ಹೋಟೆಲ್‌ ಮಾಲೀಕರು-ಕಾರ್ಮಿಕರಿಗೆ ರಕ್ಷಣೆ ಕೊಡಿ


Team Udayavani, Jun 12, 2018, 3:59 PM IST

cta-1.jpg

ಚಿತ್ರದುರ್ಗ: ಹೋಟೆಲ್‌ ಮಾಲೀಕರು ಮತ್ತು ಕಾರ್ಮಿಕರ ಮೇಲೆ ನಡೆದ ಹಲ್ಲೆ ಖಂಡಿಸಿ ನಗರದ ಹೋಟೆಲ್‌ಗ‌ಳ ಮಾಲೀಕರು ಹಾಗೂ ಕಾರ್ಮಿಕರು ಚಿತ್ರದುರ್ಗ ಹೋಟೆಲ್‌ ಮತ್ತು ಉಪಹಾರ ಮಂದಿರಗಳ ಸಂಘದ ನೇತೃತ್ವದಲ್ಲಿ ಸೋಮವಾರ ಕಪ್ಪುಪಟ್ಟಿ ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ಹೋಟೆಲ್‌ ಮಾಲೀಕರು, ಕಾರ್ಮಿಕರಿಗೆ ಆಯಾ ಜಿಲ್ಲೆಗಳಲ್ಲಿ ಪೊಲೀಸ್‌ ಇಲಾಖೆ ಸೂಕ್ತ ರಕ್ಷಣೆ ನೀಡಬೇಕು. ಹೋಟೆಲ್‌ ಕಾರ್ಮಿಕರು, ಮಾಲೀಕರ ಮೇಲೆ ಹಲ್ಲೆ ಮಾಡುವುದೆಂದರೆ ನಿತ್ಯ ಅನ್ನ ನೀಡುವ ತಾಯಿ ಮೇಲೆ ಹಲ್ಲೆ ಮಾಡಿದಂತಾಗಲಿದೆ. ಹಲ್ಲೆಕೋರರನ್ನು ಕೂಡಲೇ ಬಂಧಿಸಬೇಕು. ಕಾನೂನಾತ್ಮಕವಾಗಿ ಸೂಕ್ತ ಶಿಕ್ಷೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದ ಬಳಿ ಇರುವ ಹೋಟೆಲ್‌ವೊಂದಕ್ಕೆ ಜೂನ್‌ 6 ರಂದು ರಾತ್ರಿ ರೌಡಿಯಂತಿದ್ದ ಯುವಕರ ಗುಂಪು ಆಗಮಿಸಿ ಹೋಟೆಲ್‌ನಲ್ಲಿ ಆಹಾರ ಸೇವನೆ ಮಾಡಿದೆ. ಬಿಲ್‌ ನೀಡುವ ಸಂದರ್ಭದಲ್ಲಿ, ಆಹಾರ ಸರಿ ಇಲ್ಲ ಎಂದು ಜಗಳ ತೆಗೆದು ಮೂವರು ಕಾರ್ಮಿಕರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಹೆಲ್ಮೆಟ್‌, ಕುಡಿಯುವ ನೀರಿನ ಜಗ್‌ ನಿಂದ ಮನಬಂದಂತೆ ಹಲ್ಲೆ ಮಾಡಿರುವುದೇ ಅಲ್ಲದೆ ಮಂಜುನಾಥ ಬಾಗಲಕೋಟಿ ಎನ್ನುವ ವ್ಯಕ್ತಿ ಹೋಟೆಲ್‌ ಮಾಲೀಕ ನಾರಾಯಣ ಶೆಟ್ಟಿ ಹಾಗೂ ಸಿಬ್ಬಂದಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿದ್ದಾನೆ. ಹೋಟೆಲ್‌ ಮಾಲೀಕರು, ಕಾರ್ಮಿಕರಿಗೆ ಬೆದರಿಕೆ ಹಾಕಲಾಗುತ್ತಿದೆ. ಸಮಾಜದಲ್ಲಿ ಈ ರೀತಿಯಾದರೆ ಉದ್ಯಮ ನಡೆಸುವುದು ಹೇಗೆಂದು ಪ್ರಶ್ನಿಸಿದರು.

ದುಷ್ಕರ್ಮಿಗಳು ಹಲ್ಲೆ ಮಾಡುತ್ತಿರುವುದು ಸೇರಿದಂತೆ ಮಾಲೀಕರು ಮತ್ತು ಹೋಟೆಲ್‌ ಕಾರ್ಮಿಕರು ಹಾಗೂ
ಹಲ್ಲೆಕೋರರ ಮಧ್ಯೆ ನಡೆದ ಪ್ರತಿಯೊಂದು ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಅದನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ಹೋಟೆಲ್‌ಗ‌ಳಿಗೆ ನುಗ್ಗಿ ಹೋಟೆಲ್‌ ಮಾಲೀಕರು, ಕಾರ್ಮಿಕರ ಮೇಲೆ ಹಲ್ಲೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ತಿಂಡಿ-ಊಟದ ಹೋಟೆಲ್‌ಗ‌ಳ ಮಾಲೀಕರು, ಕಾರ್ಮಿಕರು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಸ್ವೀಟ್‌ ಅಂಗಡಿಗಳು, ಬೇಕರಿ ಮಾಲೀಕರು, ಕಾರ್ಮಿಕರಿಗೆ ಸೂಕ್ತ ರಕ್ಷಣೆ  ನೀಡುವಂತೆ ಮನವಿ ಮಾಡಿದರು.

ಚಿತ್ರದುರ್ಗ ಹೋಟೆಲ್‌ ಮತ್ತು ಉಪಹಾರ ಮಂದಿರಗಳ ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್‌. ಅರುಣ್‌ ಕುಮಾರ್‌, ಖಜಾಂಚಿ ಫಣಿರಾಜ್‌, ಶ್ರೀನಿವಾಸ್‌ ಉಪಾಧ್ಯ, ಶರಣ್‌ಕುಮಾರ್‌, ಕೆ. ಸಂಜೀವ, ಪ್ರಭುವಯ್ಯ, ವಾಸುದೇವ ರಾವ್‌, ಮಂಜುನಾಥ್‌, ಲಕ್ಷ್ಮೀನಾರಾಯಣ, ನಾಗರಾಜ್‌, ಬಾಬು ಬಂಗೇರ, ಐಶ್ವರ್ಯ ಅರುಣ್‌ಕುಮಾರ್‌ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

hgjuthygfd

ಗ್ಯಾಂಗ್‌ ಸ್ಟರ್ ಗೆಟಪ್‌ನಲ್ಲಿ ಶಾನ್ವಿ…

rwytju11111111111

ಗುರುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

ಬಟ್ಟೆ  , ಉಡುಪು, ಪಾದರಕ್ಷೆ ಬೆಲೆಯೇರಿಕೆ?

ಬಟ್ಟೆ  , ಉಡುಪು, ಪಾದರಕ್ಷೆ ಬೆಲೆಯೇರಿಕೆ?

ರಜನಿ ಸೇವೆಗೆ ಹ್ಯಾಟ್ಸ್‌ ಆಫ್: ಕ್ರಿಕೆಟಿಗ ಲಕ್ಷ್ಮಣ್‌

ರಜನಿ ಸೇವೆಗೆ ಹ್ಯಾಟ್ಸ್‌ ಆಫ್: ಕ್ರಿಕೆಟಿಗ ಲಕ್ಷ್ಮಣ್‌

ಬಿಸಿಯೂಟ ದತ್ತಾಂಶಕಾರರ 20 ತಿಂಗಳ ಹಸಿವಿಗಿಲ್ಲ ಪರಿಹಾರ!

ಬಿಸಿಯೂಟ ದತ್ತಾಂಶಕಾರರ 20 ತಿಂಗಳ ಹಸಿವಿಗಿಲ್ಲ ಪರಿಹಾರ!

ಸುಲಭವಲ್ಲ ತಿಮ್ಮಪ್ಪನ ದರ್ಶನ ಭಾಗ್ಯ

ಸುಲಭವಲ್ಲ ತಿಮ್ಮಪ್ಪನ ದರ್ಶನ ಭಾಗ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಮಲಿಂಗಾರೆಡ್ಡಿ

ಯಾವ ಸಮಯದಲ್ಲಿ ಏನು ಮಾಡಬೇಕೆಂಬ ಪ್ರಜ್ಞೆ ಬಿಜೆಪಿಯವರಿಗಿಲ್ಲ: ರಾಮಲಿಂಗಾರೆಡ್ಡಿ

ಸಂವಿಧಾನ ಭಾರತದ ಪವಿತ್ರ ಗ್ರಂಥ: ಶೋಭಾ

ಸಂವಿಧಾನ ಭಾರತದ ಪವಿತ್ರ ಗ್ರಂಥ: ಶೋಭಾ

ವ್ಯಕ್ತಿತ್ವ ವಿಕಸನದಿಂದ ಸುಂದರ ಸಮಾಜ

ವ್ಯಕ್ತಿತ್ವ ವಿಕಸನದಿಂದ ಸುಂದರ ಸಮಾಜ

ಡಿಕೆಶಿ, ಸಿದ್ಧರಾಮಯ್ಯನವರು ಭಂಡಾಸುರ- ಮಂಡಾಸುರರು: ಶ್ರೀರಾಮುಲು

ಡಿಕೆಶಿ, ಸಿದ್ದರಾಮಯ್ಯನವರು ಭಂಡಾಸುರ- ಮಂಡಾಸುರರು: ಶ್ರೀರಾಮುಲು

ಈಶ್ವರಪ್ಪ ಪೆದ್ದ, ನಳಿನ್‌ ಭಯೋತ್ಪಾದಕ: ಸಿದ್ದು

ಈಶ್ವರಪ್ಪ ಪೆದ್ದ, ನಳಿನ್‌ ಭಯೋತ್ಪಾದಕ: ಸಿದ್ದು

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

hgjuthygfd

ಗ್ಯಾಂಗ್‌ ಸ್ಟರ್ ಗೆಟಪ್‌ನಲ್ಲಿ ಶಾನ್ವಿ…

rwytju11111111111

ಗುರುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

ಸಮ್ಮಾನಕ್ಕೆ ಇದ್ದ ಉತ್ಸಾಹ ಗೌರವಧನ ನೀಡುವಲ್ಲಿಲ್ಲ !

ಸಮ್ಮಾನಕ್ಕೆ ಇದ್ದ ಉತ್ಸಾಹ ಗೌರವಧನ ನೀಡುವಲ್ಲಿಲ್ಲ !

ಗೋ ಹಂತಕರ ವಿರುದ್ಧ ಕಠಿನ ಕ್ರಮ: ಈಶ್ವರಪ್ಪ

ಗೋ ಹಂತಕರ ವಿರುದ್ಧ ಕಠಿನ ಕ್ರಮ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.