ಮೊದಲ ಮಳೆ: ಕೊಚ್ಚಿ ಹೋದ ಬೆಳೆ

•ಆಲಿಕಲ್ಲು ಮಳೆಯಿಂದ ಬೆಳೆ ಹಾನಿ •ಬತ್ತಿ ಹೋಗಿದ್ದ ವೇದಾವತಿ-ಸುವರ್ಣಮುಖೀ ನದಿಗಳಿಗೆ ಜೀವ ಕಳೆ

Team Udayavani, May 28, 2019, 9:02 AM IST

cd-tdy-1..

ಚಿತ್ರದುರ್ಗ: ಬಿರು ಬಿಸಿಲಿನಿಂದ ಬೆಂದು ಬಸವಳಿದಿದ್ದ ಜಿಲ್ಲೆಯ ಜನರಿಗೆ ಭಾನುವಾರ ರಾತ್ರಿ ಸುರಿದ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಆಲಿಕಲ್ಲು ಮಳೆ ತಂಪೆರೆದಿದೆ. ಆದರೆ ಇದೇ ವೇಳೆ 174 ಎಕರೆಯಲ್ಲಿನ ಅಡಿಕೆ, ಬಾಳೆ, ಪಪ್ಪಾಯಿ ಫಸಲು ಹಾನಿಯಾಗಿದ್ದು, 18.11 ಲಕ್ಷ ರೂ. ನಷ್ಟವಾಗಿರಬಹುದು ಎಂದು ಅಂದಾಜಿಸಲಾಗಿದೆ.

ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ, ಧರ್ಮಪುರ ಹೋಬಳಿಯ ಮ್ಯಾದನಹೊಳೆ, ಸಮುದ್ರದಹಳ್ಳಿ, ಲಕ್ಕನಾಳ್‌, ಯರಕೇನಾಗೇನಹಳ್ಳಿ, ಚಿಲ್ಲಹಳ್ಳಿ, ಕಂಬದಹಳ್ಳಿ, ಕಂಬತ್ತನಹಳ್ಳಿ, ರಂಗನಾಥಪುರ, ಆದಿವಾಲ ಗೊಲ್ಲರಹಟ್ಟಿ, ವೇಣುಕಲುಗುಡ್ಡ, ಹೂವಿನಹೊಳೆ, ಟಿ. ನಾಗೇನಹಳ್ಳಿ ಮತ್ತಿತರ ಗ್ರಾಮಗಳ ಅಡಿಕೆ, ಬಾಳೆ, ಪಪ್ಪಾಯಿ ಸೇರಿದಂತೆ ಮತ್ತಿತರ ತೋಟಗಾರಿಕಾ ಬೆಳೆ ಸಂಪೂರ್ಣ ನೆಲ ಕಚ್ಚಿದೆ.

ಮ್ಯಾದನಹೊಳೆ, ಸಮುದ್ರದಹಳ್ಳಿಯ ರೈತ ದೇವರಾಜ್‌ ಅವರ 4 ಎಕರೆ ಅಡಿಕೆ, ಬಾಳೆ, ರಂಗನಾಥ ಗೌಡರ 11 ಎಕರೆಯಲ್ಲಿದ್ದ ಅಡಿಕೆ, ಬಾಳೆ ಮತ್ತು ಪಪ್ಪಾಯಿ, ಎಸ್‌.ಎನ್‌. ಭೂಕಾಂತ್‌ ಅವರ 1 ಎಕರೆ ಅಡಿಕೆ, ಯಶೋಧರ ಅವರ ಒಂದೂವರೆ ಎಕರೆ ಅಡಿಕೆ, ಎಸ್‌.ಎನ್‌. ಮೂರ್ಕಣ್ಣಪ್ಪರವರ 3 ಎಕರೆ ಅಡಿಕೆ, ಎಸ್‌.ಆರ್‌. ರಂಗನಾಥ ಅವರ 2 ಎಕರೆ ಅಡಿಕೆ, ಎಚ್.ಎಚ್. ರಾಜಣ್ಣರವರ 2 ಎಕರೆ ಅಡಿಕೆ, ಎಸ್‌.ಆರ್‌.ನಾರಾಯಣ ಅವರ 2 ಎಕರೆ ಅಡಿಕೆ, ಎಸ್‌.ಕೆ. ಬಸವರಾಜ್‌ ಅವರ 1 ಎಕರೆ ಅಡಿಕೆ, ಎಸ್‌.ಕೆ. ಕಣ್ಮೇಶ್‌ ಅವರ 2 ಎಕರೆ ಅಡಿಕೆ, ಎಸ್‌.ಬಿ. ಮಹಲಿಂಗಪ್ಪರವರ ಒಂದೂವರೆ ಎಕರೆ ಅಡಿಕೆ, ಎಸ್‌.ಕೆ. ಶಿವಣ್ಣರವರ 1 ಎಕರೆ ಅಡಿಕೆ, ಎಸ್‌.ಎನ್‌.ಹೆಂಜಾರಪ್ಪ ಒಂದೂವರೆ ಎಕರೆ ಅಡಿಕೆ, ಸಿದ್ದಪ್ಪ ಅವರ ಒಂದೂವರೆ ಎಕರೆ ಅಡಿಕೆ, ಎಸ್‌.ಎಚ್. ಹೊರಕೇರಪ್ಪ ಅವರ 2 ಎಕರೆ ಅಡಿಕೆ, ಎಸ್‌.ಬಿ. ಹಂಪಣ್ಣ ಅವರ 1 ಎಕರೆ ಅಡಿಕೆ, ಕೇಶವಮೂರ್ತಿಯವರ 2 ಎಕರೆ ಅಡಿಕೆ ಸೇರಿದಂತೆ ರೈತರ ಹತ್ತಾರು ಹೆಕ್ಟೇರ್‌ ಪ್ರದೇಶದಲ್ಲಿನ ಫಸಲಿಗೆ ಬಂದಿದ್ದ ಅಡಿಕೆ, ಬಾಳೆ, ಪಪ್ಪಾಯಿ, ದಾಳಿಂಬೆ ಆಲಿಕಲ್ಲು ಮಳೆಯಿಂದಾಗಿ ನಾಶವಾಗಿವೆ. ಅಡಿಕೆ ತೋಟಗಳಲ್ಲಿ ಅಡಿಕೆ ಕಾಯಿಗಳು ಗಾಳಿ ಮತ್ತು ಆಲಿಕಲ್ಲು ಮಳೆಗೆ ನೆಲಕ್ಕುರುಳಿವೆ. ಅಲ್ಲದೆ ನೂರಾರು ಅಡಿಕೆ ಮರಗಳು ಧರಾಶಾಹಿಯಾಗಿವೆ.

ಧರ್ಮಪುರ, ಜವನಗೊಂಡನಹಳ್ಳಿ ಹೋಬಳಿಯ ಕೆಲವು ಹಳ್ಳಿಗಳಲ್ಲಿ ಸುರಿದ ಮಳೆಯಿಂದಾಗಿ ಕೂಡ್ಲಹಳ್ಳಿ ಸಮೀಪ ಹರಿಯುವ ವೇದಾವತಿ ಮತ್ತು ಸುವರ್ಣಮುಖೀ ನದಿಗಳಲ್ಲಿ ನೀರು ಹರಿದಿದೆ. ಅಲ್ಲದೆ ಗೋಕಟ್ಟೆ, ಚೆಕ್‌ಡ್ಯಾಂಗಳು ಒಂದೇ ಮಳೆಗೆ ಭರ್ತಿಯಾಗಿವೆ.

ಬಿರುಗಾಳಿ ಮಳೆಗೆ ಬಾಳೆ ತೋಟಗಳೂ ಹಾನಿಗೀಡಾಗಿವೆ. ಫಸಲಿಗೆ ಬಂದಿದ್ದ ಬಾಳೆ ಕಂದುಗಳು ಮುರಿದುಬಿದ್ದಿವೆ. ಇನ್ನೊಂದು ತಿಂಗಳಲ್ಲಿ ಬಾಳೆಕಾಯಿ ಗೊನೆಗಳು ಕಟಾವಿಗೆ ಬರುತ್ತಿದ್ದವು. ಮಾರುಕಟ್ಟೆಯಲ್ಲಿ ಉತ್ತಮ ದರ ಇದ್ದು ಬೆಳೆಗಾರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಫಸಲಿಗೆ ಬಂದಿದ್ದ ಪಪ್ಪಾಯಿ ತೋಟಗಳಲ್ಲಿನ ಪಪ್ಪಾಯಿ ಹಣ್ಣುಗಳು ನೆಲಕ್ಕುರುಳಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಡಿಕೆ, ತೆಂಗಿನ ತೋಟ ಉಳಿಸಿಕೊಳ್ಳಲು ಉತ್ತಮ ಮಳೆಯಾಗಿರುವ ಸಂತೋಷ ಒಂದು ಕಡೆಯಾದರೆ, ಅಡಿಕೆ ಕಾಯಿ ಬಿದ್ದಿರುವುದು, ಬಾಳೆಗೊನೆ ಮತ್ತು ಅಡಿಕೆ ಮರಗಳು ನೆಲಕ್ಕುರುಳಿರುವುದು ರೈತರಲ್ಲಿ ಆಘಾತ ಮೂಡಿಸಿದೆ.

ಟಾಪ್ ನ್ಯೂಸ್

Ananya Jamwal

ಕಾಲೇಜಿನಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ವಿರೋಧಿಸಿದ್ದ ವಿದ್ಯಾರ್ಥಿನಿಗೆ ಜೀವ ಬೆದರಿಕೆ

ಕೃಷಿ ಕಾಯ್ದೆ ಪ್ರತಿಭಟನೆ ಸ್ಥಳದಲ್ಲಿ ಮಹಿಳೆಯರ ಮೇಲೆ ಹರಿದ ಟ್ರಕ್: ಮೂವರು ಸಾವು!

ಕೃಷಿ ಕಾಯ್ದೆ ಪ್ರತಿಭಟನೆ ಸ್ಥಳದಲ್ಲಿ ಮಹಿಳೆಯರ ಮೇಲೆ ಹರಿದ ಟ್ರಕ್: ಮೂವರು ಸಾವು!

alcohol

10 ರೂ. ಗೆ ನಡೆಯಿತು ಕೊಲೆ! ಸಾರಾಯಿ ಕುಡಿಯಲು ಹಣ ಕೊಡದ ಸ್ನೇಹಿತನನ್ನೇ ಕೊಂದರು!

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ಭಜರಂಗಿಯ ಕಲರ್ ಫುಲ್ ಇವೆಂಟ್ ನಲ್ಲಿ ಸ್ಟಾರ್ಸ್ ಸಂಗಮ

ವಲಸೆ ಕಾರ್ಮಿಕರ ಹತ್ಯೆಗೆ ನೆರವು ನೀಡುತ್ತಿದ್ದ ಉಗ್ರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

ವಲಸೆ ಕಾರ್ಮಿಕರ ಹತ್ಯೆಗೆ ನೆರವು ನೀಡುತ್ತಿದ್ದ ಉಗ್ರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಹಕಾರ ಕ್ಷೇತ್ರದಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂ. ರಾಜಸ್ವ ಸಂಗ್ರಹ

ಸಹಕಾರ ಕ್ಷೇತ್ರದಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂ. ರಾಜಸ್ವ ಸಂಗ್ರಹ

chitradurga news

ಕನ್ನಡಿಗರಲ್ಲಿ ಆತ್ಮಾಭಿಮಾನ ಕೊರತೆ: ಲೀಲಾದೇವಿ ಪ್ರಸಾದ್‌

chitradurga news

ಆರೋಗ್ಯ ಇಲಾಖೆ ಕೊಡುಗೆ ಸ್ಮರಣೀಯ: ಶಾಸಕ ತಿಪ್ಪಾರೆಡ್ಡಿ

chitradurga news

ವರುಣನಬ್ಬರಕ್ಕೆ 25 ಲಕ್ಷ ರೂ. ಹಾನಿ

vidhana soudha

‘ಅನುಗ್ರಹ ಯೋಜನೆ’ ಮುಂದುವರಿಸಲು ಸರ್ಕಾರದ ಆದೇಶ

MUST WATCH

udayavani youtube

ಎತ್ತಿನಭುಜ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರೇ ಎಚ್ಚರ

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

ಹೊಸ ಸೇರ್ಪಡೆ

7nep

ಎನ್‌ಇಪಿ ಅನುಷ್ಠಾನದಲ್ಲಿ ಶಿಕ್ಷಕರ ಪಾತ್ರ ಪ್ರಮುಖ

ದೀಪಾವಳಿ psd

ಪೂರ್ವಿಕಾ ದೀಪಾವಳಿ ಮೆಗಾ ಡೀಲ್‌

6karnataka

ಇತಿಹಾಸದಿಂದ ಪಾಠ ಕಲಿಯೋಣ: ಡಾ| ರೆಡ್ಡಿ ವಿಷಾದ

Ananya Jamwal

ಕಾಲೇಜಿನಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ವಿರೋಧಿಸಿದ್ದ ವಿದ್ಯಾರ್ಥಿನಿಗೆ ಜೀವ ಬೆದರಿಕೆ

37 ಭಿಕ್ಷುಕರು ನಿರಾಶ್ರಿತರ ಕೇಂದ್ರಕ್ಕೆ ರವಾನೆ

37 ಭಿಕ್ಷುಕರು ನಿರಾಶ್ರಿತರ ಕೇಂದ್ರಕ್ಕೆ ರವಾನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.