ಮಂಗಳೂರಿನ ಕಾಲೇಜುಗಳಲ್ಲಿ 


Team Udayavani, Jan 17, 2018, 9:49 AM IST

18-Jan-01.jpg

ಮಹಾನಗರ: ಕ್ರಿಕೆಟ್‌, ಫುಟ್‌ಬಾಲ್‌, ವಾಲಿಬಾಲ್‌ ಸಹಿತ ವಿವಿಧ ಕ್ರೀಡಾ ಕ್ಷೇತ್ರಗ ಳಲ್ಲಿ ತೊಡಗಿಸಿಕೊಂಡ ಮಂಗಳೂರು ಈಗ ಏರ್‌ ರೈಫಲ್‌ ಶೂಟಿಂಗ್‌ನಲ್ಲೂ ಸುದ್ದಿ ಮಾಡುತ್ತಿದೆ. ಇಲ್ಲಿಗೆ ಅಪರೂಪವಾದ ಈ ಕ್ರೀಡೆ ಬಗ್ಗೆ ಯುವಜನರಲ್ಲಿ ಕ್ರೇಜ್‌ ಶುರುವಾಗಿದೆ.

ನಗರದ ಸುಮಾರು 50ರಷ್ಟು ಮಂದಿ ಏರ್‌ ರೈಫ‌ಲ್‌ ತರಬೇತಿ ಪಡೆದಿದ್ದು, ಇದರಲ್ಲಿ ಸುಮಾರು 5 ಕಾಲೇಜುಗಳ 30 ವಿದ್ಯಾರ್ಥಿಗಳಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಸುಮಾರು 100ರಷ್ಟು ಮಂದಿ ಈ ಕುರಿತ ತರಬೇತಿ ಪಡೆದು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.

ಒಂದೊಮ್ಮೆ ಏರ್‌ರೈಫಲ್‌ ವಿಭಾಗದಲ್ಲಿ ಸಾಧಿಸಿದರೆ, ಇದೇ ವಿಭಾಗದಲ್ಲಿ ಚಿನ್ನದ ಪದಕ ಪುರಸ್ಕೃತ ಅಭಿನವ್‌ ಬಿಂದ್ರಾ, ಒಲಿಂಪಿಕ್ಸ್‌ ನಲ್ಲಿ ಪದಕ ಗೆದ್ದ ಗಗನ್‌ ನಾರಂಗ್‌, ಪಿಸ್ತೂಲ್‌ ಶೂಟರ್‌ ವಿಭಾಗದಲ್ಲಿ ಕಾಮನ್‌ವೆಲ್ತ್‌ ಪದಕ ವಿಜೇತರಾದ ಕರ್ನಾಟಕದ ಪ್ರಕಾಶ್‌ ನಂಜಪ್ಪ ಅವರ ಸಾಲಿಗೆ ಸೇರಬಹುದು ಎಂಬ ಆಶಯ ಯುವಜನರಲ್ಲಿ ಉತ್ಸಾಹ ತುಂಬುತ್ತಿದೆ.

ವಿದ್ಯಾರ್ಥಿಗಳು ಏರ್‌ ರೈಫಲ್‌ ಸಂಬಂಧಿತ ಕ್ರೀಡೆಯನ್ನು ಕಲಿತರೆ, ಭವಿಷ್ಯ ಚೆನ್ನಾಗಿದ್ದೀತು ಎಂದು ಮಂಗಳೂರು ರೈಫಲ್‌ ಕ್ಲಬ್‌ ಕಾಲೇಜು ಮಟ್ಟದಲ್ಲಿ ತರಬೇತಿಗೆ ಮುಂದಾಗಿದೆ. ಮುಖೇಶ್‌ ಕುಮಾರ್‌ ತರಬೇತಿ ನೀಡುತ್ತಿದ್ದು, ಪ್ರಸ್ತುತ ಯೇನಪೊಯ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಚಾಲ್ತಿಯಲ್ಲಿದೆ.

ಮಂಗಳೂರು ರೈಫಲ್‌ ಕ್ಲಬ್‌ 2016ರಲ್ಲಿ ಹುಟ್ಟಿತು. ಹೆಚ್ಚಿನ ಸಂಖ್ಯೆಯ ಶೂಟರ್‌ಗಳನ್ನು ಮಂಗಳೂರು ಸಹಿತ ಎಲ್ಲೆಡೆ ರೂಪಿಸುವ ಉದ್ದೇಶ ಹೊಂದಲಾಗಿದೆ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಎನ್‌ಸಿಸಿ ಬೆಟಾಲಿಯನ್‌ಗಳು ಇರುವುದರಿಂದ ಕ್ಲಬ್‌ ಆರಂಭಿಸಲಾಗಿದೆ. ಒಬ್ಬ ವ್ಯಕ್ತಿ ಜಿಲ್ಲಾ ಮಟ್ಟದಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ತರಬೇತಿ ಪಡೆಯಬಹುದು.

ಈ ಕ್ರೀಡೆಯನ್ನು ಮೂಲ ಮಟ್ಟದಿಂದ ಆರಂಭಿಸುವ ಉದ್ದೇಶ ರೈಫಲ್‌ ಕ್ಲಬ್‌ನದ್ದು. ವಿದ್ಯಾರ್ಥಿಗಳಿಗೆ ಆರಂಭದಿಂದಲೇ ಇದನ್ನು ಕಲಿಸಿದರೆ ಅವರು ಉತ್ತಮ ಕ್ರೀಡಾ ಜ್ಞಾನವನ್ನು ಹೊಂದಿ ಪ್ರವರ್ಧಮಾನಕ್ಕೆ ತರಲು ಸಹಕಾರಿ. ಸುರಕ್ಷಿತ ಕ್ರೀಡೆಯಾಗಿರುವ ಇದರಲ್ಲಿ ಬುಲೆಟ್‌ ಬದಲಿಗೆ ಸಿಲಿಕಾನ್‌, ಲೆಡ್‌ಗಳನ್ನು ಸಮ್ಮಿಳಿತ ಗೊಳಿಸಿ ರೂಪಿಸಿದ ಪೆಲೆಟ್‌ಗಳನ್ನು ಬಳಸಲಾಗುತ್ತದೆ. ಇದರಿಂದ ಯಾವುದೇ ಅಪಾಯವಿಲ್ಲ ಎಂಬುದು ಕ್ರೀಡಾಳುಗಳ ಅಭಿಪ್ರಾಯ. 

ಮಂಗಳೂರು ರೈಫಲ್‌ ಕ್ಲಬ್ 
ಕಳೆದ ವರ್ಷ ಕ್ಲಬ್‌ ಹಮ್ಮಿಕೊಂಡಿದ್ದ ಮೊದಲ ವಾರ್ಷಿಕ ಸ್ಪರ್ಧೆಯಲ್ಲಿ ಮೈಸೂರು-ಬೆಂಗಳೂರು ಸಹಿತ ವಿವಿಧೆಡೆಯ ಸುಮಾರು 60 ಸ್ಪರ್ಧಿಗಳು ಭಾಗವಹಿಸಿದ್ದರು. ಜೂನಿಯರ್‌, ಸೀನಿಯರ್‌ ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಬಳಿಕ ಕ್ಲಬ್‌ನ 16 ಸದಸ್ಯರ ತಂಡ ರಾಜ್ಯ ಮಟ್ಟದ ರೈಫಲ್‌ ಮತ್ತಿತರ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಕೆಲವರು ಪದಕಗಳನ್ನು ಗಳಿಸಿದರು. ವಿಶೇಷವೆಂದರೆ, ಕ್ಲಬ್‌ ಆರಂಭವಾದ ಕೆಲವೇ ತಿಂಗಳಿನಲ್ಲಿ ನಗರದಲ್ಲಿದ್ದ ರೈಫಲ್‌ ಪಟುಗಳನ್ನು ಹುಡುಕಿ ಸ್ಪರ್ಧೆಗೆ ಸಿದ್ಧಪಡಿಸಲಾಗಿದೆ.

ಲಾಭವೇನು ?
ಈ ಕ್ರೀಡೆಯು ಕೇವಲ ದೈಹಿಕ ಬೆಳವಣಿಗೆಯಲ್ಲಿ ಪಾತ್ರ ವಹಿಸುವುದಿಲ್ಲ; ಮಾನಸಿಕ ಬೆಳವಣಿಗೆಗೂ ಸಹಕಾರಿ. ಹತ್ತು ವರ್ಷ ವಯಸ್ಸಿನ ವಿದ್ಯಾರ್ಥಿಗಳಿಂದ ಆರಂಭಿಸಿ ಯಾರೂ ಇದನ್ನು ಕಲಿಯಬಹುದು. ದೇಹದ ಸಮತೋಲನ, ದೈಹಿಕ ಸಾಮರ್ಥ್ಯ, ಸರಿಯಾದ ಉಸಿರಾಟ, ಹೆಚ್ಚಿನ ಗಮನ ವಹಿಸಬೇಕಾದ್ದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಲಾಭವಾಗುತ್ತದೆ. ಶಿಸ್ತು ರೂಢಿಸಿಕೊಳ್ಳಲು ಇದು ಸಹಕಾರಿ. ಈ ಕ್ರೀಡೆಯ ಬಗ್ಗೆ ಮೊದಲು ಹೆತ್ತವರು ತಿಳಿದುಕೊಂಡರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎನ್ನುವುದು ಕ್ಲಬ್‌ನ ಅಭಿಪ್ರಾಯ.

ಶಾಲಾ- ಕಾಲೇಜಿನ ಮೂಲಕ ತರಬೇತಿ
‘ಇತ್ತೀಚಿನ ದಿನಗಳಲ್ಲಿ ಮಕ್ಕಳು ವಾಸ್ತವಿಕ ಪ್ರಪಂಚಕ್ಕಿಂತ ಹೆಚ್ಚಾಗಿ ಕಾಲ್ಪನಿಕ ಪ್ರಪಂಚದಲ್ಲಿ ವಿಹರಿಸುತ್ತಿದ್ದಾರೆ. ಇದು ಒಳ್ಳೆಯದಲ್ಲ. ಹೀಗಾಗಿ ಏರ್‌ ರೈಫಲ್‌ ಸಂಬಂಧಿತ ಕ್ರೀಡೆಯನ್ನು ಪ್ರೋತ್ಸಾಹಿಸುವ ಸಂಬಂಧ ಶಾಲೆ-ಕಾಲೇಜುಗಳಲ್ಲಿ ತರಬೇತಿ ನೀಡಲು ನಿರ್ಧರಿಸಲಾಗಿದೆ. ಈಗಾಗಲೇ ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ.’ 
ಮುಖೇಶ್‌ ಕುಮಾರ್‌,
 ಏರ್‌ರೈಫಲ್‌ ತರಬೇತುದಾರ

 ದಿನೇಶ್‌ ಇರಾ  

ಟಾಪ್ ನ್ಯೂಸ್

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.