Monsoon ಆರಂಭದ ಹಿನ್ನೆಲೆ: ಹಡಗು ತೆರವು ಕಾರ್ಯಾಚರಣೆ ಅರ್ಧಕ್ಕೆ ಬಾಕಿ


Team Udayavani, Jun 19, 2023, 6:23 AM IST

ಮಳೆಗಾಲ ಆರಂಭದ ಹಿನ್ನೆಲೆ: ಹಡಗು ತೆರವು ಕಾರ್ಯಾಚರಣೆ ಅರ್ಧಕ್ಕೆ ಬಾಕಿ

ಮಂಗಳೂರು: ಅರಬಿ ಸಮುದ್ರದಲ್ಲಿ ಬಾಕಿಯಾಗಿ ನಿಂತಿ ರುವ ಎರಡು ಹಡಗುಗಳ ತೆರವು ಕಾರ್ಯಾಚರಣೆ ಮುಂಗಾರು ಆಗಮನದ ಕಾರಣ ಅರ್ಧದಲ್ಲೇ ನಿಂತಿದೆ.

ಮಳೆಗಾಲದೊಂದಿಗೆ ಕಡಲು ಭೋರ್ಗರೆಯಲು ಆರಂಭಿಸಿದ್ದು ಕಾರ್ಯಾಚರಣೆ ಅಸಾಧ್ಯವಾಗಿದೆ.
ಸುರತ್ಕಲ್‌ ಸಮೀಪ ಸಮುದ್ರದಲ್ಲಿ ತೀರದ ಲ್ಲಿಯೇ ನಿಂತಿರುವ ಭಗವತಿ ಪ್ರೇಮ್‌ ಡ್ರೆಜ್ಜಿಂಗ್‌
ಹಡಗನ್ನು ಒಡೆದು ತೆರವು ಮಾಡುವ ಕಾರ್ಯವನ್ನು ಸದ್ಯಕ್ಕೆ ಗುತ್ತಿಗೆದಾರರು ಸ್ಥಗಿತ ಗೊಳಿಸಿದ್ದಾರೆ.

4 ತಿಂಗಳುಗಳಿಂದ ಸೋನಾರ್‌ ಇಂಪೆಕ್ಸ್‌ ಗುತ್ತಿಗೆದಾರ ಕಂಪೆನಿ ಹಡಗನ್ನು ಒಡೆಯುವ ಕೆಲಸ ನಡೆ ಸಿತ್ತು. ಅದರ ಹಲವು ಭಾಗಗಳನ್ನು ಬಿಚ್ಚಿ, ತುಂಡು ಮಾಡಿ ತೆಗೆದು ಗುಜರಿಗೆಸಾಗಿಸಲಾಗಿದೆ. ಇನ್ನೂ ಹಲವು ಭಾಗ ತೆರವು ಬಾಕಿ ಇದ್ದು ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಾಗಿದೆ. ಮುಂಗಾರು ಆಗಮನದ ಹಿನ್ನೆಲೆಯಲ್ಲಿ ಸಮುದ್ರ ಅಬ್ಬರಿಸುತ್ತಿರುವುದರಿಂದ ಜಿಲ್ಲಾಡಳಿತದ ಸೂಚನೆಯಂತೆ ಸದ್ಯ ತೆರವು ಸ್ಥಗಿತಗೊಳಿಸಲಾಗಿದೆ.

ಬಟ್ಟಪ್ಪಾಡಿಯಲ್ಲೂ ಸ್ಥಗಿತ
ಬಟ್ಟಪ್ಪಾಡಿಯಲ್ಲಿ ಪ್ರಿನ್ಸೆಸ್‌ ಮಿರಾಲ್‌
ಹಡಗಿನಲ್ಲಿದ್ದ ತೈಲವನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ. ಆದರೆ ಹಡಗು ತೆರವು ಕಾರ್ಯವನ್ನು ಮುಂಗಾರು ಋತು ಮುಗಿದ ಬಳಿಕವೇ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.ಹಡಗಿನಲ್ಲಿದ್ದ 220 ಟನ್‌ ತೈಲಕ್ಕೆ ನೀರು ಸೇರಿಕೊಂಡಿದ್ದು 160 ಟನ್‌ನಷ್ಟು ತೈಲ ಮಾತ್ರ ಸಿಕ್ಕಿರುವುದಾಗಿ ತಿಳಿದುಬಂದಿದೆ. ಬಟ್ಟಪ್ಪಾಡಿ ಕಡಲ ತೀರದಿಂದ ತುಸು ದೂರದಲ್ಲಿ ನೆಲಕ್ಕೆ ತಾಗಿ ನಿಂತಿರುವ ಪ್ರಿನ್ಸೆಸ್‌ ಮಿರಾಲ್‌ ಆ ಭಾಗದಲ್ಲಿ ಸಂಚರಿಸುವ ಬೋಟ್‌ಗಳಿಗೆ ಅಪಾಯಕಾರಿಯಾಗಿರುವುದರಿಂದ ತೆರವು ಮಾಡುವಂತೆ ಸೂಚನೆ ನೀಡಲಾಗಿದೆ. ಬನ್ಸಲ್‌ ಎಂಡವರ್ಸ್‌ ಗುತ್ತಿಗೆದಾರ ಕಂಪೆನಿ ಜನವರಿಯಿಂದ ಕಾರ್ಯಾಚರಣೆ ನಡೆಸಿ ಹಡಗಿನಿಂದ ತೈಲ ಹೊರತೆಗೆದಿದೆ. ಅದರಲ್ಲಿ 8 ಸಾವಿರ ಟನ್‌ ತೂಕದ ಸ್ಟೀಲ್‌ ಕಾಯಿಲ್‌ ಕೂಡ ಇದೆ.

ನವಮಂಗಳೂರು ಬಂದರಿ ನಲ್ಲಿ ಡ್ರೆಜ್ಜಿಂಗ್‌ ನಡೆಸಲು ಬಂದಿದ್ದ ಭಗವತಿ ಪ್ರೇಮ್‌ ಡ್ರೆಜ್ಜರ್‌ ಹಡಗಿನಲ್ಲಿ ರಂಧ್ರ ಉಂಟಾಗಿ ಮುಳುಗುವ ಹಂತ ತಲಪಿತ್ತು. ಅದನ್ನು 2019ರಲ್ಲಿ ಸುರತ್ಕಲ್‌ ಬೀಚ್‌ ಬಳಿ ತಂದು ನಿಲ್ಲಿಸಲಾಗಿತ್ತು. ಅಲ್ಲಿಂದ ಸ್ಥಳಾಂತರಿಸುವುದಾಗಿ ಎನ್‌ಎಂಪಿಎ ಹೇಳಿ ದ್ದರೂ ಅದು ಪೂರೈಸಲೇ ಇಲ್ಲ. ಕೊನೆಗೆ ಹಡಗನ್ನೇ ವಿಲೇವಾರಿ ಮಾಡಲು ನಿರ್ಧರಿಸಲಾಗಿತ್ತು.

2021ರ ಜೂನ್‌ 21ರಂದು ಉಳ್ಳಾಲ ಬಟ್ಟಪ್ಪಾಡಿಯಲ್ಲಿ ಪ್ರಿನ್ಸೆಸ್‌ ಮಿರಾಲ್‌ ಅಪಾ ಯಕ್ಕೆ ಸಿಲುಕಿತ್ತು.
ರಂಧ್ರ ಕಾಣಿಸಿಕೊಂಡು ನೀರು ಒಳ ಸೇರಿತ್ತು ಅದರಲ್ಲಿದ್ದ 15 ಸಿರಿಯನ್‌ ನಾವಿಕರನ್ನು ಸುರಕ್ಷಿತ ವಾಗಿ ಕೋಸ್ಟ್‌ಗಾರ್ಡ್‌ ರಕ್ಷಿಸಿತ್ತು.

 

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.