ನಲಿ-ಕಲಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಬೀಳಗಿ ಸಲಹೆ


Team Udayavani, Nov 18, 2020, 6:09 PM IST

ನಲಿ-ಕಲಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಬೀಳಗಿ ಸಲಹೆ

ಸಿಂದಗಿ: ಮಕ್ಕಳು ನಲಿಯುತ್ತ ಕಲಿಯಲಿ ಎಂಬ ಕಾರಣಕ್ಕೆ ಸರ್ಕಾರ ಜಾರಿಗೊಳಿಸಿರುವ ನಲಿ-ಕಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಹೇಳಿದರು.

ಮಂಗಳವಾರ ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ತಾಲೂಕಿನ ನಲಿ-ಕಲಿ ಶಿಕ್ಷಕರಿಗೆ ಹಮ್ಮಿಕೊಂಡಿರುವ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜ್ಞಾನ ಪ್ರವೇಶಿಸುವಿಕೆಯ ಹಂತದಲ್ಲಿರುವ ನಲಿಕಲಿ ಮಕ್ಕಳಿಗೆ ಪ್ರತಿಯೊಬ್ಬರೂ ಸಂದರ್ಭಕ್ಕನುಗುಣವಾಗಿ ತಮ್ಮ ಸಹಾಯ ಹಾಗೂ ಪ್ರೇರಣೆಯ ಮೂಲಕ ಜ್ಞಾನವನ್ನು ಕಟ್ಟಿಕೊಡಬೇಕು. ಅಂದಾಗ ಮಾತ್ರ ಭವಿಷ್ಯದ ಭಾರತ ಈ ಮಕ್ಕಳಿಂದ ಉಜ್ವಲಗೊಳ್ಳುತ್ತದೆ ಎಂದು ಹೇಳಿದರು.

ಕನ್ನಡ ಮಾಧ್ಯಮದ ತರಗತಿಗಳಲ್ಲಿ ನಲಿ-ಕಲಿ ಕಲಿಕಾ ವ್ಯವಸ್ಥೆಯಡಿ ಇಂಗ್ಲಿಷ್‌ ಬೋಧನೆಯನ್ನು ಪರಿಣಾಮಕಾರಿಯಾಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ತಿರ್ಮಾನಿಸಿದೆ. ಆದ್ದರಿಂದ ನಲಿ-ಕಲಿಯಲ್ಲಿ ಆಟ ಚಟುವಟಿಕೆಗಳ ಮೂಲಕ ಇಂಗ್ಲಿಷ್‌ ಕಲಿಸಲು ಶಿಕ್ಷಕರು ಮುಂದಾಗಬೇಕು ಎಂದು ಹೇಳಿದರು. ಕನ್ನಡ ಮಾಧ್ಯಮದ 1ರಿಂದ 3ನೇ ತರಗತಿಗಳಿಗೆನಲಿ-ಕಲಿ ಇಂಗ್ಲಿಷ್‌ ಪಠ್ಯದ ಜತೆಗೆ ಆ್ಯಕ್ಟಿವಿಟಿ ಕಾರ್ಡ್‌ ಕೂಡ ನೀಡಲಾಗುವುದು. ಈ ನಿಟ್ಟಿನಲ್ಲಿ ನಲಿ-ಕಲಿ ಶಿಕ್ಷಕರಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ತಾಲೂಕಿನಲ್ಲಿ 340 ಪ್ರಾಥಮಿಕ ಶಾಲೆಗಳಲ್ಲಿನ 484 ಘಟಕಗಳಲ್ಲಿ ಮಕ್ಕಳಿಗೆ ನಲಿಕಲಿ ಚಟುವಟಿಕೆ ಮೂಲಕಇಂಗ್ಲಿಷ್‌ ಕಲಿಸಲಾಗುತ್ತದೆ. ಪ್ರತಿ ಘಟಕದಲ್ಲಿ 30 ವಿದ್ಯಾರ್ಥಿಗಳು ಇರುತ್ತಾರೆ ಎಂದರು.

ಆ್ಯಕ್ಟಿವಿಟಿ ಕಾರ್ಡ್‌ಗಳು ಚಟುವಟಿಕೆ ಆಧಾರಿತ ಇಂಗ್ಲಿಷ್‌ ಕಲಿಕೆ ವಿಧಾನವಾಗಿದೆ. 1ರಿಂದ 3ನೇ ತರಗತಿಗಳ ಮಕ್ಕಳನ್ನು ತಲಾ 30 ವಿದ್ಯಾರ್ಥಿಗಳ ಯುನಿಟ್‌ಗಳಾಗಿ ವಿಂಗಡಿಸಲಾಗುವುದು. ಪ್ರತಿಯೊಂದು ಯುನಿಟ್‌ಗೆ ಒಂದರಂತೆ ಕಲಿಕಾ ಸಾಮಗ್ರಿ ಮತ್ತು ಕಲಿಕಾ ವಿಧಾನ ಒಳಗೊಂಡ ಒಂದು ಸೆಟ್‌ ಆ್ಯಕ್ಟಿವಿಟಿ ಕಾರ್ಡ್‌ ನೀಡಲಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಜೆ.ಬಿ. ಪಾಟೀಲ, ಗೀತಾ ಪಿರಗಾ, ಬಿ.ಎಸ್‌. ಟಕ್ಕಳಕಿ, ರೇಖಾ ಬಿಜ್ಜರಗಿ ಮಾತನಾಡಿ, ನಲಿಕಲಿ ಬೋಧನಾ ಪದ್ಧತಿಯಲ್ಲಿ ಪೂರ್ವ ಸಿದ್ಧತ ಹಂತ, ಕಲಿಕಾ ಪೂರಕ ಹಂತ, ಕಲಿಕಾಂಶ ಹಂತ, ಅಭ್ಯಾಸ ಹಂತ, ಬಳಕೆ ಹಂತ ಮತ್ತು ಮೌಲ್ಯಮಾಪನ ಹಂತ ಎನ್ನುವ ಕಲಿಕಾ ಗೋಪುರದ ಆರು ಹಂತಗಳಿರುತ್ತವೆ. ಶಿಕ್ಷಕ ಭಾಗಶಃ ಸಹಾಯ, ಶಿಕ್ಷಕರ ಸಂಪೂರ್ಣ ಸಹಾಯ, ಗೆಳೆಯನ ಭಾಗಶಃ ಸಹಾಯ ಮತ್ತು ಸ್ವ ಕಲಿಕೆ ಎಂಬ ಐದು ತಟ್ಟೆಗಳಿರುತ್ತದೆ. ಮಗು ಮೇಲಿನ ಆರು ಹಂತಗಳನ್ನು ತಟ್ಟೆಯ ಚಲನೆಯೊಂದಿಗೆ ತನ್ನ ಮೈಲಿಗಲ್ಲನ್ನು ಪೂರೈಸುತ್ತಾನೆ ಎಂದು ತಿಳಿಸಿದರು.

ಕಲಿಕಾ ಏಣಿ, ಮೆಟ್ಟಿಲು, ಲೋಗೊ, ಪ್ರಗತಿ ನೋಟ, ಕಾರ್ಡ, ವಾಚಕ, ಅಭ್ಯಾಸ ಪುಸ್ತಕ, ಮಕ್ಕಳ ಕಪ್ಪು ಹಲಗೆ, ಕಲಿಕಾ ಚಪ್ಪರ, ಗುಂಪು ತಟ್ಟೆ, ಹವಾಮಾನ ನಕ್ಷೆ ಇವು ನಲಿಕಲಿ ಪದ್ಧತಿಯಲ್ಲಿರುವ ಪರಿಕಲ್ಪನೆಗಳಿಂದ ಮಕ್ಕಳಲ್ಲಿ ಕಲಿಕೆ ಉಂಟಾಗುತ್ತದೆ. ಇವುಗಳ ಬಳಕೆಯ ಪ್ರಮಾಣ ಅಧಿಕಗೊಂಡಷ್ಟು ಮಗುವಿನ ಕಲಿಕೆ ಹೆಚ್ಚು ದೃಢಿಕರಣಗೊಳ್ಳುವುದು ಮತ್ತು ಕಲಿಕಾ ಮಟ್ಟ ಮೇಲ್ಮುಖವಾಗಿ ಚಲನೆಗೊಳ್ಳುವುದು. ನಲಿಕಲಿ ಬೋಧನೆ ವಿಧಾನದಲ್ಲಿ ಶಿಕ್ಷಕ ಬೊಧನೆಗೆ ಹೆಚ್ಚು ಅವಕಾಶವಿರುವುದಿಲ್ಲ. ಆದರೆ ಗಮನಿಸುವಿಕೆ ಮತ್ತು ಅನುಕೂಲಿಸುವಿಕೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಪೂರ್ವಸಿದ್ಧತೆ ಚಟುವಿಕೆಯಿಂದ ಮಗು ಸ್ವಕಲಿಕೆಗೆ ಓಳಗೊಳ್ಳುವವರೆಗೂ ಮೇಲಿನವರು ಮಗುವಿನ ಕಲಿಕೆಯಲ್ಲಿ ಸಹಕಾರವಾಗಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.

ತಾಲೂಕಿನ ವಿವಿಧ ಶಾಲೆಗಳ ನಲಿಕಲಿ ಶಿಕ್ಷಕರಾದ ಎಂ.ಎಸ್‌. ಮಠ, ಪುಷ್ಪಾವತಿ, ವಿಜಯಲಕ್ಷ್ಮೀ ಎಚ್‌. ಕೆ., ಎಂ.ಆರ್‌. ಕಂಟಿಗೊಂಡ, ಎಸ್‌.ಜಿ. ಸಪಲಿ, ಬಿ.ಆರ್‌. ಹಿಟ್ನಳ್ಳಿ, ಬಿ.ಎಂ. ನಂದಿಕೋಲ, ಎಸ್‌.ಕೆ. ಕಟ್ಟಿಮನಿ, ಬಿ.ಎಸ್‌. ಚಿಂಚೋಳಿ, ಚಿ.ಪಿ. ಶಹಾಬಾದಿ,ಎಸ್‌.ಎಸ್‌. ವಾಲೀಕಾರ, ಡಿ.ಆರ್‌. ಚಾವರ, ಬಿ.ಎಸ್‌.ಸಿದರಡ್ಡಿ, ಜಿ.ಜಿ. ಮಾಲಾಬಗಿ, ಡಿ.ವಿ. ಅಡವಿ, ಚಂದು ನಾಯಕ, ಜಿ.ಎಸ್‌. ನಿಡೋಶಿ, ವಿ.ಕೆ. ನಾಯಕ, ಎಚ್‌.ಎಸ್‌. ಅವಟಿ, ಬಿ.ಆರ್‌. ಮಳ್ಳಿ, ಎಸ್‌.ಕೆ. ಮೂಡಗಿ, ಎಸ್‌.ಜಿ. ಆಲಮೇಲ, ಸಿ.ಪಿ. ತಳವಾರ, ಬಿ.ಟಿ. ಸಾತಿಹಾಳ, ಬಿ.ಸಿ. ಕನ್ನೊಳ್ಳಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.