ಶುದ್ಧ ನೀರಿನ ಘಟಕ ಈ ಬೇಸಗೆಗೂ ಸಿಗುವುದು ಅನುಮಾನ!


Team Udayavani, Mar 18, 2017, 3:24 PM IST

1603kpk4.jpg

ನಗರ: ಗ್ರಾ.ಪಂ. ವ್ಯಾಪ್ತಿಯ ಜನ ಸಂದಣಿ ಸೇರುವ ಸ್ಥಳದಲ್ಲಿ ಸರಕಾರ ಸ್ಥಾಪಿಸಲು ಉದ್ದೇಶಿಸಿದ ಬಹು ನಿರೀಕ್ಷಿತ ಶುದ್ಧ ನೀರಿನ ಘಟಕ ಈ ಬೇಸಗೆಯಲ್ಲಿ ಬಳಕೆಗೆ ಲಭ್ಯವಾಗುವ ಲಕ್ಷಣ ಗೋಚರಿಸುತ್ತಿಲ್ಲ.

ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ಅಲ್ಲಲ್ಲಿ ಘಟಕ ನಿರ್ಮಾಣ ಕಾರ್ಯ ಇನ್ನೂ ಅಂತಿಮ ಹಂತದಲ್ಲಿರುವುದೇ ಇದಕ್ಕೆ ಕಾರಣ. ಕೆಆರ್‌ಡಿಐಎಲ್‌ ವತಿಯಿಂದ ಉಭಯ ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರ್ಮಿಸುತ್ತಿರುವ ಬಹುತೇಕ ಘಟಕಗಳು ಪೂರ್ಣಗೊಂಡರೂ ಕಾರ್ಯಾರಂಭದ ಹಂತದಲ್ಲಿಲ್ಲ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಡಿ ಯಲ್ಲಿ ಖಾಸಗಿ ನೇತೃತ್ವದಲ್ಲಿ ನಡೆಯುವ ಘಟಕಗಳು ಇನ್ನೂ ನೆಲಮಟ್ಟದಿಂದ ಮೇಲೇರಿಲ್ಲ. ಆದರೆ ಕಾಮಗಾರಿಯನ್ನು ತ್ವರಿತಗೊಳಿಸಿದರೆ ಅಂತಿಮ ಹಂತದಲ್ಲಿರುವ ಘಟಕಗಳನ್ನು ಸೇವೆಗೆ ಬಳಸಲು ಸಾಧ್ಯವಿದೆ. 

ಕೆಆರ್‌ಡಿಸಿಐಎಲ್‌ ನಿರ್ಮಿಸಿದ ಕೆಲವು ಘಟಕಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕಿದೆ. ಇನ್ನು ಕೆಲವೆಡೆ ನೀರಿನ ಶುದ್ಧೀಕರಣ ಯಂತ್ರಗಳ ಜೋಡಣೆ ಆಗಿಲ್ಲ. ಬೇರೆ ಕೆಲಸ ಪೂರ್ಣಗೊಂಡಿದೆ. ಖಾಸಗಿ ಪ್ರಾಯೋಜಕತ್ವದಲ್ಲಿ ಕೈಗೆತ್ತಿಗೊಂಡಿರುವ ಘಟಕಗಳ ಪೈಕಿ ಪುತ್ತೂರಿನಲ್ಲಿ ಎರಡು ಘಟಕಗಳು ಮಾತ್ರ ಪೂರ್ಣಗೊಂಡಿವೆ. ಹಾಗಾಗಿ ಈ ಬಿರು ಬೇಸಗೆಗೆ ಘಟಕಗಳಲ್ಲಿ ನೀರು ಸಿಗುವ ಖಚಿತತೆ ಇಲ್ಲವಾಗಿದೆ.

ಏನಿದು ಯೋಜನೆ
2015-16ನೇ ಸಾಲಿನಲ್ಲಿ ಸರಕಾರ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೇಲುಸ್ತು ವಾರಿಯಲ್ಲಿ ಖಾಸಗಿ ಮತ್ತು ಸರಕಾರಿ ಸಹ ಭಾಗಿತ್ವದಲ್ಲಿ ಶುದ್ಧ ನೀರು ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಗ್ರಾ.ಪಂ. ವ್ಯಾಪ್ತಿಯ ಜನಸಂದಣಿ ಪ್ರದೇಶದಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಯೋಜನೆ ಇದಾಗಿತ್ತು. ಕಳೆದ ಎಪ್ರಿಲ್‌ನಲ್ಲಿ ಕಾಮಗಾರಿ ಆರಂಭಗೊಂಡಿತ್ತು.

ಕೆಆರ್‌ಡಿಐಎಲ್‌ ವತಿಯಿಂದ ಜಿಲ್ಲೆ ಯಲ್ಲಿ 60 ಘಟಕ ನಿರ್ಮಾಣ ಪ್ರಗತಿ ಯಲ್ಲಿದೆ. ಪುತ್ತೂರು, ಸುಳ್ಯ ತಾಲೂಕಿನಲ್ಲಿ ಉಪ್ಪಿನಂಗಡಿಯಲ್ಲಿ 2ರ ಪೈಕಿ ಒಂದು ಪೂರ್ಣಗೊಂಡಿದೆ. ಇನ್ನೊಂದು ಘಟಕಕ್ಕೆ ನೀರಿನ ಸಂಪರ್ಕ ವ್ಯವಸ್ಥೆ ಪೂರ್ಣಗೊಳ್ಳ ಬೇಕಿದೆ. ಅರಂತೋಡು, ದೇವಚಳ್ಳದಲ್ಲೂ ಘಟಕದ ನಿರ್ಮಾಣ ಅಂತಿಮ ಹಂತಕ್ಕೆ ತಲುಪಿದೆ. ಜಾಲೂÕರು, ರಾಮಕುಂಜ, ಅಮರಪಟ್ನೂರು, ಬೆಳ್ಳಾರೆ, ಸುಬ್ರಹ್ಮಣ್ಯ, ಕೊçಲ, ಮುರ‌, ಬಜತ್ತೂರು, ಮಾಣಿ, ಆರ್ಯಾಪುನಲ್ಲಿ ಘಟಕ ಪೂರ್ಣ ಗೊಂಡು, ಕೆಲವು ದಿನಗಳಲ್ಲಿ ಕಾರ್ಯಾರಂಭಿಸಲಿದೆ ಎನ್ನುತ್ತಾರೆ ಕೆಆರ್‌ಡಿಐಎಲ್‌ ಎಂಜಿನಿ ಯರ್‌  ರವಿ.ಎಂ. ಅವರು.

ಗುತ್ತಿಗೆದಾರರಿಗೆ ನೋಟಿಸ್‌
ಪುತ್ತೂರಿನಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೇಲುಸ್ತುವಾರಿಯಲ್ಲಿ 16 ಘಟಕಗಳ ನಿರ್ಮಾಣಕ್ಕೆ ಎಪ್ರಿಲ್‌ನಲ್ಲಿ ಟೆಂಡರ್‌ ಆಗಿತ್ತು. ಬೆಂಗಳೂರು ಮೂಲದ ಪಾನೀಶಿಯ ವರ್ಡ್‌ ವೈಯ್ಡ ಕಂಪೆನಿ ಗುತ್ತಿಗೆ ಪಡೆದಿತ್ತು. 16ರಲ್ಲಿ ಎರಡು ಪೂರ್ಣಗೊಂಡಿದ್ದು, ಉಳಿದವು ಅಡಿಪಾಯದ ಹಂತದಲ್ಲೇ ಇವೆ. ಹೀಗಾಗಿ ವಿಳಂಬದ ಕುರಿತಂತೆ ಸಂಬಂಧಿಸಿದ ಗುತ್ತಿಗೆ ಸಂಸ್ಥೆಗೆ ನೋಟಿಸ್‌ ನೀಡಲಾಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿ ಸುರೇಶ್‌.

ಖಾಸಗಿ, ಸರಕಾರಿ ಸಹಭಾಗಿತ್ವ
ಪುತ್ತೂರು ಮತ್ತು ಸುಳ್ಯದಲ್ಲಿ ಒಟ್ಟು 96 ಘಟಕ ನಿರ್ಮಾಣದ ಗುರಿ ನಿಗದಿಪಡಿಸ ಲಾಗಿತ್ತು. ಪ್ರತಿ ಘಟಕಕ್ಕೆ ಹತ್ತು ಲಕ್ಷ ರೂ. ವೆಚ್ಚ ನಿಗದಿಪಡಿಸಲಾಗಿತ್ತು. ಉಭಯ ತಾಲೂಕಿನಲ್ಲಿ ಕೆಆರ್‌ಡಿಐಎಲ್‌, ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಮೇಲುಸ್ತುವಾರಿಯಲ್ಲಿ ಪ್ರತ್ಯೇಕವಾಗಿ ಘಟಕ ನಿರ್ಮಾಣ ಕಾರ್ಯ ನಡೆದಿತ್ತು.

ವಿದ್ಯುತ್‌, ನೀರಿನ ಸಮಸ್ಯೆ!
ಕಾರ್ಯಾರಂಭಕ್ಕೆ ವಿದ್ಯುತ್‌ ಲೋಡ್‌ಶೆಡ್ಡಿಂಗ್‌ ಅಡ್ಡಿಯಾದರೆ, ಇತ್ತ ನೀರಿನ ಮೂಲ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಅನ್ನುವುದು ಖಚಿತವಿಲ್ಲ. ಹಾಗಾಗಿ ಘಟಕ ಪೂರ್ಣಗೊಂಡರೂ ಪ್ರಯೋಜನಕ್ಕೆ ಸಿಗು ವುದು ಕಷ್ಟ. ಈಗ ಪ್ರಾರಂಭದ ವಿಳಂಬಕ್ಕೂ ವಿದ್ಯುತ್‌, ನೀರಿನ ಸಮಸ್ಯೆ ಕಾರಣ ಆಗಿದೆ ಅನ್ನುವುದು ಸಾರ್ವಜನಿಕರ ಅಭಿಪ್ರಾಯ.

ಪುತ್ತೂರು, ಸುಳ್ಯ ತಾಲೂಕುಗಳ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕ ಪ್ರದೇಶಗಳಲ್ಲಿ ಸರಕಾರ ನಿರ್ಮಿಸುತ್ತಿರುವ ಶುದ್ಧ ನೀರಿನ ಘಟಕಗಳು ಬಹುತೇಕ ಪೂರ್ಣಗೊಂಡಿದೆ. ಆದರೆ  ಕಾರ್ಯಾರಂಭದ ಹಂತ ತಲುಪದ ಕಾರಣ, ಈ ಬಾರಿ ಬೇಸಗೆಯಲ್ಲಿ  ಬಳಕೆಗೆ ಲಭ್ಯವಾಗುವ ಸಾಧ್ಯತೆ ವಿರಳ.

ಕಾರ್ಯಾರಂಭ ಹೇಗೆ !
ಘಟಕದ ಯಂತ್ರಕ್ಕೆ ಒಂದು ರೂ. ನಾಣ್ಯ ಹಾಕಿದರೆ ಶುದ್ಧೀಕೃತ ಆರೇಳು ಲೀ. ನೀರು ಸಿಗುತ್ತದೆ. ಪ್ರತಿ  ಲೀಟರಿಗೆ 15 ಪೈಸೆ ಖರ್ಚು ಬೀಳುತ್ತದೆ. ಎರಡು ವರ್ಷದ ಅನಂತರ ದರ ಪರಿಷ್ಕರಣೆ ಆಗುತ್ತದೆ. ಘಟಕ ನಿರ್ಮಾಣಕ್ಕೆ ಮಾನದಂಡವೇನೆಂದರೆ, ಗ್ರಾ.ಪಂ ನಲ್ಲಿ ನೀರಿನ ಮೂಲ ಇರಬೇಕು ಮತ್ತು 30×30 ಅಡಿ ಸ್ಥಳವನ್ನು 15 ವರ್ಷ ಖಾಸಗಿ ಕಂಪೆನಿಗೆ ಲೀಸ್‌ ನೀಡಬೇಕು ಎಂಬಿತ್ಯಾದಿ ಷರತ್ತು ವಿಧಿಸಲಾಗಿತ್ತು. ಬೇಸಗೆ ಕಾಲದಲ್ಲಿ ಇದು ಪ್ರಯೋಜನಕಾರಿಯೆಂದೂ ಭಾವಿಸಲಾಗಿತ್ತು.

ಟಾಪ್ ನ್ಯೂಸ್

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Belthangady ಓರ್ವ ಮತದಾರನಿಂದ ಕೈ ತಪ್ಪುತ್ತಿತ್ತು ಶೇ.100 ಸಾಧನೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.