ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಅಗತ್ಯ

ಸಭೆಯಲ್ಲಿ ಇಮ್ಮಡಿ ಮುರುಘ ರಾಜೇಂದ್ರ ಶ್ರೀ ನುಡಿ • ಸಂವಿಧಾನ ಕಲಂನಡಿ ಪ್ರತ್ಯೇಕತೆ ಇಂಗಿತ

Team Udayavani, May 22, 2019, 8:26 AM IST

ಚಾಮರಾಜನಗರ: ಬಸವಾದಿ ಶರಣರು ಸ್ಥಾಪನೆ ಮಾಡಿರುವ ವೀರಶೈವ ಲಿಂಗಾಯತ ಧರ್ಮ ಸಂವಿಧಾನ ಕಲಂನಲ್ಲಿ ಪ್ರತ್ಯೇಕ ಧರ್ಮವಾಗುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು ಹಾಗೂ ಮಹಾಸಭಾದ ಪ್ರಮುಖರು ಒಗ್ಗಟ್ಟು ಪ್ರದರ್ಶಿಸಿ ಮುಂದಿನ ಪೀಳಿಗೆಗೆ ಒಳ್ಳೆಯದನ್ನು ಮಾಡಲು ಮುಂದಾಗಬೇಕೆಂದು ಮರಿಯಾಲ ಮಠಾಧ್ಯಕ್ಷರಾದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಮರಿಯಾಲ ಶ್ರೀ ಮುರುಘರಾಜೇಂದ್ರ ಸ್ವಾಮಿ ಮಠದಲ್ಲಿ ಮಂಗಳವಾರ ನಡೆದ ಅಖೀಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹೋಬಳಿ ಘಟಕದ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಾತಿಗೆ ಮಾರ್ಪಾಡು: 12ನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಕ್ರಾಂತಿ ಮೂಲಕ ವೀರಶೈವ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದರು. ಸಾಮಾಜಿಕ ಕ್ರಾಂತಿಗೆ ಕಾರಣರಾದರು. ವಿಶ್ವದಲೇ ಈ ಧರ್ಮ ಹೆಚ್ಚು ಪ್ರಚಾರವನ್ನು ಪಡೆದುಕೊಂಡಿತ್ತು. ಇಂಥ ಧರ್ಮ ಕಾಲ ಕ್ರಮೇಣ ಜಾತಿಯಾಗಿ ಮಾರ್ಪಾಡಾ ದದ್ದು ವಿಷಾದನೀಯ.

ಧರ್ಮದ ಆಸಕ್ತಿ: ತಾಲೂಕು ಮಹಾಸಭಾದ ಗೌರವ ಅಧ್ಯಕ್ಷ ಶ್ರೀ ಚೆನ್ನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಮಹಾಸಭೆ ಸಂಘಟನಾತ್ಮಕವಾಗಿ ಸದಸ್ಯರಾಗಿ ಪದಾಧಿಕಾರಿಗಳಾಗಿ ತೊಡಗಿಸಿಕೊಳ್ಳಬೇಕು. ಸಮಾಜಮುಖೀಯಾಗಿ ಚಿಂತನೆ ಮಾಡುವ ಮೂಲಕ ಯುವ ಪೀಳಿಗೆಗೆ ಧರ್ಮದ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಬೇಕು ಎಂದರು.

ಘಟಕ ರಚನೆ: ಮಹಾಸಭಾದ ತಾಲೂಕು ಅಧ್ಯಕ್ಷ ಹೊಸೂರು ನಟೇಶ್‌ ಪ್ರಾಸ್ತಾವಿಕವಾಗಿ ಮಾತನಾಡಿ, ವೀರಶೈವ ಮಹಾಸಭೆ ಸಂಘಟನೆಯನ್ನು ಗ್ರಾಮ ಮಟ್ಟದಲ್ಲಿ ಸಕ್ರಿಯಗೊಳಿಸಿ, ಗ್ರಾಪಂ ಘಟಕ ರಚನೆ ಅತ್ಯಗತ್ಯವಾಗಿದೆ. ಯುವಕರನ್ನು ಸಹ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಯುವ ಘಟಕವನ್ನು ಸ್ಥಾಪನೆ ಅಸ್ತಿತ್ವಕ್ಕೆ ತರಲಾಗಿದೆ. ಪಂಚಾಯಿತಿ ಮಟ್ಟದಲ್ಲಿ ಅಸಕ್ತಿ ಹೊಂದಿರುವ ಯುವಕರು ಹಾಗೂ ಸಮಾಜದ ಬಂಧುಗಳು ಹೆಸರು ನೀಡುವ ಮುಲಕ ಮಹಾಸಭೆಯ ಸಂಘಟನೆಯನ್ನು ಬಲಗೊಳಿಸಲು ಮುಂದಾಗಬೇಕು ಎಂದರು.

ಬೆಂಬಲ: ರಾಜ್ಯ ಸಮಿತಿ ನಿರ್ದೇಶಕ ಹೆಗ್ಗವಾಡಿಪುರ ಮಹದೇವಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಜಿಲ್ಲಾ ಕೇಂದ್ರ ದಲ್ಲಿ ಬಸವ ಭವನ ನಿರ್ಮಾಣಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಹೆಚ್ಚಿನ ರೀತಿಯ ಬೆಂಬಲ ನೀಡ ಬೇಕು. ಇದೊಂದು ಭವನ ಸಮಾಜದ ಆಸ್ತಿಯಾ ಗಬೇಕಾಗಿದೆ. ರಾಜ್ಯದಲ್ಲಿ ರಾಜಕೀಯ ಪಕ್ಷಗಳು ವೀರಶೈವ ಲಿಂಗಾಯತ ಸಮಾಜಕ್ಕೆ ಸಾಮಾಜಿಕ, ಅರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಹೋಬಳಿ ಘಟಕದಿಂದ ನೂತನ ಅಧ್ಯಕ್ಷ ಹೊಸೂರು ನಟೇಶ್‌ ಮತ್ತು ನಿರ್ದೇಶಕರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ಗ್ರಾಪಂ ಘಟಕ ಅಧ್ಯಕ್ಷರ ನೇಮಕ: ಕಸಬಾ ಹೋಬಳಿ ವ್ಯಾಪ್ತಿಯ ಮಹಾಸಭಾ ಗ್ರಾಪಂ ಘಟಕವನ್ನು ಅಸ್ತಿತ್ವಕ್ಕೆ ತರಲಾಯಿತು. ಹೆಗ್ಗೋಠಾರ ಪಂಚಾಯಿತಿಗೆ ಅಧ್ಯಕ್ಷರಾಗಿ ಗೌಡಿಕೆ ಮಾದಪ್ಪ, ಭೋಗಾಪುರ ಗ್ರಾಪಂ ಅಧ್ಯಕ್ಷರಾಗಿ ಕಸ್ತೂರು ಬಸವಣ್ಣ, ಬಸವಗುಪ್ಪೆ ಗ್ರಾಪಂಗೆ ಬಿ.ಎಸ್‌. ಮಹದೇವಪ್ಪ, ಕೂಡ್ಲೂರು ಗ್ರಾಪಂಗೆ ಡಿ.ಎಂ. ಹುಚ್ಚಪ್ಪ, ಮಂಗಲ ಗ್ರಾಪಂಗೆ ಯಡಿಯೂರು ಪ್ರಕಾಶ್‌, ಮಾದಾಪುರ ಗ್ರಾಪಂಗೆ ಕಿರಗಸೂರು ನಾಗರಾಜು ಅವರನ್ನು ನೇಮಕ ಮಾಡಿ, ಸ್ವಾಮೀಜಿಗಳ ನೇತೃತ್ವದಲ್ಲಿ ಶಾಲು ಹೊದಿಸಿ, ಅಭಿನಂದಿಸಲಾಯಿತು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಬಸವಣ್ಣ, ಸದಸ್ಯರಾದ ನೀಲಮ್ಮ ಬಸವಣ್ಣ, ಎಪಿಎಂಸಿ ನಿರ್ದೇಶಕ ನಾಗೇಂದ್ರ, ಹೋಬಳಿ ಅಧ್ಯಕ್ಷ ಕೆಲ್ಲಂಬಳ್ಳಿ ಬಸವಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀಕಂಠಮೂರ್ತಿ, ನಿರ್ದೇಶಕ ವೈ.ಪಿ. ರಾಜೇಂದ್ರ, ಕೆ. ನಾಗರಾಜು, ಬಿರ್ಲ ನಾಗರಾಜು, ಜಿ. ಕುಮಾರಸ್ವಾಮಿ, ಗುರುಸ್ವಾಮಿ, ಮಂಜು, ಪಾರ್ವತಮ್ಮ, ಮಂಜುಳಾ, ನಿರ್ಮಲಾ, ನಾಗಮಣಿ, ದೊಡ್ಡರಾಯಪೇಟೆ ಗಿರೀಶ್‌ ಇತರರು ಇದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ