ಬ್ಯಾಡಗಿ ಒಣಮೆಣಸು ಇನ್ನಷ್ಟು ಖಾರ

Team Udayavani, Jan 13, 2020, 5:52 AM IST

1201MLR37

ಮಂಗಳೂರು: “ಕೆಂಪು ಸುಂದರಿ’ ಬ್ಯಾಡಗಿ ಒಣ ಮೆಣಸಿನ ಬೆಲೆ ಒಂದು ವಾರದಿಂದೀಚೆಗೆ ಬಹಳಷ್ಟು ಏರಿಕೆ ಯಾಗಿದ್ದು, ಗ್ರಾಹಕರ ಪಾಲಿಗೆ ಇನ್ನಷ್ಟು ಖಾರವಾಗಿದೆ. ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ 50 ರೂ. ಮತ್ತು ಸಗಟು ಮಾರಾಟ ಮಳಿಗೆಗಳಲ್ಲಿ 10ರಿಂದ 20 ರೂ.ಗಳಷ್ಟು ಏರಿಕೆಯಾಗಿದೆ.

ಚಿಲ್ಲರೆ ಮಾರಾಟ ಅಂಗಡಿಯಲ್ಲಿ ವಾರದ ಹಿಂದೆ 160 ರೂ.ಗೆ ಮಾರಾಟ ಆಗುತ್ತಿದ್ದ ಬ್ಯಾಡಗಿ ಮೆಣಸಿನ ಬೆಲೆ ಈಗ 200 ರೂ.ಗೇರಿದೆ. ಸಗಟು ಮಾರಾಟ ಮಳಿಗೆಯಲ್ಲಿ 190 ರೂ. ಇದೆ. ಕೇವಲ ಒಂದೇ ದಿನದಲ್ಲಿ 10 ರೂ. ಹೆಚ್ಚಳವಾಗಿದೆ.

ಸಾಮಾನ್ಯ ಮೆಣಸಿಗಿಂತ ಆಕಾರ ದಲ್ಲಿ ಉದ್ದವಾಗಿರುವ ಬ್ಯಾಡಗಿ ಮೆಣಸಿಗೆ ಬೆಲೆ ಜಾಸ್ತಿಯಾದ ಹಿನ್ನೆಲೆ ಯಲ್ಲಿ ಗಿಡ್ಡ ಮೆಣಸು (ರಾಮ ನಗರ), ಕಾಶ್ಮೀರಿ ಮೆಣಸು ಮತ್ತು ಗುಂಟೂರು ಒಣಮೆಣಸಿಗೂ ಬೆಲೆ ಹೆಚ್ಚಳವಾಗಿದೆ.

ಮೆಣಸಿನ ಬೆಲೆ ಏರಿಕೆಗೆ ನೈಜ ಕಾರಣಗಳೇನು ಎಂಬುದು ತಿಳಿದು ಬಂದಿಲ್ಲ. ವರ್ತಕರಲ್ಲಿಯೂ ಈ ಬಗ್ಗೆ ನಿಖರವಾದ ಮಾಹಿತಿ ಇಲ್ಲ.

ಗೃಹಿಣಿಯರಿಗೆ ಪ್ರಿಯ
ಸಾಮಾನ್ಯವಾಗಿ ಬ್ಯಾಡಗಿ ಮೆಣಸು ಖಾರ ಕಡಿಮೆ, ಆದರೆ ಹೆಚ್ಚು ರುಚಿಕರ. ಅಲ್ಲದೆ ಈ ಮೆಣಸನ್ನು ಉಪಯೋಗಿಸಿದರೆ ಮಸಾಲೆಯ ಪ್ರಮಾಣ ಜಾಸ್ತಿ ಆಗುತ್ತದೆ ಮತ್ತು ಮಸಾಲೆಗೆ ಉತ್ತಮ ಬಣ್ಣವೂ ಬರುತ್ತದೆ ಎನ್ನುವುದು ಗೃಹಿಣಿಯರ ನಂಬಿಕೆ. ಹಾಗಾಗಿ ಕರಾವಳಿಯಲ್ಲೂ ಬ್ಯಾಡಗಿ ಮೆಣಸಿಗೆ ಬೇಡಿಕೆ ಜಾಸ್ತಿಯಿದೆ. ಮಸಾಲೆಯ ಖಾರವನ್ನು ಸರಿದೂಗಿಸಲು ಬಹಳಷ್ಟು ಮಂದಿ ಗೃಹಿಣಿಯರು ಬ್ಯಾಡಗಿ ಮೆಣಸಿನ ಜತೆಗೆ ಬೆರಳೆಣಿಕೆಯ ಗಿಡ್ಡ ಮೆಣಸನ್ನು (ರಾಮ ನಗರ) ಮಿಶ್ರಣ ಮಾಡುತ್ತಾರೆ. ಆದರೆ ಈಗ ಕಡಿಮೆ ಖಾರದ ಬ್ಯಾಡಗಿ ಮೆಣಸು ಬೆಲೆ ಏರಿಕೆಯ ಮೂಲಕ ತನ್ನ ಖಾರ ವೃದ್ಧಿಸಿಕೊಂಡಿದೆ. ಮಂಗಳೂರು ಮಾತ್ರವಲ್ಲದೆ ಇತರೆಡೆಯೂ ಬ್ಯಾಡಗಿ ಮೆಣಸಿನ ಬೆಲೆ ಹೆಚ್ಚಳವಾಗಿದೆ.

ಹೊಸ ಒಣ ಮೆಣಸು ಮಾರುಕಟ್ಟೆಗೆ ಆವಕವಾಗಿಲ್ಲ. ಸಾಮಾನ್ಯವಾಗಿ ಡಿಸೆಂಬರ್‌ ಅಂತ್ಯದ ವೇಳೆಗೆ ಹೊಸ ಮೆಣಸು ಆವಕವಾಗುತ್ತದೆ. ಆದರೆ ಈ ವರ್ಷ ಅಕ್ಟೋಬರ್‌- ನವೆಂಬರ್‌ನಲ್ಲಿಯೂ ಮಳೆ ಬಂದಿದ್ದ ಕಾರಣ ಹೊಸ ಮೆಣಸು ಮಾಟುಕಟ್ಟೆಗೆ ಬರುವುದು ವಿಳಂಬವಾಗಿದೆ. ಈಗ (ಜನವರಿ) ಹಳೆಯ ಒಣ ಮೆಣಸಿನ ಕೊನೆಯ ಅವಧಿಯಾಗಿದ್ದು, ಹೊಸ ಮೆಣಸು ಬಾರದ ಕಾರಣ ಬೆಲೆ ಏರಿಕೆ ಆಗಿರಬಹುದೆಂಬ ಮಾತುಗಳು ಕೇಳಿ ಬರುತ್ತಿವೆ. ಫೆಬ್ರವರಿ ತಿಂಗಳಲ್ಲಿ ಹೊಸ ಒಣ ಮೆಣಸು ಮಾರುಕಟ್ಟೆಗೆ ಆವಕವಾಗಲಿದ್ದು, ಆಗ ಬೆಲೆ ಇಳಿಕೆ ಆಗಲಿದೆ.
– ವಿನಯ ಭಟ್‌, ವ್ಯಾಪಾರಿ, ಪಿವಿಎಸ್‌ ಜಂಕ್ಷನ್‌

ಸುಮಾರು ಒಂದು ವಾರದ ಹಿಂದೆ ಒಣ ಮೆಣಸಿನ ಬೆಲೆ ಹೆಚ್ಚಳವಾಗಿದೆ. ಸರಾಸರಿ 50 ರಿಂದ 60 ರೂ. ತನಕ ಏರಿಕೆ ಆಗಿದೆ. ಇದಕ್ಕೆ ಕಾರಣ ಏನೆಂದು ತಿಳಿದಿಲ್ಲ.
– ನೌಶಾದ್‌, ವ್ಯಾಪಾರಿ, ಮಂಗಳೂರು ಸೆಂಟ್ರಲ್‌ ಮಾರ್ಕೆಟ್‌.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

“ಕೃಷಿ ರಕ್ಷಣೆಗಾಗಿ ಆಯುಧ ಹಿಂಪಡೆಯಿರಿ’: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌

Dakshina Kannada ಚೆಕ್‌ಪೋಸ್ಟ್‌ ಕಾರ್ಯ ನಿರ್ವಹಣೆಗೆ ಡಿಸಿ ಸೂಚನೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.