ಸುಳ್ಯದ “ಸುಧಾಮ’ನಿಗೆ ಒಲಿದ 4 ಕೋ.ರೂ. ​​​​​​​

Team Udayavani, Mar 23, 2019, 12:30 AM IST

2203slkp1a.jpg

ಸುಳ್ಯ: ಶ್ರೀಕೃಷ್ಣನನ್ನು ಕಾಣಲು ಮಥುರೆಗೆ ಹೋದ ಅವನ ಬಾಲ್ಯಕಾಲದ ಬಡ ಗೆಳೆಯ ಸುಧಾಮ ಹಿಂದಿರುಗಿ ಬರುವಾಗ ದೇವಕೃಪೆಯಿಂದ ಅಷ್ಟೆ„ಶ್ವರ್ಯ ಒದಗಿತ್ತಂತೆ. ಸುಳ್ಯದ ಪುಟ್ಟ ಹೊಟೇಲ್‌ ಮಾಲಕರೊಬ್ಬರ ಕತೆಯೂ ಇಂಥದ್ದೇ. ಇವರ ಹೆಸರು ಕೂಡ ಸುಧಾಮ!

ಕೇರಳ ರಾಜ್ಯ ಲಾಟರಿ ಸಮ್ಮರ್‌ ಬಂಪರ್‌ ಡ್ರಾದಲ್ಲಿ ಸುಳ್ಯದ “ನಿತೀಶ್‌’ ಹೊಟೇಲ್‌ ಮಾಲಕ ಸುಧಾಮ ಬಿ. ಅವರಿಗೆ ಬರೋಬ್ಬರಿ 4 ಕೋ.ರೂ. ಒಲಿದು ಬಂದಿದೆ!ಲಾಟರಿಯಲ್ಲಿ ಸುಳ್ಯ ಮೂಲದ ವ್ಯಕ್ತಿಗೆ ಬಂಪರ್‌ ಬಹುಮಾನ ಲಭಿಸಿದೆ ಎಂಬ ಸುದ್ದಿ ಟಿಕೆಟ್‌ ವಿತರಿಸಿದ ಏಜೆನ್ಸಿ ಮೂಲಕ ದೊರೆತು, ಆ ವ್ಯಕ್ತಿ ಯಾರು ಎಂಬ ಬಗ್ಗೆ ಸಾಮಾಜಿಕ ಜಾಲ ತಾಣ ದಲ್ಲಿ ಪ್ರಚಾರ ಆರಂಭಗೊಂಡಿತ್ತು. ಟಿಕೆಟ್‌ ಖರೀದಿಸಿದ್ದ ಬಿ. ಸುಧಾಮ ಮಣಿಯಾಣಿ ಇದನ್ನು ತಿಳಿದು ಇಂಟರ್‌ನೆಟ್‌ ಮೂಲಕ ತನ್ನ ನಂಬರ್‌ ಪರಿಶೀಲಿಸಿದರು. ಆಗ ಬಹುಮಾನ ಒಲಿದಿ ರುವುದು ಖಚಿತವಾಯಿತು.

ದೇಗುಲಕ್ಕೆ ಹೋಗಿದ್ದಾಗ ಖರೀದಿ!
ಮಾ.1ರಂದು ಸುಧಾಮ ಅವರು ಮಲ್ಲ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿಂದ ಮರಳುವಾಗ ಕಾಸರಗೋಡಿನ ಮಧು ಲಾಟರಿ ಏಜೆನ್ಸಿಯ ಸಬ್‌ ಏಜೆಂಟ್‌ ಆಗಿರುವ ಮುಳ್ಳೇರಿಯಾ ಕುಂಞಿಕಣ್ಣನ್‌ ಅವರಿಂದ 150 ರೂ. ಬೆಲೆಯ 3 ಟಿಕೆಟ್‌ ಖರೀದಿಸಿದ್ದರು. ಅವುಗಳಲ್ಲಿ ಕೇರಳ ರಾಜ್ಯ ಲಾಟರಿ ಸಮ್ಮರ್‌ ಬಂಪರ್‌ ಡ್ರಾದಲ್ಲಿ ಖಆ 131399 ನಂಬರ್‌ 4 ಕೋ.ರೂ. ಬಹುಮಾನಕ್ಕೆ ಆಯ್ಕೆಯಾಗಿದೆ.

“ನಾಲ್ಕು ವರ್ಷಗಳಿಂದ ಅಪರೂಪ ಕ್ಕೊಮ್ಮೆ ಲಾಟರಿ ಟಿಕೆಟ್‌ ಖರೀದಿಸುತ್ತಿದ್ದೆ. ಈ ತನಕ ಬಹುಮಾನ ಸಿಕ್ಕಿರಲಿಲ್ಲ. ಈ ಬಾರಿಯೂ ಬಹುಮಾನದ ನಿರೀಕ್ಷೆ ಇಲ್ಲದೆ ಫಲಿತಾಂಶ ನೋಡಿರಲಿಲ್ಲ. ಸುಳ್ಯ ಮೂಲದ ವ್ಯಕ್ತಿಯ ಟಿಕೆಟಿಗೆ ಬಹುಮಾನ ಸಿಕ್ಕಿದೆ ಎಂಬ ಮಾಹಿತಿ ಸಿಕ್ಕಿದಾಗ ಅನುಮಾನಗೊಂಡು ಪರಿಶೀ ಲಿಸಿದರೆ ನಾನು ಖರೀದಿಸಿದ ಲಾಟರಿ ಟಿಕೆಟ್‌ಗೆ ಅದೃಷ್ಟ ಒಲಿದಿರುವ ಶುಭ ಸುದ್ದಿ ಕಾದಿತ್ತು ಅನ್ನುತ್ತಾರೆ ಸುಧಾಮ.

ಹೊಟೇಲ್‌ ಮಾಲಕ  ಕೋಟಿಪತಿ!
24 ವರ್ಷಗಳಿಂದ ಸಣ್ಣ ಹೊಟೇಲ್‌ ನಡೆಸುತ್ತಿರುವ ಸುಧಾಮ ಅವರು ಸುಳ್ಯ ನಗರದ ಕಾಂತಮಂಗಲ ಸಮೀಪದ ಬೂಡುಮಕ್ಕಿ ನಿವಾಸಿ. 1995ರಿಂದ 2000ನೇ ಇಸವಿಯ ತನಕ ಅಡ್ಯನಡ್ಕದಲ್ಲಿ ಹೊಟೇಲ್‌ ವ್ಯವಹಾರ ನಡೆಸಿದ್ದರು. 2001ರಿಂದ ಸುಳ್ಯ ನಗರದ ಮುಖ್ಯ ರಸ್ತೆಯ ಶ್ರೀ ಕೃಷ್ಣ ಬಿಲ್ಡಿಂಗ್‌ನಲ್ಲಿ “ನಿತೀಶ್‌ ಹೊಟೇಲ್‌’ ನಡೆಸುತ್ತಿದ್ದಾರೆ. ಇದು ಸಣ್ಣ ಹೊಟೇಲ್‌; ಆದರೆ ಈಗ ಒದಗಿ ರುವ ಅದೃಷ್ಟ ದೊಡ್ಡದು. 

ಪತ್ನಿ ಪ್ರಭಾವತಿ, ಮೂವರು ಪುತ್ರರಾದ ನಿತೀಶ್‌, ಶರತ್‌, ಮನ್ವಿತ್‌ ಅವರನ್ನೊಳಗೊಂಡ ಸಂಸಾರ. ಪುತ್ರರು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮನೆಯಲ್ಲಿ ಸಣ್ಣ ಮಟ್ಟಿನ ಕೃಷಿಯೂ ಅವರಿಗಿದೆ. 

“ನಾಲ್ಕು ಕೋ. ರೂ. ಬಹುಮಾನ ಬಂದಿರುವುದು ಅನಿರೀಕ್ಷಿತ. ಈ ಹಣವನ್ನು ನಿರ್ದಿಷ್ಟವಾಗಿ ಇಂತಹುದಕ್ಕೇ ಬಳಸಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಮಕ್ಕಳ ವಿದ್ಯಾಭ್ಯಾಸವೂ ನಮ್ಮ ಮುಂದಿರುವುದರಿಂದ ದೊರೆತ ಹಣವನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ’ ಅಂದಿದ್ದಾರೆ ಸುಧಾಮ.

– ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

ದಾಂಡೇಲಿ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ.!

ದಾಂಡೇಲಿ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ.!

24aditi

ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಅದಿತಿ ಪ್ರಭುದೇವ: ಹೊಸ ಚಿತ್ರಕ್ಕೆ ಮುಹೂರ್ತ

ಜಮ್ಮುವಿನಲ್ಲಿ ಇಂಜೆಸ್ಟಿಸ್ ಮುಗಿದ ಅಧ್ಯಾಯ – ಅಮಿತ್ ಶಾ

ಜಮ್ಮುವಿನಲ್ಲಿ ಇಂಜೆಸ್ಟಿಸ್ ಮುಗಿದ ಅಧ್ಯಾಯ: ಅಮಿತ್ ಶಾ

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

9,136 ಕೋಟಿ 89 ಲಕ್ಷ ರೂ. ಕೃಷಿ ಸಾಲ ನೀಡಿಕೆ – ಸಚಿವ ಸೋಮಶೇಖರ್

sagara news

ಅಕ್ರಮ ಗೋವು ಕಳ್ಳತನ: ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ

incident held at sagara

ಬಸ್ಸಿಗೆ ಕಾಯುತ್ತಿದ್ದವರಿಗೆ ಢಿಕ್ಕಿ ಹೊಡೆದ ಕಾರು: ಚಾಲಕ ಸಾವು, ಉಳಿದವರ ಸ್ಥಿತಿ ಗಂಭೀರ

ಅಲ್ಪಸಂಖ್ಯಾತರನ್ನು ಮುಗಿಸುವುದೇ ಕುಮಾರಸ್ವಾಮಿ ಗುರಿ: ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ

ಅಲ್ಪಸಂಖ್ಯಾತರನ್ನು ಮುಗಿಸುವುದೇ ಕುಮಾರಸ್ವಾಮಿ ಗುರಿ: ಶಾಸಕ ಜಮೀರ್ ಅಹ್ಮದ್ ವಾಗ್ದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8dharmasthala

ಡಾ. ವೀರೇಂದ್ರ ಹೆಗ್ಗಡೆಯವರ 54ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

ದಿಡುಪೆ-ಸಂಸೆ ರಸ್ತೆ: ಮುಕ್ತಾಯ ಹಂತದಲ್ಲಿ ಸರ್ವೇ

ದಿಡುಪೆ-ಸಂಸೆ ರಸ್ತೆ: ಮುಕ್ತಾಯ ಹಂತದಲ್ಲಿ ಸರ್ವೇ

ಮುರದಮೇಲುವಿನಲ್ಲಿ ಇಂದು ಲೋಕಾರ್ಪಣೆ

ಮುರದಮೇಲುವಿನಲ್ಲಿ ಇಂದು ಲೋಕಾರ್ಪಣೆ

ಪುತ್ತೂರು ಎಪಿಎಂಸಿ ರಸ್ತೆ: ಅಂಡರ್‌ಪಾಸ್‌ ನಿರ್ಮಾಣ ಶೀಘ್ರ ಅಂತಿಮ ಮುದ್ರೆ: ನಳಿನ್‌

ಪುತ್ತೂರು ಎಪಿಎಂಸಿ ರಸ್ತೆ: ಅಂಡರ್‌ಪಾಸ್‌ ನಿರ್ಮಾಣ ಶೀಘ್ರ ಅಂತಿಮ ಮುದ್ರೆ: ನಳಿನ್‌

MUST WATCH

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

udayavani youtube

ಉಕ್ಕಿ ಹರಿಯುತ್ತಿದೆ ಚಿಕ್ಕಬಳ್ಳಾಪುರದ ರಂಗಧಾಮ ಕೆರೆ..!

udayavani youtube

ಕೆರೆಯ ಮೇಲೆ ಆಂಬ್ಯುಲೆನ್ಸ್ ಹೋಗಲು ಸಹಾಯ ಮಾಡಿದ ಸಾರ್ವಜನಿಕರು

udayavani youtube

ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಗ್ರಾಮಸ್ಥರು

ಹೊಸ ಸೇರ್ಪಡೆ

ದಾಂಡೇಲಿ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ.!

ದಾಂಡೇಲಿ: ಕಾಳಿ ನದಿ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನನ್ನು ಎಳೆದೊಯ್ದ ಮೊಸಳೆ.!

24aditi

ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಅದಿತಿ ಪ್ರಭುದೇವ: ಹೊಸ ಚಿತ್ರಕ್ಕೆ ಮುಹೂರ್ತ

ಜಮ್ಮುವಿನಲ್ಲಿ ಇಂಜೆಸ್ಟಿಸ್ ಮುಗಿದ ಅಧ್ಯಾಯ – ಅಮಿತ್ ಶಾ

ಜಮ್ಮುವಿನಲ್ಲಿ ಇಂಜೆಸ್ಟಿಸ್ ಮುಗಿದ ಅಧ್ಯಾಯ: ಅಮಿತ್ ಶಾ

ಆತ್ಮನಿರ್ಭರ ಭಾರತ್ ಸ್ವಯಂಪೂರ್ಣ ಯೋಜನೆ ಕಾರ್ಯಕ್ರಮಕ್ಕೆ  ಉತ್ತಮ ಪ್ರತಿಕ್ರಿಯೆ

ಆತ್ಮನಿರ್ಭರ ಭಾರತ್ ಸ್ವಯಂಪೂರ್ಣ ಯೋಜನೆ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ

ಗೋವಾ ಸರ್ಕಾರ ಕೇಂದ್ರದ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ: ಪ್ರಧಾನಿ ಮೋದಿ

ಗೋವಾ ಸರ್ಕಾರ ಕೇಂದ್ರದ ಅನೇಕ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.