Udayavni Special

ಬಹುಮುಖ ಪ್ರತಿಭೆಯ ಸಾಧಕ ಅಮರನಾಥ ಶೆಟ್ಟಿ

Team Udayavani, Jan 28, 2020, 5:08 AM IST

Amarnath-Shetty

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ರಂಗದ ಅನೇಕ ಪ್ರಥಮಗಳ ಸರದಾರ, ಸಮಾಜದ ವಿವಿಧ ಕಾರ್ಯ ಕ್ಷೇತ್ರಗಳಲ್ಲಿನ ಸಾಧಕ ಸವ್ಯಸಾಚಿ ಕೊಡ್ಮಾ ಣ್‌ಗುತ್ತು ಅಮರನಾಥ ಶೆಟ್ಟಿ ಅವರ ನಿಧನದಿಂದ ಈ ಪ್ರದೇಶದ ಸುಸಂಸ್ಕೃತ ಮುಖಂಡನನ್ನು ಕಳೆದು ಕೊಂಡ ಶೂನ್ಯ ಆವರಿಸಿದೆ.

“ಎಲ್ಲರೊಳಗೊಂದಾಗು’ ಎಂಬ ತಣ್ತೀವನ್ನು ಪರಿಪೂರ್ಣವಾಗಿ ಪಾಲಿಸಿದ ಅಜಾತಶತ್ರು “ಅಮರಣ್ಣ’. ದ. ಕನ್ನಡದ 66 ವರ್ಷಗಳ (1952-2018) ಚುನಾವಣ ಇತಿಹಾಸದಲ್ಲಿ ಅವರು 1972ರಿಂದ 2014ರ ವರೆಗೆ ಸತತವಾಗಿ ಮೂಡುಬಿದಿರೆ ಕ್ಷೇತ್ರದಿಂದ 10 ಬಾರಿ ಸ್ಪರ್ಧಿಸಿದವರು. 2018ರ ಚುನಾವಣೆಯಲ್ಲಿ ಸ್ಪರ್ಧಿಸಲು ಜಾತ್ಯತೀತ ಜನತಾದಳದಿಂದ ಅವಕಾಶ ದೊರೆತಿದ್ದರೂ ಹೊಸಬರಿಗೆ ಅವಕಾಶ ದೊರೆಯಲಿ ಎಂಬ ಮೇಲ್ಪಂಕ್ತಿ ಹಾಕಿಕೊಟ್ಟರು.

ರಾಜಕೀಯವಾಗಿ ವಿಶ್ಲೇಷಿಸುವುದಿದ್ದರೆ, ಅವರು ಜನತಾ ಪರಿವಾರದಿಂದಲೇ ಸ್ಪರ್ಧಿಸಿದವರು, ಗೆದ್ದವರು, ಸಚಿವರಾದವರು. ಅವಿಭಜಿತ ದ. ಕನ್ನಡ ಜಿಲ್ಲೆಯಲ್ಲಿ ಅವರು ಜನತಾ ಪರಿವಾರದ (ಸಂಸ್ಥಾ ಕಾಂಗ್ರೆಸ್‌, ಜನತಾ ಪಕ್ಷ, ಜನತಾದಳ) ಮುಖವಾಣಿಯೂ ಆಗಿದ್ದರು; ಐಕಾನ್‌ ಕೂಡ ಆಗಿದ್ದರು.

ಮೂಡುಬಿದಿರೆಯನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವಲ್ಲಿಯೂ ಅವರ ಕೊಡುಗೆ ಗಮನಾರ್ಹವಾಗಿದೆ. ಸ್ವತಃ ಕಲಾವಿದರಾಗಿದ್ದ ಶೆಟ್ಟಿ ಅವರು ರಂಗಭೂಮಿಯಲ್ಲಿ, ಪಗೆತ ಪುಗೆ ಮುಂತಾದ ಚಲನಚಿತ್ರಗಳಲ್ಲಿ ಅಭಿನಯಿಸಿದರು. ಕಲಾವಿದರನ್ನು ಪ್ರೋತ್ಸಾಹಿಸಿದರು. ಅವರ ಆಕರ್ಷಕ ವ್ಯಕ್ತಿತ್ವ ಐತಿಹಾಸಿಕ- ಪೌರಾಣಿಕ ನಾಟಕ- ಸಿನೆಮಾಗಳಿಗೆ ಹೇಳಿ ಮಾಡಿಸಿದಂತಿತ್ತು. ಸಹಕಾರಿ, ಬ್ಯಾಂಕಿಂಗ್‌, ಶಿಕ್ಷಣ, ಕ್ರೀಡೆ…

ಹೀಗೆ ಎಲ್ಲ ರಂಗಗಳಲ್ಲಿಯೂ ಸಕ್ರಿಯರಾಗಿದ್ದ ಅಪೂರ್ವ ವ್ಯಕ್ತಿತ್ವ ಅವರದು.

ಪಂಚಾಯತ್‌ ಹಂತದಿಂದ ರಾಜ್ಯದ ಸಚಿವ ಸ್ಥಾನದವರೆಗೆ ವಿವಿಧ ಹಂತದ ಸ್ಥಳೀಯಾ ಡಳಿತಗಳಲ್ಲಿ ಅವರು ಅನುಭವ ಪಡೆದಿದ್ದರು. ಎಲ್ಲ ರಾಜಕೀಯ ಪಕ್ಷಗಳಿಂದಲೂ ಗೌರವಕ್ಕೆ ಪಾತ್ರರಾಗಿದ್ದರು.ದ. ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ಅವರು ಅಧಿಕಾರಿಗಳ- ಜನಪ್ರತಿನಿಧಿಗಳ ಸಭೆಯಲ್ಲಿ ಭಾಗವಹಿಸುತ್ತಿದ್ದ ರೀತಿ ಅವರ ಆಡಳಿತಾತ್ಮಕ ಕೌಶಲಕ್ಕೆ ನಿದರ್ಶನವಾಗಿತ್ತು. ಬಹುತೇಕ ಸಭೆ ಸಮಾರಂಭಗಳಲ್ಲಿ, ತನ್ನ ಕ್ಷೇತ್ರ ವ್ಯಾಪ್ತಿಯ ಶುಭ ಕಾರ್ಯಗಳಲ್ಲಿ ಅವರು ಭಾಗವಹಿಸುತ್ತಿದ್ದರು; ಈ ಮೂಲಕ ಜನತೆಗೆ ನಿಕಟವಾಗಿದ್ದರು. ತನ್ನ ಪಕ್ಷ ಈ ಪ್ರದೇಶದಲ್ಲಿ ಪ್ರಬಲವಾಗಿ ಇರದಿದ್ದರೂ ಶೆಟ್ಟಿ ಅವರು ಗೆಲುವು ಸಾಧಿಸುತ್ತಿದ್ದುದು ಅವರ ಮೇಲೆ ಮತದಾರರಾಗಿದ್ದ ಪ್ರೀತಿಯ ದ್ಯೋತಕವಾಗಿದೆ.

1972ರಲ್ಲಿ ಅವರು ಸ್ಪರ್ಧಿಸಿದ ಮೊದಲ ಚುನಾವಣೆಯಿಂದ ಅವರು ಸಕ್ರಿಯರಾಗಿದ್ದ 2018ರ ಚುನಾವಣೆಯವರೆಗೆ ತಾನು ಗಮನಿಸಿದ ಬದಲಾವಣೆಗಳ ಬಗ್ಗೆ ಕೇಳಿದಾಗ ಅವರು ನೀಡಿದ್ದ ಉತ್ತರ ಇಲ್ಲಿ ಉಲ್ಲೇಖನೀಯ.”ಮೌಲ್ಯಗಳ ಪತನವಾಗುತ್ತಿರುವುದನ್ನು ಕಂಡಾಗದುಃಖವಾಗುತ್ತಿದೆ. ಆರಂಭಿಕ ದಿನಗಳಲ್ಲಿ ಚುನಾವಣಪ್ರಕ್ರಿಯೆಗಳು ಪವಿತ್ರ ಎಂಬಷ್ಟು ಬದ್ಧತೆಯನ್ನು ಹೊಂದಿದ್ದವು. ಪ್ರಾಮಾಣಿಕತೆ, ಸತ್ಯಸಂಧತೆ, ಪಾರದರ್ಶಕತೆ ಚುನಾವಣೆಗೆ ಹಬ್ಬದ ಸ್ವರೂಪ ನೀಡುತ್ತಿದ್ದವು. ಆದರೆ ಈಗ ಈ ರೀತಿಯ ವಾತಾವರಣ ಮರೆಯಾಗುತ್ತಿರುವುದು ಬೇಸರದ ಸಂಗತಿ’.

-ಮನೋಹರ ಪ್ರಸಾದ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮೃಗಾಲಯದಲ್ಲಿದ್ದ ಹುಲಿಯನ್ನೂ ಬಿಡದ ಮಹಾಮಾರಿ ಕೋವಿಡ್!

ಮೃಗಾಲಯದಲ್ಲಿದ್ದ ಹುಲಿಯನ್ನೂ ಬಿಡದ ಮಹಾಮಾರಿ ಕೋವಿಡ್!

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ತಮಿಳುನಾಡಿನಲ್ಲಿ ಒಂದೇ ದಿನ 63 ಕೋವಿಡ್ 19 ಪ್ರಕರಣ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಚೀನದಲ್ಲಿ ಎರಡನೇ ಹಂತದ ಸೋಂಕು? ; ಪತ್ತೆಯಾಯ್ತು 39 ಹೊಸ ಪ್ರಕರಣಗಳು

ಚೀನದಲ್ಲಿ ಎರಡನೇ ಹಂತದ ಸೋಂಕು? ; ಪತ್ತೆಯಾಯ್ತು 39 ಹೊಸ ಪ್ರಕರಣಗಳು

ಕೋವಿಡ್ 19 ವೈರಸ್: ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಸಾವು, ರೋಗಿಗಳ ಸಂಖ್ಯೆ ಇಳಿಮುಖ

ಕೋವಿಡ್ 19 ವೈರಸ್: ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಸಾವು, ರೋಗಿಗಳ ಸಂಖ್ಯೆ ಇಳಿಮುಖ

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಮಹಾರಾಷ್ಟ್ರ: ಒಂದು ಸಾವಿರ ದಾಟಿದ ಕೋವಿಡ್ 19 ವೈರಸ್ ಸೋಂಕಿತರ ಸಂಖ್ಯೆ, 40 ಮಂದಿ ಸಾವು

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿ ಸಿಆರ್ ಪಿಎಫ್ ಯೋಧ ಹುತಾತ್ಮ, ಸೇನೆಯಿಂದ ಪ್ರತಿದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅನಾರೋಗ್ಯ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ  ದಾಖಲಿಸಿ ಮಾನವೀಯತೆ ಮೆರೆದ: ಖಾದರ್

ಅನಾರೋಗ್ಯ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ: ಖಾದರ್

ಪೆಟ್ರೋಲ್‌, ಡೀಸೆಲ್‌ ಉತ್ಪಾದನೆ ಅರ್ಧದಷ್ಟು ಕಡಿತ!

ಪೆಟ್ರೋಲ್‌, ಡೀಸೆಲ್‌ ಉತ್ಪಾದನೆ ಅರ್ಧದಷ್ಟು ಕಡಿತ!

ವೆನ್ಲಾಕ್  ಹೊಸ ಬ್ಲಾಕ್‌ ಕೋವಿಡ್‌ 19 ಚಿಕಿತ್ಸೆಗೆ ಸಜ್ಜು

ವೆನ್ಲಾಕ್  ಹೊಸ ಬ್ಲಾಕ್‌ ಕೋವಿಡ್‌ 19 ಚಿಕಿತ್ಸೆಗೆ ಸಜ್ಜು

ಗ್ರಾಹಕರೇ ಎಚ್ಚರ! ಅವಧಿ ಮೀರಿದ ತಿಂಡಿ ತಿನಿಸು ಖರೀದಿಸದಿರಿ

ಗ್ರಾಹಕರೇ ಎಚ್ಚರ! ಅವಧಿ ಮೀರಿದ ತಿಂಡಿ ತಿನಿಸು ಖರೀದಿಸದಿರಿ

ಕರಾವಳಿಯ ಸಾಂಸ್ಕೃತಿಕ ರಂಗ ಸ್ತಬ್ಧ !

ಕರಾವಳಿಯ ಸಾಂಸ್ಕೃತಿಕ ರಂಗ ಸ್ತಬ್ಧ !

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಮಾನಸಿಕ ಸಮಸ್ಯೆ ಹೆಚ್ಚಿಸಿದ ಕೋವಿಡ್ 19 ವೈರಸ್

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಜರ್ಮನಿ, ದ. ಕೊರಿಯಾ ಮಾದರಿಯಾಗಲಿ ; ವ್ಯಾಪಕ ಪರೀಕ್ಷೆ, ಕಟ್ಟು ನಿಟ್ಟಿನ ಕ್ರಮ

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

ಮಾರಕ ವೈರಸ್ ಸೃಷ್ಟಿಸಿ ಚೀನಾಗೆ ಮಾರಿದರೇ ಹಾರ್ವರ್ಡ್‌ ವಿ.ವಿ. ಪ್ರೊಫೆಸರ್?

PCRಗಿಂತ ಆ್ಯಂಟಿ ಬಾಡಿ ರ್ಯಾಪಿಡ್ ಟೆಸ್ಟ್ ಯಾಕೆ ಬೆಸ್ಟ್?

ಕೋವಿಡ್ ವೈರಸ್ ಸೋಂಕು ಪತ್ತೆಯಲ್ಲಿ PCRಗಿಂತ ಆ್ಯಂಟಿ ಬಾಡಿ ರ್ಯಾಪಿಡ್ ಟೆಸ್ಟ್ ಯಾಕೆ ಬೆಸ್ಟ್?

ಸುತ್ತಲೂ ಹಬ್ಬಿದ ಕಾಡ್ಗಿಚ್ಚು ಚೆರ್ನೋಬಿಲ್‌ ಸುತ್ತ ವಿಕಿರಣ ಅಪಾಯ

ಸುತ್ತಲೂ ಹಬ್ಬಿದ ಕಾಡ್ಗಿಚ್ಚು ಚೆರ್ನೋಬಿಲ್‌ ಸುತ್ತ ವಿಕಿರಣ ಅಪಾಯ