Separate country;ಜಿನ್ನಾ ಈ ತಪ್ಪು ಮಾಡಿದ್ದರು:ಸುರೇಶ್ ಹೇಳಿಕೆಗೆ ವಿನಯ್ ಗುರೂಜಿ ಕಿಡಿ
ಮುಖ್ಯಮಂತ್ರಿಯಾಗಿ ಅಣ್ಣಾಮಲೈ.. ಭವಿಷ್ಯವಲ್ಲ ಸಮ್ಯಜ್ಞಾನ
Team Udayavani, Feb 2, 2024, 4:32 PM IST
ಚಿಕ್ಕಮಗಳೂರು : ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಅನಿವಾರ್ಯ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಅವಧೂತ ವಿನಯ್ ಗುರೂಜಿ ಕಿಡಿ ಕಾರಿದ್ದು, ”ಜಿನ್ನಾ ಈ ತಪ್ಪು ಮಾಡಿದ್ದರು, ಗಾಂಧಿ ಅದನ್ನ ಬರೆದಿಡುತ್ತಾರೆ. ನೆಹರೂ-ಜಿನ್ನಾ ಇಬ್ಬರನ್ನೂ ಕೂರಿಸಿ ಗಾಂಧಿ ಮಾತನಾಡುತ್ತಾರೆ.ನಾನಿರುವವರೆಗೂ ನನ್ನನ್ನ ಭಾಗ ಮಾಡಬೇಡಿ ಎಂದು ಕೇಳಿಕೊಂಡಿದ್ದರು ಆದರೆ ಅವತ್ತು ಗಾಂಧಿ ಮಾತನ್ನ ಯಾರೂ ಕೇಳಲಿಲ್ಲ” ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ಕಾರಗೃಹದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್ ಗುರೂಜಿ, ”ಇಂದಿನ ಹಿಂದೂ-ಮಸ್ಲಿಂ ಗಲಾಟೆ, ಹಳ್ಳಿ-ಹಳ್ಳಿಯಲ್ಲೂ ಪ್ರತಿಬಿಂಬಿಸುತ್ತೆ ಎಂದು ಅಂದೇ ಹೇಳಿದ್ದರು. ಇಂದು ದೇಶದಲ್ಲಿ ಆಗುತ್ತಿರುವುದೂ ಅದೇ. ನಮ್ಮ ಅಧಿಕಾರದ ಆಸೆಗೆ ಜಾತಿ-ಧರ್ಮವನ್ನ ಬದಿಗಿಡಬೇಕು. ನಿಮ್ಮ ರಾಜಕೀಯವನ್ನ ಕೆಲಸ-ಟ್ಯಾಲೆಂಟ್ ನಲ್ಲಿ ತೋರಿಸಿ. ಅವರಿವರನ್ನ ಬೈದುಕೊಂಡೇ ವಿಧಾನಸಭೆ ಕಲಾಪ ಮುಗಿಸುತ್ತೀರಿ. ಜನರ ಸಮಯ, ದುಡ್ಡು, ಟ್ಯಾಕ್ಸ್ ನಿಂದ ರಾಜಕಾರಣಿ, ಅಧಿಕಾರಿಗಳ ಸಂಬಳ ನಡೆಯುತ್ತಿದೆ. ಎಲ್ಲರೂ ಈ ಪರಿಜ್ಞಾನ ಇಟ್ಟುಕೊಳ್ಳಬೇಕು, ಆಗ ಇಂತಹ ಭಾಷಣ ಮಾಡುವುದಿಲ್ಲ. ನಾನು-ನೀನು ಅನ್ನೋ ಭೇದ ಹಿಂಸೆ, ನಾನು-ನೀನು ಒಂದು ಅಂದ ದಿನ ಅಹಿಂಸೆ ಎಂದರು.
ಸಮ್ಯಜ್ಞಾನ
ಮುಂದೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಣ್ಣಾಮಲೈ ಪ್ರಮಾಣವಚನ ಸ್ವೀಕರಿಸುತ್ತಾರೆ.ಅದನ್ನ ನಾನು ನೋಡುತ್ತೇನೆ, ನೀವೂ ನೋಡುತ್ತೀರಿ. ಇದನ್ನು ನಾನು ಭವಿಷ್ಯ ಅಂತ ಹೇಳುತ್ತಿಲ್ಲ. ಸಮ್ಯಜ್ಞಾನ ಎಂದು ಹೇಳೋಣ. ಮೊನ್ನೆಯಷ್ಟೆ ಅಯೋಧ್ಯೆಯಲ್ಲಿ ರಾಮನ ಪಟ್ಟಾಭಿಷೇಕ ಮುಗಿದಿದೆ. ಸದ್ಯದಲ್ಲೇ ಮೋದಿಯ ಪಟ್ಟಾಭಿಷೇಕವನ್ನೂ ಎಲ್ಲರೂ ನೋಡುತ್ತೇವೆ. ಅಣ್ಣಾಮಲೈ ಎಸ್ ಪಿ ಆಗಿದ್ದಾಗ ಬಂದಿದ್ದರು. 2 ಸೇಬು ಕೊಟ್ಟು, ಖಾಕಿಯಿಂದ ಖಾದಿ ಉಡುತ್ತಾರೆ ಎಂದು ಆಗಲೇ ಹೇಳಿದ್ದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
MUST WATCH
ಹೊಸ ಸೇರ್ಪಡೆ
Koppala: ವೈದ್ಯರ ನಿರ್ಲಕ್ಷ್ಯ-ಚಿಕಿತ್ಸೆ ಫಲಿಸದೇ ಗರ್ಭಿಣಿ ಸಾವು ; ಕುಟುಂಬಸ್ಥರ ಪ್ರತಿಭಟನೆ
Bengaluru: ಸೈಕಲ್ ಕದಿಯುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಬಂಧನ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ