ಶೋಷಿತ ಹಾಗೂ ಹಿಂದುಳಿದ ವರ್ಗಗಳ ಪರ ಬಸವಣ್ಣ ಧ್ವನಿ


Team Udayavani, May 8, 2019, 3:00 AM IST

shoshita

ಗುಡಿಬಂಡೆ: ಲಿಂಗ, ಜಾತಿ ಬೇಧಗಳನ್ನೆಲ್ಲಾ ಮುರಿದು ಸರ್ವರೂ ಸಮಾನರೆಂದು ಸಾರಿರುವ ಬಸವಣ್ಣ ಸಮಾನತೆಯ ಹರಿಕಾರ ಎಂದು ತಹಶೀಲ್ದಾರ್‌ ಹನುಮಂತರಾಯಪ್ಪ ಬಣ್ಣಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತ್ಯುತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಸವಣ್ಣನವರು ಉನ್ನತ ಸಮುದಾಯದಲ್ಲಿ ಜನಿಸಿದರೂ ಶೋಷಿತ ಹಾಗೂ ಹಿಂದುಳಿದ ವರ್ಗಗಳ ಪರ ಧ್ವನಿ ಎತ್ತಿದ ಮಹನೀಯ. ಬಸವಣ್ಣನವರ ತತ್ವ, ಆದರ್ಶಗಳು° ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

12ನೇ ಶತಮಾನದಲ್ಲಿ ಸಮಾಜದ ಶೋಷಿತ ವರ್ಗಗಳ ಪರವಾಗಿ ಬಸವಣ್ಣನವರು ನಿಂತಿದ್ದರು. ಎಲ್ಲರೂ ಸಮಾನರು ಎಂದು ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದಿದ್ದರು. ಅಲ್ಲದೇ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಿಸಿದರು ಎಂದು ವಿವರಿಸಿದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಗ್ರಾಮ ಲೆಕ್ಕಾಧಿಕಾರಿ ವಿದ್ಯಾ, ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯಬೇಕೆಂದು ಪ್ರತಿಪಾದಿಸಿದ್ದ ಬಸವಣ್ಣನವರು, ಕಾಯಕವೇ ಕೈಲಾಸ ಎಂಬುದನ್ನು ವಚನಗಳಲ್ಲಿ ತಿಳಿಸಿದ್ದಾರೆ.

12ನೇ ಶತಮಾನದಲ್ಲಿಯೇ ಬಸವಣ್ಣ ಸಮ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಬಸವಣ್ಣನವರ ಕನಸು ನನಸು ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಲಿಂಗತಾರತಮ್ಯ, ವರ್ಗ ತಾರತಮ್ಯ, ಜಾತಿ ತಾರತಮ್ಯ ಹೋಗಲಾಡಿಸುವ ಚಿಂತನೆ ಸಮಾಜಕ್ಕೆ ನೀಡಿದ ಅವರು ಧಾರ್ಮಿಕತೆಗೆ ಹೊಸ ವ್ಯಾಖ್ಯಾನ ನೀಡಿ ಬಡವರಿಗೂ ದೇವರ ಕಾಣುವ, ದೇವಸ್ಥಾನ ಕಟ್ಟುವ ಹಕ್ಕಿದೆ ಎಂಬುವುದನ್ನು ಮೊಟ್ಟ ಮೊದಲಿಗೆ ಅರಿವು ಮೂಡಿಸಿದರೆಂದರು.

ಕನ್ನಡ ಸಾಹಿತ್ಯ ಪರಿಷತ್‌ ನಿಕಟ ಪೂರ್ವ ಅಧ್ಯಕ್ಷ ಸ.ನ ನಾಗೇಂದ್ರ ಮಾತನಾಡಿ, ಶತಮಾನಗಳ ಹಿಂದೆ ಇದ್ದ ಮೌಡ್ಯ, ಕಂದಾಚಾರ ಪದ್ಧತಿಗಳು 21ನೇ ಶತಮಾನದಲ್ಲೂ ಆಚರಣೆಯಲ್ಲಿವೆ.

ಮೇಲು, ಕೀಳು, ಜಾತಿ ಎಂಬ ಸಂಪ್ರದಾಯ ಜೀವಂತವಾಗಿದೆ. ಇದನ್ನು ಹೋಗಲಾಡಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು. ಎಲ್ಲಾ ಕುಲ ಕಸಬುಗಳ ವ್ಯಕ್ತಿಗಳ ಕಾಯಕಕ್ಕೆ ಗೌರವ ನೀಡಿ ಅಸಮಾನತೆ ಹೋಗಲಾಡಿಸಲು ಪಣ ತೊಟ್ಟಿದ್ದರು ಎಂದರು.

12 ಶತಮಾನದ ಕಾಲಘಟ್ಟದಲ್ಲಿ ಬಸವಣ್ಣವನರು ಹಾಕಿಕೊಂಡ ಸಮಾಜ ಸುಧಾರಣೆ ಅಭಿವೃದ್ಧಿ ಚಿಂತನೆಗಳು ಎಲ್ಲಾ ಕಾಲಗಳಲ್ಲೂ ಪ್ರಸ್ತುತವೆನ್ನಿಸುತ್ತದೆ. ಅವರ ಚಿಂತನೆಗಳ ಸಾಕಾರ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಲವು ಸರ್ಕಾರಗಳು ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರೇರಣೆ ಎಂದು ಬಣ್ಣಿಸಿದರು.

ದಯೆ ಧರ್ಮದ ಮೂಲ ಎಂಬ ಸಾರವನ್ನು ಸನಾತನ, ಬೌದ್ಧ, ಸಿಖ್‌, ಜೈನ, ಇಸ್ಲಾಂ ಧರ್ಮಗಳಲ್ಲಿ ಅಡಕವಾಗಿದ್ದರೂ ಅದನ್ನು ಸಮಾಜಕ್ಕೆ ತೀರಾ ನಿಕಟವಾಗಿ ತಲುಪಿಸಿದವರಲ್ಲಿ ಬಸವಣ್ಣನವರು ಓರ್ವರು. ಕಲ್ಮಶ ರಹಿತ ಮನಸ್ಸಿನಿಂದ ಶಾಂತಿ ಪ್ರಾಪ್ತಿ.

ಪ್ರಜಾಸತ್ತಾತ್ಮಕ ದೇಗುಲ ಬಾಗಿಲು ತೆರೆಸುವ ಮೂಲಕ ಅಸಂಖ್ಯಾತ ದೀನ, ದಲಿತ, ದುರ್ಬಲ ಜನಾಂಗದವರ ಮನಗೆಲ್ಲುವಂತೆ ಮಾಡಿದ್ದರೆಂದರು. ಈ ವೇಳೆ ರೇಷ್ಮೆ ಇಲಾಖೆಯ ಮ.ಗ.ಹೆಗಡೆ, ಸಮಾಜ ಕಲ್ಯಾಣ ಇಲಾಖೆಯ ದಾಸಪ್ಪ, ತೋಟಗಾರಿಕೆ ಇಲಾಖೆ ರವಿಕುಮಾರ್‌, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

Rain ಕರಾವಳಿ: ಜೂ.26ರ ವರೆಗೆ ಬಿರುಸಿನ ಮಳೆ ಸಾಧ್ಯತೆ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ

ಕರಾವಳಿಯ ಪ್ರಮುಖ ದೇಗುಲಗಳಲ್ಲಿ ಭಕ್ತಸಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-chikkaballapura

Chikkaballapur: ಯೋಗಾ ದಿನಾಚರಣೆಯಲ್ಲಿ ರಾಜಕೀಯ ಕಡು ವೈರಿಗಳ ಸಂಗಮ

Cow

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

Chikkaballapura; ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕ ಸಾವು

Chikkaballapura; ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕ ಸಾವು

Kodi Mutt Seer expressed his opinion regarding actor Darshan’s case

ನಟ ದರ್ಶನ್ ಪ್ರಕರಣಕ್ಕೆ ಸಂಬಂಧಿಸಿ ಅಭಿಪ್ರಾಯ ವ್ಯಕ್ತಪಡಿಸಿದ ಕೋಡಿ ಮಠದ ಶ್ರೀಗಳು

9

Monsoon: ಕುರಿ, ಕೋಳಿ ಸಾಕಾಣಿಕೆ ಜೋರು!

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

Exam

NEET ಮಹಾರಾಷ್ಟ್ರದಲ್ಲೂ ಅಕ್ರಮ ಬಹಿರಂಗ

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Highway ಕಾಮಗಾರಿ ಅವ್ಯವಸ್ಥೆ: ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ!

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Surathkal ಕುಳಾಯಿ ಕಿರು ಜೆಟ್ಟಿಯ ಬ್ರೇಕ್‌ವಾಟರ್‌ ಕಲ್ಲು ಸಮುದ್ರಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.