ಭಾಲ್ಕಿ: ಚನ್ನಬಸವ ಪಟ್ಟದ್ದೇವರ128ನೇ ಜಯಂತ್ಯುತ್ಸವ 22ರಂದು

Team Udayavani, Dec 16, 2017, 12:06 PM IST

ಭಾಲ್ಕಿ: ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಡಿ. 22ರಂದು ಡಾ| ಚನ್ನಬಸವ ಪಟ್ಟದ್ದೇವರ 128ನೇ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಲಿದ್ದು, ವಿಜಯಪುರದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಚಿಂತಕರು, ಖ್ಯಾತ ಸಾಹಿತಿಗಳು, ರಾಜಕೀಯ ಧುರೀಣರು ಪಾಲ್ಗೊಳ್ಳಲಿದ್ದಾರೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು. ಅಂದು ಬೆಳಗ್ಗೆ 6:00ಕ್ಕೆ ಹಿರೇಮಠ ಸಂಸ್ಥಾನದಿಂದ ಚನ್ನಬಸವಾಶ್ರಮದ ವರೆಗೆ ಪಥ ಸಂಚಲನ, ಷಟಸ್ಥಲ್‌ ಧ್ವಜರೋಹಣದ ಬಳಿಕ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಕರಡ್ಯಾಳ ಚನ್ನಬಸವೇಶ್ವರ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ, ಹಳೇ ವಿದ್ಯಾರ್ಥಿಗಳ ಸಮಾವೇಶ, ಚನ್ನಬಸವ ಪಟ್ಟದ್ದೇವರ ವ್ಯಾಪಾರ ಮಳಿಗೆ ಕಟ್ಟಡದ ಶಂಕುಸ್ಥಾಪನೆ, ಜಾನಪದ ಕಲಾ ತಂಡಗಳಿಂದ ವಿವಿಧ ಪ್ರಕಾರದ ಕಲಾ ಪ್ರದರ್ಶನ, ಮಹಾದೇವಮ್ಮ ತಾಯಿ ಮಾರ್ಗದರ್ಶನದಲ್ಲಿ ನಾಟಕ ಪ್ರದರ್ಶನ, ಸಮಾಜದ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ದಿನವೀಡಿ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿವರಿಸಿದರು.

ಜಿಲ್ಲೆಯ ಎಲ್ಲ ಬಸವಾಭಿಮಾನಿಗಳು, ಚಿಂತಕರು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಮಹಾಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ರೇವಣಸಿದ್ದೇಶ್ವರ ಸ್ವಾಮೀಜಿ, ಪ್ರಮುಖರಾದ ಸಿದ್ರಾಮಪ್ಪ ವಂಕೆ, ಸಿದ್ರಾಮಪ್ಪ ಆಣದೂರೆ, ಬಾಬುರಾವ ಜಲದೆ, ಸೋಮನಾಥ ಮುದ್ದಾ ಇದ್ದರು. ಶಾಂತಯ್ಯ ಸ್ವಾಮಿ ಸ್ವಾಗತಿಸಿದರು. ಚಂದ್ರಕಾಂತ ಬಿರಾದಾರ ನಿರೂಪಿಸಿದರು. ವೀರಣ್ಣ ಕುಂಬಾರ ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

  • ಬೀದರ: ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಎಬಿವಿಪಿಯಿಂದ ಕಾಲೇಜು ವಿದ್ಯಾರ್ಥಿನಿಯರಿಗಾಗಿ "ಮಿಷನ್‌ ಸಾಹಸಿ' ಹೆಸರಿನಲ್ಲಿ ಹತ್ತು...

  • ಔರಾದ: ಜಿಲ್ಲಾದ್ಯಂತ ಡಿ.11ರಿಂದ 31ರ ವರೆಗೆ ಶಾಲಾ ಲಸಿಕಾ ಅಭಿಯಾನ ನಡೆಯಲಿದ್ದು, ತಾಲೂಕಿನ ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ...

  • ಔರಾದ: ದೇಶದ ಮೂಲ ಸಂಸ್ಕೃತಿ ಉಳಿಯಬೇಕಾದರೆ ಜನಪದ ಕಲೆಯನ್ನು, ಜಾನಪದ ಸಾಹಿತ್ಯವನ್ನು ಸಂರಕ್ಷಿಸಿ ಬೆಳೆಸುವ ಕಾರ್ಯ ನಡೆಯಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ...

  • ಶಶಿಕಾಂತ ಕೆ.ಭಗೋಜಿ ಹುಮನಾಬಾದ: ಪಟ್ಟಣದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಕಿರಿದಾಗಿದ್ದ ಅನೇಕ ಪ್ರಮುಖ ರಸ್ತೆಗಳನ್ನು ವಿಸ್ತರಣೆಗೊಳಿಸಿದರೂ...

  • ಬೀದರ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಹಿಂದಿನ ಎಲ್ಲ ಕಾಮಗಾರಿಗಳನ್ನು ಬರುವ ಮಾರ್ಚ್‌ದೊಳಗೆ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ...

ಹೊಸ ಸೇರ್ಪಡೆ