ಬದುಕು ಹಸನಾಗಿಸಿದ ಕಾಂಗ್ರೆಸ್
Team Udayavani, Apr 13, 2021, 1:08 PM IST
ಬೀದರ: ಕ.ಕ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ 371 (ಜೆ) ಜಾರಿಗೆ ತರುವ ಮೂಲಕ ಈ ಭಾಗದ ಜನರ ಬದುಕು ಹಸನಾಗುವಕೆಲಸ ಕಾಂಗ್ರೆಸ್ ಮಾಡಿದೆ. ಇಂಥ ಒಂದು ಕೆಲಸ ಬಿಜೆಪಿ ಮಾಡಿದ್ದರೆ ತೋರಿಸಲಿ ಎಂದು ಮಾಜಿ ಸಚಿವ ಎಚ್. ಕೆ. ಪಾಟೀಲ್ ಸವಾಲು ಹಾಕಿದರು.
ಬಸವಕಲ್ಯಾಣ ತಾಲೂಕಿನ ಸಸ್ತಾಪುರದಲ್ಲಿ ಕಾಂಗ್ರೆಸ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,ಈ ಭಾಗದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರಕ್ಕೆ ಒಪ್ಪಿಸಿ ಸಂವಿಧಾನಕ್ಕೆ ತಿದ್ದುಪಡಿ ತಂದು371 (ಜೆ) ಜಾರಿಗೆ ತಂದರು. ಇದರಿಂದ ದೊಡ್ಡ ಪ್ರಮಾಣದ ಅನುಕೂಲತೆ ಕ.ಕ ಭಾಗದ ಜನ ಪಡೆದಿದ್ದಾರೆ ಎಂದರು.ವಿದೇಶದಲ್ಲಿನ ಕಪ್ಪು ಹಣ ತಂದು ಚುನಾವಣೆಯಾದ 100 ದಿನದೊಳಗೆ ದೇಶದ ಪ್ರತಿಯೊಬ್ಬರ ಅಕೌಂಟ್‌ಗೆತಲಾ 15 ಲಕ್ಷ ರೂ. ಹಾಕುವೆಎಂದು ಪ್ರಧಾನಿ ಮೋದಿ ಹೇಳಿದ್ದರು.
ಒಬ್ಬನಿಗಾದರೂ ನಯಾ ಪೈಸೆ ಬಂತಾ? ಎಂದು ಪ್ರಶ್ನಿಸಿದ ಪಾಟೀಲ, ಸುಳ್ಳು ಭರವಸೆ ನೀಡಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ ಉದ್ಯೋಗ ಸೃಷ್ಟಿ ದೂರದ ಮಾತು. ಬಿಜೆಪಿ ಅಧಿ ಕಾರಕ್ಕೆ ಬಂದ ಮೇಳೆ ಇದ್ದ ಉದ್ಯೋಗ ಕಸಿದುಕೊಂಡರು. ರೈತರ ಆದಾಯದುಪ್ಪಟ್ಟು ಬದಲು ಈಗಿದ್ದ ಆದಾಯಕುಂಠಿತಗೊಂಡಿದೆ. ಬಿಜೆಪಿ ಸರ್ಕಾರದಿಂದಜನಸಾಮಾನ್ಯರಿಗೆ ಅಭಿವೃದ್ಧಿಗಿಂತ ಹಿನ್ನೆಡೆಯೇ ಹೆಚ್ಚಾಗಿದೆ ಎಂದರು.