ಅಕ್ರಮಗಳ ತಾಣ ಸಾಮರ್ಥ್ಯ ಸೌಧ

•ಸುಸಜ್ಜಿತ ಕಟ್ಟಡ ಸದ್ಬಳಕೆ ಮಾಡಿಕೊಳ್ಳದ ತಾಪಂ •ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವೇನು?

Team Udayavani, May 14, 2019, 5:15 PM IST

ಮುದ್ದೇಬಿಹಾಳ: ಸಾಮರ್ಥ್ಯ ಸೌಧ ಕಟ್ಟಡದ ಹೊರನೋಟ.

ಮುದ್ದೇಬಿಹಾಳ: ತಾಲೂಕು ಪಂಚಾಯತ್‌, ಗ್ರಾಮ ಪಂಚಾಯತ್‌ ಸದಸ್ಯರಿಗೆ ಹಾಗೂ ಸರಕಾರಿ ಸಿಬ್ಬಂದಿಗಳ ತರಬೇತಿ ಮತ್ತುಸಭೆಗಳಿಗೆ ಉಪಯೋಗ ಮಾಡುವ ಸಾಮರ್ಥ್ಯ ಸೌಧ ಕಟ್ಟಡ ಈಗಾ ಪುಡಾರಿಗಳಿಗೆ ಅನೈತಿಕ ಚಟುವಟಿಕೆಗಳನ್ನುನಡೆಸುವ ತಾಣವಾಗಿದೆ.

ಹೌದು, ಆಲಮಟ್ಟಿ ರಸ್ತೆಯಲ್ಲಿರುವ ಸಂಗಮೇಶ್ವರ ನಗರದಲ್ಲಿ ತಾಪಂನಿಂದ ನಿರ್ಮಿಸಲಾದ ಸಾಮರ್ಥ್ಯ ಸೌಧ ಕಟ್ಟಡ ಪುಡಾರಿಗಳಿಗೆ ಅನುಕೂಲವಾಗಿದೆ. ನಿತ್ಯವೂ ಕಟ್ಟಡದಲ್ಲಿ ಮದ್ಯಪಾನಿಯರು ಲೇಟ್‌ನೆçಟ್‌ ಪಾರ್ಟಿ ಮಾಡುತ್ತಿದ್ದಾರೆಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇಷ್ಟೆಲ್ಲಾ ಗೊತ್ತಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿರುವುದು ವಿಪರ್ಯಾಸವಾಗಿದೆ. ಸಾಮರ್ಥ್ಯ ಸೌಧ ಕಟ್ಟಡ ಇದ್ದರೂ ಪ್ರಯೋಜನವಾಗದ ಕಾರಣಮದ್ಯಪ್ರೀಯರು ಇಲ್ಲಿಗೆ ಬಾಟಲಿಗಳನ್ನು ತಂದು ಪಾರ್ಟಿ ಮಾಡಿ ಬಾಟಲಿಗಳನ್ನುಅಲ್ಲಿಯೇ ಎಸಗುತ್ತಾರೆ. ಇದರಿಂದ ಕಟ್ಟಡ ಸಂಪೂರ್ಣವಾಗಿ ಬಾಟಲಿಗಳಿಂದಲೇ ಭರ್ತಿಯಾಗಿದೆ.

ಅನುಪಯುಕ್ತವಾದ ಹಣ: ಸರಕಾರದಿಂದಲೇ ಸಾಮರ್ಥ್ಯ ಸೌಧ ಕಟ್ಟಿಸಲಾಗಿದೆ. ಆದರೆ ಕಟ್ಟಡದ ಉಪಯೋಗವನ್ನು ಮಾಡಿಕೊಳ್ಳದಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಇದರ ಬಗ್ಗೆ ಸಾಕಷ್ಟು ಬಾರಿ ಅಧಿ ಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸರಕಾರಿ ಹಣ ಎಂದರೆ ಸಾರ್ವಜನಿಕರ ಹಣ ಎನ್ನುವುದು ಅಧಿಕಾರಿಗಳುತಿಳಿದುಕೊಳ್ಳಬೇಕು ಎಂದು ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಹಸ್ತಾಂತರ ಗೊಂದಲ: ಗುತ್ತಿಗೆದಾರರಿಂದ ಸಾಮರ್ಥ್ಯ ಸೌಧ ಕಟ್ಟಡವನ್ನು ತಾಪಂಕಾರ್ಯಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದು ಅ ಧಿಕಾರಿಗಳು ಹೇಳಿದರೆ ಕೆಲ ತಾಪಂ ಸದಸ್ಯರು ಕಟ್ಟಡವನ್ನು ಇನ್ನೂಹಸ್ತಾಂತರಿಸಿಲ್ಲ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸಾಮರ್ಥ್ಯ ಸೌಧ ಕಟ್ಟಡದ ಬಗ್ಗೆ ತಾಪಂ ಸದಸ್ಯರು ಮತ್ತು ಅಧಿ ಕಾರಿಗಳ ನಡುವೆ ಗೊಂದಲವಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಕಟ್ಟಡ ಉಪಯೋಗಿಸಿ: ಮುದ್ದೇಬಿಹಾಳ ಪಟ್ಟಣದ ಸಂಗಮೇಶ್ವರ ನಗರದಲ್ಲಿ ನಿರ್ಮಿಸಲಾದ ಸಾಮರ್ಥ್ಯ ಸೌಧ ಕಟ್ಟಡವನ್ನು ಶೀಘ್ರದಲ್ಲಿಯೇ ಅ ಧಿಕಾರಿಗಳು ಬಳಕೆ ಮಾಡಿಕೊಳ್ಳಬೇಕು. ಇಲ್ಲವೇ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಈ ಕಟ್ಟಡದಿಂದ ಯುವಕರು ದುಶ್ಚಟಕ್ಕೆ ಬಿಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಆದರೆ ಇದನ್ನು ಸರಕಾರಿ ಅಧಿಕಾರಿಗಳು ಎಷ್ಟರ ಮಟ್ಟಿಗೆ ಸರಿಪಡಿಸುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.

.ಶಿವಕುಮಾರ ಶಾರದಳ್ಳಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮಹಾನಗರ: ಕಾರವಾರ ದಿಂದ ಮಂಗಳೂರುವರೆಗೆ ಯಾವುದೇ ಸ್ಥಳದಲ್ಲಿ ಭಾರೀ ಅನಾಹುತಗಳು ಸಂಭವಿ ಸಿದರೆ ತತ್‌ಕ್ಷಣ ಕಾರ್ಯಾಚರಣೆ ನಡೆ ಸಲು ಅನುಕೂಲವಾಗುವ ಸುಸಜ್ಜಿತ "ವಿಪತ್ತು...

  • ಶಿರಸಿ: ಕರ್ನಾಟಕದ ತಿರುಪತಿ ಎಂದೇ ಕರೆಯಲಾಗುವ ಮಂಜುಗುಣಿ ವೆಂಕಟರಮಣ ದೇವಾಲಯದ ಪಾರ್ಶ್ವದಲ್ಲೇ ಇರುವ ಕೋನಾರಿ ತೀರ್ಥ ಕೆರೆಗೆ ಕಾಯಕಲ್ಪದ ಭಾಗ್ಯ ಸಿಕ್ಕಿದೆ....

  • ಸೊಲ್ಲಾಪುರ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ಸುಶೀಲಕುಮಾರ ಶಿಂಧೆ ಸತತ ಎರಡನೇ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದು...

  • ಸುಳ್ಯ : ಅರ್ಧ ಶತಮಾನಕ್ಕೂ ಅಧಿಕ ಕಾಲದಿಂದ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಚೆ ಕಚೇರಿಯನ್ನು ಯಾವುದೇ ಸೂಚನೆ ನೀಡದೆ ಏಕಾಏಕಿ...

  • ಹೊನ್ನಾವರ: ಈ ವರ್ಷವೂ ಮೇ ತಿಂಗಳಲ್ಲಿ ಕುಮಟಾ, ಹೊನ್ನಾವರ ನೀರಿಗೆ ಪರದಾಡುತ್ತಿದೆ. ನಗರಸಭೆ, ಪಟ್ಟಣ ಪಂಚಾಯತ ಪೂರೈಸುವ ನೀರನ್ನು ಅವಲಂಬಿಸಿರುವ ಉಭಯ ನಗರಗಳ 50 ಸಾವಿರ...

  • ಸುಳ್ಯ : ನ.ಪಂ. ಚುನಾವಣೆಯ ಮತದಾನಕ್ಕೆ ಇನ್ನೆರಡು ದಿನ (ಮೇ 29) ಬಾಕಿ ಇದ್ದು, 20 ವಾರ್ಡ್‌ಗಳಲ್ಲಿ ಪ್ರಚಾರದ ಭರಾಟೆ ಬಿರುಸು ಪಡೆದಿದೆ. ಪಕ್ಷ ಮತ್ತು ಪಕ್ಷೇತರರಾಗಿ ಸ್ಪರ್ಧಿಸಿರುವ...