Vijayapura; ಪತ್ನಿ ಹತ್ಯೆಗೆ ಯತ್ನಿಸಿದ ಪತಿಗೆ ಮೂರುವರೆ ವರ್ಷ ಜೈಲು

ತನ್ನ ಜಮೀನಿಗೆ ಪತ್ನಿ ಎಮ್ಮೆ ಪ್ರವೇಶಿಸಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪತಿ

Team Udayavani, Feb 12, 2024, 6:30 PM IST

Vijayapura; ಪತ್ನಿ ಹತ್ಯೆಗೆ ಯತ್ನಿಸಿದ ಪತಿಗೆ ಮೂರುವರೆ ವರ್ಷ ಜೈಲು

ವಿಜಯಪುರ: ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಹತ್ಯೆಗೆ ಯತ್ನಿಸಿದ ಪತಿಗೆ ಮೂರುವರೆ ವರ್ಷ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಸೋಮವಾರ ಆದೇಶಿಸಿದೆ. ದಂಡದ ಹಣದಲ್ಲಿ ಪತ್ನಿಗೆ 22,500 ರೂ. ಪರಿಹಾರ ನೀಡುವಂತೆಯೂ ಅದೇಶಿಸಿದೆ.

ಇಂಡಿ ತಾಲೂಕು ಬಬಲಾದಿ ಗ್ರಾಮದ ಚನ್ನಪ್ಪ ಸಿದರಾಯ ಧೂಳಖೇಡ ಎಂಬಾತನೇ ಪತ್ನಿಯ ಹತ್ಯೆ ಯತ್ನದ ಆರೋಪದಲ್ಲಿ ಶಿಕ್ಷೆಗೆ ಗುರಿಯಾದವ. ಚನ್ನಪ್ಪ ಹಾಗೂ ಆತನ ಪತ್ನಿ ಸರುಬಾಯಿ ಮಧ್ಯೆ ಕೌಟುಂಬಿಕ ಕಲಹವಿದ್ದು, ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದರು. ಸರುಬಾಯಿ ತನ್ನ ಮಕ್ಕಳೊಂದಿಗೆ ತನ್ನ ಪಾಲಿಗೆ ಬಂದಿರುವ ಜಮೀನಿನಲ್ಲಿ ಶೆಡ್ ಹಾಕಿಕೊಂಡು ವಾಸವಿದ್ದು, ಆರೋಪಿ ಚನ್ನಪ್ಪನ ಜಮೀನಿಗೆ ಸೇರಿದ ಜಮೀನಿಗೆ ಸರುಬಾಯಿ ಎಮ್ಮೆ ಮೇಯಲು ಹೋಗಿತ್ತು. ಇದನ್ನೇ ನೆಪ ಮಾಡಿಕೊಂಡ ಆರೋಪಿ ಚನ್ನಪ್ಪ 2019 ಅಕ್ಟೋಬರ್ 26 ರಂದು ತನ್ನ ಜಮೀನಿನಲ್ಲಿ ನಿಮ್ಮ ಎಮ್ಮೆ ಮೇಯ್ದು ಹಾಳು ಮಾಡಿದೆ ಎಂದು ಕಲ್ಲಿನಿಂದ ತಲೆ ಹಾಗೂ ಕೈಗೆ ಭಾರಿ ಗಾಯ ಮಾಡಿದ್ದ.

ಈ ಕುರಿತು ಗಾಯಾಳು ತಾಯಿ ಸರುಬಾಯಿ ಪರವಾಗಿ ಆಕೆಯ ಮಗ ಸುಭಾಶ ಧೂಳಖೇಡ ಹೋರ್ತಿ ಪೊಲೀಸರಿಗೆ ಕೊಲೆ ಯತ್ನದ ದೂರು ನೀಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಪಿ.ಎಸ್.ಐ. ಎಸ್.ಎನ್.ಅಂಬಿಗೇರ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಾಜಿ ನಾಲವಾಡೆ ಸರ್ಕಾರಿ ಅಭಿಯೋಜಕರು ಆರೋಪ ರುಜುವಾತು ಪಡಿಸಲು ಅಗತ್ಯವಾದ ಸಾಕ್ಷಿ, ಪುರಾವೆಗಳನ್ನು ಸಲ್ಲಿಸಿದ್ದನ್ನು ಪರಿಗಣಿಸಿ ಶಿಕ್ಷೆ ವಿಧಿಸಿದ್ದಾರೆ.

ಪತ್ನಿ ಸರುಬಾಯಿ ಕೊಲೆ ಯತ್ನದ ಆರೋಪದಲ್ಲಿ ಚನ್ನಪ್ಪ ಧೂಳಖೇಡ ಇವನಿಗೆ ಕೊಲೆ ಯತ್ನ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ಇದೇ ಪ್ರಕರಣದಲ್ಲಿ ದಾಖಲಾಗಿರುವ ಐಪಿಸಿ 506 ಕಲಂಗೆ ಆರು ತಿಂಗಳು ಜೈಲು ಶಿಕ್ಷೆ, 2500 ರೂ. ದಂಡ, ಕಲಂ 504ಕ್ಕೆ ಸಂಬಂಧಿಸಿದಂತೆ 2500 ರೂ. ದಂಡ ಸೇರಿದಂತೆ 30 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಅಲ್ಲದೇ ದಂಡದ ಹಣದಲ್ಲಿ ಬಾಧಿತ ಸರುಬಾಯಿಗೆ 22,500 ರೂ. ಹಣವನ್ನು ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಎಸ್.ಎಚ್.ಹಕೀಮ ವಾದ ಮಂಡಿಸಿದ್ದರು

ಟಾಪ್ ನ್ಯೂಸ್

taliban

Afghanistan; ತಾಲಿಬಾನ್ ನಿಂದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇಬ್ಬರಿಗೆ ಮರಣದಂಡನೆ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

lion

Big cats; ಸೀತಾ, ಅಕ್ಬರ್ ಜೋಡಿ ಸಿಂಹಗಳ ಹೆಸರು ಬದಲಾಯಿಸಲು ಹೈಕೋರ್ಟ್ ಸೂಚನೆ

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

1-asdasda

Farmer;ಪ್ರತಿಭಟನೆಯಲ್ಲಿ ಮೃತಪಟ್ಟ ಯುವ ರೈತನಿಗೆ ಸಾಲ ಬಾಧೆ,ತಂದೆಗೆ ಆರೋಗ್ಯ ಸಮಸ್ಯೆ

ನೋಡಬನ್ನಿ ಹುಬ್ಬಳ್ಳಿ ‘ಶಿವಶಕ್ತಿಧಾಮ’ದ  ಸೌಂದರ್ಯ.. ದೇವಾಲಯದ ವೈಶಿಷ್ಟ್ಯವೇನು?

ನೋಡಬನ್ನಿ ಹುಬ್ಬಳ್ಳಿ ‘ಶಿವಶಕ್ತಿಧಾಮ’ದ ಸೌಂದರ್ಯ.. ದೇವಾಲಯದ ವೈಶಿಷ್ಟ್ಯವೇನು?

Kalaburagi: ಬಾಲಕಿಯನ್ನು ಬಸ್ಸಿನಿಂದ ಹೊರಗೆಳೆದು ಕತ್ತು ಕೊಯ್ದ ಪರಾರಿಯಾದ ಬಾಲಕರು

Kalaburagi: ಬಾಲಕಿಯನ್ನು ಬಸ್ಸಿನಿಂದ ಹೊರಗೆಳೆದು ಕತ್ತು ಕೊಯ್ದು ಪರಾರಿಯಾದ ಬಾಲಕರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌… ಅಪಾರ ಪ್ರಮಾಣದ ಕಬ್ಬು ಸುಟ್ಟು ಭಸ್ಮ, ಕಂಗಾಲಾದ ರೈತ

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌… ಅಪಾರ ಪ್ರಮಾಣದ ಕಬ್ಬು ಸುಟ್ಟು ಭಸ್ಮ, ಕಂಗಾಲಾದ ರೈತ

Vijayapur City Corporation Budget; ನಗರದ ಜನತೆಗೆ ಸುಳ್ಳು ಹೇಳಿದ ಮೇಯರ್: ಲೋಣಿ ಆರೋಪ

Vijayapur City Corporation Budget; ನಗರದ ಜನತೆಗೆ ಸುಳ್ಳು ಹೇಳಿದ ಮೇಯರ್: ಲೋಣಿ ಆರೋಪ

16

Vijayapura:ದತ್ತು ಯೋಜನೆಗಾಗಿ ಐತಿಹಾಸಿಕ ತಾಜ್ ಬಾವಡಿ ಪರಿಶೀಲನೆ: ಮುಂಬೈ ಮೂಲದ ಸಂಸ್ಥೆ ಭೇಟಿ

Chadchan

Chadchan town; ಬಸ್‍ಗಳ ಮಧ್ಯೆ ಡಿಕ್ಕಿ; 40 ಪ್ರಯಾಣಿಕರಿಗೆ ಗಾಯ

Vijayapura; ಫೆ.24 ರಂದು ಇಂಡಿ ಪಟ್ಟಣದಲ್ಲಿ ಜಿಲ್ಲಾ ಗಾಣಿಗ ಸಮಾವೇಶ

Vijayapura; ಫೆ.24 ರಂದು ಇಂಡಿ ಪಟ್ಟಣದಲ್ಲಿ ಜಿಲ್ಲಾ ಗಾಣಿಗ ಸಮಾವೇಶ

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

taliban

Afghanistan; ತಾಲಿಬಾನ್ ನಿಂದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಇಬ್ಬರಿಗೆ ಮರಣದಂಡನೆ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

2024ರ ಐಪಿಎಲ್‌ ವೇಳಾಪಟ್ಟಿ: ಚೆನ್ನೈ -ಬೆಂಗಳೂರು ನಡುವೆ ಮೊದಲ ಪಂದ್ಯ

lion

Big cats; ಸೀತಾ, ಅಕ್ಬರ್ ಜೋಡಿ ಸಿಂಹಗಳ ಹೆಸರು ಬದಲಾಯಿಸಲು ಹೈಕೋರ್ಟ್ ಸೂಚನೆ

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

Lok sabha Election 2024: ಮಾರ್ಚ್‌ 9ರ ನಂತರ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ?

1-asdasda

Farmer;ಪ್ರತಿಭಟನೆಯಲ್ಲಿ ಮೃತಪಟ್ಟ ಯುವ ರೈತನಿಗೆ ಸಾಲ ಬಾಧೆ,ತಂದೆಗೆ ಆರೋಗ್ಯ ಸಮಸ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.