ಕೆಎಫ್‌ಡಿ ನಿಯಂತ್ರಣಕ್ಕೆ ಅಗತ್ಯ ಕ್ರಮ

ಪ್ರತಿ ಮನೆಗಳಿಗೂ ಚುಚ್ಚು ಮದ್ದು ಡಿಎಂಪಿ ಎಣ್ಣೆ ವಿತರಣೆ: ಡಾ| ಪ್ರಭು

Team Udayavani, Feb 12, 2020, 5:25 PM IST

12-February-28

ಎನ್‌.ಆರ್‌.ಪುರ: ಕೆಎಫ್‌ಡಿ ನಿಯಂತ್ರಣಕ್ಕಾಗಿ ಅನೇಕ ತಂಡಗಳನ್ನು ರಚಿಸುವುದರ ಮೂಲಕ ರೋಗ ಹರಡಂತೆ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಡಿಎಚ್‌ಒ ಡಾ| ಪ್ರಭು ಹೇಳಿದರು.

ಮಂಗಳವಾರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಕೆಎಫ್‌ಡಿ ತಡೆಗೆ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಜನರು ಈ ಸಮಯದಲ್ಲಿ ಸೊಪ್ಪು, ದರುಗುಗಳನ್ನು ತರಲು ಕಾಡಿಗೆ ಹೋಗುವುದು ಜಾಸ್ತಿ. ಆದ್ದರಿಂದ ಇಲಾಖೆಯಲ್ಲಿ ಸಾಕಾಗುವಷ್ಟು ಪ್ರಮಾಣದಲ್ಲಿ ಡಿಎಂಪಿ ಎಣ್ಣೆ ಹಾಗೂ ಚುಚ್ಚು ಮದ್ದುಗಳು ಲಭ್ಯವಿದ್ದು, ಶಂಕಿತ ಪ್ರದೇಶಗಳಲ್ಲಿ ಕೆಎಫ್‌ಡಿ ತೀವ್ರತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಪ್ರತಿ ಮನೆಗಳಿಗೂ ತೆರಳಿ ಚುಚ್ಚುಮದ್ದುಗಳನ್ನು, ಡಿಎಂಪಿ ಎಣ್ಣೆ ವಿತರಿಸಲಾಗುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಕೆಎಫ್‌ಡಿ ಪ್ರಕರಣ ಪತ್ತೆಯಾಗಿದೆ. ಆದರೆ ಇದು ಇನ್ನೂ ಹರಡದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖಾ ಅಧಿ ಕಾರಿಗಳು, ಜನಪ್ರತಿನಿಧಿಗಳ ಸಹಕಾರ ಬೇಕು. ಜನರಲ್ಲಿ ಮೊದಲು ಮಂಗನ ಕಾಯಿಲೆ ಬಗ್ಗೆ ಅರಿವನ್ನು ಮೂಡಿಸಬೇಕು.

ಕರಪತ್ರಗಳನ್ನು ಹಂಚುವ ಮೂಲಕ, ಐಇಸಿ ಚಟುವಟಿಕೆಮಾಡುವುದರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಆನರು ಕೆಎಫ್‌ಡಿ ಬಗ್ಗೆ ಆತಂಕಪಡುವ ಅವಶ್ಯಕತೆಯಿಲ್ಲ. ಈಗಾಗಲೇ ಈ ಸೋಂಕು ಹರಡದಂತೆ ಇಲಾಖೆಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜನರು ತಮಗೆ ಜ್ವರ ಬಂದಾಗ ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿಯೇ ಮಾತ್ರೆಗಳನ್ನು ನುಂಗಿ, ಕಡಿಮೆಯಾಯಿತು ಎಂದು ಭಾವಿಸಬಾರದು.

ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಜ್ವರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರಿ ಆಸ್ಪತ್ರೆಗೆ ಆಗಮಿಸಿ, ಅಗತ್ಯ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ವೈದ್ಯರು ಎಲ್ಲ ರೀತಿಯ ರಕ್ತ ಪರೀಕ್ಷೆ ಮಾಡುತ್ತಾರೆ. ಜ್ವರ ನಂತರವೂ ಕಂಡುಬಂದಲ್ಲಿ ರಕ್ತದ ಮಾದರಿಯನ್ನು ಸಂಶೋಧನಾ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ಈಗಾಗಲೇ ಸೋಂಕು ಕಂಡು ಬಂದಿರುವ ಮಡಬೂರು ಎಸ್ಟೇಟ್‌ಗೆ ತೆರಳಿ 39 ಜನರಿಗೆ ಚುಚ್ಚು ಮದ್ದು ನೀಡಲಾಗಿದೆ. 4 ರಿಂದ 5 ಮಕ್ಕಳು 6 ವರ್ಷಕ್ಕಿಂತ ಚಿಕ್ಕವರಾಗಿದ್ದು, ಅವರಿಗೆ ಚುಚ್ಚುಮದ್ದು ನೀಡುವುದಿಲ್ಲ. 6 ವರ್ಷ ಮೇಲ್ಪಟ್ಟ ಎಲ್ಲರಿಗೂ ಚುಚ್ಚುಮದ್ದು ನೀಡಲಾಗಿದೆ.

ಜಿಲ್ಲಾ ಆರೋಗ್ಯ ಇಲಾಖೆಯಿಂದ ಎರಡು ವಾಹನಗಳನ್ನು ಎನ್‌.ಆರ್‌.ಪುರ ತಾಲೂಕಿನ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಿದ್ದು, ನಿಯಂತ್ರಣ ತಂಡಗಳು ಪ್ರತಿ ಮನೆ ಮನೆಗೂ ಭೇಟಿಯನ್ನು ನೀಡಲಿದ್ದು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರೂ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ರ್ಯಾಪಿಡ್‌ ರೆಸ್ಪಾಂಡ್‌ ಟೀಂ ರಚಿಸಿ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯವಾಗುತ್ತಿದೆ ಎಂದರು.

ಡಾ.ಎಲ್ದೋಸ್‌ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿ, 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಎಂಬಲ್ಲಿ ಮಂಗಗಳು ಒಟ್ಟಾಗಿ ಸಾವನ್ನಪ್ಪಿದ್ದವು. ಒಂದು ಮಂಗ ಸತ್ತಿದ್ದರೆ ಸೋಂಕು ಪತ್ತೆ ಹಚ್ಚುತ್ತಿರಲಿಲ್ಲ. ಆದರೆ ನೂರಾರು ಮಂಗಳು ಸಾಮೂಹಿಕವಾಗಿ ಮರಣ ಹೊಂದಿದ್ದರಿಂದ ಈ ಬಗ್ಗೆ ಸಂಶೋಧನೆ ನಡೆಸಿದಾಗ ಮಂಗನ ಕಾಯಿಲೆ ಪತ್ತೆಯಾಗಿದೆ. ಅದಕ್ಕಾಗಿ ಈ ಸೋಂಕಿಗೆ ಕ್ಯಾಸನೂರು ಕಾಡಿನ ರೋಗ ಎಂದೇ ಹೆಸರಿಡಲಾಗಿದೆ.

ತಾಲೂಕಿಗೆ ಈಗಾಗಲೇ ಕೆಎಫ್‌ಡಿ ಪ್ರಕರಣ ಪತ್ತೆಯಾಗಿದೆ. ಇನ್ನು ಯಾರಿಗೂ ಹರಡದಂಎತ ನಾವು ಎಚ್ಚರವಹಿಸಬೇಕು ಎಂದರು. ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ.ವಿಜಯಕುಮಾರ್‌ ಮಾತನಾಡಿ, ಆರೋಗ್ಯ ಇಲಾಖೆಯ ರೀತಿಯಲ್ಲಿ ಪಶು ಇಲಾಖೆಯೂ ಕೂಡ ಅಗತ್ಯ ಕ್ರಮಗಳ ಬಗ್ಗೆ ಕಾರ್ಯಾಚರಣೆ ಮಾಡುತ್ತಿದೆ. ಜಾನುವಾರುಗಳ ಮೈ ಮೇಲಿನ ಹಾಗೂ ಒಣಗಿದ ದರ್ಗು, ಸೊಪ್ಪುಗಳ ಉಣ್ಣೆಯಿಂದ ಈ ಸೋಂಕು ಹರುಡುವುದರಿಂದ ಜಾನುವಾರುಗಳು ಕಾಡಿಗೆ ಹೋಗಿ ಬಂದ ಕೂಡಲೇ ಸೈಪರ್‌ ಮೆಥ್ರಿನ್‌ ಹಾಗೂ ಡೆಲ್ಟಾ ಮೆಥ್ರಿನ್‌ ಎಂಬ ಔಷಧ ಇಲಾಖೆಯಲ್ಲಿ ಸಾಕಾಗುವಷ್ಟು ದಾಸ್ತಾನು ಇರಿಸಲಾಗಿದ್ದು, ರೈತರಿಗೆ ವಿತರಿಸಲಾಗುತ್ತಿದೆ ಎಂದರು.

ತಹಶೀಲ್ದಾರ್‌ ನಾಗರಾಜ್‌ ಮಾತನಾಡಿ, ಕಂದಾಯ ಇಲಾಖೆ ಗ್ರಾಮಲೆಕ್ಕಿಗರಿಗೆ, ಕಂದಾಯ ನಿರೀಕ್ಷಕರಿಗೂ ಈ ಸೋಂಕಿನ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸಲು ಕರಪತ್ರ ಹಂಚಲು ಸೂಚಿಸಲಾಗಿದೆ ಎಂದರು. ತಾಪಂ ಇಒ ಎಸ್‌ .ನಯನ, ವೈದ್ಯಾಧಿಕಾರಿಗಳಾದ ಡಾ.ವಿನಯ್‌, ಡಾ| ನರಸಿಂಹಮೂರ್ತಿ, ಡಾ.ಸುರೇಶ್‌, ಉಪ ಅರಣ್ಯ ವಲಯಾ ಧಿಕಾರಿ ಗೌಸ್‌  ಹಿಯುದ್ದೀನ್‌, ಪ್ರಭಾರ ಬಿಇಒ ಧನಂಜಯ ಮೇದೂರು,
ಆರೋಗ್ಯ ಹಿರಿಯ ನಿರೀಕ್ಷಕರಾದ ಪಿ.ಪ್ರಬಾಕರ್‌, ಬೇಬಿ, ವೈ.ಲಲಿತಾ ಮತ್ತಿತರರು ಇದ್ದರು. ಇದ್ದರು.

ಟಾಪ್ ನ್ಯೂಸ್

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1—dsdasd

Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.