ಬಸ್‌ನಿಲ್ದಾಣದ ಶೌಚಾಲಯದಲ್ಲಿಸ್ವಚ್ಛತೆ ಮಾಯ!

ಮೂಗು ಮುಚ್ಚಿಕೊಂಡೇ ಶೌಚ ಮಾಡುವ ಸ್ಥಿತಿ ಪ್ರಯಾಣಿಕರದ್ದುಶುಚಿತ್ವಕ್ಕೆ ಆದ್ಯತೆ ನೀಡಲು ಒತ್ತಾಯ

Team Udayavani, Mar 19, 2020, 12:54 PM IST

19-March-9

ಸಿರುಗುಪ್ಪ: ಎಲ್ಲೆಡೆ ಕೊರೊನಾ ರೋಗದ ಭೀತಿಯಿಂದ ಜನರು ತತ್ತರಿಸುತ್ತಿದ್ದು, ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿರುವ ಹಳೇ ಶೌಚಾಲಯದ ಸ್ವತ್ಛತೆಗೆ ಇಲ್ಲಿನ ಅಧಿಕಾರಿಗಳು ಸೂಕ್ತ ಗಮನ ಹರಿಸದ ಕಾರಣ ದುರ್ನಾತ ಗಾಳಿಯಲ್ಲಿ ತೇಲಿ ಬಂದು ಪ್ರಯಾಣಿಕರ ಮೂಗಿಗೆ ರಾಚುತ್ತಿದೆ.

ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು, ವಿದ್ಯಾರ್ಥಿಗಳು, ಪ್ರಯಾಣ ಮಾಡಲು ಇಲ್ಲಿ ಬಂದು ಹೋಗುತ್ತಿರುತ್ತಾರೆ. ರಾಜ್ಯದ ಬೇರೆ ಬೇರೆ ಸ್ಥಳಗಳಿಗೆ ಈ ಮೂಲಕ ಹಾದುಹೋಗುವ ಬಸ್‌ಗಳು ಸಹ ಇಲ್ಲಿ ಕೆಲ ಕಾಲ ಬಂದು ನಿಂತು ಹೊರಡುತ್ತವೆ. ಈ ರೀತಿ ಇಲ್ಲಿಗೆ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಇದೆ.

ಇಲ್ಲಿ ಬಸ್‌ ಪ್ರಯಾಣ ಮಾಡುವ ಪ್ರಯಾಣಿಕರ ಪೈಕಿ ಹಲವರು ಮಲಮೂತ್ರ ವಿಸರ್ಜನೆಗಾಗಿ ನಿಗದಿತ ಶುಲ್ಕ ಪಾವತಿಸಿ ಶೌಚಾಲಯ ಬಳಸಿಕೊಳ್ಳುತ್ತಾರೆ. ಆದರೆ ಈ ಶೌಚಾಲಯವನ್ನು ಸೂಕ್ತವಾಗಿ ಸ್ವಚ್ಛಗೊಳಿಸಿ ಸುವ್ಯವಸ್ಥಿತವಾಗಿ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಇಲ್ಲಿನ ಇಲಾಖಾ ಅಧಿಕಾರಿಗಳು ಮಾಡದಿರುವ ಕಾರಣ ಈ ಶೌಚಾಲಯದೊಳಗೆ ವಿಪರೀತ ದುರ್ನಾತ ತುಂಬಿಕೊಂಡು ಅದರ ದುರ್ಗಂಧ ಗಾಳಿಯಲ್ಲಿ ತೇಲಿಬಂದು ಪ್ರಯಾಣಿಕರು ಮತ್ತು ಸಾರ್ವಜನಿಕರು ಮೂಗು ಮುಚ್ಚಿಕೊಳ್ಳುವಂಥ ವಾತಾವರಣ ಸೃಷ್ಟಿಸಿದೆ.

ಒಂದೆಡೆ ಸ್ವಚ್ಛ ಭಾರತ ಲಾಂಛನದ ಘೋಷಣೆಯ ವಾಕ್ಯವನ್ನು ಬರೆಯಲಾಗಿದೆ, ಆದರೆ ಇದಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ಇಲ್ಲಿನ ಶೌಚಾಲಯ ಶುಚಿತ್ವವಿಲ್ಲದೆ ಕೆಟ್ಟವಾಸನೆ ಹರಡುತ್ತಿದೆ. ಈಗಾಗಲೇ ಕೊರೊನಾ ವೈರಸ್‌ ರೋಗದ ಭೀತಿಯಿಂದ ಮುಖಕ್ಕೆ ಮಾಸ್ಕ್ಹಾ ಕಿಕೊಂಡು ಮೂಗು ಮುಚ್ಚಿಕೊಂಡು ಒಡಾಡುತ್ತಿರುವ ಇಲ್ಲಿನ ಜನರು ಬಸ್‌ನಿಲ್ದಾಣದಲ್ಲಿನ ಶೌಚಾಲಯದ ದುರ್ನಾತಕ್ಕೆ ಬಟ್ಟೆಯಿಂದ ಮೂಗು ಮುಚ್ಚಿಕೊಂಡು ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮೂಗು ಮುಚ್ಚಿಕೊಂಡು ಈ ದುರ್ನಾತ ಮೂಗಿಗೆ ಬಡಿಯುತ್ತಿರುವುದರಿಂದ ಇಲ್ಲಿ ಅಶುಚಿತ್ವ ಎದ್ದು ಕಾಣುತ್ತಿದೆ. ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಪ್ರಯಾಣಿಕರಿಗೆ ಕೊರೊನಾ ವೈರಸ್‌ ರೋಗದ ಜೊತೆಗೆ ಬೇರೆ ಬೇರೆ ರೀತಿಯ ಖಾಯಿಲೆಗಳು ಬರುವ ಸಾಧ್ಯತೆ ಇದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇಲ್ಲಿನ ಶೌಚಾಲಯದ ಶುಚಿತ್ವಕ್ಕೆ ಆದ್ಯತೆ ನೀಡಿ ಅನುಕೂಲ ಮಾಡಿಕೊಡಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಬಸ್‌ ನಿಲ್ದಾಣದಲ್ಲಿರುವ ಹಳೆ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲ ಎನ್ನುವ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿದ್ದು, ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಕೆ.ಎಂ. ತಿರುಮಲೇಶ,
ಸಿರುಗುಪ್ಪ ಸಾರಿಗೆ ಡಿಪೋ ಅಧಿಕಾರಿ

„ಆರ್‌.ಬಸವರೆಡ್ಡಿ ಕರೂರು

ಟಾಪ್ ನ್ಯೂಸ್

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಪೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

Gundlupete: ಕಚೇರಿಯ ಕೊಠಡಿಯಲ್ಲೇ ನೇಣಿಗೆ ಶರಣಾದ ಫೈನಾನ್ಸ್ ಸಿಬ್ಬಂದಿ… ಕಾರಣ ನಿಗೂಢ

protest

BJP protest: ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

15-subrahmanya

ರಾಜ್ಯ ಸರಕಾರ ಜನಹಿತ ಮರೆತಿದೆ- ಕುಕ್ಕೆಯಲ್ಲಿ ಮಾಜಿ ಸಿಎಂ ಬಿ.ಎಸ್.ವೈ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

Mudhol: ಸಿಲಿಂಡರ್ ಸ್ಫೋಟಗೊಂಡು ಹಾರಿ ಹೋದ ಮನೆಯ ಮೇಲ್ಛಾವಣಿ… ತಪ್ಪಿದ ಅನಾಹುತ

14-uv-fusion

UV Fusion: ನೆನಪುಗಳು, ಭಾವನೆಗಳು ಸಮತೋಲನ ಆಗಿರಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khandre

KIOCL ಗೆ ದೇವದಾರಿ ಗಣಿಗಾರಿಕೆ ಭೂಮಿ ಹಸ್ತಾಂತರಿಸದಂತೆ ಸಚಿವ ಖಂಡ್ರೆ ಪತ್ರ

Bellary ಜಿಲ್ಲಾ ಉಸ್ತುವಾರಿ ಹೊಣೆ ಜಮೀರ್‌ ಅಹ್ಮದ್‌ ಖಾನ್‌ ಹೆಗಲಿಗೆ

Bellary ಜಿಲ್ಲಾ ಉಸ್ತುವಾರಿ ಹೊಣೆ ಜಮೀರ್‌ ಅಹ್ಮದ್‌ ಖಾನ್‌ ಹೆಗಲಿಗೆ

25

ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆ ಬಗ್ಗೆ 24ಕ್ಕೆ ಸಭೆ: ಸಿಎಂ

ದೇವದಾರಿ ಗಣಿಗಾರಿಕೆಗೆ ಪರಿಶೀಲಿಸಿ ಕ್ರಮ: ಸಿಎಂ

ದೇವದಾರಿ ಗಣಿಗಾರಿಕೆಗೆ ಪರಿಶೀಲಿಸಿ ಕ್ರಮ: ಸಿಎಂ

ಬಳ್ಳಾರಿ: ವಿರೋಧ ಲೆಕ್ಕಿಸದೇ ದೇವದಾರಿ ಗಣಿಗೆ ಅನುಮತಿ!

ಬಳ್ಳಾರಿ: ವಿರೋಧ ಲೆಕ್ಕಿಸದೇ ದೇವದಾರಿ ಗಣಿಗೆ ಅನುಮತಿ!

MUST WATCH

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

udayavani youtube

“ನನ್ನಿಂದ ತಪ್ಪಾಗಿದೆ ಸರ್‌ ಆದರೆ..” | ಸಪ್ತಮಿ ಅವರದ್ದು ಎನ್ನಲಾದ Audio

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

ಹೊಸ ಸೇರ್ಪಡೆ

18-koratagere

Koratagere ಬಂದ್‌ಗೆ ಕರೆ ನೀಡಿದ ನೀರಾವರಿ ಸಂಘಟನೆ

Chirathe

Chittapura: ಮೇಯಲು ತೆರಳಿದ್ದ ಹೋರಿ ಮೇಲೆ ಚಿರತೆ ದಾಳಿ

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

ಕೊಹ್ಲಿ, ರೋಹಿತ್ ಕರಿಯರ್ ಮುಗಿಸುವಂತಹ ಷರತ್ತು ಹಾಕಿದ ಗೌತಿ; ಒಪ್ಪಿಗೆ ಕೊಟ್ತಾ ಬಿಸಿಸಿಐ?

17-uv-fusion

UV Fusion: ಐ (i) ಅಂದ್ರೆ?

16-uv-fusion

Life: ಬದುಕು ಕಟ್ಟಿಕೊಳ್ಳುವುದೇ ಸಾಧನೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.