Fishing: ಹೊಗೇನಕಲ್‌ನಲ್ಲಿ ಮೀನುಗಾರಿಕೆ ಕಲ್ಪಿಸಿ


Team Udayavani, Oct 26, 2023, 3:50 PM IST

tdy-13

ಗುಂಡ್ಲುಪೇಟೆ: ಹೊಗೇನಕಲ್‌ ನದಿ ಭಾಗದಲ್ಲಿ ಮೀನುಗಾರಿಕೆ ನಡೆಸಲು ಅರಣ್ಯ ಇಲಾಖೆ ಅನುಮತಿ ನಿರಾಕರಿಸುತ್ತಿದೆ. ಇದರಿಂದ 200ಕ್ಕೂ ಅಧಿಕ ಕುಟುಂಬಸ್ಥರು ಬೀದಿಗೆ ಬೀಳು ವಂತಾಗಿದೆ ಎಂದು ಒಳನಾಡು ಬಂದರು ಮತ್ತು ಮೀನು ಗಾರಿಕೆ ಸಚಿವ ಮಂಕಾಳ ವೈದ್ಯ ಅವರ ಮುಂದೆ ಮೀನುಗಾರರು ಅಳಲು ತೋಡಿಕೊಂಡರು.

ಭರವಸೆ: ಪಟ್ಟಣದ ಹೊರ ವಲಯದ ಮೀನು ಗಾರಿಕೆ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ಮೀನು ಗಾರರ ಜತೆ ನಡೆದ ಸಂವಾದದಲ್ಲಿ ಮಾತ ನಾಡಿದ ಮೀನುಗಾರರು, ಹೊಗೇನಕಲ್‌ ವ್ಯಾಪ್ತಿ ಯ ತಮಿಳುನಾಡು ಭಾಗದಲ್ಲಿ ಮೀನುಗಾರಿಕೆ ಅವ ಕಾಶವಿದೆ. ಆದರೆ, ನಮ್ಮ ವ್ಯಾಪ್ತಿಯಲ್ಲಿ ಅರಣ್ಯಧಿ ಕಾರಿಗಳು ಅವಕಾಶ ನೀಡುತ್ತಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಸಚಿವರು, ಸಂಬಂಧಿಸಿದ ಇಲಾಖೆ ಜತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಏತ ನೀರಾವರಿ ಕೆರೆಗಳಲ್ಲಿ ಮೀನು ಸಾಕಣೆಗೆ ಮೀನುಗಾರರ ಸಂಘಕ್ಕೆ ನೀಡಬೇಕು. ಒಂದು ಹೆಕ್ಟೇರ್‌ಗೆ 3 ಸಾವಿರ ಹಣವಿದ್ದು ಕಡಿಮೆ ಮಾಡಬೇಕು. ಗುಂಡ್ಲುಪೇಟೆ ಭಾಗದ ಕೆರೆಗಳಿಗೆ ನೀರು ತುಂಬಿಸಿ ಮೀನುಗಾರಿಕೆಗೆ ಉತ್ತೇಜನ ನೀಡಬೇಕು. ಹಾಗೆಯೇ ಪೊದೆ ತೆರವು ಹಾಗೂ ಹೂಳು ತೆಗೆಸುವಂಂತೆ ಮನವಿ ಮಾಡಿದರು.

ತಾಲೂಕಿನಲ್ಲಿ ಉಪ್ಪಾರ ಸಮುದಾಯ ಮೀನುಗಾರಿಕೆ ನಡೆಸುತ್ತಿದ್ದು, 2 ಮೀನುಗಾರಿಕೆ ಸಹಾಯಕ ಸಂಘ ಕಾರ್ಯ ನಿರ್ವಹಿಸುತ್ತಿವೆ. ಈಗಾಗಲೇ ಎರಡು ಕೆರೆ ಗುತ್ತಿಗೆ ನೀಡಿದ್ದು, ಮತ್ತೂಂದು ಕೆರೆಯನ್ನು ಕಡಿಮೆ ದರಕ್ಕೆ ಗುತ್ತಿಗೆಗೆ ನೀಡುವಂತೆ ಅಣ್ಣೂರುಕೇರಿ ಗ್ರಾಮದ ಮಹದೇವಶೆಟ್ಟಿ ಮನವಿ ಮಾಡಿಕೊಂಡರು.

ಐಸ್‌ ಖರೀದಿಸಲು ಮೈಸೂರಿಗೆ ಹೋಗ ಬೇಕಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಐಸ್‌ ಫ್ಯಾಕ್ಟರಿ ತೊರೆಯುವಂತೆ ಮೀನುಗಾರರು ಮನವಿ ಮಾಡಿಕೊಂಡರು. ಇದಕ್ಕೆ ಉತ್ತರಿಸಿದ ಸಚಿವರು, ಶೇ.50 ಸಬ್ಸಿಡಿ ನೀಡಲಾಗುತ್ತದೆ. ಸಹಕಾರ ಸಂಘಗಳಿಗೆ ಅಗತ್ಯ ಸಾಲ ಒದಗಿಸಲಾಗುವುದು. ಬಳಕೆ ಮಾಡಿಕೊಳ್ಳಿ ಎಂದು ಸೂಚಿಸಿದರು.

ಮನೆ ಮಂಜೂರಾತಿ: ಪಟ್ಟಣ ವ್ಯಾಪ್ತಿಯಲ್ಲಿ ಮೀನು ಮಾರಾಟಕ್ಕೆ ಮಳಿಗೆಗಳಲ್ಲಿ ಅವಕಾಶ ಮಾಡಿಕೊಡಬೇಕು. ಮೀನು ಕೊಂಡೊಯ್ಯಲು ವಾಹನ ವ್ಯವಸ್ಥೆ ಕಲ್ಪಿಸಿ, ಸಮರ್ಪಕ ದೋಣಿ, ಬಲೆ ಕೊಡಿಸಬೇಕು. ಜತೆಗೆ ಮನೆ ಮಂಜೂರಾತಿ ಮಾಡಿಕೊಡುವಂತೆ ಮನವಿ ಮಾಡಿದರು. ಶಾಸಕ ಎಚ್‌.ಎಂ.ಗಣೇಶಪ್ರಸಾದ್‌ ಮಾತನಾಡಿ, ತಾಲೂಕು ವ್ಯಾಪ್ತಿಯ ಮೀನುಗಾರಿಗೆ ಉತ್ತೇಜನ ನೀಡಲು ಕೆರೆಗಳಲ್ಲಿ ತುಂಬಿರುವ ಹೂಳನ್ನು ಸಣ್ಣ ನೀರಾವರಿ ಸೇರಿ ಆಯಾ ಇಲಾಖೆ ವ್ಯಾಪ್ತಿಯ ಬರುವ ಅಧಿಕಾರಿಗಳಿಗೆ ಸೂಚಿಸಿ ತೆಗೆಸಲಾಗುವುದು. ಜತೆಗೆ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದೆಂದರು.

ಮೀನುಗಾರಿಕೆ ನಿರ್ದೇಶಕ ದಿನೇಶ್‌ ಕುಮಾರ್‌ ಕಳ್ಳೇರ್‌, ಜಂಟಿ ನಿರ್ದೇಶಕ ಗಣೇಶ್‌, ಮೀನುಗಾರಿಕೆ ಉಪ ನಿರ್ದೇಶಕ ಮಂಜೇಶ್ವರ್‌, ಚಾಮರಾಜನಗರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಪ್ರಶಾಂತ್‌, ತಾಲೂಕು ಸಹಾಯಕ ನಿರ್ದೇಶಕ ವಿವೇಕ್‌, ಪುರಸಭೆ ಸದಸ್ಯ ಎನ್‌.ಕುಮಾರ್‌ ಇತರರಿದ್ದರು.

ಮೀನುಗಾರರ ಹಿತಕಾಯಲು ಸರ್ಕಾರ ಬದ್ಧ : ಮೀನುಗಾರರ ಹಿತಕಾಯಲು ಸರ್ಕಾರ ಬದ್ಧವಾಗಿದೆ ಎಂದು ಒಳನಾಡು ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದರು. ಪಟ್ಟಣದ ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ಮಾತನಾಡಿ, ಮೀನುಗಾರಿಕೆ ಮಾಡುವವರಿಗೆ ಸೂರು ಕಲ್ಪಿಸಬೇಕು ಎಂದು ಉದ್ದೇಶದಿಂದ ಆಶ್ರಯ ಮನೆ ಯೋಜನೆಯಡಿ ಮನೆ ಮಂಜೂರಾತಿಗೆ ಸಿದ್ಧತೆ ನಡೆಸ ಲಾಗುತ್ತಿದೆ. ತಾಲೂಕಿನಲ್ಲಿ 15 ಮಂದಿಗೆ ಮನೆ ಮಂಜೂರು ಮಾಡಲಾಗುವುದೆಂದರು.

ಜಿಲ್ಲಾ ವ್ಯಾಪ್ತಿಯಲ್ಲಿ ಮೀನು ಸಾಕಣೆ ಮತ್ತು ಮಾರಾಟ ಕಡಿಮೆ ಇರುವ ಹಿನ್ನೆಲೆ ಸಮುದ್ರದ ಮೀನು ತಂದು ಇಲ್ಲಿ ಮಾರಾಟ ಮಾಡಬಹುದಾ ಎಂಬುದರ ಮಾಹಿತಿ ಪಡೆದು ಸಮುದ್ರದ ಮೀನು ತರಲು ಪ್ರಯತ್ನಿಸಲಾಗುವುದು. ಅಷ್ಟೇ ಅಲ್ಲದೆ ಮೀನುಗಾರಿಕೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದೆಂದರು.

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.