Vijayapura; ಮೋದಿ ಸರ್ಜಿಕಲ್ ಸ್ಟ್ರೈಕ್‍ಗೆ ಪ್ರೇರಣೆ ಶಿವಾಜಿ ಯುದ್ಧತಂತ್ರ: ರಾಜಾ ಸಿಂಗ್

Team Udayavani, Mar 5, 2024, 4:09 PM IST

ಮೋದಿಗೆ ಸರ್ಜಿಕಲ್ ಸ್ಟ್ರೈಕ್‍ಗೆ ಪ್ರೇರಣೆಯೇ ಶಿವಾಜಿ ಯುದ್ಧತಂತ್ರ: ಶಾಸಕ ರಾಜಾ ಸಿಂಗ್

ವಿಜಯಪುರ: ನೀವು ಕೇವಲ ಒಂದು ಬಾಬರಿ ಮಸೀದಿ ಒಡೆದಿದ್ದನ್ನು ಮರೆಯಲು ಸಾದ್ಯವಿಲ್ಲ ಎಂದಾರೆ, ಹಿಂದೂ ಸಮುದಾಯದ ರಕ್ಷಣೆಗಾಗಿ ಜೀವನವನ್ನೇ ತ್ಯಾಗ ಮಾಡಿರುವ ಛತ್ರಪತಿ ಶಿವಾಜಿ ಮಹಾರಾಜ, ಹಿಂದೂಗಳಿಗಾಗಿ ಬದುಕನ್ನು ಬಲಿಕೊಟ್ಟ ಸಂಭಾಜಿ ಬಲಿದಾನವನ್ನೂ ಭಾರತೀಯರಾದ ನಾವೂ ಮರೆಯುವುದಿಲ್ಲ ಎಂದು ಹೈದರಾಬಾದ್ ಬಿಜೆಪಿ ಶಾಸಕ ರಾಜಾಸಿಂಗ್ ಹೇಳಿದರು.

ಸೋಮವಾರ ನಗರದಲ್ಲಿ ಜನಸೇವಾ ಗ್ರೂಪ್ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಜೀವಂತ ಇರುವವರೆಗೂ ನನ್ನ ಧರ್ಮವನ್ನು ರಕ್ಷಿಸುತ್ತೇನೆ, ನಾನು ಮತಾಂತರ ವಿರುದ್ಧ ನಿರಂತರ ಹೋರಾಡುತ್ತೇನೆ, ಲವ್ ಜಿಹಾದ್ ವಿರುದ್ಧ ಸಮರ ಸಾರುತ್ತೇನೆ, ಭಾರತ ಹಿಂದೂ ರಾಷ್ಟ್ರವಾಗುವವರೆಗೂ ನಾನು ಶಾಂತನಾಗುದಿಲ್ಲ ಎಂದು ನೆರೆದ ಹಿಂದೂ ಕಾರ್ಯಕರ್ತರಿಗೆ ಪ್ರತಿಜ್ಞೆ ಬೋಧಿಸಿದರು.

ನೀವು ಬಾಬರಿ ಮಸೀದಿ ಧ್ವಂಸವನ್ನು ನೀರು ಮರೆಯಲು ಸಾಧ್ಯವಿಲ್ಲ ಎಂದಾದರೆ ಇತಿಹಾಸದಲ್ಲಿ ಎಂದೂ ಮರೆಯದಂಥ ಹಿಂದೂ ಸಾಮ್ರಾಟ ಶಿವಾಜಿ, ಅವರ ಅಪ್ರತಿಮ ವೀರಪುತ್ರ ಸಂಭಾಜಿ ಕೂಡ 120 ಯುದ್ಧಗಳಲ್ಲಿ ಸೋಲದ ಧೀರದೊರೆಯಾಗಿದ್ದ. ಸಂಭಾಜಿ ರಾಜನನ್ನು ಔರಂಗಜೇಬ್ ಸೆರೆ ಹಿಡಿದು ಮುಸ್ಲಿಂ ಧರ್ಮವನ್ನು ಒಪ್ಪಿದರೆ ರಾಜ್ಯ ಮರಳಿಸುವ ಮತಾಂತರದ ಷರತ್ತು ಒತ್ತದೆ ನಿರಂತರ ಚಿತ್ರಹಿಂಸೆ ಅನುಭವಿಸಿ ಹಿಂದೂಗಳಿಗಾಗಿ ನಡೆಸಿದ ಬಲಿದಾನವನ್ನು ನಾವು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.

ಕರ್ನಾಟಕದಲ್ಲಿ ಈಚೆಗೆ ರಾಜ್ಯುಸಭೆಗೆ ಆಯ್ಕೆಯಾದ ನಾಸೀರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ಭಾರತೀಯ ಮುಸಲ್ಮಾನರನ್ನು ಮುಹಾಜಿರ ಎಂದು ಜರಿಯಲಾಗುತ್ತದೆ. ಇಷ್ಟಾದರೂ ಇವರು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೆ. ಭಾರತದಲ್ಲೀಗ ಭಗವಾರಾಜ್ಯವಿದ್ದು, ಇಲ್ಲಿ ಇನ್ನು ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರೆ ನಿನ್ನನ್ನು ಕತ್ತೆಗೆ ಹೊಡೆದಂತೆ ಒದೆಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇಷ್ಟಕ್ಕೂ ಪಾಕಿಸ್ತಾನದಲ್ಲಿ ಭಾರತೀಯ ಮುಸ್ಲಿಮರನ್ನು ಮುಹಾಜಿರ್ ಎಂದು ಅಪಮಾನ ಮಾಡಲಾಗುತ್ತದೆ. ಮುಹಾಜಿರ ಎಂದರೆ ನಾಯಿ, ಕತ್ತೆ, ನೀಚ ಮನುಷ್ಯ ಅಂತೆಲ್ಲ ಅರ್ಥವಿದೆ. ಇಷ್ಟಿದ್ದರೂ ಐಎಸ್‍ಐ, ಪಿಎಫ್‍ಐ ಸೇರಿದಂತೆ ಕೆಲವರು ಪಾಕಿಸ್ತಾನ ಜಿಂದಾಬಾದ್ ಎನ್ನುವ ಮೂಲಕ ದೇಶದ್ರೋಹದ ಕೆಲಸ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ತಮ್ಮ ಭಾಷಣದ್ದಕ್ಕೂ 34.24 ನಿಮಿಷಗಳ ಸುದೀರ್ಘ ಭಾಷಣದಲ್ಲಿ ಜೀಜಾಬಾಯಿ ಮೇಲೆ ಪ್ರಭಾವ ಬೀರಿದ ಔರಂಗಜೇಬ್ ಶಿವಲಿಂಗದ ಮೇಲೆ ನಡೆಸಿದ ದಾಳಿಯಿಂದಾದ ಪ್ರೇರಣೆ, ನಂತರ ಮಗ ಶಿವಾಜಿಯನ್ನು ಹಿಂದೂ ರಕ್ಷಣೆಗೆ ಪ್ರೇರೇಪಿಸಿದ ಪರಿ, ಶಿವಾಜಿಗೆ ಶಸ್ತ್ರ ವಿದ್ಯೆಯಲ್ಲಿ ಪಾರಂಗತನನ್ನಾಗಿ ಮಾಡಿ ಹಿಂದೂ ದಾಳಿಕೋರರ ವಿರುದ್ಧ ಯುದ್ಧಕ್ಕೆ ಸನ್ನದ್ಧ ಮಾಡಿದ ಪರಿಯನ್ನು ವಿವರಿಸಿದರು.

ಔರಂಗಜೇಬನ ಹಿಂದೂ ದೇವಸ್ಥಾನಗಳ ಮೇಲೆ ನಡೆಸಿದ ದಾಳಿ, ಹಿಂದೂ ಮಹಿಳೆಯರ ಮೇಲೆ ನಡೆಸಿದ ಅತ್ಯಾಚಾರ, ದೌರ್ಜನ್ಯಗಳಿಗೆ ಕಾಳಿಯಂತೆ ಅಬ್ಬರಿಸಿ ತಕ್ಕ ಉತ್ತರ ನೀಡಿದ್ದು ಶಿವಾಜಿ ಮಹಾರಾಜ ಮಾತ್ರ.  ಛತ್ರಪತಿಯಾಗಿ ಶಿವಾಜಿ ನಡೆಸಿದ ಆಡಳಿತ, ಮುಸ್ಲಿಂ ದೊರೆಗಳ ವಿರುದ್ಧ ನಡೆಸಿದ ವೈವಿಧ್ಯಮಯ ಹೋರಾಟ, ಗೋ ಮಾತೆಯ ಸಂರಕ್ಷಣೆಗಾಗಿ ಮಾಡಿದ್ದ ಸಂಕಲ್ಪ, ಹಿಂದೂ ಧರ್ಮ ರಕ್ಷಣೆಗಾಗಿ ನಡೆಸಿದ ಅಪ್ರತಿಮ ಸಾಹಸನ್ನು ಹೇಳುತ್ತವೆ. ಗೋ ಮಾತೆಯ ಹಾಲು ಕುಡಿದ ಮಕ್ಕಳು ಮಾತ್ರ ಶಿವಾಜಿಯಂಥ ಅಪ್ರತಿಮ ಸಾಹಸಿ ವೀರ ಮಕ್ಕಳು ಹುಟ್ಟಲು ಸಾಧ್ಯವಿದೆ. ಡಬ್ಬದ ಹಾಲು ಕುಡಿದರೆ ಇಂಥ ಮಕ್ಕಳು ಹುಟ್ಟಲು ಸಾಧ್ಯವಿಲ್ಲ ಎಂದರು.

ಛತ್ರಪತಿ ಶಿವಾಜಿ ಮಹಾರಾಜನ ಅಬ್ಬರಕ್ಕೆ ಮಹಿಳೆಯರ ಬುರ್ಕಾದಲ್ಲಿ ಅಡಗಿ ಕುಳಿತಿದ್ದ ಷಹಿಸ್ತಾಖಾನ್‍ಗೆ ತಕ್ಷಣ ದೇಶ ತೊರೆಯದಿದ್ದರೆ ರುಂಡ ಚಂಡಾಡುವ ಎಚ್ಚರಿಕೆ ನೀಡುತ್ತಲೇ ಪಲಾಯನ ಮಾಡಿದ್ದರ. ಷಹಿಸ್ಥಾನ್ ಖಾನ್ ವಿರುದ್ಧ ಸರ್ಜಿಕಲ್ ಮಾದರಿಯಲ್ಲಿ ದಾಳಿ ನಡೆಸಿದ್ದು ಶಿವಾಜಿ ಮಹಾರಾಜರು. ಪುಲ್ವಾಮಾ ಮೇಲೆ ನಡೆದ ಭಯೋತ್ಪಾದಕರ ದಾಳಿಗೆ ಪ್ರತಿಕಾರವಾಗಿ ಪಾಕಿಸ್ಥಾನಕ್ಕೆ ನುಗ್ಗಿ ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸ ಮಾಡಿದ್ದರು. ಇದಕ್ಕೆ ಷಹಿಸ್ತಾನ ಖಾನ್ ವಿರುದ್ಧ ಶಿವಾಜಿ ನಡೆಸಿದ್ದ ಅಪ್ರತಿಮ ಯಶಸ್ವಿ ದಾಳಿಯೇ ಪ್ರೇರಣೆಯಾಗಿದೆ ಎಂದರು.

ಇದೇ ವಿಜಯಪುರದಲ್ಲಿ ಆದಿಲ್ ಶಾಹಿ ಹಾಗೂ ಆತನ ಅಜ್ಜಿಯಿಂದ ಶಿವಾಜಿಯನ್ನು ಹಿಡಿಯುವುದಾಗಿ ಹೇಳಿ ಅಫಜಲಖಾನ್ ಹೋರಟಿದ್ದ. ಆದರೆ ಓರ್ವ ಮುಲ್ಲಾ ಹೇಳಿದ ಭವಿಷ್ಯದಿಂದಾಗಿ ಶಿವಾಜಿ ವಿರುದ್ಧ ಸೋಲುವ ಭೀತಿಯಿಂದ ಬಿಜಾಪುರ ಶಾಹಿ ಅರಸನ ಸೇನಾಧಿಪತಿ ಅಫಜಲಖಾನ್ ತನ್ನ 63 ಪತ್ನಿಯರನ್ನು ಹತ್ಯೆ ಮಾಡಿದ್ದ. ಕುತಂತ್ರದಿಂದ ಶಿವಾಜಿಯನ್ನು ಹತ್ಯೆ ಮಾಡುವ ಸಂಚು ವಿಫಲವಾಗಿ ಸ್ವಯಂ ಹತ್ಯೆಯಾಗಿ ಹೋಗಿದ್ದ ಎಂಬುದಕ್ಕೆಲ್ಲ ಇತಿಹಾಸದಲ್ಲಿ ದಾಖಲೆಗಳಿವೆ ಎಂದು ವಿವರಿಸಿದರು.

ಮುಸ್ಲಿಂ ದೊರೆಗಳು ಎಂದಿಗೂ ಎದುರು-ಬದುರಾಗಿ ದಾಳಿ ನಡೆಸಿಲ್ಲ, ಬದಲಾಗಿ ಹಿಂದಿನಿಂದ ಬೆನ್ನಿಗೆ ಚೂರಿ ಹಾಕಿಯೇ ಗೆದ್ದಿದ್ದಾರೆ. ಶಿವಾಜಿಯನ್ನೂ ಅಂಥದ್ದೆ ಕುತಂತ್ರದಿಂದ ಹತ್ಯೆ ಮಾಡುವ ಕುತಂತ್ರ ವಿಫಲವಾಗಿತ್ತು. ಜೀಜಾಬಾಯಿ ಅವರ ಆಶಯದಂತೆ ಅಫಜಲ್ ಖಾನ್ ಕರುಳು, ರುಂಡವನ್ನು ಪ್ರತಾಪಘಡ ಕೋಟೆಯ ಅಗಸಿಗೆ ಕಟ್ಟಲಾಗಿತ್ತು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದರೆ, ಹಿಂದೂ ಧರ್ಮ, ಹಿಂದೂ ದೇವಸ್ಥಾನಗಳ ಮೇಲೆ ದಾಳಿ, ಕುತಂತ್ರಿಗಳಿಗೆ ಭವಿಷ್ಯದಲ್ಲಿ ಎಚ್ಚರಿಕೆ ಗಂಟೆಯಗಲಿ ಎಂದು ಕಟ್ಟಲಾಗಿತ್ತು ಎಂದು ವಿವರಿಸಿದರು.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.