Udayavni Special

ನೈಟ್‌ ಕರ್ಫ್ಯೂನಿಂದ ಲಾಭವಿಲ್ಲ: ಸಿದ್ದು

| ಕೋವಿಡ್‌ ನಿಯಮ ಸರ್ಕಾರವೇ ಪಾಲಿಸುತ್ತಿಲ್ಲ | ಸಿಎಂ ಚುನಾವಣೆಗೆ ಏಕೆ ನಿಯಮ ಸಡಿಲಗೊಳಿಸಿದರು?

Team Udayavani, Apr 13, 2021, 1:03 PM IST

ನೈಟ್‌ ಕರ್ಫ್ಯೂನಿಂದ ಲಾಭವಿಲ್ಲ: ಸಿದ್ದು

ಹುಮನಾಬಾದ: ಕೋವಿಡ್‌ ವಿಷಯದಲ್ಲಿ ಸರ್ಕಾರತೆಗೆದುಕೊಂಡಿರುವ ನಿರ್ಣಯಗಳು ಸಮರ್ಪಕವಾಗಿಲ್ಲ. ಲಾಕ್‌ಡೌನ್ ‌ಅಥವಾ ರಾತ್ರಿ ಕರ್ಫ್ಯೂನಿಂದ ಯಾವುದೇ ಲಾಭವಿಲ್ಲ ಎಂದುವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬಸವಕಲ್ಯಾಣ ಉಪ ಚುನಾವಣೆಪ್ರಚಾರಕ್ಕೆ ತೆರಳುವ ಮುನ್ನ ಸೋಮವಾರಪಟ್ಟಣದ ಶಕುಂತಲಾ ಪಾಟೀಲ ವಸತಿ ಶಾಲೆಯಲ್ಲಿನವಸತಿ ಗೃಹಕ್ಕೆ ಭೇಟಿ ನೀಡಿದ ವೇಳೆ “ಉದಯವಾಣಿ’ಜತೆ ಮಾತನಾಡಿದ ಅವರು, ಸರ್ಕಾರ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮ ಮಾಡಬಾರದು.ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಲಾಕ್‌ಡೌನ್‌ ಅಥವಾ ರಾತ್ರಿ ಕರ್ಫ್ಯೂನಿಂದ ಯಾವುದೇಲಾಭವಿಲ್ಲ. ಕರ್ಫ್ಯೂ ವಿಧಿಸುವುದರಿಂದ ಸೋಂಕು ತಡೆಗಟ್ಟಲು ಸಾಧ್ಯವಿಲ್ಲ. ಸೂಕ್ತ ಸಮಯಕ್ಕೆ ಸರ್ಕಾರಕಠಿಣ ನಿಯಮ ಅನುಸರಿಸದ ಕಾರಣ ರಾಜ್ಯದಲ್ಲಿದಿನದಿಂದ ದಿನಕ್ಕೆ ಹೆಚ್ಚಿನ ಪ್ರಕರಣ ಬೆಳಕಿಗೆ ಬರುತ್ತಿವೆ.ಇದಕ್ಕೆ ಸರ್ಕಾರದ ವೈಫಲ್ಯವೇ ಕಾರಣ. ಕೋವಿಡ್‌ ನಿಯಮ ರೂಪಿಸಿದ ಸರ್ಕಾರವೇ ನಿಯಮ ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.

ಮಸ್ಕಿಯಲ್ಲಿ ಸಭೆ-ಸಮಾರಂಭ ನಿಷೇಧಿ ಸಿ ಆದೇಶ ಹೊರಡಿಸಲಾಗಿತ್ತು. ಸಭೆ-ಸಮಾರಂಭಗಳಿಗೆ ನಿಗದಿತಜನರು ಇರಬೇಕೆಂಬ ನಿಯಮ ಹಾಕಲಾಗಿತ್ತು.ಅದರಂತೆ ಸರ್ಕಾರ ನಡೆದುಕೊಳ್ಳಬೇಕಿತ್ತು. ಅದರೆಸರ್ಕಾರದ ನಿಯಮ ಆಡಳಿತದಲ್ಲಿದ್ದವರೇ ಉಲ್ಲಂಘಿಸುತ್ತಿದ್ದಾರೆ. ಆಡಳಿತ ಪಕ್ಷದವರು ಕಡ್ಡಾಯ ಮಾಸ್ಕ್, ಸಾಮಾಜಿಕ ಅಂತರ, ನಿಗದಿತ ಜನರನ್ನು ಸೇರಿಸಿಸಭೆ-ಸಮಾರಂಭ ಮಾಡಿದ್ದರೆ ನಾವು ಕೂಡ ಅದೇ ನಿಯಮ ಪಾಲಿಸಿಕೊಂಡು ಬರುತ್ತಿದ್ದೆವು. ಆಡಳಿತ ಪಕ್ಷಕ್ಕೆಸಹಕಾರ ನೀಡುತ್ತಿದ್ದೆವು. ಸಾರ್ವಜನಿಕ ಸಮಾರಂಭಗಳಬದಲಿಗೆ ಮನೆ-ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದೆವು. ಮೊದಲಿಗೆ ಸಿಎಂ ಯಡಿಯೂರಪ್ಪ ಖುದ್ದು ಮಸ್ಕಿಯಲ್ಲಿ ಸಾವಿರಾರು ಜನರನ್ನು ಸೇರಿಸಿಸಮಾರಂಭ ಮಾಡಿದ್ದಾರೆ. ಚುನಾವಣೆಗಾಗಿ ಏಕೆಸರ್ಕಾರ ನಿಯಮ ಸಡಿಲಗೊಳಿಸಿದರು? ಜನರಹಿತದೃಷ್ಟಿಯಿಂದ ಸರ್ಕಾರ ಬಿಗುವಿನ ನಿಯಮಅನುಸರಿಸಬೇಕಿತ್ತು. ಸರ್ಕಾರ ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮ ಮಾಡಬಾರದಿತ್ತು ಎಂದರು.

ನೌಕರರ ಬೆದರಿಸುವ ತಂತ್ರ ಸರಿಯಲ್ಲ: ಸರ್ಕಾರ ಸಾರಿಗೆ ನೌಕರರನ್ನು ಬೆದರಿಸುವ ತಂತ್ರ ಬಿಟ್ಟು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ನೌಕರರಿಗೆ ಬೆದರಿಕೆ ತಂತ್ರ ಅನುಸರಿಸುವುದು ಸರಿಯಲ್ಲ. ಅದು ಯಾವುದೇ ಲಾಭ ನೀಡುವುದಿಲ್ಲ. ಎಸ್ಮಾ ಉಪಯೋಗಿಸುವುದು, ವರ್ಗಾವಣೆ ಮಾಡುವುದು, ಸೇವೆಯಿಂದ ವಜಾಗೊಳಿಸುವ ತಂತ್ರಗಳು ಶಾಶ್ವತ ಪರಿಹಾರವಲ್ಲ. ಬದಲಿಗೆ ಸರ್ಕಾರ ಮಾತುಕತೆ ನಡೆಸಿ ಮನವೊಲಿಸುವ ಕೆಲಸಮಾಡಬೇಕು. ಮೊದಲು ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು. ಅವರ ಸಮಸ್ಯೆ ಆಲಿಸಬೇಕು. ಎಲ್ಲ ಸಮಸ್ಯೆ ಪರಿಹಾರ ಮಾಡಲು ಆಗದಿರಬಹುದು. ಆದರೆ, ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು.

ಸಾರಿಗೆ ನೌಕರರು ಈ ಹಿಂದೆ ಕೂಡ ಚಳವಳಿ, ಮುಷ್ಕರ ನಡೆಸಿದ್ದಾರೆ. ನಮ್ಮ ಅವಧಿ ಯಲ್ಲಿಯೂ ನಡೆದಿವೆ. ಅಂಥಹ ಸಂದರ್ಭದಲ್ಲಿ ನಾವು ಸ್ಪಂದಿಸುವ ಕೆಲಸ ಮಾಡಿದೆವು. ಆ ಸಂದರ್ಭದಲ್ಲಿ ಶೇ.12.5 ಸಂಬಳ ಹೆಚ್ಚಿಸಿ ಸಮಸ್ಯೆಗೆ ಸ್ಪಂದಿಸಿದ್ದೇವೆ. ಇದೀಗ ಸಾರಿಗೆ ಸಚಿವರು ಮೊದಲು ಮುಖಂಡರೊಂದಿಗೆ ಕುಳಿತು ಮಾತುಕತೆ ನಡೆಸಬೇಕು. ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಹಾಗೂ ಅವರಿಗೆ ಮನವರಿಕೆ ಮಾಡುವ ಕೆಲಸ ಮಾಡಿಬೇಕು. ಸರ್ಕಾರ ನೌಕರರೊಂದಿಗೆ ಮಾತನಾಡುವುದಿಲ್ಲ ಎಂದರೆ ಹೇಗೆ? ಅವರನ್ನು ಕರೆದು ಮಾತಾಡುವುದಿಲ್ಲ ಎಂದು ಸಿಎಂ ಯಡಿಯೂರಪ್ಪ ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

 

-ದುರ್ಯೋಧನ ಹೂಗಾರ

ಟಾಪ್ ನ್ಯೂಸ್

ಕೋವಿಡ್‌ ವ್ಯಾಕ್ಸಿನ್‌ ಪಡೆದ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌

ಕೋವಿಡ್‌ ವ್ಯಾಕ್ಸಿನ್‌ ಪಡೆದ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌

ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಹೆತ್ತವರಿಗೆ ಕೋವಿಡ್ ಸೋಂಕು

ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಹೆತ್ತವರಿಗೆ ಕೋವಿಡ್ ಪಾಸಿಟಿವ್

ದ.ಕ. ಜಿಲ್ಲೆ: ವಾರಾಂತ್ಯ ಕರ್ಫ್ಯೂ ಇಲ್ಲ :  ಜಿಲ್ಲಾಧಿಕಾರಿ ಸ್ಪಷ್ಟನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಇಲ್ಲ :  ಜಿಲ್ಲಾಧಿಕಾರಿ ಸ್ಪಷ್ಟನೆ

yyyeeee

ರಾಕೆಟ್ ದಾಳಿಯಲ್ಲಿ ಮಡಿದ ಕೇರಳದ ಸೌಮ್ಯ ಕುಟುಂಬದ ಜವಾಬ್ದಾರಿ ಹೊತ್ತ  ಇಸ್ರೇಲ್ ಸರ್ಕಾರ

13-11

ಅದ್ಧೂರಿ ಕಲ್ಯಾಣ ಮಹೋತ್ಸವ ಕನಸಿಗೆ ಕೊರೊನಾ ಕೊಕ್ಕೆ !

ಕೋವಿಡ್ ಕೇರ್ ಸೆಂಟರ್‌ನಲ್ಲಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲವೆಂದು ಸೋಂಕಿತರ ಪ್ರತಿಭಟನೆ

ಕೋವಿಡ್ ಕೇರ್ ಸೆಂಟರ್‌ನಲ್ಲಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲವೆಂದು ಸೋಂಕಿತರ ಪ್ರತಿಭಟನೆ

200 crore covid 19 shots to be available by end of 2021 says union govt

ಆಗಸ್ಟ್ – ಸಪ್ಟೆಂಬರ್ ಅವಧಿಯಲ್ಲಿ ದೇಶದಲ್ಲಿ 200 ಕೋಟಿ ಡೋಸ್ ಲಸಿಕೆ..!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ytregfdkjfghnvmcsjk

ಬ್ರಿಡ್ಜ್ ಕಾಮಗಾರಿ ಸ್ಥಳಕ್ಕೆ ಶಾಸಕರ ಭೇಟಿ

ytre

ಹಳ್ಳಿಗಳಲ್ಲಿ ಕೋವಿಡ್‌ ಮುಂಜಾಗ್ರತೆಗೆ ಸೂಚನೆ

rrrrrrrrrrrrrrrrrrrrrrrrrrrr

“ಕೈ ಮುಗಿಯುವೆ, ಅನಗತ್ಯ ಸಂಚರಿಸಬೇಡಿ’

gfrtfdfd

ಕೋವಿಡ್‌ ಬೆಡ್‌ಗಳ ಸಂಖ್ಯೆ 250ಕ್ಕೆ ಏರಿಕೆ!

hgfdfghgfd

ಸಿಎಂ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನೂತನ ಶಾಸಕ ಸಲಗರ್

MUST WATCH

udayavani youtube

ತನ್ನ ಮದುವೆಗೆ ತಾನೇ ಬ್ಯಾಂಡ್ ಬಾರಿಸಿದ ಮದುಮಗ

udayavani youtube

ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ

udayavani youtube

ಬೆಂಗಳೂರು: ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

udayavani youtube

ಕರಾವಳಿಯಲ್ಲಿ ಚಂಡಮಾರುತ ವಾರ್ನಿಂಗ್!

ಹೊಸ ಸೇರ್ಪಡೆ

13-21

ದಾದಿಯರ ಸೇವೆ ಅವಿಸ್ಮರಣೀಯ

13-20

ಕೊರೊನಾ ತಡೆಗೆ ತಂಡವಾಗಿ ಕೆಲಸ ಮಾಡಿ

ಕೋವಿಡ್‌ ವ್ಯಾಕ್ಸಿನ್‌ ಪಡೆದ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌

ಕೋವಿಡ್‌ ವ್ಯಾಕ್ಸಿನ್‌ ಪಡೆದ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌

13-19

ಹಳ್ಳಿ ಜನರಲ್ಲಿ ಜಾಗೃತಿ ಮೂಡಿಸಿ: ಸಿ.ಟಿ.ರವಿ

13-18

ಕೋವಿಡ್‌ ಆಸ್ಪತ್ರೆಗಳಿಗೆ ನಾಸೀರ್‌ ಹುಸೇನ್‌ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.