ಕೇಂದ್ರ ಸಚಿವೆಯಾಗಲಿದ್ದಾರಂತೆ ಸುಮಲತಾ: ಯಾರ ಭವಿಷ್ಯ ಗೊತ್ತೇ ಇದು?

ಯಡಿಯೂರಪ್ಪ ಮತ್ತೂಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದವರು ಯಾರು?

Team Udayavani, May 6, 2019, 4:59 PM IST

Sumalatha-Bhavishya

ಬೀದರ್‌: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದರೂ ಸೋಲು, ಗೆಲುವಿನ ಲೆಕ್ಕಾಚಾರ, ಚರ್ಚೆಗಳಿಗೇನೂ ಬರವಿಲ್ಲ. ದೇಶದಲ್ಲಿ ಐದನೇ ಹಂತದ ಮತದಾನ ಆಗುತ್ತಿದೆ. ಒಟ್ಟಾರೆ ಫ‌ಲಿತಾಂಶ ಪ್ರಕಟವಾಗಲು ಇನ್ನೂ 17 ದಿನಗಳು ಬಾಕಿ ಇವೆ.

ಈ ನಡುವೆ ರಾಜ್ಯದಲ್ಲಿ ಪ್ರಮುಖ ಅಭ್ಯರ್ಥಿಗಳ ಸೋಲು ಗೆಲುವುಗಳ ಕುರಿತಾದ ಲೆಕ್ಕಾಚಾರ ದಿನಕ್ಕೊಂದು ಚರ್ಚೆಯ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ನಮ್ಮಲ್ಲಿ ಈ ಬಾರಿ ಗಮನ ಸೆಳೆದಿದ್ದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ಪರ್ಧೆ. ಒಂದೆಡೆ ಸ್ವತಃ ಮುಖ್ಯಮಂತ್ರಿಯವರ ಪುತ್ರನೇ ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ ಅವರ ಎದುರಾಳಿಯಾಗಿ ಸುಮಲತಾ ಅಂಬರೀಷ್‌ ಅವರು ಸ್ಪರ್ಧಿಸಿದ್ದರು.

ಇದೀಗ ಇಲ್ಲಿ ಗೆಲುವು ಯಾರ ಪಾಲಿಗೆ ಒದಗಬಹುದು ಎಂಬ ಬಿಸಿ ಬಿಸಿ ಚರ್ಚೆ ರಾಜ್ಯಾದ್ಯಾಂತ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಇಲ್ಲೊಬ್ಬರು ಸ್ವಾಮೀಜಿ ಮಂಡ್ಯ ಅಭ್ಯರ್ಥಿ ಗೆಲುವಿನ ಕುರಿತಾಗಿ ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ ಈ ಬಾರಿ ಸುಮಲತಾ ಅವರು ಗೆಲ್ಲಲಿದ್ದಾರಂತೆ. ಮಾತ್ರವಲ್ಲದೇ ಗೆದ್ದು ದೆಹಲಿಗೆ ಹೋಗುವ ಸುಮಲತಾ ಅಲ್ಲಿ ಕೇಂದ್ರ ಮಂತ್ರಿಯೂ ಆಗಲಿದ್ದಾರಂತೆ.

ಈ ರೀತಿಯ ಭವಿಷ್ಯವನ್ನು ನುಡಿದಿರುವವರು ಬೀದರದ ಬಸವಕಲ್ಯಾಣದ ಬಸವಧರ್ಮ ಪ್ರಚಾರಕ ಬಸವಾನಂದ ಸ್ವಾಮಿ ವಿಭೂತಿಮಠ ಅವರು. ಸುಮಲತಾ ಅವರದ್ದು ಮಾತೃ ಹೃದಯವಾಗಿದ್ದು, ಈಗಾಗಲೇ ಸುಮಲತಾ ಅವರು ತಮ್ಮ ನಡೆ-ನುಡಿಗಳಿಂದ ಮಂಡ್ಯ ಜನರ ಮನಸ್ಸನ್ನು ಗೆದ್ದಿದ್ದಾರೆ, ಮಾತ್ರವಲ್ಲದೇ ಈ ಬಾರಿಯ ಚುನಾವಣೆಯಲ್ಲೂ ಗೆಲುವು ಅವರದ್ದೇ ಆಗಲಿದೆ ಎಂದು ಬಸವಾನಂದ ಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಇನ್ನೊಂದು ಅಚ್ಚರಿಯ ಹೇಳಿಕೆಯಲ್ಲಿ ಬಸವಾನಂದ ಸ್ವಾಮಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮತ್ತೂಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದೂ ಭವಿಷ್ಯ ನುಡಿದಿದ್ದಾರೆ. ಅಂದ ಹಾಗೆ ಸುಮಲತಾ ಅವರು ಕೇಂದ್ರ ಸಚಿವೆ ಆಗಲಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಅಂತೆ!

ಟಾಪ್ ನ್ಯೂಸ್

7-hunasagi

Hunasagi: ಬೈಕ್ ಹಾಯ್ದು ಇಬ್ಬರು ಮಹಿಳೆಯರು ಸಾವು

Kejriwal

Aravind Kejriwal: ಇನ್ನೂ ಕೆಲವು ದಿನ ಕೇಜ್ರಿವಾಲ್‌ ಗೆ ತಿಹಾರ್‌ ಜೈಲೇ ಗತಿ!

5-Kunigal

Kunigal: ಗಮನ ಬೇರೆಡೆಗೆ ಸೆಳೆದು 3.30 ಲಕ್ಷ ರೂ. ಹಣ ದೋಚಿ ಪರಾರಿಯಾದ ದುಷ್ಕರ್ಮಿಗಳು

David Warner retired from all formats of the cricket

David Warner; ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಸ್ಟೈಲಿಶ್ ಬ್ಯಾಟರ್ ವಾರ್ನರ್

3-Sagara

Sagara: ಭಾಗವತ ವೇಣುಗೋಪಾಲ ಕೆಳಮನೆ ಇನ್ನಿಲ್ಲ

2-DKSHI

Subramanya: ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

Lok Sabha Speaker: ಲೋಕಸಭಾ ಸ್ಪೀಕರ್ ಚುನಾವಣೆಗೆ ಓಂ ಬಿರ್ಲಾ, ಕೆ. ಸುರೇಶ್ ನಾಮಪತ್ರ ಸಲ್ಲಿಕೆ

Speaker Election: ಲೋಕಸಭಾ ಸ್ಪೀಕರ್ ಚುನಾವಣೆಗೆ ಓಂ ಬಿರ್ಲಾ, ಕೆ.ಸುರೇಶ್ ನಾಮಪತ್ರ ಸಲ್ಲಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

ಡಿಸೆಂಬರ್‌ 20, 21 ಹಾಗೂ 22 ರಂದು ಮಂಡ್ಯ ಸಾಹಿತ್ಯ ಸಮ್ಮೇಳನ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

DCM ಕೂಗು ಸರ್ಕಾರ ಪತನವಾಗುವರೆಗೂ ಮುಂದುವರೆಯುತ್ತೆ: ಸಿಟಿ ರವಿ ಭವಿಷ್ಯ

Milk

KMF: ರಾಜ್ಯದಲ್ಲಿ ಹಾಲಿನ ದರ ಲೀಟರ್‌ಗೆ ಎರಡು ರೂಪಾಯಿ ಹೆಚ್ಚಳ…

ಮಲ್ನಾಡ್ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಹೃದಯಘಾತದಿಂದ ನಿಧನ

ಮಲ್ನಾಡ್ ಮೆಡಿಕಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೆಂಕಟೇಶ್ ಹೃದಯಘಾತದಿಂದ ನಿಧನ

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

Bhatkal: ಮಾತನಾಡಲೆಂದು ದಾಂಡೇಲಿಯಿಂದ ಕರೆಸಿ 7 ತಿಂಗಳ ಮಗುವಿನ ಅಪಹರಣ… ದೂರು ದಾಖಲು

MUST WATCH

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

udayavani youtube

ಮಾವುತನನ್ನು ಕಾಲಿನಿಂದ ತುಳಿದು ಅಪ್ಪಚ್ಚಿ ಮಾಡಿದ ಆನೆ!

ಹೊಸ ಸೇರ್ಪಡೆ

Karje

Udayavani Campaign: ಉಡುಪಿ-ನಮ್ಮೂರಿಗೆ ನರ್ಮ್ ಕಳ್ಸಿ ಮಾರ್ರೆ!

7-hunasagi

Hunasagi: ಬೈಕ್ ಹಾಯ್ದು ಇಬ್ಬರು ಮಹಿಳೆಯರು ಸಾವು

6-Chikodi

Chikodi: ತುರ್ತು ಪರಿಸ್ಥಿತಿ ವಿರೋಧಿಸಿ ಬಿಜೆಪಿ ಬೃಹತ್ ಪ್ರತಿಭಟನೆ

Kejriwal

Aravind Kejriwal: ಇನ್ನೂ ಕೆಲವು ದಿನ ಕೇಜ್ರಿವಾಲ್‌ ಗೆ ತಿಹಾರ್‌ ಜೈಲೇ ಗತಿ!

5-Kunigal

Kunigal: ಗಮನ ಬೇರೆಡೆಗೆ ಸೆಳೆದು 3.30 ಲಕ್ಷ ರೂ. ಹಣ ದೋಚಿ ಪರಾರಿಯಾದ ದುಷ್ಕರ್ಮಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.