ತಾಪಂ ಸಾಮಾನ್ಯ ಸಭೆಯಲ್ಲಿ ಕೊರೊನಾ ಚರ್ಚೆ


Team Udayavani, Mar 19, 2020, 2:41 PM IST

19-March-29

ಸಂಡೂರು: ನೂತನ ಸದಸ್ಯರು ಅಧಿಕಾರಕ್ಕೆ ಬಂದು 15 ತಿಂಗಳು ಕಳೆದರೂ ಸಹ ಅಧಿಕಾರಿಗಳು ಅನುಪಾಲನಾ ವರದಿ ನೀಡುತ್ತಿಲ್ಲ. ಈ ಸಭೆಯಲ್ಲಿ ಕೊಡುತ್ತೇವೆ ಎಂದ ಅಧಿಕಾರಿ ಮುಂದಿನ ಸಭೆಗೆ ಬರುವುದಿಲ್ಲ ಏನು ಮಾಡುವುದು ಎಂದು ತಾಲೂಕು ಪಂಚಾಯಿತಿ ತಾಳೂರು ಕ್ಷೇತ್ರದ ಸದಸ್ಯ ಮೇಘನಾಥ ಪ್ರಶ್ನಿಸಿದರು.

ಅವರು ಸೋಮವಾರ ತಾಲೂಕು ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆ ಚರ್ಚೆ ಪ್ರಾರಂಭದಲ್ಲಿಯೇ ಪ್ರಶ್ನಿಸಿ, ಬಹಳಷ್ಟು ಅಧಿ ಕಾರಿಗಳು ಸಭೆಗೆ ಹಾಜರಾಗುತ್ತಿಲ್ಲ. ತಾಳೂರು ಮತ್ತು ಸುತ್ತಲಿನ ಪ್ರದೇಶದಲ್ಲಿ ವಿಪರೀತ ಮಾಲಿನ್ಯವಾಗಿದೆ. ಕೊರೊನಾ ವೈರಸ್‌ ದಾಳಿಯೂ ಹೆಚ್ಚಾಗುತ್ತಿದೆ. ಜಿಂದಾಲ್‌ ಕಂಪನಿಯ ವಿಮಾನ ನಿಲ್ದಾಣ, ಕಂಪನಿ ಕಾರ್ಯಕ್ಕೆ ಹೊರ ರಾಜ್ಯದ ಮತ್ತು ಬೇರೆ ದೇಶದ ಪ್ರಜೆಗಳು ಬರುತ್ತಾರೆ ಕ್ರಮವೇನು ಎಂದು ಪ್ರಶ್ನಿಸಿದರು.

ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ ಉತ್ತರಿಸಿ, ಈಗಾಗಲೇ ಎಲ್ಲ ಪಿಡಿಓಗಳಿಗೆ ಮಾಹಿತಿ ತಿಳಿಸಿದೆ. ಅಲ್ಲದೆ ತಾಲೂಕುಮಟ್ಟದ ಅಧಿಕಾರಿಗಳಿಗೂ ಸಹ ಹೇಳಲಾಗಿದೆ. ಮುಂದಿನ ಹಂತದಲ್ಲಿ ಕ್ರಮ ವಹಿಸಲಾಗುವುದು ಎಂದರು.

ತಾಪಂ ಸದಸ್ಯೆ ಗಂಗಮ್ಮ ಪ್ರಶ್ನಿಸಿ ಎಚ್ಚರಿಕೆ ವಹಿಸಿರುವುದು ಉತ್ತಮವೇ ಸರಿ, ಅದರೆ ಭುಜಂಗನಗರ, ಇತರ ಗ್ರಾಮಗಳಲ್ಲಿ ಚರಂಡಿಗಳು ತುಂಬಿ ತುಳುಕುತ್ತಿವೆ. ವಿಪರೀತ ಸೊಳ್ಳೆಗಳಾಗಿವೆ. ಯಾವಾಗ ಸ್ವಚ್ಛತೆ, ಸ್ವಚ್ಛತೆ ಕೊರತೆಯಿಂದಲೇ ರೋಗ ಹರಡಬಹುದು ಎಂದಾಗ ಇತರ ಸದಸ್ಯರೂ ಸಹ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿಯ ಸಮಸ್ಯೆ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಐ.ಅರ್‌. ಅಕ್ಕಿ ಮಾಹಿತಿ ನೀಡಿ ಸರ್ಕಾರದ ಅದೇಶದಂತೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರೇಮಮೂರ್ತಿ ಮಾಹಿತಿ ನೀಡಿ, ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ರಜೆ ಘೋಷಿಸಿ ಮನೆಗಳಿಗೆ ಆಹಾರ ತಲುಪಿಸುತ್ತಿದ್ದೇವೆ, ಅದೇ ರೀತಿ ಗರ್ಭಿಣಿಯರಿಗೂ ಸಹ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅಂತಿಮವಾಗಿ ಎಲ್ಲ ನೋಡಲ್‌ ಅಧಿ ಕಾರಿಗಳು ಕಡ್ಡಾಯವಾಗಿ ಕಾರ್ಯನಿರ್ವಹಿಸಿ ಪ್ರಗತಿ ಸಾಧಿಸಬೇಕು. ಕೊರೊನಾ ಹರಡುವಿಕೆ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು. ಸಭೆಯಲ್ಲಿ ಅಧ್ಯಕ್ಷೆ ಫರ್ಜಾನ್‌ ಗೌಸ್‌ ಅಜಂ, ತಿರುಕಮ್ಮ ವೆಂಕಟೇಶ್‌, ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಎಲ್ಲಾದರು ಇರು…ಕೆನಡಾ ಸಂಸತ್ ನಲ್ಲಿ ಕನ್ನಡ ಕಲರವ; ವಿಡಿಯೋ ವೈರಲ್

ಎಲ್ಲಾದರು ಇರು…ಕೆನಡಾ ಸಂಸತ್ ನಲ್ಲಿ ಕನ್ನಡ ಕಲರವ; ವಿಡಿಯೋ ವೈರಲ್

ಎರಡು ವರ್ಷಗಳ ಜೈಲುವಾಸದ ನಂತರ ಅಜಂ ಖಾನ್ ಸೀತಾಪುರ್ ಕಾರಾಗೃಹದಿಂದ ಬಿಡುಗಡೆ

ಎರಡು ವರ್ಷಗಳ ಜೈಲುವಾಸದ ನಂತರ ಅಜಂ ಖಾನ್ ಸೀತಾಪುರ್ ಕಾರಾಗೃಹದಿಂದ ಬಿಡುಗಡೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಹಾವೇರಿ ಜಿಲ್ಲೆಯಾದ್ಯಂತ ಮಳೆ ಎಲ್ಲ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

ಪಠ್ಯಪುಸ್ತಕದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ: ಸ್ಪಷ್ಟನೆ ನೀಡಿದ ಸಚಿವ ಕೋಟ

heavy rain; holiday for schools in dharwad

ಮುಂದುವರಿದ ಮಳೆ: ಧಾರವಾಡ ಜಿಲ್ಲೆಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿ

ಹೊಸ ಪ್ರಕರಣ: ಲಾಲು ಪ್ರಸಾದ್ ಯಾದವ್ ಗೆ ಸಂಬಂಧಿಸಿದ 15 ಸ್ಥಳಗಳಲ್ಲಿ ಸಿಬಿಐ ದಾಳಿ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭ

ಐಪಿಎಲ್‌ ಫೈನಲ್‌ ರಾತ್ರಿ 8 ಗಂಟೆಗೆ ಆರಂಭಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

skin-horn

ಚರ್ಮ-ಕೊಂಬು ಮಾರಾಟ: ಇಬ್ಬರ ಬಂಧನ

water

24×7 ಕುಡಿವ ನೀರಿನ ಯೋಜನೆ ವಿಫಲ

wage

ಬಾಕಿ ವೇತನ-ಕೋವಿಡ್‌ ಭತ್ಯೆಗಾಗಿ ನೌಕರರ ಪಟ್ಟು

center

ಸ್ಮಶಾನದ ಅವಶ್ಯಕತೆ ಇದ್ದಲ್ಲಿ ಅರ್ಜಿ ಸಲ್ಲಿಸಿ: ಜಿಲ್ಲಾಧಿಕಾರಿ

ballary

3 ಹೊಸ ತಾಲೂಕು.. ನೂರಾರು ಕೊರತೆ

MUST WATCH

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

udayavani youtube

ಬೆಳಗ್ಗೆ 4 ಗಂಟೆಗೆ ಎದ್ದು ಫಿಶಿಂಗ್ ಕೆಲಸಕ್ಕೆ ಹೋಗುತ್ತಿದ್ದ ಉಡುಪಿಯ ವಿದ್ಯಾರ್ಥಿಗೆ 625 ಅಂಕ

udayavani youtube

ಕೃಷಿ ಚಟುವಟಿಕೆ ಕಂಡು ಖುಷಿ ಪಟ್ಟ ರಾಶಿ ರಾಶಿ ಕೊಕ್ಕರೆಗಳು !!

udayavani youtube

ಶಿವಮೊಗ್ಗದಲ್ಲಿ ರಸ್ತೆ ತುಂಬೆಲ್ಲಾ ನೀರು… ಅಪಾಯಕ್ಕೆ ಅಹ್ವಾನ ನೀಡುತ್ತಿವೆ ಗುಂಡಿಗಳು..

ಹೊಸ ಸೇರ್ಪಡೆ

tobacco

ತಂಬಾಕು ವ್ಯಸನ ನಿಯಂತ್ರ ಣಕ್ಕೆ ಮಾನಿಟರಿಂಗ್‌ ಸ್ಕ್ವ್ಯಾಡ್‌

ಎಲ್ಲಾದರು ಇರು…ಕೆನಡಾ ಸಂಸತ್ ನಲ್ಲಿ ಕನ್ನಡ ಕಲರವ; ವಿಡಿಯೋ ವೈರಲ್

ಎಲ್ಲಾದರು ಇರು…ಕೆನಡಾ ಸಂಸತ್ ನಲ್ಲಿ ಕನ್ನಡ ಕಲರವ; ವಿಡಿಯೋ ವೈರಲ್

6

ಕೆಎಂಎಫ್: ದಾಖಲೆ ಪ್ರಮಾಣದ ಹಾಲು ಉತ್ಪಾದನೆ

udupi1

ಧಾರಾಕಾರ ಮಳೆ: ತಗ್ಗು ಪ್ರದೇಶಗಳಲ್ಲಿ ನೀರು

5

ಎಲ್ಲಾ ಮಕ್ಕಳಿಗೂ ಆಂಗ್ಲ ಮಾಧ್ಯಮ ಶಿಕ್ಷಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.