ಮಲಾಲ-ತಸ್ಲೀಮಾ ಹೋರಾಟ ಮಾದರಿ


Team Udayavani, Jun 1, 2018, 4:41 PM IST

cta-2.jpg

ಚಿತ್ರದುರ್ಗ: ಪಾಕಿಸ್ತಾನದ ಮಲಾಲ, ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರಿನ್‌ ಮಹಿಳಾ ಲೋಕಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಆಧುನಿಕ ಜಗತ್ತಿನ ನಾರಿಯರು ಎಂದು ಮುರುಘಾಮಠದ ಡಾ| ಶಿವಮೂರ್ತಿ ಮುರುಘಾ ಶರಣರು
ಹೇಳಿದರು. ಇಲ್ಲಿನ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ನಡೆದ ಸಹನಾ ಮಾತೃಶ್ರೀ ಸಂಸ್ಥೆಯ 18ನೇ ವಾರ್ಷಿಕೋತ್ಸವದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಗುಂಡೇಟು ತಿಂದ ಮಲಾಲ ಒಂದು ಕಡೆ ಕ್ರಾಂತಿ ಮಾಡುತ್ತಿದ್ದಾರೆ. ಬರವಣಿಗೆ ಮೂಲಕ ಮಹಿಳೆಯರ ಹಕ್ಕನ್ನು ಪ್ರತಿಪಾದಿಸಿದ ತಸ್ಲಿಮಾ ನಸ್ರಿನ್‌ಳನ್ನು ಬಾಂಗ್ಲಾದೇಶದಿಂದ ಗಡಿಪಾರು ಮಾಡಲಾಯಿತು. ಭಯೋತ್ಪಾದಕರ ಗುಂಡಿನ ದಾಳಿಯನ್ನು ಎದುರಿಸಿದಾಗ ಅವರ ತಂದೆ ಮಲಾಲಳನ್ನು ಬ್ರಿಟನ್‌ಗೆ ಕರೆದುಕೊಂಡು ಹೋಗಿ ಕೆಲವು ವರ್ಷಗಳ ಕಾಲ ಅಲ್ಲಿಯೇ ನೆಲೆಸಿದ್ದರು. ಗುಂಡೇಟು ತಿಂದವರಿಗೆ ಪಾಶ್ಚಿಮಾತ್ಯ ದೇಶಗಳು ಆಶ್ರಯ ನೀಡುತ್ತಿವೆ ಎಂದರು.

ಆಯ್ದಕ್ಕಿ ಲಕ್ಕಮ್ಮ ಉಜ್ವಲವಾದ ಬದುಕು ನಡೆಸಿದರು. ಮಹಿಳೆ ತನ್ನಲ್ಲಿರುವ ದಿವ್ಯ ಶಕ್ತಿಯನ್ನು ಹೊರಗಡೆ ಪ್ರದರ್ಶಿಸಬೇಕಾದರೆ ಹಾದಿ ಬೇಕು. ಗನ್‌ಗಳನ್ನು ಎಲ್ಲಾ ಸಂದರ್ಭಗಳಲ್ಲಿ ಬಳಸಲು ಆಗುವುದಿಲ್ಲ. ಆದರೆ ಪೆನ್ನನ್ನು ಯಾವ ಸಂದರ್ಭದಲ್ಲಿಯಾದರೂ ಬಳಸಿ ಬರವಣಿಗೆ ಮೂಲಕ ಭಾವನೆ, ಚಿಂತನೆ, ಆಲೋಚನೆಗಳನ್ನು ಹೊರಹಾಕಬಹುದು. ಅಮೇರಿಕಾ ವೈಟ್‌ಹೌಸ್‌ ಎದುರು ಲೆಬೆನಾನ್‌ನ ಮುದುಕಿಯೊಬ್ಬಳು ಗಾಂಧಿ ಪೋಟೋ ಇಟ್ಟುಕೊಂಡು ಯುದ್ಧ ಬೇಡ, ಶಾಂತಿ ಬೇಕು ಎಂದು ಹದಿನೆಂಟು ವರ್ಷಗಳ ಕಾಲ ಏಕಾಂಗಿ ಧರಣಿ ನಡೆಸಿದಳು. ಹನ್ನೆರಡನೇ ಶತಮಾನದ ವಚನಗಾರ್ತಿಯರು ಅಭಿವ್ಯಕ್ತಿ ಬಳಸಿಕೊಂಡು ಮೌಡ್ಯಗಳನ್ನು ಖಂಡಿಸಿದರು. ದಿವ್ಯ ಶಕ್ತಿ ಪ್ರವೇಶಿಸಿದಾಗ ಮಾತ್ರ ಮಹಿಳೆ ದೊಡ್ಡ ಶಕ್ತಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಿ. ಮಂಜುಳಾ ಮಾತನಾಡಿ, ಯಾವುದೇ ಆಡಂಬರ-ಪ್ರಚಾರ ಇಲ್ಲದೆಯೂ ಸಹನಾ ಮಾತೃಶ್ರೀ ಸಂಸ್ಥೆ ಹದಿನೆಂಟನೇ ವರ್ಷಕ್ಕೆ ಕಾಲಿಟ್ಟಿದೆ ಎಂದರೆ ಸುಲಭದ ಮಾತಲ್ಲ. ಸಂಸ್ಥೆ
ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. 

ನಿವೃತ್ತ ಪ್ರಾಚಾರ್ಯ ಡಾ| ಸಂಗೇನಹಳ್ಳಿ ಅಶೋಕ್‌ಕುಮಾರ್‌ ಮಾತನಾಡಿ, ಆಧುನಿಕ ಆವಿಷ್ಕಾರದಿಂದ ಮನುಷ್ಯ ಸಂಬಂಧಗಳು ಕಳೆದುಹೋಗುತ್ತಿವೆ. ಮಹಿಳೆ ಎಂದರೆ ಹೊರ ರೂಪಕ್ಕಿಂತ ಹೆಚ್ಚಾಗಿ ಅಂತರಂಗದಲ್ಲಿ ಆಕರ್ಷಿಸುವಂತಿರಬೇಕು. ಹೆಣ್ಣನ್ನು ಹೊನ್ನು-ಮಣ್ಣಿಗೆ ಹೋಲಿಸುತ್ತಾರೆ. ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯ, ಅತ್ಯಾಚಾರ, ದಬ್ಟಾಳಿಕೆ ನಡೆಯುತ್ತಿರುವುದು ದುರಂತ ಎಂದು ವಿಷಾದಿಸಿದರು.

ಸಹನಾ ಮಾತೃಶ್ರೀ ಸಂಸ್ಥೆ ಅಧ್ಯಕ್ಷೆ ರೀನಾ ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಸಮಾಜದ ಅಧ್ಯಕ್ಷ ಟಿ.ಎಸ್‌.ಎನ್‌. ಜಯಣ್ಣ, ಮಂಗಳಾ ತಿಲಕ್‌, ಸಂಸ್ಥಾಪಕ ನಿರ್ದೇಶಕರಾದ ನಾಗಮಣಿ ನೀಲಕಂಠಯ್ಯ, ಹೇಮಂತಿನಿ ಪ್ರಕಾಶ್‌, ರೋಹಿಣಿ ಬಸವರಾಜ್‌, ಭಾರತಿ ಮೃತ್ಯುಂಜಯ, ಸುಜಾತಾ ತಮ್ಮಣ್ಣ ಭಾಗವಹಿಸಿದ್ದರು. ಡಾ| ಸುಧಾ ಪ್ರಾರ್ಥಿಸಿದರು. ಸುಜಯಾ ಸ್ವಾಗತಿಸಿದರು.

ಮಹಿಳೆಗೆ ಸಾಂಸ್ಕೃತಿಕ ಪ್ರಜ್ಞೆಯೂ ಮುಖ್ಯ
ವ್ಯವಹಾರಿಕ, ಲೌಕಿಕ ಪ್ರಜ್ಞೆ ಜೊತೆ ಸಾಂಸ್ಕೃತಿಕ ಪ್ರಜ್ಞೆಯೂ ಮಹಿಳೆಗೆ ಬೇಕು. ಇದರಿಂದ ಜೀವನದಲ್ಲಿ ಏನನ್ನಾದರೂ ಸಾ ಧಿಸಬಹುದು. ಸೃಜನಶೀಲತೆ, ಕ್ರಿಯಾಶೀಲತೆಯಿಂದ ಸ್ತ್ರೀಯರು ಅಪ್ರತಿಮ ಮಹಿಳೆಯರಾಗುತ್ತಾರೆ. ಮಹಿಳಾ ಶಕ್ತಿ ಜಾಗೃತವಾಗಲು ಪ್ರತಿ ವರ್ಷ ಮುರುಘಾಮಠದಲ್ಲಿ ನಡೆಯುವ ಶರಣ ಸಂಸ್ಕೃತಿ ಉತ್ಸವದಲ್ಲಿ ಮೂರು ದಿನಗಳ ಕಾರ್ಯಾಗಾರ ಆಯೋಜಿಸುವಂತೆ ಮುರುಘಾ ಶರಣರು ಸಲಹೆ ನೀಡಿದರು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.