ಅಕ್ರಮ ಕಟ್ಟಡ ನಿರ್ಮಾಣಕ್ಕೆ ತಡೆ

ತಾಲೂಕು ಆಡಳಿತಕ್ಕೆ ಡೀಸಿ ಸೂಚನೆ

Team Udayavani, Sep 30, 2020, 2:32 PM IST

CB-TDY-1

ಚಿಂತಾಮಣಿ: ಸರ್ಕಾರಿ ಖರಾಬ್‌ನಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ದೂರು ನೀಡಿರುವ ಹಿನ್ನೆಲೆ ಜಿಲ್ಲಾಧಿಕಾರಿಗಳು ಕಟ್ಟಡ ನಿರ್ಮಾಣ ತಡೆಯುವಂತೆ ತಾಲೂಕು ಆಡಳಿತಕ್ಕೆ ಆದೇಶಿಸಿದ ಏಳು ದಿನಗಳ ನಂತರ ತಾಲೂಕು ಆಡಳಿತದಿಂದ ಒತ್ತುವರಿದಾರರಿಗೆ ಮಂಗಳವಾರ ನೋಟಿಸ್‌ ನೀಡಲಾಗಿದೆ.

ಪ್ರಕರಣದ ವಿವರ: ಮಾಳ್ಳಪಳ್ಳಿ ಗ್ರಾಮ ಸರ್ವೆ ನಂ.63 ಮತ್ತು 65 ರ ಜಮೀನನ್ನು ಪರಿವರ್ತನೆ ಮಾಡಿ ಬಡಾವಣೆ ನಿರ್ಮಾಣ ಮಾಡಿ ಅದರ ಅಭಿವೃದ್ಧಿ ವೇಳೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿರುವುದಾಗಿ ಈ ಕುರಿತು ಕ್ರಮ ಕೈಗೊಳ್ಳದ ಸ್ಥಳೀಯ ಅಧಿಕಾರಿಗಳ ಹಾಗೂ ಒತ್ತುವರಿದಾರರ ವಿರುದ್ಧ ಅಶ್ವಿ‌ನಿ ಬಡಾವಣೆ ನಿವಾಸಿ ಮಂಜುನಾಥ ಮತ್ತು ಪೌರಕಾರ್ಮಿಕ ಬಡಾವಣೆಯ ನಿವಾಸಿ ಕೆ.ಎನ್‌.ಅನಿಲ್‌ ಕುಮಾರ್‌ರವರು ಜಿಲ್ಲಾ ಅಸಿಸ್ಟೆಂಟ್‌ ಕಮಿಷನರ್‌, ತಾಲೂಕು ದಂಡಾಧಿಕಾರಿ, ಪೌರಾಯುಕ್ತರು ಹಾಗೂ ಜಗದೀಶ್‌ ಎಂಬುವರ ವಿರುದ್ಧ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.

ಸೂಚನಾ ಪತ್ರ: ಎದುರುದಾರ ಜಗದೀಶ್‌ ಎಂಬುವರು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದನ್ನು ತಡೆಯುವಂತೆ ದೂರುದಾರರು ಒತ್ತಾಯಿಸಿದ್ದ ಪರಿಣಾಮ ಜಿಲ್ಲಾಧಿಕಾರಿಗಳು ಸದರಿ ವಿವಾದಿತ ಸ್ಥಳದಲ್ಲಿನ ಕಟ್ಟಡ ಕಾಮಗಾರಿಯನ್ನು ತಡೆಯುವಂತೆ ಆದೇಶಿಸಿ ಜಿಲ್ಲಾಧಿಕಾರಿಗಳು ಕಳೆದ ಆ.22 ರಂದೇ ತಾಲೂಕು ಆಡಳಿತಕ್ಕೆ ಸೂಚನಾ ಪತ್ರ ನೀಡಲಾಗಿತ್ತು. ಸ್ಥಳೀಯ ಕಂದಾಯ ಅಧಿಕಾರಿಗಳು ಭೂ ಒತ್ತುವರಿದಾರರೊಂದಿಗೆ ಶಾಮೀಲಾಗಿ ಏಳು ದಿನಗಳು ಕಳೆದರೂ ಒತ್ತುವರಿದಾರರಿಗೆ ನೋಟಿಸ್‌ ನೀಡದಿದ್ದನ್ನು ಅರಿತ ದೂರುದಾರರು ತಾಲೂಕು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಮಂಗಳವಾರ ಬೆಳಗ್ಗೆ 11 ಗಂಟೆ ಸಮಯದಲ್ಲಿ ಒತ್ತುವರಿದಾರರಿಗೆ ನೋಟಿಸ್‌ ನೀಡಿದ್ದರಾದರೂ ಕಟ್ಟಡ ಕಾಮಗಾರಿ ಕೆಲಸ ಮಾತ್ರ ತಡೆಯದೆ ಹಿಂತಿರುಗಿದ್ದರು ಎಂದು ತಿಳಿದು ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ತಾಲೂಕು ದಂಡಾಧಿಕಾರಿ ಹನುಮಂತ ರಾಯಪ್ಪ ಜಿಲ್ಲಾಧಿಕಾರಿಗಳು ಆದೇಶ ನೀಡಿದ ಮರು ದಿನವೇ ನಾನು ನೋಟೀಸ್‌ ಜಾರಿ ಮಾಡಿದ್ದೀನಿ ಎಂದು ತಿಳಿಸಿದ್ದಾರೆ. ದಂಡಾಧಿಕಾರಿಗಳು ಜಾರಿ ಮಾಡಿದ ನೋಟಿಸ್‌ 7 ದಿನಗಳ ತಡವಾಗಿ ಒತ್ತುವರಿದಾರರಿಗೆ ನೀಡಿರು ವುದು ಕಂಡರೆ ಸ್ಥಳೀಯ ಕಂದಾಯ ವೃತ್ತ ನಿರೀಕ್ಷಕರು ಜಿಲ್ಲಾಧಿಕಾರಿಗಳ ಆದೇಶ ನಿರ್ಲಕ್ಷಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಸೋಮವಾರ ನನ್ನಕೈಗೆ ಜಿಲ್ಲಾಧಿಕಾರಿಗಳ ನೋಟಿಸ್‌ ಪ್ರತಿ ದೊರೆತಿದೆ. ಮೇಲಧಿಕಾರಿಗಳ ಆದೇಶದಂತೆ ಮಂಗಳವಾರ ಒತ್ತುವರಿದಾರರಿಗೆ ನೋಟಿಸ್‌ ಜಾರಿ ಮಾಡಿದ್ದೇವೆ. ಅಂಬರೀಶ್‌, ಕಸಬಾ ಹೋಬಳಿ ಕಂದಾಯ ವೃತ್ತ ನಿರೀಕ್ಷಕ

ಟಾಪ್ ನ್ಯೂಸ್

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

BelagaviBelagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Belagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Udupi ವಿದೇಶದಲ್ಲಿ ಉದ್ಯೋಗ ಆಮಿಷ; ಹೊಟೇಲ್‌ ವೈಟರ್‌ಗೆ ಲಕ್ಷಾಂತರ ರೂ.ವಂಚನೆ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

Belthangady ಸೋಮಂತಡ್ಕದಲ್ಲಿ ನಿಯಂತ್ರಣ ತಪ್ಪಿ ಕಾರು ಪಲ್ಟಿ

1-weqeqwe

IPL; ಸಾಯಿ ಸುದರ್ಶನ್ ಹೊಸ ದಾಖಲೆ ; ಗಿಲ್ ಮತ್ತೊಂದು ಶತಕದ ಕಮಾಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

police

Chikkaballapur: ಆಂಧ್ರದಿಂದ ಗಾಂಜಾ ತರುತ್ತಿದ್ದ ಇಬ್ಬರ ಬಂಧನ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

10

Drought relief: ಕೇಂದ್ರದ ಬರ ಪರಿಹಾರಕ್ಕೆ ಕಾದು ಕುಳಿತ ರೈತರು

Mangoes: ಹಣ್ಣುಗಳ ರಾಜ ಮಾವು ಈ ಬಾರಿ ದುಬಾರಿ

Mangoes: ಹಣ್ಣುಗಳ ರಾಜ ಮಾವು ಈ ಬಾರಿ ದುಬಾರಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Minchu

Chincholi: ಸಿಡಿಲು ಬಡಿದು ಕೂಲಿ‌ ಕಾರ್ಮಿಕ ಮಹಿಳೆ‌ ಮೃತ್ಯು,ಪುತ್ರನಿಗೆ ಗಂಭೀರ ಗಾಯ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಉಳ್ಳಾಲ: ಕಾರು ಅಪಘಾತ; ಮೂವರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Road Mishap ಬಿ.ಸಿ.ರೋಡು: ಕಾರುಗಳ ಢಿಕ್ಕಿ; ಇಬ್ಬರಿಗೆ ಗಾಯ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

Kasaragod ಮಾಯಿಪ್ಪಾಡಿ: ಅಂತಾರಾಜ್ಯ ವಾಹನ ಕಳ್ಳರ ಬಂಧನ

BelagaviBelagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Belagavi ಖಾನಾಪುರದಲ್ಲಿ ಅಪಘಾತ; ಪುತ್ತೂರು ಕಾಂಗ್ರೆಸ್‌ ಮುಖಂಡ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.