ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ನಿರ್ಲಕ್ಷ: ನಾಯಿ ಜೊತೆ ಬೆತ್ತಲೆ ಮಲಗಿರುವ ರೋಗಿ!

Team Udayavani, Nov 18, 2019, 9:30 AM IST

ವಿಜಯಪುರ ‌: ಸೌಲಭ್ಯ ಹಾಗೂ ಸೇವೆಗಾಗಿ ಹಲವು ಪ್ರಶಸ್ತಿ ಬಾಚಿರುವ ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದಿಂದ ಚಿಕಿತ್ಸೆ ಸಿಗದೇ ರೋಗಿಯೊಬ್ಬ ನರಳಾಟ ನಡೆಸುತ್ತಿದ್ದಾನೆ.  ಬೆತ್ತಲಾಗಿ ಬಿದ್ದಿರುವ, ರೋಗಿಯ ಪಕ್ಕದ ಬೆಡ್ ಮೇಲೆ ಬೀದಿ ನಾಯಿಯೂ ಮಲಗಿರುವ ಘಟನೆ ವರದಿಯಾಗಿದೆ.

ವಾಂತಿ-ಭೇದಿ ಯಿಂದ ಬಳಲುತ್ತಿರುವ ರವಿ ಪಾಟೀಲ ಎಂಬ ವ್ಯಕ್ತಿ ನಗರದಲ್ಲಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಹಾಗೂ ಸಿಬ್ಬಂದಿಯ ನಿರ್ಲಕ್ಷದಿಂದ ಪರದಾಡುತ್ತಿದ್ದಾನೆ.

ಜಿ ಇ‌ ವಾರ್ಡ್ ನಲ್ಲಿ ಬೆತ್ತಲೆಯಾಗಿ ಬಿದ್ದಿರುವ ರವಿ ಪಾಟೀಲ ಎಂಬ ರೋಗಿಯನ್ನು ಬಿಟ್ಟು ಬೆತ್ತಲಾಗಿ ಬೆಡ್ ಮೇಲೆ ಮಲಗಿಸಿ, ಚಿಕಿತ್ಸೆ ನೀಡದೇ ನಿರ್ಲಕ್ಷ ವಹಿಸಿದ್ದಾರೆ.

ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿ ಚಿಕಿತ್ಸೆ ನೀಡುವಿಕೆಯಲ್ಲಿ ನಿರ್ಲಕ್ಷ ಇದೆ ಎಂದರೆ ರೋಗಿ ರವಿ ಮಲಗಿರುವ ವಾರ್ಡನ ಮತ್ತೊಂದು ಬೆಡ್ ನಲ್ಲಿ ಬೀದಿ ನಾಯಿಯೂ ವಾಸವಾಗಿದೆ.

ಈ ಅಮಾನವೀಯ ಘಟನೆಯನ್ನು ಕಂಡು ಮೊಬೈಲ್ ನಲ್ಲಿ ಸೆರೆ ಹಿಡಿದ ಕರವೇ ಮುಖಂಡ ಕೃಷ್ಣಾ ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಯ ಇಂಥ  ಸ್ಥಿತಿಗೆ ಕಾರಣವಾದ ಸಿಬ್ಬಂದಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ