ಯಾವುದೇ ಭ್ರಷ್ಟಾಚಾರ, ಗಳಿಕೆಗಿಂತ ಹೆಚ್ಚಿನ ಆಸ್ತಿ ವಿವರ ಇದ್ದರೆ ಹಂಚಿಕೊಳ್ಳಿ : ಎಸ್‌ಪಿ


Team Udayavani, Sep 27, 2022, 12:21 PM IST

ಯಾವುದೇ ಭ್ರಷ್ಟಾಚಾರ, ಗಳಿಕೆಗಿಂತ ಹೆಚ್ಚಿನ ಆಸ್ತಿ ವಿವರ ಇದ್ದರೆ ಹಂಚಿಕೊಳ್ಳಿ : ಎಸ್‌ಪಿ

ಮಂಗಳೂರು : ಮತ್ತೆ ಬಲಿಷ್ಠಗೊಂಡಿರುವ ಲೋಕಾಯುಕ್ತ ಇಲಾಖೆಯು ದಾಳಿ ಕಾರ್ಯಾಚರಣೆ ನಡೆಸುವ ಅಧಿಕಾರವನ್ನೂ ಪಡೆದುಕೊಂಡಿದ್ದು, ದ.ಕ., ಉಡುಪಿ ಜಿಲ್ಲೆಗೆ ಸಂಬಂಧಿಸಿ ಯಾವುದೇ ಭ್ರಷ್ಟಾಚಾರದ ದೂರುಗಳಿದ್ದರೆ ಮಾಹಿತಿಯನ್ನು ಹಂಚಿಕೊಳ್ಳಬಹುದು ಎಂದು ಮಂಗಳೂರು- ಉಡುಪಿ ವಿಭಾಗದ ಲೋಕಾಯುಕ್ತ ನೂತನ ಎಸ್‌ಪಿ ಲಕ್ಷ್ಮೀಗಣೇಶ್‌ ಕೆ. ತಿಳಿಸಿದ್ದಾರೆ.

ನೂತನ ಲೋಕಾಯುಕ್ತ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯ ಸರಕಾರ ಸೆ. 9ರಿಂದ ಕರ್ನಾಟಕ ಲೋಕಾಯುಕ್ತವನ್ನು ಮತ್ತಷ್ಟು ಬಲಿಷ್ಠ ಗೊಳಿಸಿದೆ. ಪೊಲೀಸ್‌ ಠಾಣೆ ಅಧಿಕಾರದ ಜತೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಯ ವಿಚಾರದಲ್ಲಿ ಹೆಚ್ಚಿನ ಕೆಲಸ ಮಾಡುವ ಅಧಿಕಾರ ನೀಡಿದೆ. ಪಂಚಾಯತ್‌ನಿಂದ ಹಿಡಿದು ಜಿಲ್ಲಾಧಿಕಾರಿಗಳ ತನಕ ಯಾವುದೇ ಸರಕಾರಿ ಅಧಿಕಾರಿಗಳು ಕೆಲಸ ಮಾಡಿಸಿ ಕೊಳ್ಳಲು ಹಣ ಕೇಳುತ್ತಿದ್ದಾರೆ ಎಂದಾದರೆ ಅಂಥವರ ವಿರುದ್ಧ ದೂರು ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸರಕಾರಿ ಅಧಿಕಾರಿಗಳು ಗಳಿಕೆಗಿಂತ ಹೆಚ್ಚಿನ ಆಸ್ತಿ ಹೊಂದಿದ್ದರೆ ದೂರು ಸಲ್ಲಿಸಬಹುದು ಎಂದರು.

ಎರಡು ಜಿಲ್ಲೆಗೆ 1ವಿಭಾಗ
ಲೋಕಾಯುಕ್ತದ ಮಂಗಳೂರು ವಿಭಾಗವು ದ.ಕ. ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಈಗಾಗಲೇ ಎಸಿಬಿಯಲ್ಲಿರುವ ಹಳೆಯ ಪ್ರಕರಣಗಳನ್ನು ಲೋಕಯುಕ್ತಕ್ಕೆ ವರ್ಗಾವಣೆ ಮಾಡುವ ಕಾರ್ಯ ನಡೆಯುತ್ತಿದೆ. ವರ್ಗಾವಣೆಯಾದ ಬಳಿಕ ಇರುವ ಪ್ರಕರಣಗಳ ತನಿಖೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈಗಾಗಲೇ ಮಂಗಳೂರು ವಿಭಾಗದಲ್ಲಿ 2 ಡಿವೈಎಸ್ಪಿ ಹಾಗೂ 1 ಇನ್‌ಸ್ಪೆಕ್ಟರ್‌ ಹುದ್ದೆ ಇದ್ದರೆ 1 ಇನ್‌ಸ್ಪೆಕ್ಟರ್‌ ಹಾಗೂ 6 ಪಿಸಿಗಳ ಹುದ್ದೆಗಳು ಖಾಲಿ ಉಳಿದಿವೆ. ಉಡುಪಿಯಲ್ಲಿ 1 ಡಿವೈಎಸ್ಪಿ ಹಾಗೂ 1 ಇನ್‌ಸ್ಪೆಕ್ಟರ್‌ ಹುದ್ದೆಗಳಿದ್ದು 1 ಇನ್‌ಸ್ಪೆಕ್ಟರ್‌ ಹುದ್ದೆ ಖಾಲಿಯಿದೆ. ಅವುಗಳನ್ನು ಶೀಘ್ರದಲ್ಲಿಯೇ ಭರ್ತಿ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ : 20 ದಿನ ಬಳಿಕ ಚೆನ್ನೈನಲಿ ಬಾಲಕಿಯರು ಪತ್ತೆ: ಸಲಿಂಗ ಮದುವೆಗೆ ಬಾಲಕಿಯರ ಸಿದ್ಧತೆ?

ಲೋಕಾಯುಕ್ತಕ್ಕೆ ಈಗ ಹೆಚ್ಚಿನ ಅಧಿಕಾರ ನೀಡುವ ಜತೆಯಲ್ಲಿ ಪಿಸಿ ಕಾಯಿದೆ(ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆ)ಯ ಹೊಣೆಗಾರಿಕೆ ಕೂಡ ಲೋಕಾಯುಕ್ತಕ್ಕೆ ಬಂದಿದ್ದು, ಪೊಲೀಸ್‌ ಠಾಣೆಯ ರೀತಿಯಲ್ಲಿ ಇನ್ನು ಮುಂದೆ ಲೋಕಾಯುಕ್ತ ಕಾರ್ಯಾಚರಣೆ ನಡೆಸುತ್ತದೆ. ಭ್ರಷ್ಟಾಚಾರದ ವಿರುದ್ಧ ದೂರು ನೀಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಎಸಿಬಿಗಿಂತ ಮೊದಲು ಲೋಕಾಯುಕ್ತ ಇದ್ದಾಗ ಮಂಗಳೂರು ವಿಭಾಗದಲ್ಲಿ 12 ಪ್ರಕರಣಗಳಿಗೆ ಶಿಕ್ಷೆ ವಿಧಿಸ ಲಾಗಿತ್ತು ಎಂದು ಮಾಹಿತಿ ನೀಡಿದರು.

ಲೋಕಾಯುಕ್ತದ ಉಡುಪಿ ಡಿವೈಎಸ್ಪಿ ಜಗದೀಶ್‌, ಮಂಗಳೂರು ಡಿವೈಎಸ್ಪಿಗಳಾದ ಚಲುವರಾಜು ಹಾಗೂ ಕಲಾವತಿ, ಉಡುಪಿ ಇನ್‌ಸ್ಪೆಕ್ಟರ್‌ ಜಯರಾಮ ಡಿ. ಗೌಡ ಹಾಗೂ ಮಂಗಳೂರು ಇನ್‌ಸ್ಪೆಕ್ಟರ್‌ ಅಮಾನುಲ್ಲಾ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

7

ಮರಳಿ ಕಾಂಗ್ರೆಸ್ ಗೂಡಿಗೆ ಹಾರುವುದೇ ಹಳ್ಳಿಹಕ್ಕಿ?

6

ಇಟಲಿಗೆ ಭೇಟಿ ನೀಡಿದ ಶೋಭಾ ಕರಂದ್ಲಾಜೆ

5

ಪ್ರಧಾನಿ ನನ್ನ ಆರೋಗ್ಯ ವಿಚಾರಿಸಿದರು: ಮಾಜಿ ಪ್ರಧಾನಿ ದೇವೇಗೌಡ

ಜಮೀನು ವಿವಾದ: ಸಹೋದರ ಸಂಬಂಧಿಯ ರುಂಡ ಕಡಿದು, ಸೆಲ್ಫಿ ತೆಗೆದುಕೊಂಡ ಆರೋಪಿಗಳು

ಜಮೀನು ವಿವಾದ: ಸಹೋದರ ಸಂಬಂಧಿಯ ರುಂಡ ಕಡಿದು, ಸೆಲ್ಫಿ ತೆಗೆದುಕೊಂಡ ಆರೋಪಿಗಳು

4

ಮಸ್ಕಿ: ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ

ಟ್ರಕ್‌ ನಲ್ಲಿತ್ತು 40 ಲಕ್ಷ ಮೌಲ್ಯದ 400 ಕೆಜಿ ಗಾಂಜಾ: ಪೊಲೀಸರ ಕೈಗೆ ಸಿಕ್ಕಿ ಬಿದ್ದ ಚಾಲಕ

ಟ್ರಕ್‌ ನಲ್ಲಿತ್ತು 40 ಲಕ್ಷ ರೂ. ಮೌಲ್ಯದ 400 ಕೆಜಿ ಗಾಂಜಾ: ಪೊಲೀಸರ ಕೈಗೆ ಸಿಕ್ಕಿ ಬಿದ್ದ ಚಾಲಕ

ಭೂಕುಸಿತ ಉಂಟಾಗಿ ಮಣ್ಣಿನಡಿ ಹೂತು ಹೋದ ಬಸ್;‌ 27 ಮಂದಿ ದುರ್ಮರಣ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಭೂಕುಸಿತ ಉಂಟಾಗಿ ಮಣ್ಣಿನಡಿ ಹೂತು ಹೋದ ಬಸ್;‌ 27 ಮಂದಿ ದುರ್ಮರಣ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು-ಮುಂಬಯಿ ವಿಶೇಷ ರೈಲು

ಮಂಗಳೂರು-ಮುಂಬಯಿ ವಿಶೇಷ ರೈಲು

ಮಂಗಳೂರು: ರೈಲು ಸಂಚಾರದಲ್ಲಿ ಬದಲಾವಣೆ

ಮಂಗಳೂರು: ರೈಲು ಸಂಚಾರದಲ್ಲಿ ಬದಲಾವಣೆ

ಮೂಡುಬಿದಿರೆಯ ಮಿಶೆಲ್‌ಗೆ ಡಿಆರ್‌ಐ ಶೌರ್ಯ ಪ್ರಶಸ್ತಿ

ಮೂಡುಬಿದಿರೆಯ ಮಿಶೆಲ್‌ಗೆ ಡಿಆರ್‌ಐ ಶೌರ್ಯ ಪ್ರಶಸ್ತಿ

ನೆಕ್ಸಸ್‌ ಮಾಲ್‌ಗೆ ಸೂಪರ್‌ ಸ್ಟಾರ್‌ ಅಮಿತಾಭ್‌ ಬ್ರ್ಯಾಂಡ್ ಅಂಬಾಸಿಡರ್‌

ನೆಕ್ಸಸ್‌ ಮಾಲ್‌ಗೆ ಸೂಪರ್‌ ಸ್ಟಾರ್‌ ಅಮಿತಾಭ್‌ ಬ್ರ್ಯಾಂಡ್ ಅಂಬಾಸಿಡರ್‌

ಮೀನುಗಾರರಿಗೆ ಹತ್ತು ದಿನದೊಳಗೆ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ಬೃಹತ್‌ ಹೋರಾಟ: ಖಾದರ್‌

ಮೀನುಗಾರರಿಗೆ ಹತ್ತು ದಿನದೊಳಗೆ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ಬೃಹತ್‌ ಹೋರಾಟ: ಖಾದರ್‌

MUST WATCH

udayavani youtube

ರಿಷಬ್ ಶೆಟ್ಟಿ ದಂಪತಿ ಆನೆಗುಡ್ಡೆ ಭೇಟಿ | ಕಾಂತಾರ ಯಶಸ್ಸು

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

ಹೊಸ ಸೇರ್ಪಡೆ

7

ಮರಳಿ ಕಾಂಗ್ರೆಸ್ ಗೂಡಿಗೆ ಹಾರುವುದೇ ಹಳ್ಳಿಹಕ್ಕಿ?

6

ಇಟಲಿಗೆ ಭೇಟಿ ನೀಡಿದ ಶೋಭಾ ಕರಂದ್ಲಾಜೆ

5

ಪ್ರಧಾನಿ ನನ್ನ ಆರೋಗ್ಯ ವಿಚಾರಿಸಿದರು: ಮಾಜಿ ಪ್ರಧಾನಿ ದೇವೇಗೌಡ

ಜಮೀನು ವಿವಾದ: ಸಹೋದರ ಸಂಬಂಧಿಯ ರುಂಡ ಕಡಿದು, ಸೆಲ್ಫಿ ತೆಗೆದುಕೊಂಡ ಆರೋಪಿಗಳು

ಜಮೀನು ವಿವಾದ: ಸಹೋದರ ಸಂಬಂಧಿಯ ರುಂಡ ಕಡಿದು, ಸೆಲ್ಫಿ ತೆಗೆದುಕೊಂಡ ಆರೋಪಿಗಳು

4

ಮಸ್ಕಿ: ಭೀಕರ ಅಪಘಾತ; ಮೂವರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.