ಕಣಿವೆ ಮಾರಮ್ಮ ದೇವಿ ಸಂಭ್ರಮ ಸಿಡಿ ಉತ್ಸವ


Team Udayavani, Mar 30, 2019, 5:53 PM IST

cta-1

ಚಿತ್ರದುರ್ಗ: ತಾಲೂಕಿನ ಕುಂಚಿಗನಾಳ್‌ ಗ್ರಾಮದ ಶ್ರೀಕಣಿವೆ ಮಾರಮ್ಮ ದೇವಿ ಸಿಡಿ ಉತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ನಡೆಯಿತು.

ಐತಿಹಾಸಿಕ ಚಿತ್ರದುರ್ಗದ ನವ ದುರ್ಗೆಯರಲ್ಲಿ ಕುಂಚಿಗನಾಳ್‌ ಗ್ರಾಮದ ಶ್ರೀಕಣಿವೆ ಮಾರಮ್ಮ ದೇವಿ ಒಂದು ಶಕ್ತಿ ದೇವತೆ. ಈ ದೇವತೆಯ ಸಿಡಿ ಉತ್ಸವ ಶುಕ್ರವಾರ ಜರುಗಿತು. ಮೊಟ್ಟ ಮೊದಲು ದೇವಸ್ಥಾನ ಜೋಗಮ್ಮ ಬೆಳಗ್ಗೆಯಿಂದ ನೀರು, ಆಹಾರ ತ್ಯಜಿಸಿ ಉಪವಾಸವಿದ್ದು, ವಿವಿಧ ಪೂಜಾ ವಿಧಾನಗಳ ಮೂಲಕ ಸಿಡಿ ಉತ್ಸವ ಆಡುವುದು ವಾಡಿಕೆ. ಪ್ರತಿ ವರ್ಷದತಂದೆ ಈ ವರ್ಷರು ಜೋಗಮ್ಮ ಸಿಡಿ ಆಡಿದ ನಂತರ ಭಕ್ತರು ಸಿಡಿ ಉತ್ಸಹ ಆಡಿ ಹರಕೆ ತೀರಿಸಿದರು.

ಶಕ್ತಿ ದೇವತೆ ಕಣಿವೆ ಮಾರಮ್ಮ ದೇವಿ ಜಾತ್ರೆಯ ಪ್ರಮುಖ ಘಟ್ಟ ಸಿಡಿ ಉತ್ಸವ. ಈ ಮಹೋತ್ಸಹವನ್ನು ಭಕ್ತರು ಪ್ರತಿ ವರ್ಷ ಮಾರ್ಚ್‌ನಲ್ಲಿ ಆಚರಿಸಲಿದ್ದಾರೆ. ದುರ್ಗದ ನವ ದುರ್ಗೆಯರಲ್ಲಿ ಮೊಟ್ಟ ಮೊದಲ ಬಾರಿಗೆ ಶ್ರೀಕಣಿವೆ ಮಾರಮ್ಮ ದೇವಿ ಸಿಡಿ ಉತ್ಸವ ನಡೆಯಲಿದೆ. ನಂತರ ಉಳಿದ ಶಕ್ತಿ ದೇವತೆಗಳ ಸಿಡಿ ಉತ್ಸವ ನಡೆಯಲಿದೆ ಎಂದು ಭಕ್ತರು ತಿಳಿಸಿದ್ದಾರೆ.

ಶ್ರೀಕಣಿವೆ ಮಾರಮ್ಮ ದೇವಿಯ ಜಾತ್ರೆ ಅಂಗವಾಗಿ ನಗರದ ಟೌನ್‌ ಪೊಲೀಸ್‌ ಠಾಣೆಯ ಶ್ರೀಕಣಿವೆ ಮಾರಮ್ಮ ದೇವಿ ಮತ್ತು ಕುಂಚಿಗನಾಳ್‌ ಕಣಿವೆ ಮಾರಮ್ಮ ದೇವಿಗೆ ವಿಶೇಷವಾಗಿ ವಿವಿಧ ಪುಷ್ಪಗಳೊಂದಿಗೆ ಪೂಜಾಲಂಕಾರ ಮಾಡಲಾಗಿತ್ತು. ನಗರದ ಟೌನ್‌ ಪೊಲೀಸ್‌ ಠಾಣೆಯ
ಆವರಣದಲ್ಲಿ ಜಾತ್ರೆ ಅಂಗವಾಗಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಆಗಮಿಸಿ ಪ್ರಸಾದ ಸೇವನೆ ಮಾಡಿದರು.

ಉತ್ಸಹ ವಿಶೇಷ: ಶ್ರೀ ಕಣಿವೆ ಮಾರಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಭೂಮಿಗೆ ನೇರವಾಗಿ ಕಂಬವೊಂದನ್ನು ನೆಡಲಾಯಿತು. ಅದಕ್ಕೆ ಮಲ್ಲಕಂಬ ಎಂದು ಕರೆಯುತ್ತಾರೆ. ಕಂಬದ ಮೇಲೆ ತಿರುಗಣಿಯನ್ನು ಇಡಲಾಗುತ್ತದೆ. ಈ ತಿರುಗಣಿಗೆ ಸಮಾನಂತರವಾಗಿ ಪ್ರತಿಷ್ಠಾಪಿಸಲಾಗುವ ಸಿಡಿಗಂಬವು ಸುಲಭವಾಗಿ ತಿರುಗಲು ವ್ಯವಸ್ಥೆ ಮಾಡುತ್ತದೆ. ಕಂಬದ ಒಂದು ತುದಿಗೆ ಮನುಷ್ಯನನ್ನು ಬಟ್ಟೆಯಿಂದ ಕಟ್ಟಿ 3 ಬಾರಿ ಕಂಬ ತಿರುಗಿಸಲಾಗುತ್ತದೆ. ಶುಕ್ರವಾರ ಸಂಜೆ ನಡೆದ ಉತ್ಸವದಲ್ಲಿ ಚಿತ್ರದುರ್ಗ ನಗರ ಪ್ರದೇಶ ಸೇರಿದಂತೆ ಸುತ್ತ ಮುತ್ತಲ ಹಳ್ಳಿಗಳ ಸಹಸ್ರಾರ ಭಕ್ತರ ಸಮ್ಮುಖದಲ್ಲಿ ಹರಕೆ ಹೊತ್ತ ಭಕ್ತರು ಬೇವಿನ ಸೀರೆಯುಟ್ಟು ಮತ್ತು ಸಿಡಿ ಆಡಿ ಹರಕೆ ತೀರಿಸಿದರು. ಈ ಕೌತುಕದ ಕ್ಷಣ ನೋಡಲು ಸಾವಿರಾರು ಭಕ್ತರು ಕಣಿವೆಯಲ್ಲಿ ಸೇರಿದ್ದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.