗ ಕುಡಿಯುವ ನೀರಿನ ಸಮಸ್ಯೆ ಶುರುವಾಗಿದೆ ಎಂದು ಪ.ಪಂ ಸದಸ್ಯ ಸಚಿನ್‌ ಕುಮಾರ್‌ ಸಭೆಯಲ್ಲಿ ಪ್ರಸ್ತಾಪಿಸಿದರು.

ಪ.ಪಂ ಸದಸ್ಯೆ ಜಯಮ್ಮ ಮಾತನಾಡಿ, ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಊರಮ್ಮ ಜಾತ್ರೆ ಇದ್ದು, ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಬರುತ್ತದೆ. ಹೀಗಾಗಿ ಬಡೇಲಡಕು, ಬಂಡೆಬಸಾಪುರ, ಗೋವಿಂದಗಿರಿ ಸಮೀಪವಿರುವ ಕೊಳವೆಬಾವಿಗಳನ್ನು ಸರಿಪಡಿಸಿ ಕುಡಿಯುವ ನೀರಿನ ಸರಬರಾಜು ಮಾಡಲು ಕ್ರಮಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿಗಳಿಗೆ ತಿಳಿಸಿದರು.

ಪಟ್ಟಣದ ಬಸ್‌ ನಿಲ್ದಾಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ತಾಲೂಕಿನ ಜನತೆಗೆ ಅಲ್ಲದೇ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಪ್ರಯಾಣಿಕರಿಗೆ ಅನುಕೂಲವಾಗಲು ಮೊದಲು ಕುಡಿಯವ ನೀರಿನ ಸರಬರಾಜು ಮಾಡಬೇಕೆಂದು ಪಪಂ ಸದಸ್ಯ ತ್ರಿಮೂರ್ತಿ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಪ.ಪಂ ಮುಖ್ಯಾಧಿಕಾರಿ ಪಕ್ರುದ್ದೀನ್‌ ಕೂಡಲೇ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಪಟ್ಟಣ ಪಂಚಾಯ್ತಿ ಸದಸ್ಯ ಕೆ.ಈಶಪ್ಪ ಅವರು, ಪಟ್ಟಣದ ವಿವಿಧ ಚರಂಡಿಗಳ, ಬೀದಿದೀಪಗಳ ಕುರಿತು ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿದರು.

ಪಟ್ಟಣದಲ್ಲಿ ಹಂದಿಗಳ ಹಾವಳಿ ಜಾಸ್ತಿಯಾಗಿದ್ದು, ಇವುಗಳ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡು ಪಟ್ಟಣವನ್ನು ಶುಚಿಯಾಗಿಡಲು ಕ್ರಮಕೈಗೊಳ್ಳಬೇಕು ಎಂದರು.

ತಹಶೀಲ್ದಾರ್‌ ಮಹಾಬಲೇಶ್ವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಾಧಿಕಾರಿ ಫಕ್ರುದ್ದೀನ್‌, ಕಂದಾಯ ಅಧಿಕಾರಿ ರಾಘವೇಂದ್ರ, ಲೆಕ್ಕ ಪರಿಶೋಧಕ ಗುರುರಾಜ, ಪ.ಪಂ ಸದಸ್ಯರಾದ ತಳಾಸ ವೆಂಕಟೇಶ, ಸಚಿನ್‌ ಕುಮಾರ್‌, ಬಿ.ಎಂ.ತ್ರಿಮೂರ್ತಿ, ಚಂದ್ರು ಪಿ, ಕೆ.ಈಶಪ್ಪ, ಶುಕುರ್‌, ಪೂರ್ಯಾನಾಯ್ಕ, ಬಾಸುನಾಯ್ಕ ಹಾಗೂ ಕೊತ್ಲಪ್ಪ ಎಚ್‌. ಸೇರಿದಂತೆ ಪಟ್ಟಣ ಪಂಚಾಯ್ತಿ ಸದಸ್ಯರು ಭಾಗವಹಿಸಿದ್ದರು.

ಟಾಪ್ ನ್ಯೂಸ್

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಹಿನ್ನೆಲೆ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

1-aasdad

ಆಡಳಿತಕ್ಕೆ ಚುರುಕು ಮುಟ್ಟಿಸಬೇಕು, ಜನರಿಗೆ ಯೋಜನೆಗಳು ತಲುಪಬೇಕು : ಸಿಎಂ

1-asdasdas

ಟ್ರಯಲ್ಸ್ ವೇಳೆ ರೆಫ್ರಿ ಮೇಲೆ ಹಲ್ಲೆ: ಕುಸ್ತಿಪಟು ಸತೇಂದರ್ ಮಲಿಕ್ ಗೆ ಜೀವಾವಧಿ ನಿಷೇಧ

ಕುಂದಾಪುರ: ವೃದ್ಧೆಯ ಸರ ಕಳವುಗೈದ ಆರೋಪಿ ಬಂಧನ

ಕುಂದಾಪುರ: ವೃದ್ಧೆಯ ಸರ ಕಳವುಗೈದ ಆರೋಪಿ ಬಂಧನ

ಉಳ್ಳಾಲ : ಮಳೆಗೆ ‌ಕುಸಿದು ಬಿದ್ದ ಶಾಲೆಯ ಹಳೆ ಕಟ್ಟಡದ ಮೇಲ್ಛಾವಣಿ, ತಪ್ಪಿದ ಭಾರಿ ಅನಾಹುತ

ಉಳ್ಳಾಲ : ಮಳೆಗೆ ‌ಕುಸಿದು ಬಿದ್ದ ಶಾಲೆಯ ಹಳೆ ಕಟ್ಟಡದ ಮೇಲ್ಛಾವಣಿ, ತಪ್ಪಿದ ಭಾರಿ ಅನಾಹುತ

1-asdadasd

ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

ಮದ್ಯ ಮಾರಾಟಗಾರರಿಗೆ ಶುಭ ಸುದ್ದಿ : ಇ-ಇಂಡೆಂಟಿಂಗ್ ಸಮಸ್ಯೆ ನಿವಾರಣೆಗೆ ಕ್ರಮ ; ಅಬಕಾರಿ ಸಚಿವ

ಮದ್ಯ ಮಾರಾಟಗಾರರಿಗೆ ಶುಭ ಸುದ್ದಿ : ಇ-ಇಂಡೆಂಟಿಂಗ್ ಸಮಸ್ಯೆ ನಿವಾರಣೆಗೆ ಕ್ರಮ ; ಅಬಕಾರಿ ಸಚಿವಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jatha

ಡೆಂಘೀ ತಡೆಗೆ ಸಹಭಾಗಿತ್ವ ಅಗತ್ಯ

3hijab

ಹಿಜಾಬ್‌: ಪರೀಕ್ಷೆ ಬರೆಯದೆ ಇಬ್ಬರು ವಾಪಸ್

harapanahalli

ಶಾಲಾ ಕೊಠಡಿ ಶಿಥಿಲ: ಭಯದಲ್ಲೇ ಪಾಠ!

gul-mohar

ಮನಸೆಳೆಯುತ್ತಿವೆ ಗುಲ್‌ಮೋಹರ್‌ ಹೂಗಳು

kuragodu

ಮೂಲ ಸೌಕರ್ಯ ವಂಚಿತ ಸಿದ್ಧಮ್ಮನಹಳ್ಳಿ ಶಾಲೆ

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

ಹೊಸ ಸೇರ್ಪಡೆ

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ ಹಿನ್ನೆಲೆ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ದೋಷ: ಜಿಎಸ್‌ಟಿ ಸಲ್ಲಿಕೆಗೆ ಅವಧಿ ವಿಸ್ತರಣೆ?

ಅರಣ್ಯ ಭೂಮಿ ಅತಿಕ್ರಮಣದಾರರ ಮೇಲೆ ಅರಣ್ಯ ಇಲಾಖೆಯ ನಿರಂತರ ದೌರ್ಜನ್ಯ : ಆರೋಪ

ಅರಣ್ಯ ಭೂಮಿ ಅತಿಕ್ರಮಣದಾರರ ಮೇಲೆ ಅರಣ್ಯ ಇಲಾಖೆಯ ನಿರಂತರ ದೌರ್ಜನ್ಯ : ಆರೋಪ

1-aasdad

ಆಡಳಿತಕ್ಕೆ ಚುರುಕು ಮುಟ್ಟಿಸಬೇಕು, ಜನರಿಗೆ ಯೋಜನೆಗಳು ತಲುಪಬೇಕು : ಸಿಎಂ

ಹುಣಸೂರು: ತಟ್ಟೆಕೆರೆ ಗ್ರಾ.ಪಂ.ಅಧ್ಯಕ್ಷರಾಗಿ ಎ.ಎಂ.ದೇವರಾಜ್ ಅವಿರೋಧ ಆಯ್ಕೆ

ಹುಣಸೂರು: ತಟ್ಟೆಕೆರೆ ಗ್ರಾ.ಪಂ.ಅಧ್ಯಕ್ಷರಾಗಿ ಎ.ಎಂ.ದೇವರಾಜ್ ಅವಿರೋಧ ಆಯ್ಕೆ

1-asdasdas

ಟ್ರಯಲ್ಸ್ ವೇಳೆ ರೆಫ್ರಿ ಮೇಲೆ ಹಲ್ಲೆ: ಕುಸ್ತಿಪಟು ಸತೇಂದರ್ ಮಲಿಕ್ ಗೆ ಜೀವಾವಧಿ ನಿಷೇಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.