Vijayapur City Corporation Budget; ನಗರದ ಜನತೆಗೆ ಸುಳ್ಳು ಹೇಳಿದ ಮೇಯರ್: ಲೋಣಿ ಆರೋಪ


Team Udayavani, Feb 22, 2024, 1:08 PM IST

Vijayapur City Corporation Budget; ನಗರದ ಜನತೆಗೆ ಸುಳ್ಳು ಹೇಳಿದ ಮೇಯರ್: ಲೋಣಿ ಆರೋಪ

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಬಜೆಟ್‍ನಲ್ಲಿ ಈ ಬಾರಿ ಹಿಂದಿನ ವರ್ಷಕ್ಕಿಂತ ಬಜೆಟ್ ಗಾತ್ರ ಭಾರಿ ಪ್ರಮಾಣದಲ್ಲಿ ಕುಗ್ಗಿದೆ. ಇದರೊಂದಿಗೆ ಮೇಯರ್ ಬಜೆಟ್ ಮೂಲಕ ನಗರದ ಜನರಿಗೆ ಬಹುತೇಕ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ರವೀಂದ್ರ ಲೋಣಿ ದೂರಿದರು.

ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ದಶಕವಾಗಿದೆ. ಆದರೆ ನಗರದ ಜನರಿಗೆ ಮಹಾನಗರ ಪಾಲಿಕೆ ಸೌಲಭ್ಯ ನೀಡದೆ ವಂಚನೆ ಮಾಡುತ್ತಿದೆ ಎಂದು ಟೀಕಿಸಿದರು.

ಪ್ರಸಕ್ತ ಆರ್ಥಿಕ ವರ್ಷದ ಬಜೆಟ್ ಅಂಕಿಸಂಖ್ಯೆಗಳಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ. ಅಧಿಕಾರಿಗಳು ನೀಡಿದ ಅಂಕಿಸಂಖ್ಯೆಗಳನ್ನೇ ಇರಿಸಿಕೊಂಡು ಉಪ ಮೇಯರ್ ಮೂಲಕ ಪಾಲಿಕೆ ಮೇಯರ್ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದರು.

ಪಾಲಿಕೆಗೆ ಈ ಬಾರಿ 159.42 ಕೋಟಿ ಆದಾಯ ಎಂದಿದ್ದಾರೆ. ಕಳೆದ ಬಾರಿ ಆಡಳಿತಾಧಿಕಾರಿ ಇದ್ದಾಗ 204 ಕೋಟಿ ರೂ. ಬಜೆಟ್ ಇದ್ದು, ಈ ಬಾರಿ ಸುಮಾರು 50 ಕೋಟಿ ರೂ. ಕೊರತೆ ಬಜೆಟ್ ಮಂಡಿಸಿದ್ದಾರೆ. ವಾಸ್ತವವಾಗಿ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಸಾಗಬೇಕು. ಆದರೆ ಈ ಬಾರಿ ಹಿಂದಿಗಿಂತ ಕುಸಿತದ ಬಜೆಟ್ ಮಂಡಿಸಲಾಗಿದೆ ಎಂದು ದೂರಿದರು.

80 ಸಾವಿರ ಆಸ್ತಿಗಳಿದ್ದು, 15 ಸಾವಿರ ಗುಂಟಾ ಆಸ್ತಿ ಇವೆ. ಸ್ವಯಂ ಘೋಷಿತ ಆಸ್ತಿಯಲ್ಲೂ ತೆರಿಗೆ ಸಂಗ್ರಹದಲ್ಲಿ ವಿಫಲವಾಗಿದ್ದಾರೆ. ಅಧಿಕೃತ, ಅನಧಿಕೃತ ಆಸ್ತಿ ಸೇರಿದಂತೆ ನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 95 ಸಾವಿರ ಆಸ್ತಿ ಇವೆ. ಆದರೂ ಮಹಾಪೌರರು ನಗರದ ಜನರಿಗೆ ಬಜೆಟ್ ಮೂಲಕ ಸುಳ್ಳು ಮಾಹಿತಿ ನೀಡಿದ್ದಾರೆ. ಆದಾಯ ತೆರಿಗೆ ಸಂಗ್ರಹದ ವಿಷಯದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರವಿದ್ದಾಗ ನಗರದ ಅಭಿವೃದ್ಧಿಗಾಗಿ ಪಾಲಿಕೆಗೆ ನೂರಾರು ಕೋಟಿ ರೂ. ಅನುದಾನ ನೀಡಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಘಟಾನುಘಟಿಗಳು ಸೇರಿ ಜಿಲ್ಲೆಯ 6 ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರೂ ಐತಿಹಾಸಿಕ ಮಹಾನಗರ ಅಭಿವೃದ್ಧಿಗೆ ಈ ಸರ್ಕಾರದಿಂದ ಅನುದಾನ ನೀಡಿಲ್ಲ ಎಂದು ಕುಟುಕಿದರು.

ಐತಿಹಾಸಿಕ ಮಹಾನಗರದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಬದಲು ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿಲ್ಲ. ಪಾಲಿಕೆ ಮೂಲಕ ನಗರದಲ್ಲಿ ಕಮಾನುಗಳ ನಿರ್ಮಾಣದ ಘೋಷಣೆ ಮಾಡಿರುವುದೇ ವ್ಯರ್ಥ. ಬದಲಾಗಿ ಪಾಲಿಕೆ ಮೇಯರ್ ಮನೆ ಹತ್ತಿರ ಇರುವ ಇಬ್ರಾಹಿಂ ರೋಜಾ ಸೇರಿದಂತೆ ನಗರದಲ್ಲಿರುವ ಪಾರಂಪರಿಕ ಸ್ಮಾರಕಗಳ ಒತ್ತುವರಿ-ಅತಿಕ್ರಮಣ ತೆರವಿಗೆ ಆದ್ಯತೆ ನೀಡಬೇಕು. ಸ್ಮಾರಕಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ನಗರದಲ್ಲಿ ಸರ್ಕಾರಿ ಜಮೀನು, ಸ್ಥಳಗಳ ಅತಿಕ್ರಮಣ ಹಾಗೂ ಬೇನಾಮಿ ಆಸ್ತಿಗಳಿದ್ದು, ಕಾನೂನು ಬಾಹಿರವಾಗಿ ಒತ್ತುವರಿಯಾಗಿರುವ ಇಂತಹ ಆಸ್ತಿಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಈ ಬಗ್ಗೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ವಿಜಯಪುರ ನಗರಕ್ಕೆ ನಿತ್ಯವೂ 53 ಎಂ.ಎಲ್. ನೀರು ಅಗತ್ಯವಿದ್ದರೂ 71 ಎಂಎಲ್ ಲಭ್ಯವಿದೆ. ಅಗತ್ಯಕ್ಕಿಂತ 10 ಎಂಎಲ್ ನೀರು ಹೆಚ್ಚುವರಿ ಲಭ್ಯವಿದ್ದರೂ ನೀರು ನಿರ್ವಹಣೆಯಲ್ಲಿ ಪಾಲಿಕೆ ಸೋತಿರುವುದೇ ನಗರದಲಲಿ ನೀರಿನ ಗಂಭೀರ ಸಮಸ್ಯೆ ಎದುರಾಗಲು ಕಾರಣ ಎಂದು ಹರಿಹಾಯ್ದರು.

ಕೃಷ್ಣೆಯ ಲಿಂಗದಳ್ಳಿ ಜಾಕ್‍ವೆಲ್ ನಿಂದ ವಿಜಯಪುರ ನಗರಕ್ಕೆ ಬರುವ ಮಾರ್ಗಮಧ್ಯೆ ಸುಮಾರು 10 ಹಳ್ಳಿಗಳಿದ್ದು, ಅಕ್ರಮವಾಗಿ ನೀರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ರಾಜಕೀಯ ಒತ್ತಡದ ಪರಿಣಾಮ ಇದನ್ನು ನಿರ್ವಹಣೆ ಮಾಡುತ್ತಿಲ್ಲ. ಪರಿಣಾಮ ನೀರಿನ ಅಗತ್ಯ ಲಭ್ಯತೆ ಇದ್ದರೂ ನೀರಿನ ಕೊರತೆ ಎದುರಿಸುವ ದುಸ್ಥಿತಿ ಎದುರಾಗಿದೆ ಎಂದು ದೂರಿದರು.

ನಗರದಲ್ಲಿ ಕುಡಿಯುವ ನೀರಿನ 24*7 ಯೋಜನೆ ವಾಸ್ತವವಾಗಿ ಅಪೂರ್ಣವಾಗಿದ್ದು, ಎರಡು ವರ್ಷ ಪರಿಸ್ಥಿತಿ ಪರಿಶೀಲನೆ ನಡೆಸಬೇಕೆಂಬ ನಿಯಮ ಇದ್ದರೂ ಯಾರೂ ಗಮನ ಹರಿಸುತ್ತಿಲ್ಲ. ಜನತೆಗೆ ವಾಸ್ತ ಸ್ಥಿತಿ ಮುಚ್ಚಿಟ್ಟು ವಂಚಿಸಿದೆ. ನಗರದ ಕುಡಿಯುವ ನೀರಿನ ವಿಷಯದಲ್ಲಿ ಆಡಳಿತ ವ್ಯವಸ್ಥೆಯ ಸಂಪೂರ್ಣ ವೈಫಲ್ಯವಾಗಿದೆ ಎಂದು ದೂರಿದರು.

ಮಹಾನಗರ ಪಾಲಿಕೆಯಿಂದ ಸಿದ್ಧೇಶ್ವರ ಶ್ರೀಗಳ ಹೆಸರಿನಲ್ಲಿ ವೃತ್ತ ನಿರ್ಮಾಣದ ಕುರಿತು ನಿರ್ಣಯಿಸಿರುವ ಕುರಿತು ನಗರದ ಜನರು ನಿರ್ಧರಿಸುತ್ತಾರೆ. ಬಯಲಲ್ಲಿ ಬಯಲಾದ ಸಂತನ ಆಶಯಕ್ಕೆ ವಿರುದ್ಧವಾದ ಯಾವ ನಡೆಯುವು ಸಹ್ಯವಲ್ಲ ಎಂದರು.

ಟಾಪ್ ನ್ಯೂಸ್

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

ICC T20 world cup 2024 warm up match schedule

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಒಂದೇ ಪಂದ್ಯ

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

Mumbai Hoarding Collapse; The main accused caught by the police in Rajasthan

Mumbai Hoarding Collapse; ರಾಜಸ್ಥಾನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಮುಖ ಆರೋಪಿ

1-24-friday

Daily Horoscope: ವಿವಾಹಾಸಕ್ತರಿಗೆ ಯೋಗ್ಯ ಬಾಳ ಸಂಗಾತಿ ಲಭಿಸುವ ಯೋಗ

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

Crime: ಚಿತ್ರದುರ್ಗ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

covid

Covishield ಲಸಿಕೆಯಿಂದ ಮತ್ತೊಂದು ಸೈಡ್‌ಎಫೆಕ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದು ಪರಾರಿ… ಪೊಲೀಸರಿಂದ ಶೋಧ

ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದ ಪಾಪಿಗಳು; ಪೊಲೀಸರಿಂದ ಶೋಧ

love birds

Vijayapura: ಪ್ರೇಮ ವಿವಾಹವಾಗಿದ್ದ ನವ ದಂಪತಿ ನೇಣಿಗೆ ಶರಣು

1-wwqwewq

Vijayapura NTPC ಚಿಮಣಿ ಮೇಲಿಂದ ಬಿದ್ದು UP ಮೂಲದ ಕಾರ್ಮಿಕ ಸಾವು

police

Vijayapura: ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ

1-weqwqe

Babaleshwar: ಸಾಲ ಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

Anjali Ambigera Case; ದಾವಣಗೆರೆಯಲ್ಲಿ ಹಂತಕನನ್ನು ಬಂಧಿಸಿದ ಪೊಲೀಸರು

ICC T20 world cup 2024 warm up match schedule

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಒಂದೇ ಪಂದ್ಯ

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!

Mumbai Hoarding Collapse; The main accused caught by the police in Rajasthan

Mumbai Hoarding Collapse; ರಾಜಸ್ಥಾನದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದ ಪ್ರಮುಖ ಆರೋಪಿ

1-24-friday

Daily Horoscope: ವಿವಾಹಾಸಕ್ತರಿಗೆ ಯೋಗ್ಯ ಬಾಳ ಸಂಗಾತಿ ಲಭಿಸುವ ಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.