ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ
Team Udayavani, Dec 29, 2020, 6:39 PM IST
ಶೃಂಗೇರಿ: ಕ್ಷೇತ್ರದ ಅಭಿವೃದ್ಧಿಗೆ ನನಗೆ ದೊರಕಿರುವ ಅವಕಾಶದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿ,ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದೇನೆ ಎಂದುಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಡಿ.ಎನ್. ಜೀವರಾಜ್ ಹೇಳಿದರು.
ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿಯಾಗಿ ನೇಮಕಗೊಂಡಡಿ.ಎನ್. ಜೀವರಾಜ್ ಅವರನ್ನು ಶೃಂಗೇರಿಬಿಜೆಪಿ ಕಾರ್ಯಕರ್ತರು ಅವರ ಸ್ವಗೃಹದಲ್ಲಿಅಭಿನಂದಿಸಿದ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆ ಇದ್ದು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುತ್ತದೆ. ಕಸ್ತೂರಿ ರಂಗನ್ ವರದಿ ಮಲೆನಾಡಿಗೆ ತೂಗುಕತ್ತಿಯಾಗಿದ್ದು, ಇದು ಕಾಂಗ್ರೆಸ್ ಸರಕಾರದಪಾಪದ ಕೂಸಾಗಿದೆ. ಜನಸಾಮಾನ್ಯರಿಗೆಇದರಿಂದ ಉಂಟಾಗುವ ತೊಂದರೆ
ಬಗ್ಗೆ ಅರಿವಿದ್ದು, ಮುಖ್ಯಮಂತ್ರಿಗಳ ಬಳಿಸಂಸದರೊಂದಿಗೆ ಸೇರಿ ಈ ಬಗ್ಗೆ ಚರ್ಚಿಸಲಾಗಿದೆ.ಅತಿವೃಷ್ಠಿಯಿಂದ ಗ್ರಾಮೀಣ ಭಾಗದ ರಸ್ತೆಹಾಳಾಗಿದ್ದು, ಇವುಗಳನ್ನು ಆದ್ಯತೆ ಮೇಲೆಮರು ಡಾಂಬರೀಕರಣ ಗೊಳಿಸಲಾಗುತ್ತದೆ.ಅತಿವೃಷ್ಠಿ ಪರಿಹಾರದ ರೂಪದಲ್ಲಿ ರೈತರಿಗೆ ಈಗಾಗಲೇ ಅವರ ಖಾತೆಗೆ ನೇರವಾಗಿ ಜಮಾಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಕಂತು ಸಹ ರೈತರಖಾತೆಗೆ ಜಮಾ ಆಗಿದೆ ಎಂದರು.
ಜಿಪಂ ಸದಸ್ಯ ಬಿ. ಶಿವಶಂಕರ್ ಮಾತನಾಡಿ, ಕ್ಷೇತ್ರದ ಸಮಸ್ಯೆ ಬಗ್ಗೆ ಕಾಳಜಿ ಹೊಂದಿರುವಡಿ.ಎನ್. ಜೀವರಾಜ್‌ಗೆ ಉನ್ನತ ಹುದ್ದೆದೊರಕಿರುವುದು ಕ್ಷೇತ್ರದ ಜನರಿಗೆ ಸಂದಗೌರವವಾಗಿದೆ. ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸುವ ವಿಶ್ವಾಸವಿದೆ ಎಂದರು.
ಡಿ.ಎನ್. ಜೀವರಾಜ್ ಅವರನ್ನು ಇದೇಸಂದರ್ಭದಲ್ಲಿ ಅಭಿನಂದಿಸಲಾಯಿತು. ಬಿಜೆಪಿಮುಖಂಡರಾದ ತಲಗಾರು ಉಮೇಶ್,ಮಾವಿನಕಾಡು ರಂಗನಾಥ್, ರಾಮಕೃಷ್ಣ ರಾವ್,ವೇಣುಗೋಪಾಲ್, ಎಂ.ಎಲ್. ಪ್ರಕಾಶ್, ಅರುಣ್, ನೂತನಕುಮಾರ್, ಹರೀಶ್ ಶೆಟ್ಟಿ, ರಾಧಿಕಾ, ಶ್ರೀವಿದ್ಯಾ ಇದ್ದರು
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444