ಬಿಎಸ್‌-6 ಇಂಧನ: ಎಂಆರ್‌ಪಿಎಲ್‌ ಸಜ್ಜು

810 ಕೋ.ರೂ. ವೆಚ್ಚದಲ್ಲಿ ಪ್ರತ್ಯೇಕ ಘಟಕ

Team Udayavani, Jul 1, 2019, 12:42 PM IST

MRPL

ಮಂಗಳೂರು: ಮುಂದಿನ ಎಪ್ರಿಲ್‌ನಿಂದ ದೇಶಾದ್ಯಂತ “ಬಿಎಸ್‌-6′ ಪೆಟ್ರೋಲ್‌-ಡೀಸೆಲ್‌ ಉತ್ಪಾದಿಸುವಂತೆ ಕೇಂದ್ರ ಸರಕಾರ ಎಲ್ಲ ತೈಲ ಕಂಪೆನಿಗಳಿಗೆ ಈಗಾಗಲೇ ನಿರ್ದೇಶಿಸಿದೆ. ನಗರದ ಎಂಆರ್‌ಪಿಎಲ್‌ನಲ್ಲಿ 1810 ಕೋ.ರೂ. ವೆಚ್ಚದಲ್ಲಿ ಪ್ರತ್ಯೇಕ ಘಟಕ ನಿರ್ಮಾಣ ಪ್ರಗತಿಯಲ್ಲಿದ್ದು, ಮುಂದಿನ ಜನವರಿ ಯಿಂದ ರಾಜ್ಯಕ್ಕೆ ಬಿಎಸ್‌-6 ಇಂಧನ ಸರಬರಾಜು ಮಾಡಲಿದೆ.

ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟುವುದಕ್ಕಾಗಿ ಕೇಂದ್ರ ಸರಕಾರ ವಿವಿಧ ಹಂತಗಳ “ಭಾರತ್‌ ಸ್ಟೇಜ್‌’ ಮಾಲಿನ್ಯ ನಿಯ ಮಾವಳಿ ಜಾರಿಗೆ ತಂದಿದೆ. ಸದ್ಯ ಜಾರಿಯಲ್ಲಿರುವುದು “ಬಿಎಸ್‌-4′. 2020ರ ಎ.1ರಿಂದ “ಬಿಎಸ್‌ 5′ ಬದಲು “ಬಿಎಸ್‌ 6′ ಇಂಧನವನ್ನೇ ಬಳಸಲಾಗುತ್ತದೆ. ಇದಕ್ಕೆ ತಕ್ಕಂತೆ ವಾಹನಗಳ ಉತ್ಪಾದನೆ ನಡೆಯಲಿದೆ. ಬಿಎಸ್‌6 ಡೀಸೆಲ್‌ ಉತ್ಪಾದನೆಗೆ ಬೇಕಾದ ತಾಂತ್ರಿಕ ಸೌಲಭ್ಯಗಳು ಈಗಾಗಲೇ ಎಂಆರ್‌ಪಿಎಲ್‌ನಲ್ಲಿವೆ. ಬಿಎಸ್‌6 ಪೆಟ್ರೋಲ್‌ ಉತ್ಪಾದನೆಗೆ

ಪ್ರತ್ಯೇಕ ಘಟಕದ ಅಗತ್ಯವಿದೆ. ಸದ್ಯ ಲಭ್ಯವಿರುವ ಜಮೀನಿನಲ್ಲಿ ಇದರ ನಿರ್ಮಾಣ ಆಗು ತ್ತಿದ್ದು, ಡಿಸೆಂಬರ್‌ನಲ್ಲಿ ಪೂರ್ಣ ಗೊಳ್ಳಲಿದೆ. ಜನವರಿಯಿಂದಲೇ ತೈಲ ಸರಬರಾಜಿಗೆ ಸಿದ್ಧತೆ ನಡೆಸಲಾಗಿದೆ.

ಶೇ.1ರಷ್ಟಿತ್ತು ಸಲ್ಫರ್!
ಎಂಆರ್‌ಪಿಎಲ್‌ ಆರಂಭ ಕಾಲದಲ್ಲಿ ಡೀಸೆಲ್‌ನಲ್ಲಿ ಶೇ.1ರಷ್ಟು ಸಲ#ರ್‌ ಅಂಶ ಸೇರಿಸಲು ಅವಕಾಶವಿತ್ತು. ಬಳಿಕ ಶೇ.0.50 ಬಳಸಲಾಗುತ್ತಿತ್ತು. ಅನಂತರ ಇದು 2,500 ಪಿಪಿಎಂ, 500, 350 ಪಿಪಿಎಂಗಿಳಿಯಿತು. ಬಿಎಸ್‌4ನಡಿ ಡೀಸೆಲ್‌ ಮತ್ತು ಪೆಟ್ರೋಲ್‌ ಎರಡರಲ್ಲೂ 50 ಪಿಪಿಎಂ ಮಾತ್ರ ಸಲ#ರ್‌ ಸೇರ್ಪಡೆಗೆ ಅವಕಾಶ. ಇದು ಬಿಎಸ್‌6ನಲ್ಲಿ ಇನ್ನಷ್ಟು ಕಡಿಮೆ.

ಸತು ಮುಕ್ತ ಪೆಟ್ರೋಲ್‌
ಹಿಂದೆ ಪೆಟ್ರೋಲ್‌ಗೆ ಸತುವಿನಂಶ ಸೇರ್ಪಡೆ ಮಾಡಲಾಗುತ್ತಿತ್ತು. ಸತು ಮಾಲಿನ್ಯಕಾರಿ. 2000ನೇ ಇಸವಿಯಿಂದ ಸತುಮುಕ್ತ ಇಂಧನ ನೀಡಲು ಕೇಂದ್ರ ಸರಕಾರ ಸೂಚಿಸಿತ್ತು. ಅದಕ್ಕಿಂತ ನಾಲ್ಕು ವರ್ಷ ಮೊದಲೇ, 1996ರಲ್ಲಿ ಎಂಆರ್‌ಪಿಎಲ್‌ನಲ್ಲಿ ಸತುಮುಕ್ತ ಪೆಟ್ರೋಲ್‌ ಉತ್ಪಾದಿಸಲಾಗಿತ್ತು.

ಬಿಎಸ್‌4 ವಾಹನಗಳಿಗೆ ಸಮಸ್ಯೆ ಇಲ್ಲ
ಸದ್ಯ ದೇಶದಲ್ಲಿ ಬಿಎಸ್‌4 ಇಂಧನ ಬಳಕೆ ಸಾಮರ್ಥ್ಯದ ವಾಹನಗಳಿವೆ. ಮುಂದಿನ ಎಪ್ರಿಲ್‌ನಿಂದ ಮಾರುಕಟ್ಟೆಗೆ ಬರುವ ವಾಹನಗಳು ಬಿಎಸ್‌6 ಸಾಮರ್ಥ್ಯದವಾಗಿರುತ್ತವೆ. ಆ ಬಳಿಕವೂ ಬಿಎಸ್‌4 ವಾಹನಗಳಿಗೆ ಬಿಎಸ್‌6 ಇಂಧನ ತುಂಬಿಸಲು ಸಮಸ್ಯೆ ಇಲ್ಲ. ಆದರೆ ವಾಹನ ಮತ್ತು ಇಂಧನ ಬೇರೆ ಬೇರೆ ಕ್ರಮಾಂಕದವಾದ್ದರಿಂದ ಮಾಲಿನ್ಯ ನಿಯಂತ್ರಣ ಪೂರ್ಣ ಸಾಧನೆಯಾಗದು.

ಏನಿದು ಬಿಎಸ್‌-6?
ಭಾರತ್‌ ಸ್ಟೇಜ್‌ (ಬಿಎಸ್‌) ಅಂದರೆ ವಾಹನಗಳ ಇಂಗಾಲಾಮ್ಲ ಹೊರ ಸೂಸುವಿಕೆ, ಮಾಲಿನ್ಯ ನಿಯಂತ್ರಣ ಮಾನದಂಡ. ಪೆಟ್ರೋಲ್‌-ಡೀಸೆಲ್‌ನಲ್ಲಿ ಗಂಧಕದ ಅಂಶ ಅಧಿಕವಿದ್ದಷ್ಟು ಮಾಲಿನ್ಯ ಅಧಿಕ. ಹೀಗಾಗಿ ಸರಕಾರಗಳು ಅದನ್ನು ಕಡಿಮೆ ಮಾಡುವ ನೀತಿಗೆ ಆದ್ಯತೆ ನೀಡುತ್ತಾ ಬಂದಿವೆ. ಪ್ರಸ್ತುತ ದೇಶದಲ್ಲಿ ಜಾರಿಯಲ್ಲಿರುವುದು ಬಿಎಸ್‌4. ಮುಂದೆ ಬಿಎಸ್‌6 ಜಾರಿಗೆ ಬರುವಾಗ ಇದರ ಪ್ರಮಾಣ ಇನ್ನಷ್ಟು ಕಡಿಮೆಯಾಗುತ್ತದೆ.

ಎಂಆರ್‌ಪಿಎಲ್‌; ರಾಜ್ಯಾದ್ಯಂತ ಇಂಧನ ಸರಬರಾಜು
ಎಂಆರ್‌ಪಿಎಲ್‌ ಉತ್ಪಾದಿಸುವ ಒಟ್ಟು ಇಂಧನದ ಪೈಕಿ ಶೇ.75ರಷ್ಟು ರಾಜ್ಯದ ಒಳಗೆ ಸರಬರಾಜು ಆಗುತ್ತಿದೆ. ಉಳಿದಂತೆ ಸ್ವಲ್ಪ ಪ್ರಮಾಣದಲ್ಲಿ ಗೋವಾ, ಕೇರಳ ಭಾಗಕ್ಕೆ ಹೋಗುತ್ತದೆ. ಪ್ರತೀ ವರ್ಷ ಸುಮಾರು 6 ಲಕ್ಷ ಟನ್‌ನಷ್ಟು ಡೀಸೆಲ್‌, 10 ಲಕ್ಷ ಟನ್‌ ಪೆಟ್ರೋಲ್‌, 10 ಲಕ್ಷ ಟನ್‌ ಎಲ್‌ಪಿಜಿಯನ್ನು ಉತ್ಪಾದಿಸುತ್ತದೆ. ಅದರ ಒಟ್ಟು ವಾರ್ಷಿಕ ವಹಿವಾಟು ಸುಮಾರು 60,000 ಕೋ.ರೂ.

ಡಿಸೆಂಬರ್‌ನಲ್ಲಿ ಯುನಿಟ್‌ ಕಾಮಗಾರಿ ಪೂರ್ಣ
ಎಪ್ರಿಲ್‌ 1ರಿಂದ “ಬಿಎಸ್‌-6′ ಪೆಟ್ರೋಲ್‌ ಮತ್ತು ಡೀಸೆಲ್‌ ಸರಬರಾಜು ಮಾಡಲು ಕೇಂದ್ರ ಸರಕಾರ ಸೂಚಿಸಿದೆ. ಇದರನ್ವಯ ಅಗತ್ಯವಾದ ಯುನಿಟ್‌ಗಳನ್ನು 1,810 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಡಿಸೆಂಬರ್‌ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಜ.1ರಿಂದಲೇ ಬಿಎಸ್‌6 ತೈಲ ಸರಬರಾಜು ಮಾಡಲು ನಾವು ಸಿದ್ಧ.
ಎಂ. ವೆಂಕಟೇಶ್‌ ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್‌.

 ದಿನೇಶ್‌ ಇರಾ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.